ಮೈಸೂರು,ಮಾ.20-ರಾಜ್ಯ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಸೇರಿ ಸುಮಾರು 40 ಸಾವಿರ ಪೌರಕಾರ್ಮಿಕರಿದ್ದು, ಅವರಿಗೆ ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮೈಸೂರಿನ ಮಾಜಿ ಮೇಯರ್, ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿ ಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೌರಕಾರ್ಮಿಕರು ಬೀದಿ ಗುಡಿಸುವುದು, ಕಸ ಸಾಗಾಣಿಕೆ ಮಾಡುವುದು, ಕಸ ಮರುವಿಂಗಡಣೆ ಮಾಡುವುದು, ಮನೆ ಮನೆಗಳಿಂದ ಕಸವನ್ನು ಸಂಗ್ರಹಣೆ ಮಾಡುವುದು ಮತ್ತು ಚರಂಡಿಗಳನ್ನು ಸ್ವಚ್ಛ…
ಮಾ.31ರವರೆಗೆ ಅರಮನೆ ವೀಕ್ಷಣೆಗೆ ನಿರ್ಬಂಧ ವಿಸ್ತರಣೆ
March 21, 2020ಮೈಸೂರು,ಮಾ.20-ಮೈಸೂರು ಅರಮನೆ ಮಂಡಳಿ ವತಿಯಿಂದ ಮುಖ್ಯ ಮಂತ್ರಿಗಳು ಕೋವಿಡ್-19 ಕಾಯಿಲೆಯ ಸ್ಫೋಟ ಮತ್ತು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಸಾಧ್ಯವಾಗುವ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮೈಸೂರು ಅರಮನೆಯ ವೀಕ್ಷಣೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವೀಕ್ಷಣೆ, ಪ್ರತಿ ಭಾನುವಾರ ಮತ್ತು ರಜೆ ದಿನಗಳಲ್ಲಿ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ.
ಕಿಡಿಗೇಡಿಗಳು ಇಟ್ಟ ಕಿಚ್ಚಿಗೆ ಚಾಮುಂಡಿಬೆಟ್ಟದ 10 ಎಕರೆ ಅರಣ್ಯ ನಾಶ
March 19, 2020ಮೈಸೂರು, ಮಾ.18 (ಎಂಟಿವೈ)- ಚಾಮುಂಡಿಬೆಟ್ಟ ಅರಣ್ಯಕ್ಕೆ ಬುಧವಾರ ಮಧ್ಯಾಹ್ನ 1.30ರಲ್ಲಿ ಕಿಡಿಗೇಡಿಗಳು ಇಟ್ಟ ಕಿಚ್ಚಿಗೆ ಕ್ಷಣ ಮಾತ್ರದಲ್ಲೇ ಬೆಂಕಿ ವ್ಯಾಪಿಸಿ ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ನಾಶವಾಯಿತು. ಆರು ಅಗ್ನಿಶಾಮಕ ವಾಹನಗಳು, 80ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಸತತ ನಾಲ್ಕು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಟ್ಟದ ತಪ್ಪಲಿನ ಲಲಿತಾದ್ರಿಪುರದಿಂದ ಉತ್ತನಹಳ್ಳಿಗೆ ಹೋಗುವ ರಸ್ತೆಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂ ಡಿದ್ದು, ಜ್ವಾಲಾಮುಖಿ ಗುಡ್ಡದಲ್ಲಿ ಕಾವಲು ಕಾಯುತ್ತಿದ್ದ ವಾಚರ್‍ಗಳು…
ರಾಜ್ಯದ ಇನ್ನಿತರೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ
March 19, 2020ಬೆಂಗಳೂರು, ಮಾ.18(ಕೆಎಂಶಿ)- ಸಂಪನ್ಮೂಲ ಕ್ರೋಢೀಕರಣ ಹಾಗೂ ಪ್ರವಾಸಿಗರನ್ನು ಆಕರ್ಷಿ ಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ನಿರಂಜನ್ ಕುಮಾರ್, ರವೀಂದ್ರ ಶ್ರೀಕಂಠಯ್ಯ, ಹೆಚ್.ಕೆ. ಕುಮಾರ ಸ್ವಾಮಿ ಮತ್ತಿತರರು ಮಾಡಿದ ಪ್ರಸ್ತಾವಕ್ಕೆ ಉತ್ತರಿ ಸಿದ ಮುಖ್ಯಮಂತ್ರಿಯವರು ಖಾಸಗಿ ಸಹ ಭಾಗಿತ್ವದಲ್ಲೂ, ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ ಎಂದರು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸ…
ಸೂಯೇಜ್ ಫಾರಂ ತ್ಯಾಜ್ಯ ವಿಲೇವಾರಿಗೆ ಕ್ರಿಯಾ ಯೋಜನೆ: ಸಂದೇಶ್‍ಗೆ ಸಚಿವ ಭೈರತಿ ಬಸವರಾಜ್ ವಿವರಣೆ
March 19, 2020ಬೆಂಗಳೂರು, ಮಾ.18-ಮೈಸೂರು ನಗರದ ವಿದ್ಯಾರಣ್ಯಪುರಂನ ಸೂಯೇಜ್ ಫಾರಂನಲ್ಲಿ ಹಲವು ವರ್ಷಗಳಿಂದ ಶೇಖರಣೆಯಾಗಿರುವ ತ್ಯಾಜ್ಯದ ಪ್ರಮಾಣ ಅಂದಾಜು 2 ಲಕ್ಷ ಟನ್ ಇದ್ದು, ಈ ತ್ಯಾಜ್ಯವನ್ನು ಬಯೋರೆಮಿಡಿಯೇಷನ್ ಪದ್ಧತಿಯ ಪ್ರಕಾರ ವಿಲೇವಾರಿ ಮಾಡಲು ನಗರಪಾಲಿಕೆ ವತಿಯಿಂದ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಮಹಾತ್ಮಾ ಗಾಂಧೀ ನಗರ ವಿಕಾಸ್ ಯೋಜನೆ ಅಡಿಯಲ್ಲಿ ಅನುದಾನ ವನ್ನು ಭರಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ವಿದ್ಯಾರಣ್ಯಪುರಂ ಸೂಯೇಜ್ ಫಾರಂನಲ್ಲಿ ಸಂಗ್ರಹವಾಗಿರುವ ಹಳೆಯ ಕಸದ ರಾಶಿಯನ್ನು…
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಅಗತ್ಯ ಕ್ರಮ ವಿಧಾನಸಭೆಯಲ್ಲಿ ಸಚಿವ ಈಶ್ವರಪ್ಪ ಭರವಸೆ
March 19, 2020ಬೆಂಗಳೂರು,ಮಾ.18(ಕೆಎಂಶಿ)- ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿರುವ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಜಲ ಮೂಲವೇ ಇಲ್ಲದ ಬಯಲು ಸೀಮೆಯಲ್ಲಿ ನೀರಿಗಾಗಿ ಹಣ ವೆಚ್ಚ ಮಾಡುವುದು ಪ್ರಯೋಜನವಿಲ್ಲ ಎಂದಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಶರತ್ ಬಚ್ಚೇಗೌಡ, ಬಸವನಗೌಡ ದದ್ದಲ್ ಮತ್ತಿತರರು ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಪ್ರತಿ ಜಿಲ್ಲಾ ಪಂಚಾಯಿತಿಗೆ 100 ಲಕ್ಷ ರೂ. ಬರಪೀಡಿತ ಪ್ರತಿ ತಾಲೂಕುಗಳಿಗೆ…
ವಿಧಾನಮಂಡಲ ಅಧಿವೇಶನ ಮುಂದೂಡಿಕೆಗೆ ಅಡ್ಡಿಯಾಗಿರುವ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು
March 19, 2020ಬೆಂಗಳೂರು, ಮಾ.18(ಕೆಎಂಶಿ)- ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಮುಂದೂಡುವ ಸರ್ಕಾರದ ಉದ್ದೇಶಕ್ಕೆ ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆ ಅಡ್ಡಗಾಲಾಗಿ ಪರಿಣಮಿಸಿರುವ ಅಂಶ ಬೆಳಕಿಗೆ ಬಂದಿದೆ. ಕೊರೊನಾ ವೈರಸ್ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿರುವ ಸರ್ಕಾರ ರಾಜ್ಯ ವಿಧಾನಮಂಡಲ ಅಧಿ ವೇಶನವನ್ನು ಮುಂದೂಡಲು ಬಯಸಿತ್ತು. ಪ್ರತಿಪಕ್ಷಗಳೂ ಇದನ್ನು ಒಪ್ಪಿದ್ದವು. ಕೊರೊನಾ ತಡೆಗಟ್ಟಲು ರಾಜ್ಯವನ್ನು ಎಷ್ಟು ಪರಿಣಾಮಕಾರಿಯಾಗಿ ಬಂದ್ ಮಾಡಲು ಸಾಧ್ಯವೋ? ಮಾಡಬೇಕು ಎಂಬ ಕಾರಣದಿಂದ ಸರ್ಕಾರ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಗುರುವಾರದಿಂದ ಮುಂದೂಡಲು ಬಯಸಿತ್ತು. ಆದರೆ ರಾಜ್ಯ ಸರ್ಕಾರದ ನಿಲುವಿಗೆ ಕೇಂದ್ರ…
ಕೊರೊನಾ; ಕಲಾಮಂದಿರ ಭಣಭಣ
March 19, 2020ಮೈಸೂರು, ಮಾ.18(ಎಸ್‍ಪಿಎನ್)-ಸದಾ ಒಂದಿಲ್ಲೊಂದು ಸಾಂಸ್ಕøತಿಕ ಚಟುವಟಿಕೆ, ರಾಜಕೀಯ ಚರ್ಚೆ, ಹರಟೆಗಳಿಂದ ಕೂಡಿರುತ್ತಿದ್ದ ಕಲಾಮಂದಿರ ಆವರಣ ಚಟುವಟಿಕೆಗಳಿಲ್ಲದೆ ಕೊರೊನಾ ಎಫೆಕ್ಟ್‍ನಿಂದಾಗಿ ಇದೀಗ ಬಿಕೋ ಎನ್ನುತ್ತಿದೆ. ಮುಂದಿನ ತಿಂಗಳು ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭ ವಾಗುತ್ತಿದ್ದು, ಈ ವೇಳೆಗಾಗಲೇ ರಂಗಾಯಣ ಆವರಣದಲ್ಲಿ ಚಿಣ್ಣರ ಮೇಳಕ್ಕೆ ಸಿದ್ಧತೆಗಳು ನಡೆಯಬೇಕಿತ್ತು. ಆದರೆ, ಕೊರೊನಾ ಭೀತಿಯಿಂದಾಗಿ ಚಿಣ್ಣರ ಮೇಳದ ಮೇಲೂ ಕರಿನೆರಳು ಆವರಿಸಿದೆ. ಕೋರೊನಾ ಭೀತಿಯಿಂದಾಗಿ ಸರ್ಕಾರ 1 ವಾರ ಶಾಲೆಗಳಿಗೆ ರಜೆ ಘೋಷಿಸಿದೆ. ರಜೆ ಇದ್ದರೂ ಮಕ್ಕಳು ಪಕ್ಕದ ಮನೆಯ ಸ್ನೇಹಿತ-ಸ್ನೇಹಿತೆಯರ…
ಮೈಸೂರು ಮಹಾನಗರಪಾಲಿಕೆಯಲ್ಲಿಲ್ಲ `ಮುನ್ನೆಚ್ಚರಿಕೆ’!
March 19, 2020ಮೈಸೂರು,ಮಾ.18(ವೈಡಿಎಸ್)- ಕೊರೊನಾ ಮತ್ತು ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ನಗರದ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯಲ್ಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದೆ. ನಿತ್ಯವೂ ಸಾವಿರಾರು ಜನರು ಬಂದು ಹೋಗುವ ನಗರಪಾಲಿಕೆಯಲ್ಲಿ ಸದ್ಯ ಕೊರೊನಾದ ಕೋವಿಡ್-19 ವೈರಸ್ ಸೋಂಕು ಹರಡದಂತೆ ತಡೆಯುವುದಕ್ಕೆ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿ ಲ್ಲದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿ ಸಿದೆ. ಕೊರೊನಾ ಹರಡದಂತೆ ತಡೆಯಲು ಜಿಲ್ಲಾಡ ಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿದೆ….
ದಂತ ಚಿಕಿತ್ಸೆಗೂ `ಕೊರೊನಾ’ ಅಡ್ಡಗಾಲು!
March 19, 2020ಮೈಸೂರು, ಮಾ.18(ಪಿಎಂ)- ದಂತ ಚಿಕಿತ್ಸೆಗೂ `ಕೊರೊನಾ’ ಭೀತಿ ಎದುರಾಗಿದೆ. ಡೆಂಟಲ್ ಕ್ಲಿನಿಕ್ ಮತ್ತು ಆಸ್ಪತ್ರೆಗಳು ತುರ್ತು ಅಗತ್ಯವಲ್ಲದ ದಂತ ವೈದ್ಯಕೀಯ ಸೇವೆಗಳನ್ನು ಮಾ.31ರವರೆಗೆ ಸ್ಥಗಿತ ಗೊಳಿಸಬೇಕು ಎಂದು `ಇಂಡಿಯನ್ ಡೆಂಟಲ್ ಅಸೋಸಿಯೇಷನ್’(ಐಡಿಎ) ನಿರ್ದೇಶನ ನೀಡಿದೆ. ಇಡೀ ದೇಶದಲ್ಲಿ ಗಂಭೀರ ದಂತ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದ ಚಿಕಿತ್ಸಾ ಸೇವೆಗಳು ವ್ಯತ್ಯಯ ವಾಗಲಿವೆ. ಸಾರ್ವಜನಿಕರು ತುರ್ತು ಅಗತ್ಯವಿಲ್ಲ ದಿದ್ದಲ್ಲಿ ದಂತ ಚಿಕಿತ್ಸೆಗಾಗಿ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಿಗೆ ತೆರಳದಿರುವುದೇ ಸೂಕ್ತ ಎನ್ನಲಾಗಿದೆ. ದಂತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ರೋಗಿಯ…