Tag: Mysuru

ನಾಳೆ ವಿದ್ಯುತ್ ನಿಲುಗಡೆ
ಮೈಸೂರು

ನಾಳೆ ವಿದ್ಯುತ್ ನಿಲುಗಡೆ

February 8, 2019

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಕೆ.ವಿ. ಹುಲ್ಲಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದೆ. ಫೆ.9ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಇಟ್ಟಿಗೆಗೂಡು, ಶಿರಮಳ್ಳಿ, ಹೆಗ್ಗಡಹಳ್ಳಿ, ಹಗಿನವಾಳು, ರಾಂಪುರ, ಹುಲ್ಲಹಳ್ಳಿ, ನೆಲ್ಲಿತಾಳಪುರ, ಕುರಿಹುಂಡಿ, ಹರದನಹಳ್ಳಿ ಮತ್ತು ದುಗ್ಗಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ನಂಜನಗೂಡು ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಫೆ.13ರಿಂದ ದೂರು ಸ್ವೀಕಾರ
ಮೈಸೂರು

ಫೆ.13ರಿಂದ ದೂರು ಸ್ವೀಕಾರ

February 8, 2019

ಮೈಸೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ಅಧಿಕೃತ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರ ರೀತಿಯಲ್ಲಿ ತೊಂದರೆ ನೀಡುತ್ತಿರುವ ಅಧಿಕಾರಿ/ನೌಕರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಮೈಸೂರು ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರವರು ಈ ಕೆಳಗೆ ನಮೂದಿಸಿರುವ ತಾಲೂಕುಗಳಲ್ಲಿ ವಿವಿಧ ದಿನಾಂಕಗಳಂದು ಸಾರ್ವಜನಿಕರಲ್ಲಿ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಮತ್ತು ದೂರನ್ನು ಸ್ವೀಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ವಿವರ ಕೆಳಕಂಡಂತೆ ಇರುತ್ತದೆ. ಫೆ.13ರಂದು ಬೆಳಿಗ್ಗೆ 11.30 ರಿಂದ 1.30 ಗಂಟೆಯವರೆಗೆ ಕೆ.ಆರ್.ನಗರ ತಾಲೂಕಿನ ಪರಿವೀಕ್ಷಣಾ ಮಂದಿರದಲ್ಲಿ…

ಬಿಜೆಪಿ ನಡವಳಿಕೆಗೆ ಮಾಜಿ  ಸಚಿವ ಪಿ.ಜಿ.ಆರ್.ಸಿಂಧ್ಯಾ ಟೀಕೆ
ಮೈಸೂರು

ಬಿಜೆಪಿ ನಡವಳಿಕೆಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಟೀಕೆ

February 8, 2019

ಮೈಸೂರು: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಉತ್ತಮ ಬಜೆಟ್ ಮಂಡಿಸುವ ನಿರೀಕ್ಷೆ ಇದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯಾ ಇಂದಿಲ್ಲಿ ತಿಳಿಸಿದರು. ಮೈಸೂರಿನ ಗಾನಭಾರತಿಯಲ್ಲಿ ಡಾ.ದೊಡ್ಡ ರಂಗೇಗೌಡರ ಆಯ್ದ ಚುಟುಕುಗಳ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿಯ ಇತ್ತೀಚಿನ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದರು. ಕೇಂದ್ರ ಸರ್ಕಾರ ದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರ ಇಂತಹ ನಡೆ ಸರಿಯಾದುದಲ್ಲ. ರಾಜ್ಯಪಾಲ ವಜುಭಾಯ್ ವಾಲಾ…

ಜೆಪಿ ನಗರದಲ್ಲಿ 150ಕ್ಕೂ ಹೆಚ್ಚು ಫುಟ್‍ಪಾತ್ ಅಂಗಡಿಗಳ ತೆರವು
ಮೈಸೂರು

ಜೆಪಿ ನಗರದಲ್ಲಿ 150ಕ್ಕೂ ಹೆಚ್ಚು ಫುಟ್‍ಪಾತ್ ಅಂಗಡಿಗಳ ತೆರವು

February 8, 2019

ಮೈಸೂರು: ಮೈಸೂರಿ ನಲ್ಲಿ ಪಾದಚಾರಿಗಳ ಹಕ್ಕು ಸಂರಕ್ಷಣೆಗೆ ಪಾಲಿಕೆ ಅಧಿಕಾರಿಗಳು ಕಂಕಣ ಕಟ್ಟಿದ್ದು, ಎರಡನೇ ದಿನವಾದ ಇಂದು ಜೆ.ಪಿ. ನಗರದಲ್ಲಿ ಫುಟ್‍ಪಾತ್ ಮೇಲಿದ್ದ ಸುಮಾರು 150ಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಗೊಳಿಸಲಾಯಿತು. ಇಲ್ಲಿನ ಅಕ್ಕಮಹಾದೇವಿ ರಸ್ತೆ, ಡಾ. ಬಿ.ಆರ್.ಅಂಬೇಡ್ಕರ್ ರಸ್ತೆ, ಜೆ.ಪಿ. ನಗರ 10 ಮತ್ತು 20ನೇ ಮೇನ್ ರೋಡ್ ಹಾಗೂ ಎನ್‍ಐಇ ಕಾಲೇಜು ಮುಂದೆ ಮಾನಂದವಾಡಿ ರಸ್ತೆಗಳ ಇಕ್ಕೆಲಗಳ ಫುಟ್‍ಪಾತ್ ಮೇಲೆ ತಲೆ ಎತ್ತಿದ್ದ ಪೆಟ್ಟಿಗೆ ಅಂಗಡಿಗಳು ಹಾಗೂ ಅನಧಿಕೃತ ಜಾಹೀ ರಾತು ಫಲಕಗಳನ್ನು ಮೈಸೂರು…

ಫುಟ್‍ಪಾತ್ ಅಂಗಡಿ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ
ಮೈಸೂರು

ಫುಟ್‍ಪಾತ್ ಅಂಗಡಿ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ

February 8, 2019

ಮೈಸೂರು: ಮೈಸೂರಿ ನಲ್ಲಿ ಫುಟ್‍ಪಾತ್ ಮೇಲಿನ ಅಂಗಡಿ ಗಳನ್ನು ತೆರವುಗೊಳಿಸುತ್ತಿರುವ ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳ ಕ್ರಮ ವನ್ನು ಖಂಡಿಸಿ ವಿವಿಧ ಸಂಘಟನೆಗಳು ಗುರುವಾರ ಮಹಾನಗರಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಕ್ರಾಂತಿದಳದ ಆಶ್ರಯದಲ್ಲಿ ಫುಟ್ ಪಾತ್ ವ್ಯಾಪಾರಿಗಳು, ಸಂಘಟನೆಗಳ ಕಾರ್ಯಕರ್ತರು, ನಗರಪಾಲಿಕೆ ಅಧಿ ಕಾರಿಗಳ ಬಡ ಜನ ವಿರೋಧಿ ಧೋರಣೆ ಯನ್ನು ಖಂಡಿಸಿದರು. ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ…

ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ:  ವಲಸೆ ಪಕ್ಷಿಗಳಿಗೆ ಕಂಟಕ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ: ವಲಸೆ ಪಕ್ಷಿಗಳಿಗೆ ಕಂಟಕ

February 8, 2019

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಕರ್ನಾಟಕ ಮೀನು ಗಾರಿಕಾ ಮಹಾಮಂಡಲದ ವತಿಯಿಂದ ಮೀನುಗಾರಿಕೆ ಆರಂಭವಾಗಿರುವುದರಿಂದ ವಲಸೆ ಪಕ್ಷಿಗಳು ಆತಂಕಕ್ಕೆ ಒಳಗಾಗಿದ್ದು, ತಕ್ಷಣವೇ ಮೀನುಗಾರಿಕೆ ನಿಲ್ಲಿಸುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. ಕುಕ್ಕರಹಳ್ಳಿ ಕೆರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೆಪ್ಪ ಬಳಸಿ ಮೀನುಗಾರಿಕೆ ನಡೆಸಿ ದಿನಕ್ಕೆ ನೂರಾರು ಕೆಜಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ. ಇದು ದೇಶ-ವಿದೇಶದ ಅಪರೂಪದ ಪಕ್ಷಿಗಳು ವಲಸೆ ಬರುವ ಕಾಲವಾಗಿದೆ. ಮೀನು ಗಾರಿಕೆಯಿಂದ ವಲಸೆ ಪಕ್ಷಿಗಳು ಬೆದರುತ್ತವೆ. ವಲಸೆ ಪಕ್ಷಿಗಳು ಸಂತಾನೋತ್ಪತ್ತಿ ಮುಗಿಯು ವವರೆಗೂ ಮೀನು…

ದೈವಾನುಗ್ರಹದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ
ಮೈಸೂರು

ದೈವಾನುಗ್ರಹದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ

February 8, 2019

ಶಾಸಕಿ ಅನಿತಾ ಕುಮಾರಸ್ವಾಮಿ ಅಭಿಮತ ಬಂಡಹಳ್ಳಿ(ಕೆ.ಆರ್.ನಗರ ತಾಲೂಕು), ಫೆ.7- ಕಡಿಮೆ ಸಂಖ್ಯೆಯ ಶಾಸಕರು ಆಯ್ಕೆಯಾದ್ದರಿಂದ ನಾವ್ಯಾರೂ ನಿರೀಕ್ಷೆ ಮಾಡದಿದ್ದರೂ ದೈವಾನುಗ್ರಹದಿಂದ ನನ್ನ ಪತಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು, ಅವರು ಕರ್ನಾಟಕವನ್ನು ರಾಮರಾಜ್ಯ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಕೆ.ಆರ್.ನಗರ ತಾಲೂಕು ಬಂಡಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಲಕ್ಷ್ಮೀದೇವಿ ನೂತನ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ವರ್ಗದ ಜನರ ಅಭ್ಯುದಯ ಹಾಗೂ ರೈತರ ಹಿತದ ಬಗ್ಗೆ ಸದಾ ಚಿಂತಿಸುವ ಕುಮಾರಸ್ವಾಮಿಯವರ ರಾಮರಾಜ್ಯದ…

ಮೈಸೂರು ಜಿಲ್ಲಾಸ್ಪತ್ರೆ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಪ್ಲಂಬರ್ ಸಾವು
ಮೈಸೂರು

ಮೈಸೂರು ಜಿಲ್ಲಾಸ್ಪತ್ರೆ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಪ್ಲಂಬರ್ ಸಾವು

February 8, 2019

ಮೈಸೂರು: ಮೈಸೂರಿನ ಮೇಟಗಳ್ಳಿಯ ಇಡಿ ಆಸ್ಪತ್ರೆ ಆವರಣದ ನೂತನ ಜಿಲ್ಲಾಸ್ಪತ್ರೆ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಪ್ಲಂಬರ್ ಇಂದು ಬೆಂಗಳೂರಿನ ನಿಮ್ಹಾನ್ಸ್‍ನಲ್ಲಿ ಸಾವನ್ನ ಪ್ಪಿದ್ದಾರೆ. ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ಮೋಹನ ಕುಮಾರ್(30) ಸಾವನ್ನಪ್ಪಿದವರು. ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಆತ, ಇಡಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸು ತ್ತಿರುವ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದಾಗ ಫೆಬ್ರವರಿ 4ರಂದು ಸಂಜೆ 4 ಗಂಟೆ ವೇಳೆಗೆ ಆಯತಪ್ಪಿ 2ನೇ ಮಹಡಿಯಿಂದ ಬಿದ್ದಿದ್ದರು. ತಲೆಗೆ…

ಸುತ್ತೂರು ಜಾತ್ರೆಗೆ ಭಕ್ತಿಪೂರ್ವಕ ತೆರೆ
ಮೈಸೂರು

ಸುತ್ತೂರು ಜಾತ್ರೆಗೆ ಭಕ್ತಿಪೂರ್ವಕ ತೆರೆ

February 7, 2019

ನಂಜನಗೂಡು: ಶ್ರೀಕ್ಷೇತ್ರದಲ್ಲಿ 6 ದಿನಗಳಿಂದ ಅದ್ಧೂರಿಯಾಗಿ ಜರುಗಿದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವ ಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಇಂದು ಭಕ್ತಿಪೂರ್ವಕವಾಗಿ ತೆರೆ ಬಿದ್ದಿತು. ಫೆ.1ರಂದು ಪ್ರಾರಂಭಗೊಂಡ ವೈಭವದ ಜಾತ್ರಾ ಮಹೋತ್ಸವಕ್ಕೆ ಇಂದು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯನ್ನು ಹೊಸ ಗದ್ದುಗೆ ಯಿಂದ ಹಳೇ ಗದ್ದುಗೆಗೆ ಮೆರವಣಿಗೆ ಯಲ್ಲಿ ಕೊಂಡೊಯ್ಯುವ ಮೂಲಕ ತೆರೆ ಎಳೆಯಲಾಯಿತು. 6 ದಿನಗಳ ಕಾಲ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ನಾಡಿನ ಎಲ್ಲೆಡೆಯಿಂದ ಆಗಮಿಸಿದ್ದ ಮಠಾಧೀಶರು, ಹರಗುರು ಚರಮೂರ್ತಿ ಗಳು, ಜನಪ್ರತಿನಿಧಿಗಳು, ವಿವಿಧ…

ಧಾರ್ಮಿಕ ಸಮಾರಂಭದಲ್ಲಿ ಸಮಾರೋಪ
ಮೈಸೂರು

ಧಾರ್ಮಿಕ ಸಮಾರಂಭದಲ್ಲಿ ಸಮಾರೋಪ

February 7, 2019

ಸುತ್ತೂರು: ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯ ಅಂತಿಮ ದಿನವಾದ ಬುಧವಾರ ನಡೆದ ಧಾರ್ಮಿಕ ಸಮಾರಂಭದಲ್ಲಿಯೇ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನದ ಸಮಾರೋಪವೂ ಜರುಗಿತು. ಸಮಾರಂಭದಲ್ಲಿ ಬೆಂಗಳೂರಿನ ಪ್ರಾದೇಶಿಕ ಜನಸಂಪರ್ಕ ಕಾರ್ಯಾ ಲಯದ ಹೆಚ್ಚುವರಿ ಮಹಾನಿರ್ದೇಶಕ ಎಂ.ನಾಗೇಂದ್ರಸ್ವಾಮಿ ಮಾತನಾಡಿ, ಸುತ್ತೂರು ಜಾತ್ರೆಯು ಮಹಾ ಕಾರ್ಯಾ ಗಾರವಾಗಿ ಪರಿವರ್ತನೆಗೊಂಡು ಸಮಾಜದ ಅಭಿವೃದ್ಧಿಗೆ ಕಾರಣವಾಗು ತ್ತಿದೆ ಎಂದು ಬಣ್ಣಿಸಿದರು. ಮುಂದಿನ ವರ್ಷದಿಂದ ಬಾಹ್ಯಾ ಕಾಶ ಸಂಸ್ಥೆ ಇಸ್ರೋ ಕೂಡ ಇಂತಹ ಸಮಾರಂಭದಲ್ಲಿ ಭಾಗವಹಿಸಲಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ…

1 98 99 100 101 102 194
Translate »