ಫುಟ್‍ಪಾತ್ ಅಂಗಡಿ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ
ಮೈಸೂರು

ಫುಟ್‍ಪಾತ್ ಅಂಗಡಿ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ

February 8, 2019

ಮೈಸೂರು: ಮೈಸೂರಿ ನಲ್ಲಿ ಫುಟ್‍ಪಾತ್ ಮೇಲಿನ ಅಂಗಡಿ ಗಳನ್ನು ತೆರವುಗೊಳಿಸುತ್ತಿರುವ ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳ ಕ್ರಮ ವನ್ನು ಖಂಡಿಸಿ ವಿವಿಧ ಸಂಘಟನೆಗಳು ಗುರುವಾರ ಮಹಾನಗರಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.

ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಕ್ರಾಂತಿದಳದ ಆಶ್ರಯದಲ್ಲಿ ಫುಟ್ ಪಾತ್ ವ್ಯಾಪಾರಿಗಳು, ಸಂಘಟನೆಗಳ ಕಾರ್ಯಕರ್ತರು, ನಗರಪಾಲಿಕೆ ಅಧಿ ಕಾರಿಗಳ ಬಡ ಜನ ವಿರೋಧಿ ಧೋರಣೆ ಯನ್ನು ಖಂಡಿಸಿದರು. ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ತಮ್ಮ ಫಾಸ್ಟ್ ಫುಡ್ ಗಾಡಿಗಳನ್ನು ತೆರವು ಗೊಳಿಸಿದ್ದಾರೆ. ಹಲವಾರು ವರ್ಷ ಗಳಿಂದ ರಸ್ತೆ ಬದಿ ಸಣ್ಣಪುಟ್ಟ ಫಾಸ್ಟ್ ಫುಡ್ ವ್ಯಾಪಾರ ಮಾಡಿ ಜೀವನ ಸಾಗಿ ಸುತ್ತಿದ್ದಾರೆ. ಇದನ್ನೇ ನಂಬಿ ನೂರಾರು ಕುಟುಂಬಗಳು ಜೀವನ ನಿರ್ವಹಿಸುತ್ತಿವೆ.

ಇಂಥದ್ದರಲ್ಲಿ ಏಕಾಏಕಿ ಈ ರೀತಿ ಅಂಗಡಿಗಳನ್ನು ತೆರವುಗೊಳಿಸಿದರೆ ಬಡ ಫುಟ್‍ಪಾತ್ ವ್ಯಾಪಾರಿಗಳು ಬದುಕು ನಡೆಸುವುದಾದರೂ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೂ ಸ್ವಚ್ಛತೆಯ ಅರಿವಿದೆ. ವ್ಯಾಪಾರಿಗಳನ್ನು ಬೀದಿಗೆ ತರುವುದು ಸರಿಯಲ್ಲ. ಕೂಡಲೇ ಕಾರ್ಯಾ ಚರಣೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪಾಲಿಕೆ ಇದೇ ರೀತಿ ಬಡಜನರ ಜೀವನದೊಂದಿಗೆ ಚೆಲ್ಲಾಟವಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಹೋರಾಟ ಗಾರ ಸತ್ಯಪ್ಪ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ, ಕನ್ನಡ ಕ್ರಾಂತಿದಳ ಯುವ ಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »