ಜೆಪಿ ನಗರದಲ್ಲಿ 150ಕ್ಕೂ ಹೆಚ್ಚು ಫುಟ್‍ಪಾತ್ ಅಂಗಡಿಗಳ ತೆರವು
ಮೈಸೂರು

ಜೆಪಿ ನಗರದಲ್ಲಿ 150ಕ್ಕೂ ಹೆಚ್ಚು ಫುಟ್‍ಪಾತ್ ಅಂಗಡಿಗಳ ತೆರವು

February 8, 2019

ಮೈಸೂರು: ಮೈಸೂರಿ ನಲ್ಲಿ ಪಾದಚಾರಿಗಳ ಹಕ್ಕು ಸಂರಕ್ಷಣೆಗೆ ಪಾಲಿಕೆ ಅಧಿಕಾರಿಗಳು ಕಂಕಣ ಕಟ್ಟಿದ್ದು, ಎರಡನೇ ದಿನವಾದ ಇಂದು ಜೆ.ಪಿ. ನಗರದಲ್ಲಿ ಫುಟ್‍ಪಾತ್ ಮೇಲಿದ್ದ ಸುಮಾರು 150ಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಗೊಳಿಸಲಾಯಿತು.

ಇಲ್ಲಿನ ಅಕ್ಕಮಹಾದೇವಿ ರಸ್ತೆ, ಡಾ. ಬಿ.ಆರ್.ಅಂಬೇಡ್ಕರ್ ರಸ್ತೆ, ಜೆ.ಪಿ. ನಗರ 10 ಮತ್ತು 20ನೇ ಮೇನ್ ರೋಡ್ ಹಾಗೂ ಎನ್‍ಐಇ ಕಾಲೇಜು ಮುಂದೆ ಮಾನಂದವಾಡಿ ರಸ್ತೆಗಳ ಇಕ್ಕೆಲಗಳ ಫುಟ್‍ಪಾತ್ ಮೇಲೆ ತಲೆ ಎತ್ತಿದ್ದ ಪೆಟ್ಟಿಗೆ ಅಂಗಡಿಗಳು ಹಾಗೂ ಅನಧಿಕೃತ ಜಾಹೀ ರಾತು ಫಲಕಗಳನ್ನು ಮೈಸೂರು ಮಹಾ ನಗರ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ತೆರವುಗೊಳಿಸಿದರು.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ಯವರೆಗೆ ನಡೆದ ಫುಟ್‍ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಾಲಿಕೆ ವಲಯ ಕಚೇರಿ-2ರ ಪ್ರಭಾರ ವಲಯಾ ಧಿಕಾರಿ ಪ್ರಿಯದರ್ಶಿನಿ, ಅಸಿಸ್ಟೆಂಟ್ ಎಕ್ಸಿ ಕ್ಯೂಟಿವ್ ಇಂಜಿನಿಯರ್ ರವಿಕುಮಾರ್, ಇಂಜಿನಿಯರ್‍ಗಳಾದ ಚೇತನ್, ದಯಾ ನಂದ್, ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಶಿವ ಪ್ರಸಾದ್, ಪ್ರೀತಿ, ರಾಜೇಶ್ವರಿ ಬಾಯಿ, ಬಸವ ರಾಜ್, ಕಂದಾಯ ನಿರೀಕ್ಷಕರು, ಅಭಯ ತಂಡದ ಸಿಬ್ಬಂದಿ ಭಾಗವಹಿಸಿದ್ದರು.

ಅಂಗಡಿಗಳನ್ನು ತೆಗೆಸುವ ವೇಳೆ ಜೆ.ಪಿ. ನಗರದ ಅಕ್ಕಮಹಾದೇವಿ ರಸ್ತೆ, ಡಾ.ಅಂಬೇಡ್ಕರ್ ರಸ್ತೆಗಳಲ್ಲಿ ಹಲವರು ಪಾಲಿಕೆ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದು ವಾಗ್ವಾದ ನಡೆಸಿದರಾದರೂ, ಲೆಕ್ಕಿಸದೆ ಪ್ರಿಯದರ್ಶಿನಿ, ರವಿಕುಮಾರ್ ಹಾಗೂ ಅಭಿವೃದ್ಧಿ ಅಧಿಕಾರಿ ಓಂಕಾರ್, ಕಾನೂನಿನ ಅರಿವು ಮೂಡಿಸಿ, ಫುಟ್ ಪಾತ್‍ನಲ್ಲಿ ಅಂಗಡಿ ಇಡುವುದರಿಂದಾ ಗುವ ಸಾರ್ವಜನಿಕ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ತೆರವು ಕಾರ್ಯಾಚರಣೆ ಮುಂದುವರಿಸಿದರು.

Translate »