ನವದೆಹಲಿ: ಕಾಂಗ್ರೆಸ್ ಶಾಸಕರೂ ಸೇರಿದಂತೆ ಯಾವುದೇ ನಾಯಕರು ವ್ಯಕ್ತಿ ಪೂಜೆಯಲ್ಲಿ ತೊಡಗಿಸಿಕೊಳ್ಳಬಾರದು. ಮೈತ್ರಿ ಸರ್ಕಾರಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರಕ್ಕೆ ಮುಜುಗರ ತರುವಂತಹ ನಾಯಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಲೋಕಸಭಾ ಚುನಾವಣೆಯನ್ನು ಜೆಡಿಎಸ್‍ನಲ್ಲಿ ಹೊಂದಾಣಿಕೆ ಮಾಡಿಕೊಂಡೇ ಎದುರಿಸಲಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಧಕ್ಕೆ…
ಎಸ್‍ಸಿ/ಎಸ್‍ಟಿ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಮತ್ತೆ ನಕಾರ
January 31, 2019ನವದೆಹಲಿ: ಎಸ್‍ಸಿ/ಎಸ್‍ಟಿ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮತ್ತೊಮ್ಮೆ ನಿರಾಕರಿಸಿದ್ದು, ಕೇಂದ್ರ ಸರ್ಕಾರದ ಮರುಪರಿಶೀಲನಾ ಅರ್ಜಿಯೂ ಸೇರಿದಂತೆ ಎಲ್ಲವನ್ನೂ ಫೆ.19ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿ ಕಾಯ್ದೆಯಲ್ಲಿ “ಜಾಮೀನು ರಹಿತ” ಎಂಬ ಅಂಶವನ್ನು ಕಾಯ್ದೆಯಲ್ಲಿ ಮರುಸ್ಥಾಪಿಸಲಾಗಿತ್ತು. ನ್ಯಾ.ಯುಯು ಲಲಿತ್ ನೇತೃತ್ವದ ಪೀಠ ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದು ಕೇಂದ್ರ ಸರ್ಕಾರದ ಮರುಪರಿ ಶೀಲನಾ ಅರ್ಜಿಯೂ ಸೇರಿದಂತೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನೂ ಫೆ.19 ರಂದು ವಿಚಾರಣೆ…
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಮೈಸೂರು ಜಿಲ್ಲಾ ತಂಡಕ್ಕೆ ಸಮಗ್ರ ಪ್ರಶಸ್ತಿ
January 31, 2019ಮೈಸೂರು: ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದ ಎಲ್ಲಾ ವಿಭಾಗದಲ್ಲೂ ಉತ್ತಮ ಆಟ ಪ್ರದರ್ಶಿಸಿದ ‘ಮೈಸೂರು ಜಿಲ್ಲಾ ತಂಡ’ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕ ರರ ಸಂಘ, ಸಂಘದ ಬೆಂಗಳೂರು-ಮೈಸೂರು ಶಾಖೆ ಮತ್ತು ಮೈಸೂರು ಜಿಲ್ಲಾ ಡಳಿತ ಸಹಯೋಗದೊಂದಿಗೆ ಆಯೋಜಿ ಸಿದ್ದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಎಲ್ಲಾ ವಿಭಾಗದಲ್ಲೂ ಉತ್ತಮ ಆಟವಾಡಿ 123 ಅಂಕ ಪಡೆದ ಮೈಸೂರು ಜಿಲ್ಲಾ…
1998ರ ಪ್ರೊಬೆಷನರಿ ಗೆಜೆಟೆಡ್ ಅಧಿಕಾರಿಗಳ ಪರಿಷ್ಕøತ ಆಯ್ಕೆ ಪಟ್ಟಿ ಪ್ರಕಟಿಸಿದ ಕೆಪಿಎಸ್‍ಸಿ
January 31, 2019ಬೆಂಗಳೂರು: ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ 1998ರ ಬ್ಯಾಚ್‍ನ ಗ್ರೂಪ್ `ಎ’ ಮತ್ತು `ಬಿ’ಯ 383 ಪ್ರೊಬೆಷನರಿ ಗೆಜೆಟೆಡ್ ಅಧಿಕಾರಿಗಳ ಆಯ್ಕೆಯ ಅಂತಿಮ ಹಾಗೂ ಪರಿಷ್ಕøತ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‍ಸಿ) ಬುಧವಾರ ಪ್ರಕಟಿಸಿದೆ. ಜ.25ರಂದು ಹೊರಡಿಸಿರುವ ವಿಶೇಷ ಕರ್ನಾಟಕ ರಾಜ್ಯಪತ್ರದಲ್ಲಿನ ಇ(1)308/18-19/ಪಿಎಸ್‍ಸಿ ಅಧಿಸೂಚನೆಯಲ್ಲಿ ಈ ಪಟ್ಟಿ ಪ್ರಕಟವಾಗಿದೆ. ಇದರಿಂದಾಗಿ 19 ವರ್ಷಗಳಿಂದ ಗೊಂದಲದಲ್ಲೇ ಇದ್ದ, ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ರಾಜ್ಯ…
ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ
January 31, 2019ನವದೆಹಲಿ: ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗ ಲಿದ್ದು, ಕೇಂದ್ರ ಸರ್ಕಾರದ ಮಹತ್ವದ ಹಾಗೂ ಕೊನೆಯ ಮಧ್ಯಂತರ ಬಜೆಟ್ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸುಗಮ ಕಲಾಪಕ್ಕಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಸರ್ವಪಕ್ಷ ಸಭೆ ಕರೆದಿದ್ದು, ಅದರಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ. ನಾಳೆಯಿಂದ ಆರಂಭವಾಗುವ ಬಜೆಟ್ ಅಧಿವೇಶನ ಕೇಂದ್ರ ಸರ್ಕಾರಕ್ಕೆ ಕೊನೆಯ ಹಾಗೂ ನಿರ್ಣಾಯಕವೂ ಆಗಿರುವುದರಿಂದ ಜನರನ್ನು ತನ್ನತ್ತ ಸೆಳೆಯಲು ಮಾಡಬಹುದಾದ ಎಲ್ಲಾ ಕಸರತ್ತುಗಳನ್ನು ಮಾಡುತ್ತಿದೆ. ಕೇಂದ್ರದ ಮಧ್ಯಂತರ ಬಜೆಟ್ ಜನರಿಗೆ ಹೇಗೆ ನೆರವಾಗಲಿದೆ ಎಂಬ ಚರ್ಚೆಗಳು ಎಲ್ಲೆಡೆ…
ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…!
January 31, 2019ಮೈಸೂರು: ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…! ಈಗೊಂದು ಘೋಷ ವಾಕ್ಯ ಥಟ್ಟನೆ ಎಲ್ಲರ ಗಮನ ಸೆಳೆಯುವ ಮೂಲಕ ಕುಷ್ಠರೋಗದ ದುಷ್ಪರಿಣಾಮ ಮನದಟ್ಟು ಮಾಡಿತು. ಇದರೊಂದಿಗೆ ಕುಷ್ಠರೋಗ ಸಂಪೂರ್ಣ ಗುಣಮುಖವಾಗುವ ರೋಗ… ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತ… ಕುಷ್ಠರೋಗ ಶಾಪವಲ್ಲ… ವಂಶಪಾರಂಪರ್ಯದಿಂದಲೂ ಬರುವುದಿಲ್ಲ… ದೇಹದ ಮೇಲೆ ಸ್ಪರ್ಶ ಜ್ಞಾನ ವಿಲ್ಲದ ತಾಮ್ರ ವರ್ಣದ ಮಚ್ಚೆಗಳು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ… ಎಂಬಿತ್ಯಾದಿ ಜಾಗೃತಿ ವಾಕ್ಯಗಳನ್ನೊಳಗೊಂಡ ಫಲಕಗಳನ್ನು ಹಿಡಿದು ಜಾಥಾ ನಡೆಸುವ…
ಸಿದ್ಧಗಂಗಾ ಶ್ರೀಗಳಿಗೆ ವಿವಿಧ ಮಠಾಧೀಶರ ನುಡಿ ನಮನ
January 31, 2019ಮೈಸೂರು: ಮೈಸೂ ರಿನ ಅರಮನೆ ಬಳಿ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬುಧವಾರ ವಿವಿಧ ಮಠಾಧೀಶರು ತುಮಕೂರು ಸಿದ್ಧ ಗಂಗಾ ಮಠದ ಶ್ರೀ ಡಾ.ಶಿವಕುಮಾರಸ್ವಾಮೀಜಿ ಅವರಿಗೆ ನುಡಿ ನಮನ ಸಲ್ಲಿಸಿದರು. ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆ, ಸಾರ್ಥಕ ಸೇವಾ ಟ್ರಸ್ಟ್ ಜಂಟಿ ಯಾಗಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾ ಚಾರ್ಯ ಸ್ವಾಮೀಜಿ, ಹೊಸಮಠ ಶ್ರೀ ಚಿದಾನಂದ ಸ್ವಾಮೀಜಿ, ತಿ.ನರಸೀಪುರ ರಾಮಾರೂಢಸ್ವಾಮಿ ಬ್ರಹ್ಮ ವಿದ್ಯಾಶ್ರಮದ ವೇದಾವತಿ ಮಾತಾಜಿ, ಬಸವೇಶ್ವರ ಮಠದ ಅಧ್ಯಕ್ಷ…
ಉನ್ನತ ಶಿಕ್ಷಣ, ಉದ್ಯೋಗ ಹಕ್ಕೆಂದು ಪರಿಗಣಿತವಾದರೆ ಜವಾಬ್ದಾರಿಯುತ ಸಮಾಜ ನಿರ್ಮಾಣ ಸಾಧ್ಯ
January 31, 2019ಮೈಸೂರು: ಉನ್ನತ ಶಿಕ್ಷಣ ಮತ್ತು ಉದ್ಯೋಗ ಪ್ರತಿಯೊಬ್ಬರ ಹಕ್ಕೆಂದು ಪರಿಗಣಿತವಾದರೆ ಮಾತ್ರ ಜವಾ ಬ್ದಾರಿಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜು ಪ್ರಾಧ್ಯಾಪಕ ಜನಾ ರ್ಧನ್ ಕೆಸರುಗದ್ದೆ ಪ್ರತಿಪಾದಿಸಿದರು. ಮೈಸೂರಿನ ಪುರಭವನದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿ (ಬಿಜಿವಿಎಸ್) ರಾಜ್ಯ ಘಟಕದ ವತಿಯಿಂದ ಹಮ್ಮಿ ಕೊಂಡಿರುವ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬದ ಅಂತಿಮ ದಿನವಾದ ಬುಧವಾರ `ಉನ್ನತ ಶಿಕ್ಷಣದ ಸವಾಲುಗಳು ಮತ್ತು ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಣ’ ಕುರಿತು ಅವರು ಮಾತನಾಡಿದರು. ಯುವ ಜನರ ಹಕ್ಕುಗಳು…
ಸರ್ಕಾರದಿಂದ 4 ವರ್ಷದ ಅನುದಾನವೇ ಬಂದಿಲ್ಲ!
January 31, 2019ಮೈಸೂರು: ಜೀತ ವಿಮುಕ್ತರಾದ ಫಲಾನುಭವಿಗಳಿಗೆ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತಕ್ಕಾಗಿ 4 ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಹಣ ಬಿಡುಗಡೆಯಾಗಿಲ್ಲ ಎಂಬ ವಿಚಾರ ಬುಧವಾರ ಮೈಸೂರು ಜಿಲ್ಲಾ ಪಂಚಾ ಯಿತಿ ಮಿನಿ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಜೀತ ವಿಮುಕ್ತರ ಪುನರ್ವಸತಿ ಸಮಿತಿ ಸಭೆಯಲ್ಲಿ ತಿಳಿದುಬಂದಿತು. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯ ಬೇಕಾಗಿದ್ದ ಸಮಿತಿಯ ಸಭೆಯನ್ನು ನಾಲ್ಕು ವರ್ಷಗಳ ನಂತರ ಇಂದು ಕರೆಯ ಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ…
ಮುಕ್ತ ಮಾರುಕಟ್ಟೆಯಲ್ಲಿ `ಸರ್ವೋದಯ’ ಚಿಂತನೆ ತೆರೆಮರೆಗೆ
January 31, 2019ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ಸರ್ವೋದಯದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳದ ಜನರು ಜಾಗತೀಕರಣದ ಪ್ರಭಾವ ದಿಂದಾಗಿ ಹೆಚ್ಚು ಸಂಪಾದನೆಯತ್ತ ಮುಖ ಮಾಡಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ವಿಷಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದ ಆವರಣದಲ್ಲಿ ಬುಧವಾರ ಗಾಂಧಿ ಅಧ್ಯಯನ ಕೇಂದ್ರ ಹಾಗೂ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯ ದಲ್ಲಿ ಜರುಗಿದ 71ನೇ ಸರ್ವೋದಯ ದಿನಾ ಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ…