ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ:  ಮೈಸೂರು ಜಿಲ್ಲಾ ತಂಡಕ್ಕೆ ಸಮಗ್ರ ಪ್ರಶಸ್ತಿ
ಮೈಸೂರು

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಮೈಸೂರು ಜಿಲ್ಲಾ ತಂಡಕ್ಕೆ ಸಮಗ್ರ ಪ್ರಶಸ್ತಿ

January 31, 2019

ಮೈಸೂರು: ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದ ಎಲ್ಲಾ ವಿಭಾಗದಲ್ಲೂ ಉತ್ತಮ ಆಟ ಪ್ರದರ್ಶಿಸಿದ ‘ಮೈಸೂರು ಜಿಲ್ಲಾ ತಂಡ’ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕ ರರ ಸಂಘ, ಸಂಘದ ಬೆಂಗಳೂರು-ಮೈಸೂರು ಶಾಖೆ ಮತ್ತು ಮೈಸೂರು ಜಿಲ್ಲಾ ಡಳಿತ ಸಹಯೋಗದೊಂದಿಗೆ ಆಯೋಜಿ ಸಿದ್ದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಎಲ್ಲಾ ವಿಭಾಗದಲ್ಲೂ ಉತ್ತಮ ಆಟವಾಡಿ 123 ಅಂಕ ಪಡೆದ ಮೈಸೂರು ಜಿಲ್ಲಾ ತಂಡ ಪ್ರಥಮ ಬಹುಮಾನ ಪಡೆದರೆ, 93 ಅಂಕ ಪಡೆದ ಬೆಳಗಾವಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.

ಪುರುಷರ ವಿಭಾಗದ 45 ವರ್ಷದೊಳ ಗಿನ ವಿಭಾಗ: 100 ಮೀ ಓಟ: ಉಡುಪಿಯ ಶೈಲೇಶ್ ಎನ್.ಶೆಟ್ಟಿ (ಪ್ರ), ಬೆಳಗಾವಿಯ ನಾಗರಾಜ್ ಬಿ.ಲಮಾಣಿ(ದ್ವಿ), ಯಾದ ಗಿರಿಯ ನಾಗೇಶ್(ತೃ). 200ಮೀ ಓಟ: ಶಿವಮೊಗ್ಗದ ಎಸ್.ಜಿ.ವರುಣ್(ಪ್ರ), ಯಾದ ಗಿರಿಯ ನಾಗೇಶ್(ದ್ವಿ), ಬೆಳಗಾವಿಯ ನಾಗರಾಜ್ ಬಿ.ಲಮಾಣಿ(ತೃ). 1500ಮೀ ಓಟ: ಹಾಸನದ ಎ.ಎಸ್.ಪ್ರಮೋದ್(ಪ್ರ), ರಾಮನಗರದ ಎಂ.ಬಿ.ನಾಗರಾಜ್(ದ್ವಿ), ಶಿವಮೊಗ್ಗದ ಯಲ್ಲಾಲಿಂಗ ನಾಗವಿ(ತೃ).

110 ಮೀ ಹರ್ಡಲ್ಸ್: ಬೆಳಗಾವಿಯ ರೇವಪ್ಪ ಕೊಠ್ಮೂರು(ಪ್ರ), ಹಾವೇರಿಯ ಗಿರೀಶ್ ನಲ್ಲಿಕೊಪ್ಪ(ದ್ವಿ), ಕೊಪ್ಪಳದ ಡಿ. ಕೊಟ್ರೇಶ್(ತೃ). 5000ಮೀ ಓಟ: ಕೊಡಗಿನ ಬಿ.ಎ.ರಾಘವೇಂದ್ರ(ಪ್ರ), ಮೈಸೂರಿನ ಉದಯ್ ಗೌಡ(ದ್ವಿ), ಉತ್ತರಕನ್ನಡದ ಎ.ಆರ್.ಗೌಡ(ತೃ). ಉದ್ದ ಜಿಗಿತ: ಉಡುಪಿಯ ಶೈಲೇಶ್ ಎನ್.ಶೆಟ್ಟಿ(ಪ್ರ), ಶಿವಮೊಗ್ಗದ ಎಸ್.ಜಿ.ವರುಣ್(ದ್ವಿ), ಚಾಮರಾಜನಗ ರದ ಎ.ಎಂ.ಪ್ರಭಾಕರ್(ತೃ). ಎತ್ತರ ಜಿಗಿತ: ಚಾಮರಾಜನಗರದ ಎ.ಎಂ.ಪ್ರಭಾಕರ್ (ಪ್ರ), ದಾವಣಗೆರೆಯ ಎಂ.ಎಸ್.ಪ್ರವೀಣ್ (ದ್ವಿ), ತುಮಕೂರಿನ ಹೆಚ್.ವಿ.ಭರತ್(ತೃ).

ಚಕ್ರ ಎಸೆತ: ದಕ್ಷಿಣ ಕನ್ನಡದ ಹುಸೇನ್ ಮಕಂದರ್(ಪ್ರ), ದಾವಣಗೆರೆಯ ಎಂ.ಬಿ. ನಂದೀಶ್‍ಬಾಬು(ದ್ವಿ), ಉತ್ತರ ಕನ್ನಡದ ಶ್ರೀನಿವಾಸ್ ಎಂ.ಭಟ್(ತೃ). ಜಾವಲಿನ್ ಥ್ರೋ: ಚಾಮರಾಜನಗರದ ನಾಗೇಶ್ ಲಮಾಣಿ (ಪ್ರ), ಬೆಂಗಳೂರು ಗ್ರಾಮಾಂತರದ ಆರ್. ಎಂ.ಪ್ರವೀಣ್ ಕುಮಾರ್(ದ್ವಿ), ಬಾಗಲ ಕೋಟೆಯ ಅಶೋಕ ಲಕ್ಷ್ಮಣ ಪೂಜಾರ್ (ತೃ). ಡೆಕತ್ಲಾನ್: ಚಾಮರಾಜನಗರದ ಎ.ಎಂ.ಪ್ರಭಾಕರ್(ಪ್ರ), ಬೆಳಗಾವಿಯ ರೇವಪ್ಪ ಕೊಠ್ಮೂರು(ದ್ವಿ), ಚಾಮರಾಜ ನಗರದ ವಿಠ್ಠಲ್(ತೃ).

45 ವರ್ಷ ಮೇಲ್ಪಟ್ಟವರ 100ಮೀ ಓಟ: ದಕ್ಷಿಣ ಕನ್ನಡದ ಎ.ಸುಧೀರ್(ಪ್ರ), ಮೈಸೂ ರಿನ ಗಣಪತಿ ಜಕಾತಿ(ದ್ವಿ), ಕೋಲಾರದ ವೇಣುಗೋಪಾಲರೆಡ್ಡಿ(ತೃ). 400ಮೀ ಓಟ: ಶಿವಮೊಗ್ಗದ ಬಿ.ಅಣ್ಣಪ್ಪ(ಪ್ರ), ಮೈಸೂ ರಿನ ಡಾ.ಬಿ.ಪದ್ಮನಾಭ(ದ್ವಿ), ದಾವಣ ಗೆರೆಯ ಎಸ್.ಕೆ.ಪುಟ್ಟಣ್ಣಗೌಡ(ತೃ). ಗುಂಡು ಎಸೆತ: ಮೈಸೂರಿನ ಗೋಪಾಲಕೃಷ್ಣ ಮೂರ್ತಿ (ಪ್ರ), ಉತ್ತರ ಕನ್ನಡದ ಕೆ.ಜಿ. ಗೌಡ (ದ್ವಿ), ಮೈಸೂರಿನ ಕೆ.ಬಿ.ಅಯ್ಯಪ್ಪ(ತೃ).
ಮಹಿಳೆಯರ ವಿಭಾಗದ 100ಮೀ ಓಟ: ಮೈಸೂರಿನ ಡಾ.ಎಸ್.ನಳಿನಿ(ಪ್ರ), ದಕ್ಷಿಣ ಕನ್ನಡದ ದೀಪಿಕಾ(ದ್ವಿ), ಬೆಳಗಾವಿಯ ಜೆ.ಹೆಚ್.ಅಂಬೂರ್ ಕಬಾಲಿ (ತೃ). 200 ಮೀ ಓಟ: ಮೈಸೂರಿನ ಡಾ.ಎಸ್. ನಳಿನಿ (ಪ್ರ), ಉಡುಪಿಯ ಆಶಾ (ದ್ವಿ), ಚಿಕ್ಕ ಮಗ ಳೂರಿನ ಎ.ಎಸ್.ರಶ್ಮಿ(ತೃ). 400ಮೀ ಓಟ: ಮೈಸೂರಿನ ಡಾ. ಎಸ್.ನಳಿನಿ(ಪ್ರ), ದಕ್ಷಿಣಕನ್ನಡದ ಬಿ.ಶೋಭಾವತಿ(ದ್ವಿ), ದಕ್ಷಿಣ ಕನ್ನಡದ ಎನ್.ಟಿ. ವಿಶಾಲಾಕ್ಷಿ(ತೃ). 4x 100ಮೀ ರಿಲೇ: ಉಡುಪಿ(ಪ್ರ), ಮೈಸೂರು (ದ್ವಿ), ದಕ್ಷಿಣ ಕನ್ನಡ(ತೃ). 4×400ಮೀ ರಿಲೇ: ಶಿವಮೊಗ್ಗ(ಪ್ರ), ದಕ್ಷಿಣಕನ್ನಡ (ದ್ವಿ), ಮೈಸೂರು(ತೃ).
40ವರ್ಷ ಮೇಲ್ಪಟ್ಟವರ 200ಮೀ ಓಟ: ಉಡುಪಿಯ ಗ್ರೇಟ್ಟಾ ಮಸ್ಕರನೆಸ್ (ಪ್ರ), ಗೀತಾ(ದ್ವಿ), ಬೆಂಗಳೂರು ನಗರದ ಬಿ.ಸಿ. ಶರ್ಮಿಳ(ತೃ). 800ಮೀ ಓಟ: ಮೈಸೂರಿನ ಎಂ.ಎಸ್.ಸರೋಜ(ಪ್ರ), ದಕ್ಷಿಣ ಕನ್ನಡದ ಸರೋಜಿನಿ(ದ್ವಿ), ಉಡುಪಿಯ ಮಾಲಿನಿ(ತೃ).

ಸಾಂಸ್ಕøತಿಕ ಕಾರ್ಯಕ್ರಮ: ಹಿಂದೂಸ್ತಾನಿ ಕ್ಲಾಸಿಕಲ್ ಶಾಸ್ತ್ರೀಯ ವಾದನ: ಗದಗ್‍ನ ಕೃಷ್ಣಕುಮಾರ್ ಎಂ.ಕುಲಕರ್ಣಿ(ಪ್ರ), ಹಾವೇ ರಿಯ ರವೀಂದ್ರ ಮಳಗಿ(ದ್ವಿ), ಕೊಪ್ಪಳದ ವೆಂಕಟೇಶ್ ಪಾಟೀಲ್(ತೃ). ಕರ್ನಾಟಕ ಶಾಸ್ತ್ರೀಯ ಲಘು ಸಂಗೀತ: ರಾಮನಗರದ ಹೆಚ್.ಕೆ.ಲಕ್ಷ್ಮಿ(ಪ್ರ), ಹಾಸನದ ಕೆ.ಶಿವ ಕುಮಾರಾಚಾರಿ(ದ್ವಿ), ಹೆಚ್.ಸಿ.ಶ್ರೀನಿ ವಾಸ್(ತೃ). ಜಾನಪದ ಸಮೂಹ: ಮಂಡ್ಯದ ನಾಗರಾಜ್ ಮತ್ತು ತಂಡ(ಪ್ರ), ಶಿವ ಮೊಗ್ಗದ ರಮೇಶ್ ಮತ್ತು ತಂಡ(ದ್ವಿ), ದಕ್ಷಿಣ ಕನ್ನಡದ ರಾಜೇಶ್ ಮತ್ತು ತಂಡ(ತೃ).
ನೃತ್ಯ ವಿಭಾಗ: ಕೂಚುಪುಡಿ: ಮಡಿ ಕೇರಿಯ ಮಿಲನ್ ಭರತ್(ಪ್ರ). ಜಾನಪದ ನೃತ್ಯ: ದಕ್ಷಿಣಕನ್ನಡ ಜಿಲ್ಲೆಯ ಪ್ರದೀಪ್ ಮತ್ತು ತಂಡ(ಪ್ರ), ಉತ್ತರಕನ್ನಡ ಜಿಲ್ಲೆಯ ಪುಷ್ಪ ಮತ್ತು ತಂಡ(ದ್ವಿ), ಮೈಸೂರಿನ ಲೋಕೇಶ್ ಮತ್ತು ತಂಡ(ತೃ). ಒಡಿಸ್ಸಿ: ಮಡಿಕೇರಿಯ ಮಿಲನ್ ಭರತ್(ಪ್ರ). ಭರತನಾಟ್ಯ: ರಾಮನಗರದ ವಿಜಯ ಲಕ್ಷ್ಮಿ(ಪ್ರ), ಬೆಂಗಳೂರಿನ ಎಸ್.ಎನ್. ವೀಣಾ (ದ್ವಿ), ಮಡಿಕೇರಿಯ ಮಿಲನ್ ಭರತ್ (ತೃ). ಕಥಕಳಿ: ಮಂಡ್ಯದ ಸುರೇಖಾ(ಪ್ರ) ಬಹುಮಾನ ಪಡೆದುಕೊಂಡಿದ್ದಾರೆ.

ಬುಧವಾರ ಸಂಜೆ ನಡೆದ ಸಮಾ ರೋಪದಲ್ಲಿ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಬಹುಮಾನ ವಿತರಿಸಿ ದರು. ನಂತರ ಮಾತನಾಡಿ, ಇಂದು ಕ್ರೀಡೆ ಯನ್ನು ವ್ಯಾಪಾರವಾಗಿ ಬಳಸಿಕೊಳ್ಳುತ್ತಿ ದ್ದಾರೆ. ಅಂದರೆ, ಕ್ರೀಡೆಯನ್ನು ಅಭಿಮಾನ ದಿಂದ ನೋಡುವ ಬದಲು ಬೆಟ್ಟಿಂಗ್ ಕಟ್ಟುವ ಮೂಲಕ ವ್ಯಾವಹಾರಿಕವಾಗಿ ಬಳಸಿಕೊಳ್ಳು ತ್ತಿದ್ದಾರೆ. ಇದರಿಂದ ಎಷ್ಟೋ ಕುಟುಂಬ ಗಳು ಬೀದಿ ಪಾಲಾಗಿವೆ. ಹಾಗಾಗಿ ಕ್ರೀಡಾ ಭಿಮಾನ ಬೆಳೆಸಿಕೊಳ್ಳಬೇಕೇ ಹೊರತು ವ್ಯಾಪಾರಕ್ಕಾಗಿ ಬಳಸಿಕೊಳ್ಳಬಾರದು ಎಂದು ನೌಕರರಿಗೆ ಸಲಹೆ ನೀಡಿದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ಸಂಘದ ಗೌರ ವಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಎ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಲತೇಶ ವೈ.ಅಣ್ಣಿಗೇರಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಸೇರಿದಂತೆ ಸಂಘದ ಪದಾಧಿ ಕಾರಿಗಳು ಉಪಸ್ಥಿತರಿದ್ದರು.

Translate »