ಎಸ್‍ಸಿ/ಎಸ್‍ಟಿ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಮತ್ತೆ ನಕಾರ
ಮೈಸೂರು

ಎಸ್‍ಸಿ/ಎಸ್‍ಟಿ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಮತ್ತೆ ನಕಾರ

January 31, 2019

ನವದೆಹಲಿ: ಎಸ್‍ಸಿ/ಎಸ್‍ಟಿ ಕಾಯ್ದೆ ತಿದ್ದುಪಡಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮತ್ತೊಮ್ಮೆ ನಿರಾಕರಿಸಿದ್ದು, ಕೇಂದ್ರ ಸರ್ಕಾರದ ಮರುಪರಿಶೀಲನಾ ಅರ್ಜಿಯೂ ಸೇರಿದಂತೆ ಎಲ್ಲವನ್ನೂ ಫೆ.19ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿ ಕಾಯ್ದೆಯಲ್ಲಿ “ಜಾಮೀನು ರಹಿತ” ಎಂಬ ಅಂಶವನ್ನು ಕಾಯ್ದೆಯಲ್ಲಿ ಮರುಸ್ಥಾಪಿಸಲಾಗಿತ್ತು. ನ್ಯಾ.ಯುಯು ಲಲಿತ್ ನೇತೃತ್ವದ ಪೀಠ ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದು ಕೇಂದ್ರ ಸರ್ಕಾರದ ಮರುಪರಿ ಶೀಲನಾ ಅರ್ಜಿಯೂ ಸೇರಿದಂತೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನೂ ಫೆ.19 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಎಸ್‍ಸಿ/ಎಸ್‍ಟಿ ಕಾಯ್ದೆಯಲ್ಲಿ ಸರ್ಕಾರ ಬದಲಾ ವಣೆ ತಂದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿದಾರರ ಪರ ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದ ನಂತರ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ತಡೆ ನೀಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜ.25 ರಂದೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪರಿಪರಿಶೀಲನೆ ಹಾಗೂ ತಿದ್ದುಪಡಿಯನ್ನು ಪ್ರಶ್ನಿಸಿರುವ ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿತ್ತು.

Translate »