ಮೈಸೂರು: ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‍ನ (ಎಐಟಿಯುಸಿ ಅಂಗ ಸಂಘಟನೆ) ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಅಕ್ಷರ ದಾಸೋಹ ಬಿಸಿ ಯೂಟ ಯೋಜನೆಯಡಿ ದೇಶದಾದ್ಯಂತ 12 ಲಕ್ಷ ಸರ್ಕಾರಿ ಶಾಲೆಗಳಲ್ಲಿ 11 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋ ಜನ ಪಡೆಯುತ್ತಿದ್ದಾರೆ. ಇಂತಹ ಮಹತ್ವದ ಯೋಜನೆಯಲ್ಲಿ ದುಡಿಯುವ ಕಾರ್ಯಕರ್ತರಿಗೆ…
ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಇಂದು 5 ಕ್ಲಸ್ಟರ್‍ಗಳ ಕಾರ್ಯಾಗಾರ
January 25, 2019ಮೈಸೂರು: ಮೈಸೂರು ಜಿಲ್ಲೆಯನ್ನು ಶೈಕ್ಷ ಣಿಕವಾಗಿ ಉತ್ತಮಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ (ಜ.25) ಮೈಸೂರಿನ ಶಾರದಾವಿಲಾಸ ಶತಮಾನೋ ತ್ಸವ ಭವನದಲ್ಲಿ ಏರ್ಪಡಿಸಿರುವ 5 ಕ್ಲಸ್ಟರ್‍ಗಳ ಕಾರ್ಯಾ ಗಾರದಲ್ಲಿ ಒಟ್ಟು 80 ಶಾಲೆಗಳ 1180 ಮಕ್ಕಳು ಭಾಗವಹಿ ಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಯ ಹಿಂದುಳಿಯುವಿಕೆಗೆ ಕಾರಣ ಗಳನ್ನು ಪತ್ತೆ ಹಚ್ಚಿ, ಮಕ್ಕಳು ಉತ್ತೀರ್ಣರಾಗಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆತ್ಮಾವಲೋಕನ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ಹೆಚ್ಚು ಮಹತ್ವದ್ದಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಪಾಸಿಂಗ್ ಪ್ಯಾಕೇಜ್…
ಕೌಶಲ್ಯ, ಪ್ರತಿಭೆಯಿಂದ ಮಾತ್ರ ಕೆಲಸ ಗಿಟ್ಟಿಸಲು ಸಾಧ್ಯ
January 25, 2019ಮೈಸೂರು: ಪ್ರತಿಭೆ, ಕೌಶಲ್ಯ ಹಾಗೂ ಭಾಷಾ ಜ್ಞಾನ ಹೊಂದಿ ದ್ದರೆ ಮಾತ್ರ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಮೈಸೂರಿನ ಟಿಪ್ಪು ಸರ್ಕಲ್ ಬಳಿ ಇರುವ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಹಲವು ಖಾಸಗಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಸಂದರ್ಶನದ ಮೂಲಕ ಅಭ್ಯರ್ಥಿ ಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ನಿರುದ್ಯೋಗಿ ಯುವಕ-ಯುವತಿಯರಿಗೆ ಅನುಕೂಲವಾಗುತ್ತಿದೆ ಎಂದರು….
ರಂಗಭೂಮಿ ಸರ್ಕಾರದ ಬದಲು ಜನರ ಆಶ್ರಯದಲ್ಲಿ ಬೆಳೆಯಬೇಕು
January 25, 2019ಮೈಸೂರು: ರಂಗ ಭೂಮಿ ಸರ್ಕಾರದ ಆಶ್ರಯದಲ್ಲಿ ಬೆಳೆ ಯುವುದಕ್ಕಿಂತ ಜನರ ಆಶ್ರಯದಲ್ಲಿ ಬೆಳೆಯ ಬೇಕು ಎಂದು ಕರ್ನಾಟಕ ನಾಟಕ ಅಕಾ ಡೆಮಿ ಅಧ್ಯಕ್ಷ ಜೆ.ಲೋಕೇಶ್ ಹೇಳಿದರು. ಕಲಾಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಂಗಚಾವಡಿ ಮೈಸೂರು ವತಿಯಿಂದ ಗುರುವಾರ ಆಯೋಜಿಸಿದ್ದ ‘ಪೌರಾಣಿಕ ನಾಟಕೋತ್ಸವ’ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಉಚಿತವಾಗಿ ನಾಟಕ ಪ್ರದರ್ಶನ ಗಳನ್ನು ಏರ್ಪಡಿಸುತ್ತಿದೆ. ಆದರೆ, ಪ್ರೇಕ್ಷಕ ರಿಗೆ ಹಾಗೂ ಕಲಾವಿದರ ಜವಾಬ್ದಾರಿ ಹೆಚ್ಚಾಗಬೇಕಾದರೆ ಟಿಕೆಟ್ ನಿಗದಿಪಡಿಸ ಬೇಕು ಎಂದು ಅಭಿಪ್ರಾಯಪಟ್ಟರು. ಟಿ.ವಿ ಧಾರಾವಾಹಿಗಳು…
ಹರಿದ ಪಾಸ್‍ಪೋಟ್ರ್ಸ್‍ನಿಂದ ವಿಮಾನಯಾನಿಗಳಿಗೆ ಸಮಸ್ಯೆ
January 25, 2019ಮೈಸೂರು: ಇದು ಒಂದು ದೇಶದ ಸರ್ಕಾರದಿಂದಲೇ ನಾಗರಿಕರಿಗೆ ಎದುರಾಗುವ ಸಮಸ್ಯೆ ಎಂದು ತೋರುತ್ತದೆ. ಇನ್ನು ಮುಂದೆ ಹರಿದ, ವಿರೂಪ ಗೊಂಡ ಪಾಸ್‍ಪೋರ್ಟ್‍ನಿಂದ ವಿಮಾನಯಾನ ಮಾಡಲು ಸಾಧ್ಯವಿಲ್ಲದಂತಾ ಗಿದೆ. ಗುರುವಾರ ಬೆಳಿಗ್ಗೆ ಟ್ರಾವೆಲ್ ಏಜೆಂಟ್‍ವೊಬ್ಬರು `ಮೈಸೂರು ಮಿತ್ರ’ ಕಚೇರಿಗೆ ಪಾಸ್‍ಪೋರ್ಟ್ ಒಂದನ್ನು ಹಿಡಿದುಕೊಂಡು ಆಗಮಿಸಿದರು. ಈ ಪಾಸ್ ಪೋರ್ಟ್‍ನಿಂದ ಇತ್ತೀಚಿನ ದಿನಗಳಲ್ಲಿ ಹಲವಾರು ದೇಶಗಳಲ್ಲಿ ಪ್ರಯಾಣ ಮಾಡಿದ್ದಾರೆ. ಆದರೆ ಈಗ ಈ ಪಾಸ್ ಪೋರ್ಟ್ ಹರಿದು ಹೋಗಿ ರುವುದರಿಂದ ಇದಕ್ಕೆ ಮಾನ್ಯತೆ ಇಲ್ಲ ಎಂದು ವಿಮಾನ ನಿಲ್ದಾಣದಲ್ಲಿ ಹೇಳಲಾಗುತ್ತಿದೆ…
ಎಲ್ಲಾ ಮಠ ಮಾನ್ಯಗಳು ಸಿದ್ಧಗಂಗಾ ಶ್ರೀಗಳ ಹಾದಿಯಲ್ಲೇ ಸಾಗಿದರೆ ಅದೇ ಶ್ರೀಗಳಿಗೆ ಸಲ್ಲಿಸುವ ಗೌರವ
January 25, 2019ಮೈಸೂರು: ನಡೆ ದಾಡುವ ಸಂತ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸುವುದೇ ಆದಲ್ಲಿ ಎಲ್ಲಾ ಮಠಗಳು ಅವರ ಹಾದಿಯನ್ನೇ ಅನುಸರಿಸ ಬೇಕು ಎಂದು ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ಶರಣ ಮಂಡಳಿ ಮೈಸೂರು ಅರಮನೆ ಉತ್ತರ ದ್ವಾರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ `ಡಾ.ಶಿವಕುಮಾರಸ್ವಾಮಿ ಗಳಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಠದ ಪರಂ ಪರೆಗೆ ಮೇಲ್ಪಂಕ್ತಿ ಹಾಕಿದವರು ಸಿದ್ಧಗಂಗಾ ಶ್ರೀಗಳು. ನಾಡಿನ ಎಲ್ಲಾ ಮಠಮಾನ್ಯಗಳು ಅವರನ್ನು ಅನುಸರಿಸಿಕೊಂಡು ಹೋದರೆ…
ನಾಳೆ ಉಚಿತ ಆರೋಗ್ಯ ತಪಾಸಣೆ, ಮಕ್ಕಳಿಗೆ ಸ್ವಚ್ಛತೆಯ ಅರಿವು
January 25, 2019ಮೈಸೂರು: ಗಣರಾಜ್ಯೋತ್ಸವದ ಅಂಗವಾಗಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಜ.26ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಚಾಮುಂಡಿಪುರಂನಲ್ಲಿರುವ ಬಾಲ ಬೋಧಿನಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾಧಕರಿಗೆ ಸನ್ಮಾನ ಹಾಗೂ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶಿಬಿರಕ್ಕೆ ಇಳೈ ಆಳ್ವಾರ್ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ…
ಜ.27 ವಿಷ್ಣು ಸ್ಮರಣಾರ್ಥ `ಸಿಂಹ ಘರ್ಜನೆ’ ಸಂಗೀತ ಸಂಜೆ
January 25, 2019ಮೈಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮರಣಾರ್ಥ ಜ.27ರಂದು ಸಂಜೆ 5 ಗಂಟೆಗೆ ಮೈಸೂರು ಪುರಭವನ ಮೈದಾನದಲ್ಲಿ ಡಾ.ರಾಜ್‍ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಡಾ.ರಾಜ್‍ಕುಮಾರ್ ಅವರ ಮರುಧ್ವನಿ ಗಾಯಕ ಜಯರಾಂ ಗಾಯನದಲ್ಲಿ `ಸಿಂಹ ಘರ್ಜನೆ’ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಕಲಾವಿದ ಮೈಕ್ ಚಂದ್ರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್ ನಟಿಸಿರುವ ಚಿತ್ರಗಳ ಆಯ್ದೆ ಗೀತೆಗಳನ್ನು ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಸ್.ಬಾಲರಾಜ್ ಚಾಲನೆ ನೀಡಲಿದ್ದು, ನಗರಪಾಲಿಕೆ ಮಾಜಿ…
ಮಹಾತ್ಮರ ಸ್ಮರಣೆಯಿಂದ ನಮ್ಮ ಆತ್ಮಾವಲೋಕನ ಸಾಧ್ಯ ಸುತ್ತೂರು ಶ್ರೀಗಳ ಅಭಿಮತ
January 25, 2019ಸುತ್ತೂರು: ಮಹಾತ್ಮರ ಸ್ಮರಣೆ ಮತ್ತು ದರ್ಶನ ಮಾಡುವುದರಿಂದ ಪ್ರತಿಯೊಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಯವರು ನುಡಿದರು. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1059ನೆಯ ಜಯಂತಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಿವಮೊಗ್ಗದ ಕಾರ್ಯಕರ್ತರಿಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಶ್ರೀಗಳು ಶಿವಮೊಗ್ಗದಲ್ಲಿ ಆಯೋಜನೆಗೊಂಡಿದ್ದ ಜಯಂತಿ ಮಹೋತ್ಸವವನ್ನು ಶಿವಮೊಗ್ಗದ ಜನತೆ ಶ್ರದ್ಧೆ, ಭಕ್ತಿ, ಶಿಸ್ತು ಮತ್ತು ಆಸಕ್ತಿಯಿಂದ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು….
ತಿ.ನರಸೀಪುರಕ್ಕೆ ಡಿಸಿ, ಎಸ್‍ಪಿ ಭೇಟಿ: ಕುಂಭಮೇಳ ಸಿದ್ಧತೆ ಮಾಹಿತಿ ಸಂಗ್ರಹ
January 25, 2019ತಿ.ನರಸೀಪುರ: ಮುಂದಿನ ಫೆ.17ರಿಂದ ನಡೆಯಲಿರುವ ಮೂರು ದಿನಗಳ ಧಾರ್ಮಿಕ ಉತ್ಸವ ಕುಂಭಮೇಳಕ್ಕೆ ಅಗತ್ಯ ತಯಾರಿ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಪಟ್ಟಣದ ತ್ರಿವೇಣಿ ಸಂಗಮಕ್ಕೆ ಗುರುವಾರ ಭೇಟಿ ನೀಡಿದರು. ಈ ಹಿಂದಿನ ಕುಂಭಮೇಳದಲ್ಲಿ ಭಕ್ತರಿಗೆ ಒದಗಿಸಲಾಗಿದ್ದ ಸೌಲಭ್ಯಗಳನ್ನು ಪ್ರಸಕ್ತ ಕುಂಭಮೇಳದಲ್ಲಿಯೂ ಮಾಡಿಕೊಡುವ ಸಂಬಂಧ ತ್ರಿವೇಣಿ ಸಂಗಮದ ಭಿಕ್ಷೇಶ್ವರ, ಮೂಲಸ್ಥಾನೇಶ್ವರ, ಅಗಸ್ತೇಶ್ವರ ಗುಂಜಾ ನರಸಿಂಹಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾತ್ಕಾಲಿಕ ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ,…