ಮೈಸೂರು: ರಂಗ ಭೂಮಿ ಸರ್ಕಾರದ ಆಶ್ರಯದಲ್ಲಿ ಬೆಳೆ ಯುವುದಕ್ಕಿಂತ ಜನರ ಆಶ್ರಯದಲ್ಲಿ ಬೆಳೆಯ ಬೇಕು ಎಂದು ಕರ್ನಾಟಕ ನಾಟಕ ಅಕಾ ಡೆಮಿ ಅಧ್ಯಕ್ಷ ಜೆ.ಲೋಕೇಶ್ ಹೇಳಿದರು.
ಕಲಾಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಂಗಚಾವಡಿ ಮೈಸೂರು ವತಿಯಿಂದ ಗುರುವಾರ ಆಯೋಜಿಸಿದ್ದ ‘ಪೌರಾಣಿಕ ನಾಟಕೋತ್ಸವ’ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಉಚಿತವಾಗಿ ನಾಟಕ ಪ್ರದರ್ಶನ ಗಳನ್ನು ಏರ್ಪಡಿಸುತ್ತಿದೆ. ಆದರೆ, ಪ್ರೇಕ್ಷಕ ರಿಗೆ ಹಾಗೂ ಕಲಾವಿದರ ಜವಾಬ್ದಾರಿ ಹೆಚ್ಚಾಗಬೇಕಾದರೆ ಟಿಕೆಟ್ ನಿಗದಿಪಡಿಸ ಬೇಕು ಎಂದು ಅಭಿಪ್ರಾಯಪಟ್ಟರು.
ಟಿ.ವಿ ಧಾರಾವಾಹಿಗಳು ಇಂದಿನ ಯುವ ಸಮುದಾಯವನ್ನು ಹಾಳು ಮಾಡುತ್ತಿವೆ. ಅವರನ್ನು ರಂಗಭೂಮಿಯತ್ತ ಗಮನ ಹರಿಸುವಂತೆ ನೋಡಿಕೊಳ್ಳಬೇಕಿದೆ. ರಂಗ ಭೂಮಿಯನ್ನು ಪ್ರೋತ್ಸಾಹಿಸುವ ಕೆಲಸ ಗಳು ಇನ್ನಷ್ಟು ನಡೆಯಬೇಕು. ಇದರಿಂದ ಹವ್ಯಾಸಿ, ವೃತ್ತಿ ಹಾಗೂ ಪೌರಾಣಿಕ ರಂಗ ಭೂಮಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾ ಗುತ್ತದೆ. ಆದ್ದರಿಂದಲೇ ಪೌರಾಣಿಕ ನಾಟ ಕೋತ್ಸವ ಆಯೋಜಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಹಿರಿಯ ರಂಗತಜ್ಞೆ ಹೆಚ್.ಟಿ.ಇಂದ್ರಮ್ಮ ಮಾತನಾಡಿ, ಪೌರಾಣಿಕ ನಾಟಕ ವೀಕ್ಷ ಣೆಗೆ ಹೆಚ್ಚಿನ ಪ್ರೇಕ್ಷಕರು ಬರಬೇಕು. ಆಗ ಕಲಾವಿದರನ್ನು ಪ್ರೋತ್ಸಾಹಿಸಿದಂತಾಗು ತ್ತದೆ ಎಂದರು. ಇದೇ ವೇಳೆ ರಂಗಕರ್ಮಿ ಗಳಾದ ಹೆಚ್.ಎಸ್.ಗೋವಿಂದೇಗೌಡ, ಕಿರಗಸೂರು ರಾಜಣ್ಣ ಅವರನ್ನು ಸನ್ಮಾ ನಿಸಲಾಯಿತು. ನಂತರ ವೇದಿಕೆಗೆ ಆಗಮಿ ಸಿದ ಮಂಡ್ಯದ ಸಂಭ್ರಮ ಮಹಿಳಾ ಮಂಡಳಿ ಕಲಾವಿದರು ‘ಪಾದುಕಾ ಪಟ್ಟಾ ಭಿಷೇಕ’ ನಾಟಕ ಪ್ರದರ್ಶನ ನೀಡಿ, ಕಲಾ ಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ. ರಾಮಚಂದ್ರ, ಯಶೋಧ ರಾಮಚಂದ್ರ, ರಂಗಕರ್ಮಿಗಳಾದ ಬಿ.ಹುಚ್ಚಯ್ಯ, ಬಸಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾದ ಹೊನ್ನನಾಯಕ, ಗಣೇಶ ಅಮೀನ ಗಡ ಮತ್ತಿತರರು ಉಪಸ್ಥಿತರಿದ್ದರು.