ಕೌಶಲ್ಯ, ಪ್ರತಿಭೆಯಿಂದ ಮಾತ್ರ ಕೆಲಸ ಗಿಟ್ಟಿಸಲು ಸಾಧ್ಯ
ಮೈಸೂರು

ಕೌಶಲ್ಯ, ಪ್ರತಿಭೆಯಿಂದ ಮಾತ್ರ ಕೆಲಸ ಗಿಟ್ಟಿಸಲು ಸಾಧ್ಯ

January 25, 2019

ಮೈಸೂರು: ಪ್ರತಿಭೆ, ಕೌಶಲ್ಯ ಹಾಗೂ ಭಾಷಾ ಜ್ಞಾನ ಹೊಂದಿ ದ್ದರೆ ಮಾತ್ರ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಮೈಸೂರಿನ ಟಿಪ್ಪು ಸರ್ಕಲ್ ಬಳಿ ಇರುವ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಹಲವು ಖಾಸಗಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಸಂದರ್ಶನದ ಮೂಲಕ ಅಭ್ಯರ್ಥಿ ಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದು ನಿರುದ್ಯೋಗಿ ಯುವಕ-ಯುವತಿಯರಿಗೆ ಅನುಕೂಲವಾಗುತ್ತಿದೆ ಎಂದರು.

ಪ್ರತಿಭೆ, ಕೌಶಲ್ಯ ಹಾಗೂ ಭಾಷಾ ಜ್ಞಾನ ವಿದ್ದಲ್ಲಿ ಸುಲಭವಾಗಿ ಕೆಲಸ ಪಡೆಯಲು ಈಗ ವಿಫುಲ ಅವಕಾಶವಿದೆ. ಸರ್ಕಾರ ಸಹ ಉದ್ಯೋಗ ಮೇಳ, ಕೌಶಲ್ಯ ತರ ಬೇತಿಗೆ ಹೆಚ್ಚು ಒತ್ತು ನೀಡುತ್ತಿರುವುದು ನಿರುದ್ಯೋಗಿಗಳಿಗೆ ವರದಾನ ಎಂದರು.

ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಅವರು ಉದ್ಯೋಗ ಮೇಳವನ್ನು ಉದ್ಘಾಟಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮದ್, ಉದ್ಯೋಗ ಮತ್ತು ತರ ಬೇತಿ ಇಲಾಖೆ ಉಪ ನಿರ್ದೇಶಕ ರವಿ ಶಂಕರ್, ಸಹಾಯಕ ನಿರ್ದೇಶಕಿ ಡಿ. ರಾಣಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು. ಸುಮಾರು 45 ಕಂಪನಿ ಪ್ರತಿನಿಧಿ ಗಳು ಭಾಗವಹಿಸಿ ಸಂದರ್ಶನದ ಮೂಲಕ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು. ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ 500ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಉದ್ಯೋಗ ಮೇಳದ ಸಂದರ್ಶನಕ್ಕೆ ಹಾಜರಾಗಿದ್ದು, ಸಂಜೆವರೆಗೆ ಸುಮಾರು 50 ಮಂದಿಯನ್ನು ಆಯ್ಕೆ ಮಾಡಲಾಯಿತು. ಇನ್ನು ಕೆಲವರಿಗೆ ಉದ್ಯೋಗ ಖಾತರಿ ಮಾಡಲಾಗಿದೆ ಎಂದು ಡಿ.ರಾಣಿ ತಿಳಿಸಿದ್ದಾರೆ.

Translate »