ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ  ಇಂದು 5 ಕ್ಲಸ್ಟರ್‍ಗಳ ಕಾರ್ಯಾಗಾರ
ಮೈಸೂರು

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಇಂದು 5 ಕ್ಲಸ್ಟರ್‍ಗಳ ಕಾರ್ಯಾಗಾರ

January 25, 2019

ಮೈಸೂರು: ಮೈಸೂರು ಜಿಲ್ಲೆಯನ್ನು ಶೈಕ್ಷ ಣಿಕವಾಗಿ ಉತ್ತಮಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ (ಜ.25) ಮೈಸೂರಿನ ಶಾರದಾವಿಲಾಸ ಶತಮಾನೋ ತ್ಸವ ಭವನದಲ್ಲಿ ಏರ್ಪಡಿಸಿರುವ 5 ಕ್ಲಸ್ಟರ್‍ಗಳ ಕಾರ್ಯಾ ಗಾರದಲ್ಲಿ ಒಟ್ಟು 80 ಶಾಲೆಗಳ 1180 ಮಕ್ಕಳು ಭಾಗವಹಿ ಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಯ ಹಿಂದುಳಿಯುವಿಕೆಗೆ ಕಾರಣ ಗಳನ್ನು ಪತ್ತೆ ಹಚ್ಚಿ, ಮಕ್ಕಳು ಉತ್ತೀರ್ಣರಾಗಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆತ್ಮಾವಲೋಕನ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ಹೆಚ್ಚು ಮಹತ್ವದ್ದಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಪಾಸಿಂಗ್ ಪ್ಯಾಕೇಜ್ ಪುಸ್ತಕ ಪ್ರಕಟಿಸಿ, ಅದನ್ನು ಅಗತ್ಯವಿರುವ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಕೇವಲ ಗಣಿತ, ವಿಜ್ಞಾನ ವಿಷಯಗಳ ಪಠ್ಯ ಬದಲಾವಣೆ ಆಗಿರುವುದರಿಂದ ಬ್ಲೂ ಪ್ರಿಂಟ್ ಆಧಾರಿತ ಪ್ರಶ್ನೆ ಪತ್ರಿಕೆಗಳ ಅಗತ್ಯವಿದೆ. ಹೀಗಾಗಿ ಅದನ್ನು ಸಿದ್ಧಪಡಿಸಿ ವಿತರಿ ಸಲು ಅಗತ್ಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಉತ್ತಮ ಗೊಳಿಸಲೆಂದು ವಲಯದ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿ ರುವ ಭಾನುವಾರದ ವಿಶೇಷ ತರಗತಿಗಳು, ಗುಂಪು ಅಧ್ಯಯನ, ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳು, ಪ್ರಶ್ನೆಪತ್ರಿಕೆ ಅಭ್ಯಾಸ, ಕನಿಷ್ಠ 3 ವರ್ಷದ ಪೂರ್ವ ಸಿದ್ಧತಾ ಪರೀಕ್ಷೆಗಳು, ಸಂಪನ್ಮೂಲ ಶಿಕ್ಷಕರಿಂದ ಮಕ್ಕಳಲ್ಲಿ ರುವ ಸಮಸ್ಯೆಗಳಿಗೆ ಪರಿಹಾರ ಇತ್ಯಾದಿ ಕಾರ್ಯಕ್ರಮ ಗಳನ್ನು ಸಹ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರದ 5 ಕ್ಲಸ್ಟರ್‍ಗಳ ಕಾರ್ಯಾಗಾರದಲ್ಲಿ ಮಕ್ಕಳಿಗೆ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಪರೀಕ್ಷೆ ಕುರಿತು ಅರಿವು ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಜೊತೆಗೆ ಮೈಸೂರು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೂ ನೆರವಾಗಲಿದೆ ಎಂದು ಹೇಳಿದರು.

Translate »