ಹರಿದ ಪಾಸ್‍ಪೋಟ್ರ್ಸ್‍ನಿಂದ  ವಿಮಾನಯಾನಿಗಳಿಗೆ ಸಮಸ್ಯೆ
ಮೈಸೂರು

ಹರಿದ ಪಾಸ್‍ಪೋಟ್ರ್ಸ್‍ನಿಂದ ವಿಮಾನಯಾನಿಗಳಿಗೆ ಸಮಸ್ಯೆ

January 25, 2019

ಮೈಸೂರು: ಇದು ಒಂದು ದೇಶದ ಸರ್ಕಾರದಿಂದಲೇ ನಾಗರಿಕರಿಗೆ ಎದುರಾಗುವ ಸಮಸ್ಯೆ ಎಂದು ತೋರುತ್ತದೆ. ಇನ್ನು ಮುಂದೆ ಹರಿದ, ವಿರೂಪ ಗೊಂಡ ಪಾಸ್‍ಪೋರ್ಟ್‍ನಿಂದ ವಿಮಾನಯಾನ ಮಾಡಲು ಸಾಧ್ಯವಿಲ್ಲದಂತಾ ಗಿದೆ. ಗುರುವಾರ ಬೆಳಿಗ್ಗೆ ಟ್ರಾವೆಲ್ ಏಜೆಂಟ್‍ವೊಬ್ಬರು `ಮೈಸೂರು ಮಿತ್ರ’ ಕಚೇರಿಗೆ ಪಾಸ್‍ಪೋರ್ಟ್ ಒಂದನ್ನು ಹಿಡಿದುಕೊಂಡು ಆಗಮಿಸಿದರು.

ಈ ಪಾಸ್ ಪೋರ್ಟ್‍ನಿಂದ ಇತ್ತೀಚಿನ ದಿನಗಳಲ್ಲಿ ಹಲವಾರು ದೇಶಗಳಲ್ಲಿ ಪ್ರಯಾಣ ಮಾಡಿದ್ದಾರೆ. ಆದರೆ ಈಗ ಈ ಪಾಸ್ ಪೋರ್ಟ್ ಹರಿದು ಹೋಗಿ ರುವುದರಿಂದ ಇದಕ್ಕೆ ಮಾನ್ಯತೆ ಇಲ್ಲ ಎಂದು ವಿಮಾನ ನಿಲ್ದಾಣದಲ್ಲಿ ಹೇಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹರಿದು ಹೋಗಿದೆ ಎಂದು ಹೇಳಲಾಗುತ್ತಿ ರುವ ಈ ಪಾಸ್ ಪೋರ್ಟ್‍ನ ಒಳಪುಟದಲ್ಲಿರುವ ಯಾವುದೇ ಭಾವಚಿತ್ರ ವಿರೂಪಗೊಂಡಿಲ್ಲ. ಆದರೆ ಬೈಂಡಿಂಗ್ ಮಾಡಿದ್ದ ಜಾಗ ಹರಿದು ಹೋಗಿರು ತ್ತದೆ. ಚಿತ್ರದಲ್ಲಿ ತೋರಿಸಿ ರುವಂತೆ ಕಳಪೆ ಗುಣ ಮಟ್ಟದ ಹೊಲಿಗೆಯಿಂದಾಗಿ ಪಾಸ್‍ಪೋರ್ಟ್ ಹರಿದು ಹೋಗಿರುವುದು ನಿಜ. ಪಾಸ್ ಪೋರ್ಟ್ ಹರಿದು ಹೋಗಿರುವುದಕ್ಕೆ ಯಾರನ್ನು ದೂಷಿಸಬೇಕು ಎಂಬುದೇ ಪ್ರಶ್ನೆ ಯಾಗಿದೆ? ಭಾರತೀಯ ವಿಮಾನಯಾನ ಪ್ರಾಧಿಕಾರ ಇದರ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಿರಾಕರಿಸಿದ್ದು, ಇದರಿಂದ ಪಾಸ್‍ಪೋರ್ಟ್ ಹೊಂದಿರುವವರಿಗೆ ಸಮಸ್ಯೆ ಉದ್ಭವಿಸಿದಂತಾಗಿದೆ. ಈ ಪಾಸ್‍ಪೋರ್ಟ್ ಆಧಾರದ ಮೇಲೆ ಆಯಾ ದೇಶಗಳಲ್ಲಿ ವೀಸಾ ವಿತರಿಸಲಾಗುತ್ತದೆ ಎಂಬುದನ್ನು ಉಲ್ಲೇಖಿಸಬಹುದು. ಆದರೆ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪಾಸ್‍ಪೋರ್ಟ್ ಹೊಂದಿರುವವರಿಗೆ ಬೆದರಿ ಸುವ ರೀತಿಯಲ್ಲಿ ಹೇಳಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಪಾಸ್‍ಪೋರ್ಟ್‍ನಲ್ಲಿ ಪ್ರಯಾಣಿಸಲು ನಾವು ನಿಮಗೆ ಅವಕಾಶ ನೀಡುತ್ತೇವೆ. ಆದರೆ ಬೇರೆ ದೇಶದಲ್ಲಿ ಹರಿದ ಪಾಸ್‍ಪೋರ್ಟ್‍ನಿಂದ ಸಮಸ್ಯೆ ಉದ್ಭವಿಸಿದಲ್ಲಿ ನಿಮ್ಮನ್ನು ಭಾರತಕ್ಕೆ ವಾಪಸ್ ಕಳುಹಿಸುತ್ತಾರೆ ಎಂದು ಎಚ್ಚರಿಕೆ ಧಾಟಿಯಲ್ಲಿ ಹೇಳಿದ್ದಾರೆ ಎಂದರು.

Translate »