Tag: Mysuru

ಕೆರೆ ಒತ್ತುವರಿ: 25 ಎಕರೆ ತೆರವು
ಮೈಸೂರು

ಕೆರೆ ಒತ್ತುವರಿ: 25 ಎಕರೆ ತೆರವು

January 23, 2019

ಮೈಸೂರು: ಸರ್ಕಾರಿ ಭೂಮಿ ಹಾಗೂ ಕೆರೆ ಒತ್ತುವರಿ ವಿರುದ್ಧ ಜಿಲ್ಲಾಡಳಿತ ಸಮರ ಮುಂದುವರೆಸಿದ್ದು, ಬುಧವಾರ ಮೈಸೂರು ತಾಲೂಕು ಜಯ ಪುರ ಹೋಬಳಿ ಮದ್ದೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ವಡವನ ಕಟ್ಟೆಯ ಒತ್ತುವರಿ ತೆರವು ಗೊಳಿಸಿ, ಕೆರೆ ಭೂಮಿಯನ್ನು ರಕ್ಷಿಸಿದರು. ಮೈಸೂರು ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಕಾರ್ಯಾ ಚರಣೆ ನಡೆಸಿ, ವಡವನ ಕಟ್ಟೆಗೆ ಸೇರಿದ ಭೂಮಿಯನ್ನು 15 ಮಂದಿ ರೈತರು ಒತ್ತು ವರಿ ಮಾಡಿಕೊಂಡಿದ್ದ 25 ಎಕರೆ ಕೆರೆ…

ಇಂದು, ನಾಳೆ ಪೌರಾಣಿಕ ನಾಟಕೋತ್ಸವ
ಮೈಸೂರು

ಇಂದು, ನಾಳೆ ಪೌರಾಣಿಕ ನಾಟಕೋತ್ಸವ

January 23, 2019

ಮೈಸೂರು: ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಮೈಸೂರಿನ ರಂಗ ಚಾವಡಿ ಜಂಟಿ ಆಶ್ರಯದಲ್ಲಿ ಜ.24 ಮತ್ತು 25ರಂದು `ರಂಗಸಂಭ್ರಮ-2019’ ಶೀರ್ಷಿಕೆಯಡಿ ಪೌರಾಣಿಕ ನಾಟಕೋತ್ಸವ ಏರ್ಪಡಿಸಲಾಗಿದೆ ಎಂದು ರಂಗ ಚಾವಡಿ ಪ್ರಧಾನ ಕಾರ್ಯದರ್ಶಿ ಸಂಗಾಪುರ ನಾಗರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.23ರಿಂದ 25ರವರೆಗೆ ನಾಟಕೋತ್ಸವ ನಡೆಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಕಾರಣ ಜ.24 ಮತ್ತು 25ಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು. ಮೈಸೂರಿನ…

ಜ.26, 27ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ
ಮೈಸೂರು

ಜ.26, 27ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ

January 23, 2019

ಮೈಸೂರು: ವಿದ್ಯಾ ವರ್ಧಕ ಸಂಘದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾ ಚರಣೆ ಅಂಗವಾಗಿ ಜ.26 ಮತ್ತು 27 ರಂದು ನಗರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾ ವಳಿ ಆಯೋಜಿಸಲಾಗಿದೆ ಎಂದು ಕಾಲೇ ಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪಂದ್ಯಾವಳಿಯು ಕಾಲೇಜಿನ ಆವರಣದಲ್ಲಿ ನಡೆಯಲಿದ್ದು, ಮೈಸೂರಿನ ಕಾಲೇಜು ಮಟ್ಟದ ಪ್ರೊ ಕಬಡ್ಡಿ ಪಂದ್ಯಾ ವಳಿ ಆಯೋಜಿಸಿರುವುದು ಇದೇ ಪ್ರಥಮ. ಒಟ್ಟು 8 ತಂಡಗಳು…

ಸಾಲ ಬಾಧೆ: ವ್ಯಕ್ತಿ ನೇಣಿಗೆ ಶರಣು
ಮೈಸೂರು

ಸಾಲ ಬಾಧೆ: ವ್ಯಕ್ತಿ ನೇಣಿಗೆ ಶರಣು

January 23, 2019

ಮೈಸೂರು: ಸಾಲದ ಬಾಧೆಗೆ ಹೆದರಿ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಜಿ ಕೊಪ್ಪಲಿನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಕೆಜಿ ಕೊಪ್ಪಲು ನಿವಾಸಿ ನಾರಾಯಣ ಅವರ ಮಗ ಗಂಗಾಧರ್(46) ನೇಣಿಗೆ ಶರಣಾ ದವರು. ಕಾರು ಚಾಲಕನಾದ ಅವರು, ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದರು. ಬೆಳಿಗ್ಗೆ ಎದ್ದು ನೋಡಿದಾಗ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು ಎಂದು ಕುಟುಂಬ ದವರು ಪೊಲೀಸರಿಗೆ ತಿಳಿಸಿದ್ದಾರೆ. ಕಾರು ಚಾಲನೆ ಮಾಡಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಗಂಗಾಧರ್, ತುಂಬಾ ಸಾಲ…

ನಡೆದಾಡುವ ದೇವರಿಗೆ ಮೈಸೂರಿನಲ್ಲಿ ಭಕ್ತಿ ನಮನ
ಮೈಸೂರು

ನಡೆದಾಡುವ ದೇವರಿಗೆ ಮೈಸೂರಿನಲ್ಲಿ ಭಕ್ತಿ ನಮನ

January 23, 2019

ಮೈಸೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ ಎಂದೇ ಹೆಸರಾಗಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಮೈಸೂರಿನಾದ್ಯಂತ ಮಂಗಳವಾರ ನಾನಾ ಕಡೆಗಳಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆದವು. ಮೈಸೂರು ಜಿಲ್ಲಾ ಕುಂಚ ನಾಮಫಲಕ ಕಲಾವಿದರ ಸಂಘ, ಮೈಸೂರು ಕನ್ನಡ ವೇದಿಕೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಬಸವೇಶ್ವರ ಸೇವಾ ಸಂಘ, ಸಂತೇಪೇಟೆ ಕಾರ್ಮಿಕರ ಸಂಘ, ಬಸವ ಚಿಂತನ ಬಳಗ, ಶ್ರೀಗಳ ಭಕ್ತ ವೃಂದ ಸೇರಿದಂತೆ ನಾನಾ ಸಂಘಟನೆಗಳು ಶ್ರೀಗಳ ಭಾವಚಿತ್ರ ಪೂಜಿಸಿ,…

ಸರ್ಕಾರಿ ಕಚೇರಿಗಳ ಮೇಲೆ ಅರ್ಧ ಮಟ್ಟಕ್ಕೆ ಹಾರಿದ ರಾಷ್ಟ್ರಧ್ವಜ
ಮೈಸೂರು

ಸರ್ಕಾರಿ ಕಚೇರಿಗಳ ಮೇಲೆ ಅರ್ಧ ಮಟ್ಟಕ್ಕೆ ಹಾರಿದ ರಾಷ್ಟ್ರಧ್ವಜ

January 23, 2019

ಮೈಸೂರು: ನಡೆದಾಡುವ ದೇವರು ಡಾ.ಶಿವಕು ಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಯಲ್ಲಿ ರಾಜ್ಯಾದ್ಯಂತ ಮೂರು ದಿನ ಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಂಗಳ ವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಮಟ್ಟಕ್ಕೆ ಹಾರಿಸಿ ಸಿದ್ಧಗಂಗಾ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ರಾಷ್ಟ್ರಧ್ವಜ ಅರ್ಧ ಮಟ್ಟಕ್ಕೆ ಇಳಿಸಿ ಗೌರವಿಸಲಾಯಿತು. ಮೈಸೂರಿನ ಹಲವು ಚಿತ್ರಮಂದಿರ ಗಳಲ್ಲಿ ಎರಡು ಪ್ರದರ್ಶನಗಳನ್ನು ರದ್ದುಪಡಿಸಲಾಗಿತ್ತು. ಶೋಕಾಚರಣೆ ನಡುವೆಯೂ ಕೆಲವು ಚಿತ್ರಮಂದಿರ ಗಳಲ್ಲಿ ಚಿತ್ರ…

ಮೂರು ದಶಕದ ಹಿಂದೆಯೇ ಸಿದ್ದಲಿಂಗ ಸ್ವಾಮೀಜಿ  ಸಿದ್ಧಗಂಗಾ ಪೀಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದರು
ಮೈಸೂರು

ಮೂರು ದಶಕದ ಹಿಂದೆಯೇ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಪೀಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿದ್ದರು

January 23, 2019

ತುಮಕೂರು: ತುಮಕೂರು ಸಿದ್ಧಗಂಗಾ ಮಠದ ಹಿರಿಯ ಶ್ರೀಗಳು, ನಾಡಿನ ನಡೆದಾಡುವ ದೇವರು ಲಿಂಗೈಕ್ಯರಾಗುವ ಮುನ್ನವೇ ಶ್ರೀ ಮಠದ ಉತ್ತರಾಧಿಕಾರಿಯನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿಗಳನ್ನು ನಿಯೋಜಿಸಿದ್ದರು ಎಂಬ ಸತ್ಯ ಇದೀಗ ಬಹಿರಂಗಗೊಂಡಿದೆ. ಡಾ.ಶಿವಕುಮಾರಸ್ವಾಮೀಜಿಯವರು ತಮ್ಮ 81ನೇ ವಯಸ್ಸಿನಲ್ಲೇ ತಮ್ಮ ಉತ್ತರಾಧಿಕಾರಿಯ ನ್ನಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ನಿಯೋಜಿಸಿದ್ದರಾದರೂ ಶ್ರೀ ಸಿದ್ದಲಿಂಗಸ್ವಾಮೀಜಿ ಸಹ ಇದನ್ನು ಎಲ್ಲೂ ಬಹಿರಂಗಪಡಿಸದೆ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಬೆನ್ನೆಲು ಬಾಗಿ ನಿಂತು ತಮ್ಮ ಸ್ವಾಮಿನಿಷ್ಠೆಯನ್ನು ತೋರಿ, ಹಿರಿಯ ಶ್ರೀಗಳ ಅನುಮತಿ ಇಲ್ಲದೆ ಯಾವ ತೀರ್ಮಾ…

ಸಿದ್ಧಗಂಗಾ ಶ್ರೀಗಳು ಮುಂದಿನ ಶತಮಾನಕ್ಕೂ ಆದರ್ಶ
ಮೈಸೂರು

ಸಿದ್ಧಗಂಗಾ ಶ್ರೀಗಳು ಮುಂದಿನ ಶತಮಾನಕ್ಕೂ ಆದರ್ಶ

January 23, 2019

ಮೈಸೂರು: ಎಂಬತ್ತೆಂಟು ವರ್ಷ ಗಳ ಪರಿಶ್ರಮದಿಂದ ಸಿದ್ಧಗಂಗಾ ಮಠ ವಿಶ್ವದಲ್ಲಿ ಪ್ರಸಿದ್ಧಿ ಪಡೆಯುವಲ್ಲಿ ಶ್ರಮಿಸಿದ ಸಿದ್ಧಗಂಗಾ ಶ್ರೀಗಳ ನಿಧನ ದಿಂದ ಒಂದು ಯುಗಾಂತ್ಯವಾದಂತಾಗಿದೆ. ಆದರೂ ಅವರು ಜೀವಿಸಿದ್ದ ಈ ಶತಮಾನ ಮುಂದಿನ ಶತಮಾನಕ್ಕೂ ಆದರ್ಶವಾಗಿದೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಗನ್‍ಹೌಸ್ ಬಳಿ ಬಸವೇಶ್ವರ ಪ್ರತಿಮೆ ಎದುರು ಡಾ.ಶಿವಕುಮಾರಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಜಗಜ್ಯೋತಿ ಬಸವಣ್ಣನವರ ತತ್ವ, ಚಿಂತನೆ, ಆದರ್ಶ ಗಳ ಜೀವಂತ ರೂಪವಾಗಿದ್ದ ಶ್ರೀಗಳು, ಯಾವ ಭೇದ- ಭಾವವಿಲ್ಲದೆ…

ಕ್ಯಾನ್‍ವಾಸ್ ಬಟ್ಟೆ ಮೇಲೆ ಶ್ರೀಗಳ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ ಕುಂಚ ಕಲಾವಿದರು
ಮೈಸೂರು

ಕ್ಯಾನ್‍ವಾಸ್ ಬಟ್ಟೆ ಮೇಲೆ ಶ್ರೀಗಳ ಚಿತ್ರ ಬಿಡಿಸಿ ಶ್ರದ್ಧಾಂಜಲಿ ಅರ್ಪಿಸಿದ ಕುಂಚ ಕಲಾವಿದರು

January 23, 2019

ಮೈಸೂರು: ಎಲ್ಲೆಡೆ ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ, ಸಂತಾಪ ಕಾರ್ಯಕ್ರಮ ಗಳು ನಡೆಯುತ್ತಿದ್ದರೆ, ಇತ್ತ ಕೆ.ಆರ್.ವೃತ್ತದಲ್ಲಿ ಕುಂಚ ಕಲಾವಿದರು ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಭಕ್ತಿ ಮೆರೆದರು. ಮೈಸೂರು ಜಿಲ್ಲಾ ಕುಂಚ ನಾಮಫಲಕ ಕಲಾವಿದರ ಸಂಘದ 20ಕ್ಕೂ ಹೆಚ್ಚು ಸದಸ್ಯರು ಕಾವಿ ಮತ್ತು ಕಪ್ಪು ಬಣ್ಣ ಬಳಸಿ ಕ್ಯಾನ್ ವಾಸ್ ಬಟ್ಟೆಯ ಮೇಲೆ ಸಿದ್ಧಗಂಗಾ ಶ್ರೀಗಳ ಬೃಹತ್ ಭಾವಚಿತ್ರಗಳನ್ನು ಕುಂಚದ ಮೂಲಕ ರಚಿಸಿದರು. ಸಂಘದ ಗೌರವಾಧ್ಯಕ್ಷ ಆರ್ಟಿಸ್ಟ್ ಅಬ್ಬಾಸ್, ಅಧ್ಯಕ್ಷ…

ಸುಲಿಗೆಕೋರ ನಕಲಿ ಸಬ್‍ಇನ್ಸ್‍ಪೆಕ್ಟರ್ ಸೆರೆ
ಮೈಸೂರು

ಸುಲಿಗೆಕೋರ ನಕಲಿ ಸಬ್‍ಇನ್ಸ್‍ಪೆಕ್ಟರ್ ಸೆರೆ

January 23, 2019

ಮೈಸೂರು: ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ನನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಿವಾಸಿ, ಮೂಲತಃ ಹಾವೇರಿ ಜಿಲ್ಲೆ, ಶಿಗ್ಗಾಂವ್ ತಾಲೂಕಿನ ವನಹಳ್ಳಿ ಗ್ರಾಮದ ಸಿದ್ದಪ್ಪ ಚನ್ನಬಸಪ್ಪ ನ್ಯಾಮಕ್ಕ ನವರ್(27) ಬಂಧಿತ ನಕಲಿ ಸಬ್ ಇನ್ಸ್‍ಪೆಕ್ಟರ್. ಮೈಸೂರಿನ ಶಕ್ತಿನಗರ ಬಡಾವಣೆಯ ಮನೆಯೊಂದರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಆತನನ್ನು ವಿಷಯ ತಿಳಿದ ಉದಯಗಿರಿ ಠಾಣೆ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸು ವಲ್ಲಿ…

1 116 117 118 119 120 194
Translate »