ಮೈಸೂರು: ಮರಿಮಲ್ಲಪ್ಪ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿದ್ವಾನ್ ಡಾ.ಬಿ.ಎಸ್. ಪರ್ವತರಾಜು ಅವರಿಗೆ ಈ ಸಾಲಿನ `ಅಮರವಾಣಿ ಪ್ರಶಸ್ತಿ’ಯನ್ನು ಬುಧವಾರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎನ್.ಎಸ್. ತಾರಾನಾಥ್ ಪ್ರದಾನ ಮಾಡಿದರು. ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್ ಮೈಸೂರು ಮಿಡ್‍ಟೌನ್ ವತಿಯಿಂದ ಪ್ರೊ.ಎಂ.ಜಿ. ನಂಜುಂಡಾರಾಧ್ಯ ಸ್ಮಾರಕ, ರೋಟರಿ ಮೈಸೂರು ಮಿಡ್‍ಟೌನ್ -ಅಮರವಾಣಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನಂತರ ಪ್ರೊ.ಎನ್.ಆರ್.ತಾರಾನಾಥ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಕಲಿಸುವುದೇ ಕಷ್ಟದ…
ಮೈಸೂರಲ್ಲಿ ಮುಂದುವರೆದ ಆಪರೇಷನ್ ಸ್ಪಾನ್
September 19, 2018ವೃತ್ತಿಪರತೆ ಹೆಚ್ಚಿಸಲು ಸಂಚಾರ ಪೊಲೀಸರ ವಾಕ್‍ಥಾನ್ ಮೈಸೂರು: ಮೈಸೂರು ನಗರದ ಸಂಚಾರ ಪೊಲೀಸರನ್ನು ಹೆಚ್ಚು ಜನಸ್ನೇಹಿ ಮತ್ತು ಪ್ರವಾಸಿಗರ ಸ್ನೇಹಿಯ ನ್ನಾಗಿಸಲು ಆರಂಭಿಸಿರುವ ‘ಆಪರೇಷನ್ ಸ್ಪಾನ್’ ಕಾರ್ಯಾಚರಣೆ ಮುಂದುವರಿದಿದೆ. ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಮ್ ವಿ.ಅಮಟೆ ನೇತೃತ್ವದಲ್ಲಿ 250 ಮಂದಿ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಮುಂಜಾನೆ 5.45 ಗಂಟೆ ಯಿಂದ ತಾವರಕಟ್ಟೆ ಮೂಲಕ ಕಾಲ್ನಡಿಗೆ ಯಲ್ಲಿ ಚಾಮುಂಡಿಬೆಟ್ಟ ಏರಿದ್ದರು. ಫಿಟ್ನೆಸ್ ಟ್ರೈನರ್ ಚಂದ್ರಶೇಖರನ್ ಅವರು ಚಾಮುಂಡಿ ಬೆಟ್ಟದಲ್ಲಿ ಕಾರ್ಯಾಗಾರ ನಡೆಸಿ ಸಂಚಾರ…
`ರೈತ ಕ್ರಾಂತಿ ಯಾತ್ರೆ’
September 18, 2018ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಾಲ್ಕು ವರ್ಷ ಕಳೆದರೂ ನೀಡಿರುವ ಯಾವ ಭರವಸೆಯನ್ನು ಈಡೇರಿಸಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿಲ್ಲ. ಇದೆಲ್ಲದರ ಬಗ್ಗೆ ಕೇಂದ್ರದ ಗಮನ ಸೆಳೆಯಲು ಸೆ.23ರಿಂದ ಅ.2ರವರೆಗೆ ಹರಿದ್ವಾರದಿಂದ ನವದೆಹಲಿಯ ಕಿಸಾನ್ ಘಾಟ್‍ವರೆಗೆ ರೈತ ಕ್ರಾಂತಿಯಾತ್ರೆ ನಡೆಸಲು ರೈತ ಸಂಘಟನೆಗಳು ಒಮ್ಮತದಿಂದ ನಿರ್ಧರಿಸಿರುವುದಾಗಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,…
ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ
September 16, 2018ಮೈಸೂರು: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ 157ನೇ ಜನ್ಮ ದಿನಾಚರಣೆ ಅಂಗವಾಗಿ `ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ’ ವನ್ನು ಶನಿವಾರ ಆಚರಿಸಲಾಯಿತು. ಪುರಭವನದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದೊಂದಿಗೆ ಆಯೋ ಜಿಸಿದ್ದ ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಉದ್ಘಾಟಿಸಿ, ಶುಭ ಹಾರೈಸಿದರು….
ಇಂದು `ಸೀರೆ ನಡಿಗೆ’ ಸ್ಪರ್ಧೆ
September 16, 2018ಆರೋಗ್ಯವಂತ ಮಹಿಳೆ-ಸಂತಸದ ಮನೆ ಮೈಸೂರು: `ಆರೋಗ್ಯವಂತ ಮಹಿಳೆ-ಸಂತಸದ ಮನೆ’ ವಿಷಯ ಕುರಿತಂತೆ ಮೈಸೂರಿನ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ವತಿಯಿಂದ ಸೆ.16ರಂದು ಬೆಳಿಗ್ಗೆ 6 ಗಂಟೆಗೆ ಮಹಿಳೆಯರಿ ಗಾಗಿ `ಸೀರೆ ನಡಿಗೆ’ (ಸ್ಯಾರಿ ವಾಕ ಥಾನ್) ಏರ್ಪಡಿಸಿದೆ. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಸೀರೆ ಉಟ್ಟು ನಡೆಯುವ ಸ್ಪರ್ಧೆ ಏರ್ಪಡಿಸಿದೆ. ಮೂರು ಕಿ.ಮೀ ಉದ್ದದ ಈ ನಡಿಗೆ ಸ್ಪರ್ಧೆಗೆ ಮೈಸೂರಿನ ಮಹಾರಾಜ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್…
ಉದ್ಯೋಗಾವಕಾಶ ಕಲ್ಪಿಸುವ ಎಸ್.ಅಚ್ಯುತಾನಂದ ಅವರಿಗೆ ಸನ್ಮಾನ
September 16, 2018ಮೈಸೂರು: ಮೈಸೂರಿನ ಟಿ.ಕೆ. ಬಡಾವಣೆಯ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನ ಇನ್‍ಸೈನ್ ಎಕ್ವಿಪ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ನ ಬ್ಯುಸಿನೆಸ್ ಯೂನಿಟ್ ಹೆಡ್ ಆಗಿ ಕಾರ್ಯ ನಿರ್ವಹಿಸು ತ್ತಿರುವ ಎಸ್.ಅಚ್ಯುತಾನಂದ ಸೇರಿದಂತೆ ನಾಲ್ವರನ್ನು ಇತ್ತೀಚೆಗೆ ವಿದ್ಯಾಮಾತಾ ಫೌಂಡೇಷನ್ ವತಿಯಿಂದ ಪುತ್ತೂರಿನ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಚ್ಯುತಾನಂದ ಅವರು ವಾಟ್ಸ್‍ಆಪ್ ಗ್ರೂಪ್ ಹೆಸರಿನಲ್ಲಿ `ಉದ್ಯೋಗ ನಿಮಿತ್ತÀಂ’ ಸ್ಥಾಪಿಸಿ, ಎಲ್ಲಿ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಕೈಗಾರಿಕೆಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಒದಗಿಸುವ ಮೂಲಕ ಕಾರ್ಖಾನೆ ಮಾಲೀಕರು ಮತ್ತು ಕಾರ್ಮಿಕರ…
ರಜೆ ರಹಿತ `ಸೈನಿಕ ದಿನ’ ಆಚರಣೆಗೆ ಮಾಜಿ ಯೋಧರ ಒತ್ತಾಯ
September 15, 2018ಮೈಸೂರು: ಧೈರ್ಯ, ಸಾಹಸದಿಂದ ದೇಶ ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಗಳಿಗೆ ಗೌರವ ಸೂಚಕವಾಗಿ ಸರ್ಕಾರ ಪ್ರತೀ ವರ್ಷ ಸೈನಿಕ ದಿನವನ್ನು ಆಚರಿಸಬೇಕು ಎಂದು ಮಾಜಿ ಯೋಧರು ಇಂದಿಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಿವೃತ್ತ ಸೈನಿಕ ಕೆ.ಆರ್. ನಗರ ತಾಲೂಕಿನ ಚಿಕ್ಕವಡ್ಡರ ಗುಡಿಯ ಸಿ.ಎಂ.ಶ್ರೀಧರ್, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶ ರಕ್ಷಿಸುತ್ತಾರೆ. ಆದರೆ ಅವರು ತವರಿಗೆ ಮರಳಿದಾಗ ಸ್ವಾಗತ ಸಂದರ್ಭದಲ್ಲಿ…
ಮೈಸೂರಲ್ಲಿ ಬಂದ್ ಯಶಸ್ವಿ
September 11, 2018ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಕರೆ ನೀಡಿದ್ದ ‘ಭಾರತ್ ಬಂದ್’ಗೆ ಮೈಸೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ನಗರದಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ ಮಾಡಿ ಅಂಗಡಿ ಮುಂಗಟ್ಟು, ಕೆಲ ಕಚೇರಿಗಳನ್ನು ಬಲವಂತವಾಗಿ ಮುಚ್ಚಿ ಸಿದ್ದರಿಂದ ಮೈಸೂರಿನ ಹೃದಯಭಾಗದಲ್ಲಿನ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಇಂದು ಮಧ್ಯಾಹ್ನದವರೆಗೆ ಸಂಪೂರ್ಣ ಬಂದ್ ಆಗಿತ್ತು. ಕಾಂಗ್ರೆಸ್‍ಗೆ ಜೆಡಿಎಸ್, ಬಿಎಸ್‍ಪಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಬಂದ್…
ಮೈಸೂರಿನ ವಿವಿಧೆಡೆಯಿಂದ ಹರಿದು ಬಂದ ಕಾಂಗ್ರೆಸ್ ಕಾರ್ಯಕರ್ತರ ದಂಡು
September 11, 2018ಮೈಸೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಬಡಾವಣೆಗಳಿಂದ ಕಾಂಗ್ರೆಸ್ ಕಾರ್ಯ ಕರ್ತರು ಮೆರವಣಿಗೆಯಲ್ಲಿ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಆವರಣಕ್ಕೆ ಬಂದು, ಅಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರೆ ನೀಡಿದ್ದ ಭಾರತ್ ಬಂದ್, ಮೈಸೂರಲ್ಲಿ ಯಶಸ್ವಿಗೊಳಿಸಲೇಬೇಕೆಂದು ಪಣ ತೊಟ್ಟಿದ್ದ ಮೈಸೂರು ನಗರ ಕಾಂಗ್ರೆಸ್ ಸಮಿತಿ, ಬೆಳಿಗ್ಗೆ ಮೈಸೂರು ನಗರದಾ ದ್ಯಂತ ಪಕ್ಷದ ವಿವಿಧ ನಾಯಕರನ್ನು ನಿಯೋಜಿಸಿತ್ತು. ಶಾಸಕರು, ಮಾಜಿ ಶಾಸ ಕರು,…
ಹೈವೇ ವೃತ್ತದಲ್ಲಿ ಅಡ್ಡಾದಿಡ್ಡಿ ಲಾರಿ ನಿಲ್ಲಿಸಿ, ಟೈರ್ ಸುಟ್ಟು ಕಾಂಗ್ರೆಸ್ ರಸ್ತೆತಡೆ
September 11, 2018ಮೈಸೂರು: ಮೈಸೂರು ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಮೈಸೂರಿನ ಹೈವೇ ವೃತ್ತದಲ್ಲಿ ಲಾರಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ, ಟೈರ್ ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು. ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಹಿದ್ ಖಾದರ್ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿದರು. ಕೊನೆಗೆ ಟೈರ್ ಸುಟ್ಟು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾರ್ಪೊರೇಟರ್ ಗಳಾದ ಪುಷ್ಪಲತಾ ಜಗನ್ನಾಥ್, ಪ್ರದೀಪ್ ಚಂದ್ರ, ಸೈಯ್ಯದ್ ಹಸ್ರತ್, ಅಕ್ಮಲ್…