ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ
ಮೈಸೂರು

ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ

September 16, 2018

ಮೈಸೂರು: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ 157ನೇ ಜನ್ಮ ದಿನಾಚರಣೆ ಅಂಗವಾಗಿ `ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ’ ವನ್ನು ಶನಿವಾರ ಆಚರಿಸಲಾಯಿತು.

ಪುರಭವನದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದೊಂದಿಗೆ ಆಯೋ ಜಿಸಿದ್ದ ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಉದ್ಘಾಟಿಸಿ, ಶುಭ ಹಾರೈಸಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಹಕಾರ ಕ್ಷೇತ್ರದ ಲಕ್ಷ್ಮಿಪತಯ್ಯ, ಅಂಬರೀಷ್ ಜಿ.ಗೊಂದಾಳ್, ಆಹಾರ ಕ್ಷೇತ್ರದ ಪ್ರೊ.ಎ.ರಾಮಕೃಷ್ಣ, ನೀರಾವರಿ ಕ್ಷೇತ್ರದ ಆರ್.ಆಂಜನೇಯ ರೆಡ್ಡಿ, ಸಮಾಜ ಸೇವಾ ಕ್ಷೇತ್ರದಿಂದ ಡಾ.ಅನ್ವರ್ ಅಹಮ್ಮದ್ ಖಾನ್, ಡಾ.ಎಸ್.ವೈ.ವಿಜಯಕುಮಾರಿ, ಪತ್ರಿಕೋದ್ಯಮ ಕ್ಷೇತ್ರದಿಂದ ಹಿರಿಯ ಪತ್ರ ಕರ್ತ ಅಂಶಿ ಪ್ರಸನ್ನಕುಮಾರ್, ಕಲಾ ಕ್ಷೇತ್ರ ದಿಂದ ಗಾಯಕಿ ಕೊಪ್ಪಳದ ಗಂಗಮ್ಮ, ಸಾಹಿತ್ಯ ಕ್ಷೇತ್ರದ ಡಾ.ಹೇಮಾವತಿ ಸೋನೋಳ್ಳಿ ಅವರಿಗೆ ರಾಷ್ಟ್ರೀಯ ವಿಭೂಷಣ ರಾಷ್ಟ್ರ ಪ್ರಶಸ್ತಿ ಹಾಗೂ ಸುಲೋಚನಾ ಮತ್ತು ಈಶ್ವರಪ್ಪ ಚಿ.ಹೆದ್ದೂರಿ ದಂಪತಿಗೆ ರಾಷ್ಟ್ರೀಯ ವಿಭೂಷಣ ಆದರ್ಶ ದಂಪತಿ ಪ್ರಶಸ್ತಿ ಹಾಗೂ ಇತರ ರಿಗೆ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ, ಕರ್ನಾಟಕ ಸಹಕಾರ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿಂತಕ ರಮೇಶ್ ಸುರ್ವೆ ಪ್ರಾಸ್ತಾವಿಕ ವಾಗಿ ಮಾತನಾಡಿ, ಗ್ರಾಮೀಣ ಭಾಗದ ಸಾಧಕರು ತೆರೆಮರೆಯಲ್ಲಿ ಸಮಾಜ ಸೇವೆ ಮಾಡುತ್ತಿರುವುದನ್ನು ಸಮಾಜದಲ್ಲಿ ಗುರು ತಿಸುವುದಿಲ್ಲ. ಇದನ್ನು ಅರಿತ ಕೆಲ ಸಮಾನ ಮನಸ್ಕರು, ಕಾವೇರಿ ಕರ್ನಾಟಕ ಎಂಬ ವೇದಿಕೆಯಡಿ ರಾಜ್ಯದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ, ಈ ವೇದಿಕೆಯಲ್ಲಿ ಸನ್ಮಾನಿಸುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಬೆಂಗಳೂರು ಹೆಗ್ಗುಂ ದದ ವನಕಲ್ಲು ಮಠದ ಶ್ರೀ ಬಸವರ ಮಾನಂದ ಸ್ವಾಮೀಜಿ, ರಂಭಾಪುರಿ ಶಾಖಾ ಹಿರೇಮಠದ ಶ್ರೀ ಕಲ್ಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ಡಾ.ಎಂ.ಜಿ.ಆರ್. ಅರಸ್, ಚಿತ್ರ ಕಲಾವಿದೆ ಮೀನಾ ಸೇರಿ ದಂತೆ ಇತರರಿದ್ದರು. ನಿವೃತ್ತ ಐಎಎಸ್ ಅಧಿ ಕಾರಿ ಡಾ.ಡಿ.ಎಸ್.ಅಶ್ವತ್ಥ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟ ಶಂಕರ ಭಟ್, ನಟಿ ಮೀನಾ, ಗಾಯಕಿ ಗಂಗಮ್ಮ ಭಾಗವಹಿಸಿದ್ದರು. ಇದಕ್ಕೂ ಮುನ್ನ ಕೊಪ್ಪಳದ ಗಂಗಮ್ಮ ಮತ್ತು ತಂಡದವರು ಹಳೆ ಚಿತ್ರಗೀತೆಗಳನ್ನು ಹಾಡಿದರು. ಶ್ರೀ ವೀರಭದ್ರೇಶ್ವರ ಜಾನಪದ ಕಲಾ ಸಂಘ ಹಾಗೂ ಶ್ರೀ ಬಸವೇಶ್ವರ ಪುರವಂತಿಕೆ ಸೇವಾ ಸಂಘದ ಕಲಾತಂಡದಿಂದ ವೀರಗಾಸೆ ಪ್ರದರ್ಶನ, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶಿಸಿದರು.

Translate »