ಮೈಸೂರು: ಮೈಸೂರಿನ ಅರಸು ಜಾಗೃತಿ ಅಕಾಡೆಮಿ ಮತ್ತು ನೃಪತುಂಗ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ. ಸಿ.ಪಿ.ಕೆ. ಅವರ 80ನೇ ಹುಟ್ಟುಹಬ್ಬ ವನ್ನು ಏ.8ರಂದು ಸಂಜೆ 4 ಗಂಟೆಗೆ ಜೆಎಲ್‍ಬಿ ರಸ್ತೆ ಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಸಿಪಿಕೆ ಚುಟುಕು ತೋರಣ ಮತ್ತು ಕಾವ್ಯಕ್ಕೆ ಗುರು ಕೃತಿಗಳನ್ನು ಲೋಕಾರ್ಪಣೆ…
ಏ.5ರಿಂದ ಮೈಸೂರಲ್ಲಿ `ಆರೋಗ್ಯವೇ ಭಾಗ್ಯ’ ಕುರಿತ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ
April 2, 2019ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಸಹಯೋಗ ದೊಂದಿಗೆ ಸೌಖ್ಯ ಫೌಂಡೇಷನ್ ವತಿಯಿಂದ ಮೈಸೂರಿನ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ಏ.5ರಿಂದ ಮೂರು ದಿನಗಳ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಎಸ್‍ಎಸ್ ಸಂಸ್ಥೆಯ ಶ್ರೀಹರಿ ತಿಳಿಸಿದರು. ಆರೋಗ್ಯವೇ ಭಾಗ್ಯ ವಿಷಯ ಕುರಿತ ಈ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಮಲೇ ಷಿಯಾ ಮತ್ತು ಇಂಡೋನೇಷಿಯಾ ಇನ್ನಿತರ ರಾಷ್ಟ್ರಗಳ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚಿನ ಆಸಕ್ತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ…
ಇಗ್ನೋ ಪ್ರಾಂತೀಯ ನಿರ್ದೇಶಕರಾಗಿ ಜಿ.ಹೆಚ್.ಇಮ್ರಾಪೂರ ಅಧಿಕಾರ ಸ್ವೀಕಾರ
April 2, 2019ಮೈಸೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ (ಇಗ್ನೋ) ಬೆಂಗಳೂರು ಪ್ರಾದೇಶಿಕ ಕೇಂದ್ರಕ್ಕೆ ಜಿ.ಹೆಚ್.ಇಮ್ರಾಪೂರ ಅವರು ಪ್ರಾಂತೀಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.ಗದಗ ಜಿಲ್ಲೆ, ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದವರಾದ ಜಿ.ಹೆಚ್. ಇಮ್ರಾಪೂರ ಅವರು ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಸೈನ್ಸ್ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಜೊತೆಗೆ ಗಣಿತಶಾಸ್ತ್ರದಲ್ಲಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಹೊಸ ದಿಲ್ಲಿ ವಿಶ್ವವಿದ್ಯಾ…
ಕೋರೋನರಿ ಸ್ಟೆಂಟ್ ಬೆಲೆ ಶೇ.4.2 ಏರಿಕೆ
April 2, 2019ನವದೆಹಲಿ: ಹೃದಯಕ್ಕೆ ಅಳ ವಡಿಸುವ ಕೋರೋನರಿ ಸ್ಟೆಂಟ್ ಬೆಲೆ ಇಂದಿನಿಂದ ಶೇ.4.2 ಏರಿಕೆಯಾಗಿದೆ. ಕಳೆದ ವರ್ಷದ ಸಗಟು ಬೆಲೆ ಸೂಚಿಗೆ ಅನುಗುಣವಾಗಿ ಶೇ.4.2ರಷ್ಟನ್ನು ಏರಿ ಸಲು ಡ್ರಗ್ ರೆಗ್ಯುಲೇಟರ್ ಅನುಮತಿ ನೀಡಿದೆ. ಬೇರೆ ಮೆಟಲ್ ಸ್ಟೆಂಟ್ (ಬಿಎಂಎಸ್)ನ ಬೆಲೆ ರೂ. 8,261 ಇದ್ದು, ಆದರೆ, ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ (ಡಿಇಎಸ್) ಬೆಲೆಯನ್ನು ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್‍ಪಿಪಿಎ) ನೂತನ ದರ ಪಟ್ಟಿ ಪ್ರಕಾರ 30,080 ರೂ. ಗಳಿಗೆ ನಿಗದಿಪಡಿಸಿದೆ. ಡಿಇಎಸ್ ವರ್ಗವು ಮೆಟಾಲಿಕ್ ಡಿಇಎಸ್ ಮತ್ತು…
ಹಿರಿಯ ರಂಗಕರ್ಮಿ ಎಸ್.ಮಾಲತಿ ನಿಧನಕ್ಕೆ ರಂಗಾಯಣ ನಿರ್ದೇಶಕಿ ಸಂತಾಪ
April 2, 2019ಮೈಸೂರು: ಹಿರಿಯ ರಂಗಕರ್ಮಿ ಎಸ್.ಮಾಲತಿ ಅವರ ನಿಧನಕ್ಕೆ ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ಸಂತಾಪ ವ್ಯಕ್ತಪಡಿಸಿದ್ದಾರೆ. ರಂಗಭೂಮಿಯನ್ನು ತನ್ನದಾಗಿಸಿ ಕೊಳ್ಳುವ ಮಹಿಳೆಯರೇ ಕಡಿಮೆ. ಅಂಥದ್ದರಲ್ಲಿ ದಿಟ್ಟ ರಂಗ ಹೆಜ್ಜೆಯನ್ನಿಡುತ್ತಾ ರಾಜ್ಯಾದ್ಯಂತ ನಾಟಕ ಸಂಘಗಳನ್ನು ಕಟ್ಟುತ್ತಾ, ನಾಟಕ ನಿರ್ದೇಶನ ಮಾಡುತ್ತಾ, ಕತೆ, ನಾಟಕ, ವಿಮರ್ಶೆ ಗಳನ್ನು ಬರೆಯುತ್ತಾ, ಅಭಿನಯ ಕಲಿಸುತ್ತಾ ರಂಗಭೂಮಿಯನ್ನು ತಮ್ಮದಾಗಿಸಿಕೊಳ್ಳುವ ಮಹಿಳೆಯರಿಗೆ ಪ್ರೇರಣೆಯಾಗಿ ಮಾರ್ಗ ದರ್ಶನ ನೀಡುತ್ತಿದ್ದರು. ಎಸ್.ಮಾಲತಿಯವರ ನಿಧನದಿಂದ ರಂಗಾಯಣಕ್ಕಷ್ಟೇ ಅಲ್ಲ. ಇಡೀ ಕರ್ನಾಟಕ ರಂಗಭೂಮಿಗೆ ದೊಡ್ಡ ಆಘಾತ ಮತ್ತು ನಷ್ಟ ಉಂಟಾಗಿದೆ. ಅಂತಹ…
ಜನತೆಗೆ ಸರ್ಕಾರದ ಸಾಧನೆ ಮನದಟ್ಟು ಮಾಡಿ
April 2, 2019ಸ್ಥಳೀಯ ಜನಪ್ರತಿನಿಧಿಗಳಿಗೆ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮನವಿ ತಿ.ನರಸೀಪುರ: ಕಾಂಗ್ರೆಸ್ ಅಭಿವೃದ್ಧಿ ಮಾನದಂಡದ ಮೇಲೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಎದುರಿಸುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳಾದ ಪುರಸಭಾ ಸದಸ್ಯರು ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಸಾಧನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು ಅಧಿಕ ಮತಗಳ ಪಡೆಯಬೇಕು ಎಂದು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮನವಿ ಮಾಡಿದರು. ಪಟ್ಟಣದ ಶ್ರೀ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ಸೋಮವಾರ ನಡೆದ ಪುರಸಭೆ ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ…
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಧಾನ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ
April 2, 2019ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಭವಿಷ್ಯ ನಂಜನಗೂಡು: ಈ ಬಾರಿಯ ಲೋಕಸಭೆ ಚುನಾವಣೆಯನ್ನು ಇಡೀ ಜಗತ್ತೇ ಗಮನಿಸುತ್ತಿದ್ದು, 5 ವರ್ಷ ಸ್ಥಿರ ಸರ್ಕಾರ ನೀಡುವುದರೊಂದಿಗೆ ದೇಶವನ್ನು ಕಾಂತ್ರಿಕಾರಿಕವಾಗಿ ಬದಲಾವಣೆ ಮಾಡಿ, ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಭವಿಷ್ಯ ನುಡಿದಿದ್ದಾರೆ. ನಗರದ ಎಸ್‍ಎಲ್‍ವಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 9ನೇ ಲೋಕಾಸಭಾ ಚುನಾವಣೆ ಎದುರಿಸುತ್ತಿದ್ದು, ಯಾವ ಯಾವ ಚುನಾವಣೆಯನ್ನು…
ಕೆ.ಆರ್.ನಗರ ಸಮಗ್ರ ಅಭಿವೃದ್ಧಿಗೆ ನಿಖಿಲ್ ಗೆಲುವು ಅಗತ್ಯ
April 2, 2019ಚುಂಚನಕಟ್ಟೆ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್‍ರನ್ನು ಗೆಲ್ಲಿಸುವ ಮೂಲಕ ಕೆ.ಆರ್.ನಗರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮತದಾರರು ಸಹಕಾರ ನೀಡಬೇಕು ಎಂದು ಪ್ರವಾಸೋದ್ಯಮ, ರೇಷ್ಮೆ ಸಚಿವ ಸಾ.ರಾ.ಮಹೇಶ್ ಕೋರಿದರು. ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ಈಗಾಗಲೇ ಕುಮಾರಸ್ವಾಮಿ ಸಾಲಮನ್ನಾ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು. ಈಗಾಗಲೇ ತಾಲೂಕಿನ ಅಭಿವೃದ್ಧಿಗೆ ತಾವು ಸಚಿವರಾದ ಮೇಲೆ 800 ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆ ಮಾಡಿಸಿದ್ದು,…
ಮೈತ್ರಿಯಲ್ಲೇ ಒಡಕು
March 31, 2019ಬೆಂಗಳೂರು: ಮೈತ್ರಿ ಅಭ್ಯರ್ಥಿಗಳ ವಿರುದ್ಧ ಮುಖಂಡರು, ಕಾರ್ಯಕರ್ತರು ವಿರುದ್ಧವಾಗಿ ಪ್ರಚಾರ ಮಾಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಎಚ್ಚರಿಸಿದ್ದಾರೆ. ನಿನ್ನೆ ತಡರಾತ್ರಿ ಕೆಪಿಸಿಸಿಗೆ ಸೂಚನೆ ರವಾನಿಸಿರುವ ರಾಹುಲ್‍ಗಾಂಧಿಯವರು ಬಿಜೆಪಿಯನ್ನು ಸೋಲಿಸು ವುದು ನಮ್ಮ ಮೂಲ ಉದ್ದೇಶ. ಹೀಗಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಲೋಕ ಸಭೆ ಚುನಾವಣೆ ಎದುರಿಸಲಾಗುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕರು ಬಿಜೆಪಿ ಅಥವಾ ಪಕ್ಷೇತರ ಅಭ್ಯರ್ಥಿ ಪರವಾಗಿ ಕೆಲಸ…
ಬೇಲೂರು, ಅರಸೀಕೆರೆ ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿಗೆ ಜೈ…
March 31, 2019ಹಾಸನ: ಜಿಲ್ಲೆಯ ಬೇಲೂರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರ ದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಭುಗಿಲೆದ್ದು, ಕೈ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿಗೆ ಜೈಕಾರ ಕೂಗಿದ ಘಟನೆ ಜರುಗಿದೆ. ಬೇಲೂರಿನಲ್ಲಿ ಗದ್ದಲ: ಬೇಲೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಭಿನ್ನಮತ ಸ್ಫೋಟ ಗೊಂಡಿತ್ತು. ಮಾಜಿ ಸಚಿವ ಬಿ.ಶಿವ ರಾಂ, ಎಂಎಲ್‍ಸಿ ಗೋಪಾಲಸ್ವಾಮಿ ಸಮ್ಮುಖದಲ್ಲೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಪ್ರಾರಂಭವಾಗು ತ್ತಿದ್ದಂತೆ ಗದ್ದಲ ಏರ್ಪಟ್ಟಿತ್ತು….