ಸರಗೂರು: ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿ ಇರುವ ಎಂಎಸ್‍ಐಎಲ್ ಮದ್ಯದ ಅಂಗಡಿ ಬಂದ್ ಮಾಡಿ ಇಲ್ಲವಾದಲ್ಲಿ ಲೋಕಸಭಾ ಚುನಾವಣೆ ಬಹಿಸ್ಕರಿಸುವುದಾಗಿ ಮಾಡಲು ಬಿ.ಮಟಕೆರೆ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದರು. ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿರುವÀ ಎಂಎಸ್‍ಐಎಲ್ ಮದ್ಯದ ಅಂಗಡಿಯನ್ನು ಒಂದು ತಿಂಗಳ ಹಿಂದೆ ತೆರೆಯಲಾಗಿತ್ತು. ಇದರಿಂದಾಗಿ ಮದ್ಯಪಾನಿಯರ ಹಾವಳಿ ಜಾಸ್ತಿಯಾಗಿ ಸಾರ್ವಜನಿಕರಿಗೆ ಇನ್ನಿಲ್ಲದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಬಿ.ಮಟಕೆರೆ ಗ್ರಾಪಂ 33 ಗ್ರಾಮಗಳನ್ನು ಒಳಪಟ್ಟಿದೆ. ಇಲ್ಲಿ ಆರೋಗ್ಯ ಇಲಾಖೆಗೆ, ಶಾಲಾ ಕಾಲೇಜು, ಬ್ಯಾಂಕ್, ಇನ್ನಿತರ ಕೆಲಸಗಳಿಗೆ…
ಧ್ರುವನಾರಾಯಣ್ ಪರ ಪ್ರಚಾರದ ನಡುವೆಯೇ ‘ಕೈ’ ಸೇರ್ಪಡೆಗೂ ಯತೀಂದ್ರ ಆಹ್ವಾನ
March 29, 2019ತಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಪರ ಪ್ರಚಾರ ನಡೆಸಿರುವ ಶಾಸಕ ಡಾ.ಎಸ್.ಯತೀಂದ್ರ ಅವರು ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಎಂದೂ ಆಹ್ವಾನಿಸುತ್ತಿದ್ದಾರೆ. ತಾಲೂಕಿನ ಹೊಸ ಕೆಂಪಯ್ಯನಹುಂಡಿ ಗ್ರಾಮದಲ್ಲಿರುವ ಉಪ್ಪಾರ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಜೆಡಿಎಸ್ ಕಾರ್ಯದರ್ಶಿ ಆರ್.ಬಸವರಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಎಸ್.ಯತೀಂದ್ರ ಅವರು ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ…
ಚುನಾವಣಾ ಆಯೋಗದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಸೂಚನೆ
March 29, 2019ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಏಪ್ರಿಲ್ 18 ರಂದು ನಡೆಯಲಿದ್ದು, ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ವಿವಿಧ ಹಂತದ ಅಧಿಕಾರಿಗಳು ಚುನಾ ವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಪಿಆರ್‍ಒ, ಎಪಿಆರ್‍ಒ, 2ನೇ, 3ನೇ ಮತ್ತು 4ನೇ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜಪೇ ಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಗುರು ವಾರ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ದಲ್ಲಿ ಅವರು…
ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ಹೆಚ್.ವಿಶ್ವನಾಥ್
March 29, 2019ಮಡಿಕೇರಿ: ಜೆಡಿಎಸ್‍ನ ಜಿಲ್ಲಾ ಧ್ಯಕ್ಷರಾಗಿ ಕೆ.ಎಂ.ಬಿ ಗಣೇಶ್ ಮುಂದು ವರೆಯಲಿದ್ದು, ಯಾವುದೇ ಬದಲಾವಣೆ ಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದರು. ನಗರದ ಬಾಲಭವನ ಬಳಿಯಿರುವ ಮೈದಾನದಲ್ಲಿ ನಡೆದ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯಾತೀತ ನಿಲುವಿನ ಪಕ್ಷ ಅಧಿ ಕಾರಕ್ಕೆ ಬಂದರೆ ದೇಶದ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಮತ್ತು ಜೆಡಿಎಸ್ ಜಾತ್ಯಾತೀತ ಪಕ್ಷಗಳು ಒಂದಾಗುವ ಮೂಲಕ ಇತರೆ ಪಕ್ಷಗಳಿಗೆ ಭಯ ಹುಟ್ಟಿಸಿದೆ. ಕಾಂಗ್ರೆಸ್ ಪಕ್ಷ ನನ್ನ ಮನೆ ಅದು ನನಗೆ ತಾಯಿ…
ಸಿಎಂ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ಐಟಿ ದಾಳಿ
March 28, 2019ಮಂಡ್ಯ: ಬೆಂಗಳೂರಿನ ಸುಮಾರು ಐದಕ್ಕೂ ಹೆಚ್ಚು ಉದ್ಯಮಿಗಳ ಮನೆಗಳ ಮೇಲೆ ಇಂದು ರಾತ್ರಿ ಆದಾಯ ತೆರಿಗೆ ಇಲಾಖೆ ಅಧಿ ಕಾರಿಗಳು ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹಾಗೂ ಅಭಿಮಾನಿಗಳ ಮನೆಗಳ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಬೆಂಗಳೂ ರಿನ ಸೌತ್ ಎಂಡ್ ಸರ್ಕಲ್ ಬಳಿ ಇರುವ ಉದ್ಯಮಿ ಸಿದ್ದಿಖಿ ಸೇಠ್ ಮನೆ ಸೇರಿದಂತೆ ಜಯನಗರ ಮತ್ತು ಬಸವನಗುಡಿ ಮುಂತಾ ದೆಡೆ ಸುಮಾರು…
5 ನಾಮಪತ್ರ ತಿರಸ್ಕøತ, 25 ಕ್ರಮಬದ್ಧ
March 28, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಯಸಿ ಸಲ್ಲಿಸಿದ್ದ 30 ಮಂದಿ ಪೈಕಿ ಐವರು ಅಭ್ಯರ್ಥಿ ಗಳ ನಾಮಪತ್ರಗಳು ತಿರಸ್ಕøತಗೊಂಡಿವೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿತ್ತು. ಕಾಂಗ್ರೆಸ್ಸಿನ ಸಿ.ಹೆಚ್.ವಿಜಯ ಶಂಕರ್, ಬಿಜೆಪಿಯ ಪ್ರತಾಪ್ ಸಿಂಹ, ಬಿಎಸ್‍ಪಿಯ ಬಿ.ಚಂದ್ರ ಸೇರಿದಂತೆ ಒಟ್ಟು 30 ಅಭ್ಯರ್ಥಿಗಳಿಂದ 50 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಧಿಕಾರಿ ಅಭಿರಾಂ ಜಿ.ಶಂಕರ್ ಸಾಮಾನ್ಯ ವೀಕ್ಷಕರು, ನೀತಿ ಸಂಹಿತೆ ನೋಡಲ್ ಅಧಿಕಾರಿಗಳು, ಅಭ್ಯರ್ಥಿಗಳು ಮತ್ತು ಚುನಾ ವಣಾ ಏಜೆಂಟರ್‍ಗಳ…
35 ವರ್ಷವಾದರೂ ಮತ ಚಲಾಯಿಸದ ಗಿರಿಜನ ಮಹಿಳೆ!
March 28, 2019ಕೊಳ್ಳೇಗಾಲ: ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ.., ಮತದಾನ ಪವಿತ್ರ ಕಾರ್ಯ.., 18 ವರ್ಷ ದಾಟಿದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು…, ಮತದಾನ ಮಾಡದೇ ಇರುವುದು ತಪ್ಪು ಮಾತ್ರವಲ್ಲ ನೈತಿಕ ಕರ್ತವ್ಯ ಲೋಪ.., ಈ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ…. ಪ್ರತಿ ಚುನಾವಣೆ ವೇಳೆ ಚುನಾವಣಾ ಆಯೋಗ ದಿಂದ ಕೇಳಿಬರುವ ಘೋಷ ವಾಕ್ಯಗಳು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ 1951ರಿಂದ ಈವರೆಗೆ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹೀಗೆ ನೂರಾರು ಚುನಾವಣೆಗಳು ನಡೆದಿವೆ….
ಮಾಸಿಕ ಆದಾಯ ಖಾತ್ರಿ ಯೋಜನೆಯಡಿ ಮೈಸೂರಲ್ಲಿದೆ 89 ಸಾವಿರ ಕುಟುಂಬ
March 28, 2019ಮೈಸೂರು: ಕೇಂದ್ರ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ವರ ಬ್ಯಾಂಕ್ ಖಾತೆಗೆ ಮಾಸಿಕ 6 ಸಾವಿರ ರೂ. ಸಹಾಯಧನ ನೀಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್, ಇದರಿಂದ ಮೈಸೂರು ಜಿಲ್ಲೆಯಲ್ಲಿ ಅಂದಾಜು 89 ಸಾವಿರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಪ್ರಕಟಿಸಿದೆ. ಮೈಸೂರಿನ ದಾಸಪ್ಪ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಅಧಿಕಾರಕ್ಕೆ ಬಂದರೆ `ಮಾಸಿಕ ಆದಾಯ ಖಾತ್ರಿ ಯೋಜನೆ’ಯಡಿ ಮಾಸಿಕ 6 ಸಾವಿರ…
ಕಾಂಗ್ರೆಸ್ ಕಾರ್ಮಿಕ, ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆ
March 28, 2019ಮೈಸೂರು: ಸಾಮಾ ಜಿಕ ನ್ಯಾಯ, ಸಂವಿಧಾನ ಆಶಯಗಳ ವಿರೋಧಿ ನಿಲುವು ಹೊಂದಿರುವ ಬಿಜೆಪಿ ಅಧಿಕಾರದಿಂದ ದೂರ ಉಳಿದು ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಬೇಕಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು. ಮೈಸೂರಿನ ದಾಸಪ್ಪ ವೃತ್ತದ ಬಳಿ ಯಿರುವ ಕಾಂಗ್ರೆಸ್ ಕಚೇರಿಯಲ್ಲಿ ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧ ವಾರ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾ ಕಾರ್ಮಿಕ ವಿಭಾಗ…
ಮೈತ್ರಿ ಅಭ್ಯರ್ಥಿ ವಿಜಯಶಂಕರ್ ನಾಮಪತ್ರ ಅಪೂರ್ಣ, ದೋಷಪೂರಿತ: ಆರೋಪ
March 28, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್ ಸಲ್ಲಿಸಿರುವ ಎಲ್ಲಾ ನಾಲ್ಕು ಸೆಟ್ ನಾಮಪತ್ರಗಳು ಅಪೂರ್ಣ ಹಾಗೂ ದೋಷಪೂರಿತ ವಾಗಿವೆ ಎಂದು ಬಿಜೆಪಿ ವಕ್ತಾರರೂ ಆದ ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಇಂದು ಬೆಳಿಗ್ಗೆಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಲ್ಲಿಕೆ ಯಾಗಿರುವ ನಾಮಪತ್ರಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ ಹಾಜರಿದ್ದ ಅವರು, ನಂತರ ಮಧ್ಯಾಹ್ನ 2.30 ಗಂಟೆಗೆ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ತುರ್ತು ಸುದ್ದಿ…