ಮಾಸಿಕ ಆದಾಯ ಖಾತ್ರಿ ಯೋಜನೆಯಡಿ ಮೈಸೂರಲ್ಲಿದೆ 89 ಸಾವಿರ ಕುಟುಂಬ
ಮೈಸೂರು

ಮಾಸಿಕ ಆದಾಯ ಖಾತ್ರಿ ಯೋಜನೆಯಡಿ ಮೈಸೂರಲ್ಲಿದೆ 89 ಸಾವಿರ ಕುಟುಂಬ

March 28, 2019

ಮೈಸೂರು: ಕೇಂದ್ರ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ವರ ಬ್ಯಾಂಕ್ ಖಾತೆಗೆ ಮಾಸಿಕ 6 ಸಾವಿರ ರೂ. ಸಹಾಯಧನ ನೀಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್, ಇದರಿಂದ ಮೈಸೂರು ಜಿಲ್ಲೆಯಲ್ಲಿ ಅಂದಾಜು 89 ಸಾವಿರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಪ್ರಕಟಿಸಿದೆ.

ಮೈಸೂರಿನ ದಾಸಪ್ಪ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಅಧಿಕಾರಕ್ಕೆ ಬಂದರೆ `ಮಾಸಿಕ ಆದಾಯ ಖಾತ್ರಿ ಯೋಜನೆ’ಯಡಿ ಮಾಸಿಕ 6 ಸಾವಿರ ರೂ. ಸಹಾಯಧನ ನೀಡುವು ದಾಗಿ ರಾಹುಲ್ ಗಾಂಧಿಯವರು ಈಗಾ ಗಲೇ ಘೋಷಣೆ ಮಾಡಿದ್ದಾರೆ. ದೇಶದ ಶೇ.20ರಷ್ಟು ಜನಕ್ಕೆ ಇದರ ಲಾಭ ದೊರೆ ಯಲಿದ್ದು, 5 ಕೋಟಿ ಕುಟುಂಬಗಳಿಗೆ ಇದು ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.

ಕುಟುಂಬವೊಂದಕ್ಕೆ ಮಾಸಿಕ 6 ಸಾವಿರ ರೂ. ನಂತೆ ವಾರ್ಷಿಕ 72 ಸಾವಿರ ರೂ. ಸಂದಾಯವಾಗಲಿದೆ. ಈ ಕಾರ್ಯಕ್ರಮದಡಿ ಮೈಸೂರು ಜಿಲ್ಲೆಯಲ್ಲಿ ಸುಮಾರು 89 ಸಾವಿರ ಕುಟುಂಬಗಳು ಸಹಾಯಧನ ಪಡೆಯಲಿವೆ ಎಂದು ಅಂದಾಜಿಸಲಾಗಿದೆ. ರಾಹುಲ್ ಗಾಂಧಿಯ ವರು ಈ ಕಾರ್ಯಕ್ರಮ ಘೋಷಣೆ ಮಾಡುತ್ತಿದ್ದಂತೆ ಇಡೀ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರು ಈ ಯೋಜನೆ ಅನುಷ್ಠಾನಕ್ಕೆ ತರಲಿದ್ದು, ಈ ಸಂಬಂಧ ಆರ್ಥಿಕ ಸಂಪನ್ಮೂಲ ಕ್ರೂಢೀ ಕರಣದ ಬಗ್ಗೆ ಆರ್ಥಿಕ ತಜ್ಞರೊಡನೆ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದಾರೆ. ಜಿಡಿಪಿಯ ಶೇ.2ರಷ್ಟು ಹಣ ವನ್ನು ಇದಕ್ಕೆ ಬಳಸಿಕೊಳ್ಳುವ ಸಾಧ್ಯತೆ ಬಗ್ಗೆಯೂ ಅವಲೋಕಿಸಲಾಗುತ್ತಿದೆ ಎಂದು ತಿಳಿಸಿದರು. ನಗರಾಧ್ಯಕ್ಷ ಆರ್. ಮೂರ್ತಿ ಮಾತನಾಡಿ, ಈಗಾಗಲೇ ಇದನ್ನು ಲೋಕಸಭೆಯ ಕಾಂಗ್ರೆಸ್ ಪ್ರಣಾ ಳಿಕೆಯಲ್ಲಿ ಉಲ್ಲೇಖಿಸಲು ನಿರ್ಧರಿಸಲಾಗಿದೆ. ಇದೊಂದು ಕ್ರಾಂತಿಕಾರಕ ಕಾರ್ಯಕ್ರಮ ಎಂದರು. ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್, ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ, ಮುಖಂಡ ಹೆಚ್.ಎ.ವೆಂಕ ಟೇಶ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »