35 ವರ್ಷವಾದರೂ ಮತ ಚಲಾಯಿಸದ ಗಿರಿಜನ ಮಹಿಳೆ!
ಮೈಸೂರು

35 ವರ್ಷವಾದರೂ ಮತ ಚಲಾಯಿಸದ ಗಿರಿಜನ ಮಹಿಳೆ!

March 28, 2019

ಕೊಳ್ಳೇಗಾಲ: ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ.., ಮತದಾನ ಪವಿತ್ರ ಕಾರ್ಯ.., 18 ವರ್ಷ ದಾಟಿದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು…, ಮತದಾನ ಮಾಡದೇ ಇರುವುದು ತಪ್ಪು ಮಾತ್ರವಲ್ಲ ನೈತಿಕ ಕರ್ತವ್ಯ ಲೋಪ.., ಈ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ….

ಪ್ರತಿ ಚುನಾವಣೆ ವೇಳೆ ಚುನಾವಣಾ ಆಯೋಗ ದಿಂದ ಕೇಳಿಬರುವ ಘೋಷ ವಾಕ್ಯಗಳು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ 1951ರಿಂದ ಈವರೆಗೆ ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹೀಗೆ ನೂರಾರು ಚುನಾವಣೆಗಳು ನಡೆದಿವೆ. ಆದರೆ, ಇಲ್ಲೊಬ್ಬ ಮಹಿಳೆ ವಯಸ್ಸು 35 ವರ್ಷಗಳಾಗಿ ದ್ದರೂ ಮತದಾನವನ್ನೇ ಮಾಡಿಲ್ಲ. ಅಷ್ಟೇ ಅಲ್ಲ, ಮತದಾನದ ಬಗೆಗೆ ಆಕೆಗೆ ಏನೇನೂ ತಿಳಿದಿಲ್ಲ. ಹಾಗಾಗಿ ಆಕೆ ಮತ್ತು ಆಕೆಯ ಪತಿ ಈವರೆಗೂ ಒಮ್ಮೆಯೂ ಮತದಾನ ಮಾಡಿಲ್ಲ! ಹನೂರು ಕ್ಷೇತ್ರ ವ್ಯಾಪ್ತಿಯ ಹುತ್ತೂರು ಗ್ರಾಮ ಪಂಚಾಯ್ತಿಗೆ ಸೇರಿದ ಗುಳ್ಯದ ಬಯಲು ಗ್ರಾಮದ ಗಿರಿಜನ ಮಹಿಳೆ ಯಾದ ರಾಜಿ (ರಾಜಮ್ಮ) ಈವರೆಗೂ ತಮ್ಮ ಹಕ್ಕು ಚಲಾಯಿಸದಿರುವುದು ಬೆಳಕಿಗೆ ಬಂದಿದೆ.

ಚುನಾವಣಾ ಆಯೋಗ, ಜಿಲ್ಲಾಡಳಿತ, ಪ್ರತಿಯೊಬ್ಬರು ಹಕ್ಕು ಚಲಾಯಿಸಬೇಕು. ಮತದಾನದಿಂದ ದೂರ ಉಳಿಯಬಾರದು ಎಂದು ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಚುನಾವಣೆ ವೇಳೆಯೂ ಕೋಟ್ಯಾಂತರ ರೂ. ಖರ್ಚು ಮಾಡ ತ್ತಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ಹತ್ತಾರು ಬಗೆಯ ಕ್ರಮಗಳನ್ನು ಕೈಗೊಳ್ಳು ತ್ತಿದೆ. ಆದರೆ, ಅದಾವುದೂ ಪೂರ್ಣ ಫಲ ನೀಡಿಲ್ಲ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ. ಏಕೆ ಈವರೆಗೂ ಮತ ಚಲಾಯಿಸಿಲ್ಲ? ಎಂಬ ಪ್ರಶ್ನೆಗೆ, `ಓಟ್ ಹಾಕೋಕೆ ಯಾವ್ದೇ ದಾಖ್ಲೆ ನಮ್ಮತ್ರ ಇಲ್ಲ ಸ್ವಾಮಿ’ ಎನ್ನುತ್ತಾರೆ ರಾಜಮ್ಮ.

ಈಕೆಯ ಬಳಿ ಮತದಾರರ ಗುರುತು ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಯಾವುದೂ ಇಲ್ಲ. ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಪತಿ ಗುರು ಜತೆ ಬದುಕು ಸಾಗಿಸುತ್ತಿರುವ ರಾಜಮ್ಮ ಕುಟುಂಬಕ್ಕೆ ಸ್ವಂತ ಮನೆಯೂ ಇಲ್ಲ. `ನನ್ನ ಗಂಡ ಇಲ್ಲೇ ಒಡೆಯರಪಾಳ್ಯದ ಜಮೀನ್ದಾರ್ರು ಮನೇಲಿ ಹತ್ತಾರು ವರ್ಷದಿಂದ ಜೀತ ಮಾಡ್ಕಂಡವ್ರೆ. ರಾತ್ರಿ 9 ಗಂಟ್ಗೆ ಮನೇಗ್ ಬಂದು ಮುಂಜಾನೆ 5 ಗಂಟ್ಗೆಲ್ಲಾ ಯಜಮಾನ್ರು ಮನೆಗೆ ಹೋಗ್ತಾರೆ. ಅವ್ರೂ ಒಂದು ಸತೀನೂ ಓಟ್ ಹಾಕಿಲ್ಲ. ಅವ್ರ ತಾವ್ಲೂ ಯಾವ ಕಾಗ್ಜ ಪತ್ರ ಇಲ್ಲ’ ಎನ್ನುತ್ತಾರೆ ರಾಜಮ್ಮ. ರಾಜಮ್ಮಳ ಪತಿ ದಶಕ ಕಾಲದಿಂದ ಜೀತಕ್ಕಿದ್ದಾರೆ. ಸ್ವಂತಕ್ಕೆ ಮನೆಯೂ ಇಲ್ಲ. ಹಾಗಾಗಿ ಸರ್ಕಾರದ ಯಾವುದೇ ಸವಲತ್ತು ಪಡೆಯಲಾಗಿಲ್ಲ ಎನ್ನುತ್ತಾರೆ ಗ್ರಾಮದವರು. ಗಿರಿಜನ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಸದುದ್ದೇಶದಿಂದ ಸರ್ಕಾರಗಳು ಸಾಕಷ್ಟು ದೊಡ್ಡ ಮೊತ್ತದ ಅನು ದಾನ ವ್ಯಯಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಸರ್ಕಾರದ ಸಹಾಯಧನ, ಸೌಲಭ್ಯಗಳು ಫಲಾ ನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವುದಕ್ಕೆ ಈ ಕುಟುಂಬವೇ ಸಾಕ್ಷಿಯಾಗಿದೆ.

Translate »