ಮೈಸೂರು: ಸದಾ ಹೊಸ ಹೊಸ ವಿನ್ಯಾಸದ ಉಡುಪು ಧರಿಸಿ, ನಾಜೂಕಾದ ಹೆಜ್ಜೆ ಹಾಕಿ ಗಮನ ಸೆಳೆಯುತ್ತಿದ್ದ ವಿದ್ಯಾರ್ಥಿಗಳು ಶುಕ್ರವಾರ ಸಾಂಪ್ರದಾಯಿಕ ತೊಡುಗೆ ತೊಟ್ಟು ಗಮನ ಸೆಳೆದರು. ಮೈಸೂರಿನ ಮಹಾರಾಜ ಕಾಲೇ ಜಿನ ಕನ್ನಡ ವಿಭಾಗದ ಕನ್ನಡ ಸಂಘ ಶುಕ್ರ ವಾರ ಕಾಲೇಜಿನ ಶತಮಾನೋತ್ಸವ ಭವ ನದ ಬಳಿ ಆಯೋಜಿಸಿದ್ದ ಜಾನಪದ ಜಾತ್ರೆ, ಪಾರಂಪರಿಕ ದಿನ ಮತ್ತು ಒಲೆರಹಿತ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗಳು ಸಾಂಪ್ರದಾಯಿಕ ಉಡುಪು ಧರಿಸಿ ಸಂಭ್ರಮಿಸಿದರು. ಕಾಲೇಜಿನ ಆವರಣ ದಲ್ಲಿ ಜನಪದ ಸೊಗಡು…
ಯುಗಾದಿ ಪ್ರಯುಕ್ತ ಕಲಾವೈಭವ, ಸಿಲ್ಕ್ ಉತ್ಸವ
March 23, 2019ಮೈಸೂರು: ಮೈಸೂರಿನ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ `ಕಲಾವೈಭವ’ ಹಾಗೂ `ಸಿಲ್ಕ್ ಉತ್ಸವ’ವನ್ನು ಏರ್ಪಡಿಸಲಾಗಿದೆ. ರಾಜ್ಯ ಬೃಹತ್, ಮೆಗಾ ಕೈಗಾರಿಕಾ ನಿರ್ದೇಶನಾ ಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂ ದಿಗೆ ಜಿಲ್ಲಾ ಮಟ್ಟದ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಸಿಲ್ಕ್ ಉತ್ಸವವನ್ನೂ ಏರ್ಪಡಿಸಲಾಗಿದ್ದು, ಇಂದು ಚಾಲನೆ ದೊರಕಿತು. ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಯ ಕೈಗಾರಿಕೆ ಗಳು, ಗುಡಿ ಕೈಗಾರಿಕೆಗಳು, ಸ್ವ-ಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಆಕರ್ಷಕ…
ಜ್ಞಾನದಿಂದ ಮಾತ್ರವೇ ಸಮಾಜದ ವಿಕಾಸ
March 23, 2019ಮೈಸೂರು: ಜ್ಞಾನದ ಬಲದಿಂದ ಮಾತ್ರ ಸಮಾಜದ ವಿಕಾಸವೇ ಹೊರತು ಹಣ-ಅಧಿಕಾರದಿಂದಲ್ಲ ಎಂದು ನಿವೃತ್ತ ಪ್ರಾಂಶುಪಾಲ, ಅಂಕಣ ಕಾರ ಹಾಗೂ ವಾಗ್ಮಿಗಳೂ ಆದ ಪ್ರೊ. ಎಂ.ಕೃಷ್ಣೇಗೌಡ ಹೇಳಿದರು. ಮೈಸೂರಿನ ವಾಲ್ಮೀಕಿ ರಸ್ತೆಯ ಮಹಾ ರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ 2018-19ನೇ ಸಾಲಿನ ಸಾಂಸ್ಕøತಿಕ, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಟು ವಟಿಕೆಗಳ ಸಮಾರೋಪ ಸಮಾರಂಭ ದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಮಾನವ ಕುಲದ ಪ್ರಗತಿಗೆ ಬೇಕಿ ರುವುದು ಶಿಕ್ಷಣ,…
ಬೆಂಗಳೂರು ಕೇಂದ್ರದಿಂದ ಪ್ರಕಾಶ್ ರೈ ನಾಮಪತ್ರ ಸಲ್ಲಿಕೆ
March 23, 2019ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿ ಗಳನ್ನು ಟೀಕಿಸುತ್ತಿದ್ದ ಬಹುಭಾಷಾ ನಟ ಪ್ರಕಾಶ್ ರೈ ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಂಸತ್‍ಗೆ ಆಯ್ಕೆ ಬಯಸಿ ರೈ ಅವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿ ದರು. ಆಸ್ಟಿನ್ ಟೌನ್‍ನಲ್ಲಿರುವ ನಂದ ಕ್ರಿಡಾಂಗಣದಿಂದ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಮೆರವಣಿಗೆ ಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನನಗೆ…
ಶ್ರವಣದೋಷ ಶೀಘ್ರ ಪತ್ತೆಯಾದರೆ ಚಿಕಿತ್ಸೆ ಸುಲಭ ಸಾಧ್ಯ
March 23, 2019ಮೈಸೂರು: ಕಿವುಡು ತನಕ್ಕೆ ತುತ್ತಾಗುವ ವೃದ್ಧರಲ್ಲಿ ಬಹುತೇಕ ಮಂದಿ ಮಾನಸಿಕವಾಗಿಯೂ ಕುಗ್ಗುವ ಸಂಭವ ಹೆಚ್ಚಿದೆ. ಯಾವುದೇ ವಯಸ್ಸಿನ ಭೇದವಿಲ್ಲದೆ ಎದುರಾಗುವ ಶ್ರವಣ ದೋಷ ವನ್ನು ಶೀಘ್ರವಾಗಿ ಗುರುತಿಸಿದರೆ ತಡೆಗಟ್ಟ ಬಹುದು ಅಥವಾ ದೋಷದ ಪರಿಣಾಮ ಕಡಿಮೆ ಮಾಡಬಹುದು ಎಂದು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋ ಧನಾ ಸಂಸ್ಥೆಯ ಇಎನ್‍ಟಿ ವಿಭಾಗದ ಮುಖ್ಯಸ್ಥೆ ಡಾ.ವೀಣಾಪಾಣಿ ತಿಳಿಸಿದರು. ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಎಂಎಂಸಿ ಮತ್ತು ಆರ್‍ಐ) ಇಎನ್‍ಟಿ ವಿಭಾಗದ ಸೆಮಿ ನಾರ್ ಹಾಲ್‍ನಲ್ಲಿ ಜಿಲ್ಲಾಡಳಿತ,…
ನಾಳೆ `ಅಭಿವ್ಯಕ್ತಿ ಸ್ವಾತಂತ್ರ್ಯ, ರಾಷ್ಟ್ರೀಯತೆ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ
March 23, 2019ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ವತಿಯಿಂದ ಮಾ.24ರಂದು ಸಂಜೆ 5.30 ಗಂಟೆಗೆ ಮೈಸೂರಿನ ರಾಜೇಂದ್ರ ಭವನದಲ್ಲಿ `ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಪರಿಷತ್‍ನ ಮೈಸೂರು ನಗರ ಘಟಕದ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಸ್ವೇಚ್ಛಾಚಾರಣೆಯ ರಹದಾರಿಯಲ್ಲ. ಅದು ಕರ್ತವ್ಯದ ಕಡಿವಾಣ ಎಂಬ ಮಾತನ್ನು ಸಂವಿಧಾನ ಒತ್ತಿ ಹೇಳಿದೆ. ಏನಿದ್ದರೂ ಅಭಿವ್ಯಕ್ತಿ ಸ್ವಾತಂತ್ರ್ಯ…
ಮಾಲ್ಡೀವ್ಸ್ ನಾಗರಿಕರಿಗೆ ಅಗತ್ಯ ರಕ್ಷಣೆಗೆ ಮನವಿ
March 23, 2019ಮೈಸೂರು: ಭಾರತಕ್ಕೆ ಮಾಲ್ಡೀವ್ಸ್‍ನಿಂದ ನಿಯೋಜನೆಯಾಗಿರುವ ರಾಯಭಾರಿ ಐಶತ್ ಮಹಮ್ಮದ್ ದೀದಿ ಅವರು, ಮೈಸೂರು ನಗರ ಪೊಲೀಸ್ ಆಯುಕ್ತ ರವರ ಕಚೇರಿಗೆ ಭೇಟಿ ನೀಡಿ, ನಗರದಲ್ಲಿ ಮಾಲ್ಡೀವ್ಸ್ ನಾಗರಿಕರ ರಕ್ಷಣೆ ಮತ್ತು ಕ್ಷೇಮಾ ಭಿವೃದ್ದಿ ಕುರಿತು ಚರ್ಚಿಸಿದರು. ಮೈಸೂರು ನಗರದಲ್ಲಿ ಒಟ್ಟು 83 ಮಾಲ್ಡೀವ್ಸ್ ನಾಗರಿ ಕರು ವಾಸವಿದ್ದು, ಎಲ್ಲಾ ರೀತಿಯ ಅಗತ್ಯ ರಕ್ಷಣೆ ಮತ್ತು ಸಹಕಾರ ಒದಗಿಸಬೇಕೆಂದು ನಗರದ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರೊಂದಿಗೆ ಮಾತಕತೆ ನಡೆಸಿದರು. ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜು,…
ಬಿಎಸ್‍ಪಿಯತ್ತ ಮುಖ ಮಾಡಿದ ಜೆ.ಜೆ.ಆನಂದ
March 23, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಾ.19 ರಂದು ನಾಮಪತ್ರ ಸಲ್ಲಿಸಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಓಬಿಸಿ ಘಟಕದ ಉಪಾಧ್ಯಕ್ಷ ಜೆ.ಜೆ. ಆನಂದ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ದತ್ತ ಮುಖ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಎಸ್‍ಪಿ ರಾಜ್ಯ ಉಸ್ತುವಾರಿಯೂ ಆದ ಉತ್ತರ ಪ್ರದೇಶ ಮಾಜಿ ಎಂಎಲ್‍ಸಿ ಎಂ.ಎನ್.ತೋಮರ್, ಪಕ್ಷದ ರಾಜ್ಯ ಸಂಯೋಜಕ, ಶಾಸಕ ಎನ್.ಮಹೇಶ್, ರಾಜ್ಯಾಧ್ಯಕ್ಷ ಪ್ರೊ.ಹರಿರಾಂ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಜೆ.ಜೆ.ಆನಂದ ಭಾಗವಹಿಸಿದ್ದರು. ಇದೀಗ ಅವರು ಮೈಸೂರು-ಕೊಡಗು ಕ್ಷೇತ್ರದ ಬಹುಜನ…
ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ನಮನ
March 23, 2019ಮೈಸೂರು: ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಲ್ವಾಮಾದಲ್ಲಿ ಮಡಿದ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಕೆ.ಸತ್ಯನಾರಾಯಣ ಅವರು ಮಡಿದ ಸೈನಿಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ ಅನ್ನ ನೀಡುವ ರೈತರು ಹಾಗೂ ದೇಶಕಾಯುವ ಯೋಧರು ದೇವರಿಗೆ ಸಮಾನ. ತಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮೆಲ್ಲರ ರಕ್ಷಣೆಗೆ ಸದಾ ಬದ್ಧರಾಗಿ ನಿಂತಿರುವ ಸೈನಿಕರ ಹೆಮ್ಮೆಯ ಕಾರ್ಯಕ್ಕೆ ನಾವೆಲ್ಲರೂ ಗೌರವ ಸಲ್ಲಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಸೈನಿಕ…
ನಾಳೆ ಮೇಘನಾ ರಂಗ ಪ್ರವೇಶ
March 23, 2019ಮೈಸೂರು: ನಾದವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ, ಹೆಬ್ಬಾಳು ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗ ಳೂರು ಸಹಯೋಗದೊಂದಿಗೆ ವಿದುಷಿ ಮಿತ್ರ ನವೀನ್ ಅವರ ಶಿಷ್ಯೆ ಕು.ಮೇಘನ ಆರ್. ಅವರ ರಂಗಪ್ರವೇಶವನ್ನು ಜೆಎಲ್‍ಬಿ ರಸ್ತೆಯಲ್ಲಿರುವ ನಾದ ಬ್ರಹ್ಮ ಸಂಗೀತ ಸಭಾದಲ್ಲಿ ಮಾ.24 ರಂದು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ನರ್ತನ ಶಾಲಾ ನಿರ್ದೇಶಕಿ ವಿಜಯಾಮೂರ್ತಿ, ಮೈಸೂರು ಯೋಗ ಒಕ್ಕೂಟ ಮತ್ತು ಚೈತನ್ಯ ಯೋಗಕೇಂದ್ರದ ಅಧ್ಯಕ್ಷ ಡಾ.ಬಿ.ಪಿ.ಮೂರ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕುಲಸಚಿವ…