ವಿದ್ಯಾರ್ಥಿಗಳ ಸಾಂಪ್ರದಾಯಿಕ ಉಡುಗೆ-ಅಡುಗೆ
ಮೈಸೂರು

ವಿದ್ಯಾರ್ಥಿಗಳ ಸಾಂಪ್ರದಾಯಿಕ ಉಡುಗೆ-ಅಡುಗೆ

March 23, 2019

ಮೈಸೂರು: ಸದಾ ಹೊಸ ಹೊಸ ವಿನ್ಯಾಸದ ಉಡುಪು ಧರಿಸಿ, ನಾಜೂಕಾದ ಹೆಜ್ಜೆ ಹಾಕಿ ಗಮನ ಸೆಳೆಯುತ್ತಿದ್ದ ವಿದ್ಯಾರ್ಥಿಗಳು ಶುಕ್ರವಾರ ಸಾಂಪ್ರದಾಯಿಕ ತೊಡುಗೆ ತೊಟ್ಟು ಗಮನ ಸೆಳೆದರು. ಮೈಸೂರಿನ ಮಹಾರಾಜ ಕಾಲೇ ಜಿನ ಕನ್ನಡ ವಿಭಾಗದ ಕನ್ನಡ ಸಂಘ ಶುಕ್ರ ವಾರ ಕಾಲೇಜಿನ ಶತಮಾನೋತ್ಸವ ಭವ ನದ ಬಳಿ ಆಯೋಜಿಸಿದ್ದ ಜಾನಪದ ಜಾತ್ರೆ, ಪಾರಂಪರಿಕ ದಿನ ಮತ್ತು ಒಲೆರಹಿತ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗಳು ಸಾಂಪ್ರದಾಯಿಕ ಉಡುಪು ಧರಿಸಿ ಸಂಭ್ರಮಿಸಿದರು. ಕಾಲೇಜಿನ ಆವರಣ ದಲ್ಲಿ ಜನಪದ ಸೊಗಡು ಅನಾವರಣ ಗೊಂಡಿತ್ತು. ವಿದ್ಯಾರ್ಥಿಗಳು ಶರ್ಟ್, ಪಂಚೆ ಧರಿಸಿದ್ದರೆ, ವಿದ್ಯಾರ್ಥಿನಿಯರು ಸೀರೆ, ಲಂಗ -ದಾವಣಿಯಲ್ಲಿ ಮಿಂಚಿದರು. ಇದಕ್ಕೆ ಉಪ ನ್ಯಾಸಕರು ಸಾಥ್ ನೀಡಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ನಂತರ ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ತಯಾರಾದ ತಿಂಡಿ ಗಳ ರುಚಿ ಸವಿದರು. ಜಾನಪದ ಗೀತೆ ಗಳ ಗಾಯನಕ್ಕೆ ನರ್ತಿಸಿ, ಸಂಭ್ರಮಿಸಿದರು.

ರುಚಿಕರವಾದ ತಿನಿಸು: ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿ ಯರು, ಉಪನ್ಯಾಸಕರು ಪಾಲ್ಗೊಂಡು ಗಮನ ಸೆಳೆದರು. ಉಪನ್ಯಾಸಕಿಯರು ಸ್ಥಳ ದಲ್ಲಿಯೇ ಚುರುಮುರಿ, ಬೇಲ್‍ಪುರಿ, ಕೋಸಂಬರಿ ಸೇರಿದಂತೆ ಇನ್ನಿತರ ತಿನಿಸನ್ನು ತಯಾರಿಸಿ ಮಾರಾಟ ಮಾಡಿದರು. ವಿದ್ಯಾರ್ಥಿನಿಯರೂ ರಾಗಿ ಅಂಬಲಿ, ನಿಂಬೆ ಷರಬತ್ತು, ಮಸಾಲ ಮಜ್ಜಿಗೆ, ಪಾನೀಯ, ಫ್ರೂಟ್ ಸಲಾಡ್ ಹಾಗೂ ಇನ್ನಿತರ ತಿನಿಸನ್ನು ತಯಾರಿಸಿ ಮಾರಾಟ ಮಾಡಿ, ಗಮನ ಸೆಳೆದರು.

ಚಾಲನೆ: ವಿಶ್ರಾಂತ ಪ್ರಾಧ್ಯಾಪಕಿ ಡಾ. ಜಯಲಕ್ಷ್ಮೀ ಸೀತಾಪುರ ಅವರು ಜನ ಪದ ಜಾತ್ರೆ ಉದ್ಘಾಟಿಸಿ ಮಾತನಾಡಿ, ದೇಸೀ ತನದ ಘನತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ರೆಡಿಮೇಡ್ ಆಹಾರ ತಿನ್ನದೇ ಸರಳವಾದ ಆಹಾರ ತಿಂದು ರೋಗ ದಿಂದ ಮುಕ್ತರಾಗುವಂತೆ ಹೇಳಿದ ಅವರು, ರಾಗಿ ಅಂಬಲಿ ಕುಡಿದು ತಂಪಾಗಿರುವಂತೆ ಹೇಳಿದರು.

ಪ್ರಾಂಶುಪಾಲರಾದ ಪ್ರೊ.ಸುನೀತ ಅಧ್ಯ ಕ್ಷತೆ ವಹಿಸಿ ಮಾತನಾಡಿ, ಸಾಂಪ್ರದಾಯಿಕ ಉಡುಗೆ ಮತ್ತು ಜನಪದ ಜಾತ್ರೆಯನ್ನು ಚೊಕ್ಕಟವಾಗಿ ಏರ್ಪಡಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಖುಷಿಪಡಲೆಂದು ಸಾಂಪ್ರ ದಾಯಿಕ ಉಡುಗೆ ತೊಟ್ಟು ಬರುವಂತೆ ಹೇಳಲಾಗಿತ್ತು. ಎಲ್ಲ ವಿದ್ಯಾರ್ಥಿಗಳು ಸಾಂಪ್ರ ದಾಯಿಕ ಉಡುಗೆ ತೊಟ್ಟು ಬಂದಿಲ್ಲ. ಮುಂದಿನ ವರ್ಷವಾದರೂ ಎಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಬರ ಬೇಕು ಎಂದು ನುಡಿದರು.

ಆಡಳಿತಾಧಿಕಾರಿ ಪ್ರೊ. ಅನಿತಾ ವಿಮ್ಲ ಬ್ರ್ಯಾಗ್ಸ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ, ಕಾರ್ಯಕ್ರಮ ಸಂಚಾ ಲಕರಾದ ಡಾ.ಎಂ.ಬಿ.ಸುರೇಶ, ಡಾ. ಡಿ.ವಿಜಯಲಕ್ಷ್ಮೀ, ಡಾ.ಕೆ.ತಿಮ್ಮಯ್ಯ, ಡಾ. ವಿಶ್ವನಾಥ್, ಡಾ.ಯಶೋಧಾ, ಡಾ. ಎಸ್.ಕೃಷ್ಣಪ್ಪ, ಡಾ.ಸತ್ಯನಾರಾಯಣ, ಡಾ. ಶೈಲಜಾ, ಡಾ.ನಾಗರತ್ನ, ಡಾ.ಉಷಾ, ಡಾ. ತೇಜೋಮಣಿ, ಡಾ. ಮಧು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು
ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ

Translate »