ಭಾರತದ ದಾಸ್ಯ ಮನೋಭಾವನೆಗೆ  70 ವರ್ಷ ಆಳಿದ ಸರ್ಕಾರಗಳೇ ಕಾರಣ
ಮೈಸೂರು

ಭಾರತದ ದಾಸ್ಯ ಮನೋಭಾವನೆಗೆ 70 ವರ್ಷ ಆಳಿದ ಸರ್ಕಾರಗಳೇ ಕಾರಣ

March 23, 2019

ಮೈಸೂರು: 100 ಕೋಟಿ ಮಾನವ ಸಂಪನ್ಮೂಲ ಹೊಂದಿರುವ ರಾಷ್ಟ್ರವೊಂದು ಕಳೆದ 70 ವರ್ಷಗಳಿಂದ ಜಗತ್ತಿನ ಇತರೆ ರಾಷ್ಟ್ರ ಗಳೊಂದಿಗೆ ದಾಸ್ಯ ಮನೋಭಾವನೆಯಲ್ಲಿ ಬದುಕುತ್ತಿದೆ ಎಂದರೆ, ನಮ್ಮಲ್ಲಿರುವ ಕುಟುಂಬ ಹಾಗೂ ವಂಶಾಡಳಿತ ಕೇಂದ್ರಿತ ಆಡಳಿತ ಅವ್ಯವಸ್ಥೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ತೇಜಸ್ವಿ ಸೂರ್ಯ ಆರೋಪಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಆವರಣದ ಘಟಿಕೋತ್ಸವ ಭವನದಲ್ಲಿ ವ್ಯಾಲಂಟಿಯರ್ಸ್ ಫಾರ್ ನೇಷನ್ ಸ್ಟೂಡೆಂಟ್ಸ್ ಕಾನ್ ಕ್ಲೇವ್-2ಕೆ19 ಮೈಸೂರು ಶೀರ್ಷಿಕೆಯಡಿ ಆಯೋಜಿಸಿದ್ದ `ಯುವಕರಲ್ಲಿ ಮತದಾನ ಜಾಗೃತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 70 ವರ್ಷಗಳಿಂದ ಕುಟುಂಬ ರಾಜಕಾರಣ, ವಂಶಾಡಳಿತ ಅಧಿಕಾರದಿಂದಾಗಿ ಭಾರತ ಯುವಕರು ಒಳ್ಳೊಳ್ಳೆಯ ಅವಕಾಶಗಳಿಂದ ವಂಚಿತ ರಾಗಿದ್ದಾರೆ. ಭಾರತದ ವಿದೇಶಾಂಗ ಇಲಾಖೆ ಕಳೆದ 70 ವರ್ಷಗಳಿಂದ ಈ ಅವ್ಯವಸ್ಥೆಯಲ್ಲಿ ಸಿಲುಕಿ, ದೇಶದ ಅಭಿ ವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿಲ್ಲ. ಇದರ ಪರಿಣಾಮ ದೇಶದ ಕೋಟ್ಯಾಂ ತರ ಯುವಕರ ದುಡಿಯುವ ಕೈಗಳನ್ನು ಪರೋಕ್ಷವಾಗಿ ಕಟ್ಟಿ ಹಾಕಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಚೀನಾ ಬೆಂಬಲದೊಂ ದಿಗೆ ಪಾಕಿಸ್ತಾನ ಹಲವು ವರ್ಷಗಳಿಂದ ನಾಗರಿಕರು, ಭದ್ರತಾ ಪಡೆಗಳ ಮೇಲೆ ಭಯೋತ್ಪಾದನಾ ದಾಳಿ ನಡೆಸಿ, ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂಥ ವಾತಾ ವರಣವನ್ನು ನಿರ್ಮಿಸಿದರೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಎದುರಾಳಿಗಳ ವಿರುದ್ಧ ದನಿಯೆತ್ತಲಾರದಷ್ಟು ನಾವು ನಿಷ್ಕ್ರಿಯ ರಾಗಿದ್ದೆವು. ಆದರೆ, ಪ್ರಧಾನಿ ಮೋದಿ ನೇತೃ ತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಯ ವೈಖರಿಯೇ ಬದ ಲಾಯಿತು. ಇದರ ಪರಿಣಾಮ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗುರು ತಿಸಿಕೊಳ್ಳುವಂತಾಯಿತು ಎಂದರು.
ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾ ರದ ಸಾಧನೆಯೇನು? ಎಂದು ವಿಪಕ್ಷ ನಾಯಕರು ಪ್ರಶ್ನಿಸುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ, ಉದ್ಯೋಗ ಸೃಷ್ಟಿ, ಕಪ್ಪು ಹಣ ನಿಯಂತ್ರಣ, ಜಿಎಸ್ಟಿ ಮೂಲಕ ದೇಶ ಆರ್ಥಿಕ ನೀತಿ ಸಮಗ್ರ ಬದಲಾವಣೆ, ಮೇಲ್ವ ರ್ಗದ ಬಡವರಿಗೆ ಶೇ.10ರಷ್ಟು ಮೀಸ ಲಾತಿ, ನೂತನ ರೈಲ್ವೆ ಯೋಜನೆಗಳ ಪೂರ್ಣ, ಹೆದ್ದಾರಿಗಳ ಅಭಿವೃದ್ಧಿ, 5 ಲಕ್ಷದವರೆಗೆ ತೆರಿಗೆ ವಿನಾಯಿತಿ, ಕೃಷಿಕರಿಗೆ ವರ್ಷಕ್ಕೆ 6 ಸಾವಿರ ರೂ. ಪ್ರೋತ್ಸಾಹ ಧನ, ಆಯುಷ್ಮಾನ್ ಭಾರತ್ ಯೋಜನೆ ಮೂಲಕ 5 ಲಕ್ಷದವ ರೆಗೆ ಬಡವರಿಗೆ ಆರೋಗ್ಯ ವಿಮೆ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯುವಕರು ರಾಷ್ಟ್ರೀಯ ವಿಚಾರಧಾರೆ ಆಧ ರಿಸಿ ಮತದಾನ ಮಾಡಬೇಕು ಮತ್ತು ಇತರ ರಿಗೂ ಮೋದಿ ಸರ್ಕಾರದ ನೀತಿಗಳ ಬಗ್ಗೆ ತಿಳಿ ಹೇಳಬೇಕು. ಒಂದು ಕಾಲಕ್ಕೆ ನಮ್ಮ ದೇಶದಲ್ಲಿ ಬಡತನವನ್ನು ಬಲವಂತವಾಗಿ ಶೇ.90ರಷ್ಟು ಭಾರತೀಯರ ಮೇಲೆ ಹೇರಲಾ ಗಿತ್ತು. ಇದನ್ನು ತೆರವುಗೊಳಿಸಿದ್ದೆ ಮೋದಿ ಸರ್ಕಾರ ಎಂದು ಸಮರ್ಥಿಸಿಕೊಂಡರು.

ಈ ಹಿಂದೆ ಕುಟುಂಬ ಕೇಂದ್ರಿತ ಅಧಿ ಕಾರದಿಂದಾಗಿ, ಕೆಲವೇ ಕೆಲವು ರಾಜ ಕೀಯ ನೇತಾರರ ಕುಟುಂಬ ಶ್ರೀಮಂತ ರಾಗಿದ್ದರು. ಆದರೆ, ಶೇ.90 ರಷ್ಟು ಮತ ದಾರರು ಬಡವರಾಗಿಯೇ ಉಳಿದರು. ಇದರ ಪರಿಣಾಮ ದೇಶದ ಪ್ರಜಾಪ್ರಭುತ್ವ ಹಾದಿ ತಪ್ಪಿ ಭ್ರಷ್ಟಾಚಾರಕ್ಕೆ ನಾಂದಿ ಯಾಯಿತು. ನಂತರ ಜಾತಿ ಕೇಂದ್ರಿತ ಚುನಾವಣೆಗಳು ಬಂದವು. ಈ ದೇಶದ ಮೊದಲ ಪ್ರಧಾನಿ ನೆಹರು ಅಧಿಕಾರಕ್ಕೆ ಬಂದಾಗಲೂ ಬಡವರ ಪರ ಸರ್ಕಾರ ರಚಿಸುವುದಾಗಿ ಹೇಳಿದರು.

ಇದೇ ಹೇಳಿಕೆಯನ್ನು ರಾಹುಲ್ ಗಾಂಧಿ ಸೇರಿದಂತೆ ಹಲವರು ಮುಂದು ವರೆಸಿದ್ದು, ನಿರುದ್ಯೋಗಿಯಾಗಿರುವ ರಾಹುಲ್‍ಗಾಂಧಿ ಸುಳ್ಳು ಸುದ್ದಿ ಹರಡುತ್ತ, ಅಧಿಕಾರಕ್ಕಾಗಿ ನರೇಂದ್ರ ಮೋದಿ ವಿರುದ್ದ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ ಎಂದು ಕಿಡಿಕಾರಿದರು. ಹಿಂದಿನ ಸರ್ಕಾ ರದ ಆಡಳಿತಾವಧಿಯಲ್ಲಿ ಕೆಲವೇ ಮಂದಿ ತೆರಿಗೆ ಕಟ್ಟುತ್ತಿದ್ದವರಿಗೆ ದೇಶದ ಪೂರ್ಣ ಆರ್ಥಿಕ ಹೊರೆ ಹೊರಿಸಲಾಗಿತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಈ ಹೊರೆಯನ್ನು ಜಿಎಸ್ಟಿ ಜಾರಿಗೊಳಿಸಿ ಸುಲಭಗೊಳಿಸಿದ್ದಾರೆ. ಇದಕ್ಕಾಗಿಯೇ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದರು.

100 ಕೋಟಿ ಮಾನವ ಸಂಪನ್ಮೂಲ ರಾಷ್ಟ್ರವೊಂದು ಪ್ರಪಂಚದ ಇತರೆ ರಾಷ್ಟ್ರ ಗಳ ಮುಂದೆ ದಾಸ್ಯ ಮನೋಭಾವನೆ ಯಲ್ಲಿ ಬದುಕುತ್ತಿದೆ. ಇದಕ್ಕೆ ನಮ್ಮಲ್ಲಿರುವ ಆಡಳಿತ ವ್ಯವಸ್ಥೆ ಕಾರಣ. ಆದ್ದರಿಂದ ಮೋದಿ ಸರ್ಕಾರ ಎಲ್ಲಾ ಇಲಾಖೆಗಳನ್ನು ಕಳೆದ 5 ವರ್ಷಗಳಿಂದ ಸಕ್ರಿಯಗೊಳಿಸಿದ ಪರಿಣಾಮ ಪ್ರಪಂಚದಲ್ಲಿ 6ನೇ ಮುಂದು ವರೆದ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆ ದಿದೆ. ಆದರೆ, ಹಿಂದಿನ ಸರ್ಕಾರದಲ್ಲಿ ಇವೆ ಲ್ಲವೂ ಸಾಧ್ಯವಾಗಿರಲಿಲ್ಲ ಏಕೆ? ಎಂದು ಪ್ರಶ್ನಿಸಿದರು. ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಮತದಾನ ಕುರಿತು ಮಾತನಾಡಿದರು. ವೇದಿಕೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಆದಿತ್ಯ ಆಸ್ಪತ್ರೆಯ ಡಾ.ಚಂದ್ರಶೇಖರ್, ಸಂಚಾಲಕ ಹರೀಶ್ ಶಣೈ ಉಪಸ್ಥಿತರಿದ್ದರು. ಇದೇ ಸಂದರ್ಭ ದಲ್ಲಿ ಸೈನಿಕರ ಕ್ಷೇಮಾಭಿವೃದ್ಧಿ ನಿಧಿಗೆ ಕೋಟಿ ರೂ. ದೇಣಿಗೆ ನೀಡಿದ್ದ ಆದಿತ್ಯ ಆಸ್ಪತ್ರೆಯ ಡಾ.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

Translate »