ಶ್ರವಣದೋಷ ಶೀಘ್ರ ಪತ್ತೆಯಾದರೆ ಚಿಕಿತ್ಸೆ ಸುಲಭ ಸಾಧ್ಯ
ಮೈಸೂರು

ಶ್ರವಣದೋಷ ಶೀಘ್ರ ಪತ್ತೆಯಾದರೆ ಚಿಕಿತ್ಸೆ ಸುಲಭ ಸಾಧ್ಯ

March 23, 2019

ಮೈಸೂರು: ಕಿವುಡು ತನಕ್ಕೆ ತುತ್ತಾಗುವ ವೃದ್ಧರಲ್ಲಿ ಬಹುತೇಕ ಮಂದಿ ಮಾನಸಿಕವಾಗಿಯೂ ಕುಗ್ಗುವ ಸಂಭವ ಹೆಚ್ಚಿದೆ. ಯಾವುದೇ ವಯಸ್ಸಿನ ಭೇದವಿಲ್ಲದೆ ಎದುರಾಗುವ ಶ್ರವಣ ದೋಷ ವನ್ನು ಶೀಘ್ರವಾಗಿ ಗುರುತಿಸಿದರೆ ತಡೆಗಟ್ಟ ಬಹುದು ಅಥವಾ ದೋಷದ ಪರಿಣಾಮ ಕಡಿಮೆ ಮಾಡಬಹುದು ಎಂದು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋ ಧನಾ ಸಂಸ್ಥೆಯ ಇಎನ್‍ಟಿ ವಿಭಾಗದ ಮುಖ್ಯಸ್ಥೆ ಡಾ.ವೀಣಾಪಾಣಿ ತಿಳಿಸಿದರು.

ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಎಂಎಂಸಿ ಮತ್ತು ಆರ್‍ಐ) ಇಎನ್‍ಟಿ ವಿಭಾಗದ ಸೆಮಿ ನಾರ್ ಹಾಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ವಿಭಾಗ, ಭಾರ ತೀಯ ವೈದ್ಯರ ಸಂಘದ (ಐಎಂಎ) ಮೈಸೂರು ಘಟಕದ ಸಂಯುಕ್ತಾಶ್ರಯ ದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರವಣ ದೋಷದ ಲಕ್ಷಣಗಳು ಶೀಘ್ರ ಪತ್ತೆ ಯಾದರೆ ಚಿಕಿತ್ಸೆ ಸುಲಭ ಸಾಧ್ಯ. ಒಂದು ವೇಳೆ ಸಂಪೂರ್ಣ ಸರಿಪಡಿಸಲಾಗದಿದ್ದರೂ ದುಷ್ಪರಿಣಾಮ ಕಡಿಮೆಗೊಳಿಸಲು ಅವಕಾಶ ವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಕಿವಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಸಮಸ್ಯೆ ಎದುರಾಗುವ ಅನುಮಾನ ವಿದ್ದಲ್ಲಿ ಪರೀಕ್ಷಿಸಿಕೊಳ್ಳಬೇಕು. ಹುಟ್ಟುವ ಮಗುವಿನಿಂದ ಹಿಡಿದು ವೃದ್ಧರವರೆಗೂ ಕಿವುಡುತನ ಯಾವುದೇ ಭೇದಭಾವ ವಿಲ್ಲದೆ ಬರುವ ಸಾಧ್ಯತೆ ಇರುತ್ತದೆ ಎಂದರು.

ಎಂಎಂಸಿ ಮತ್ತು ಆರ್‍ಐನ ಪಿ ಮತ್ತು ಎಸ್‍ಎಂ ವಿಭಾಗದ ಮುಖ್ಯಸ್ಥ ಡಾ.ಮುದ್ದಾ ಸೀರ್ ಅಜೀಜ್ ಖಾನ್ ಮಾತನಾಡಿ, ಉತ್ತಮ ಜೀವನ ನಿರ್ವಹಣೆಗೆ ಕಣ್ಣಿನ ಆರೋಗ್ಯ ದಷ್ಟೇ ಕಿವಿಯ ಆರೋಗ್ಯವೂ ಮುಖ್ಯವಾಗು ತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜಾಗೃತಿ ವಹಿಸಿ ಶ್ರವಣ ದೋಷದ ಸಮಸ್ಯೆಗೆ ಆಸ್ಪದ ನೀಡ ದಂತೆ ಸಮಾಜ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ.ಮಹ ಮದ್ ಸಿರಾಜ್ ಅಹಮ್ಮದ್ ಮಾತನಾಡಿ, ಈ ವರ್ಷ `ನಿಮ್ಮ ಶ್ರವಣ ಶಕ್ತಿಯನ್ನು ಪರೀಕ್ಷಿಸಿ ಕೊಳ್ಳಿ’ ಎಂಬ ಘೋಷವಾಕ್ಯದಲ್ಲಿ `ವಿಶ್ವ ಶ್ರವಣ ದಿನ’ ಆಚರಿಸಲಾಗುತ್ತಿದೆ. 2050ರ ವೇಳೆಗೆ 10 ಮಂದಿಯಲ್ಲಿ ಒಬ್ಬ ಶ್ರವಣಶಕ್ತಿ ಕಳೆದುಕೊಳ್ಳುವ ಸನ್ನಿವೇಶ ನಿರ್ಮಾಣವಾಗು ತ್ತದೆ ಎಂದು ಅಂದಾಜಿಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಡಿ ಯಾಲಜಿಸ್ಟ್ ಡಾ.ಲೀಲಾ ತೇಜಸ್ವಿನಿ, ವಿಶ್ವ ಆರೋಗ್ಯ ಸಂಸ್ಥೆ `ಮಾರ್ಚ್ 3’ ಅನ್ನು ವಿಶ್ವ ಶ್ರವಣ ದಿನವಾಗಿ ಆಚರಿಸಲು ಕರೆ ನೀಡಿದೆ. ಪ್ರಸ್ತುತ ಇಡೀ ಪ್ರಪಂಚದಲ್ಲಿ 46.6 ಕೋಟಿ ಹಾಗೂ ಭಾರತದಲ್ಲಿ 6.6 ಕೋಟಿ ಮಂದಿ ಶ್ರವಣ ದೋಷದಿಂದ ಬಳಲುತ್ತಿ ದ್ದಾರೆ. ಈ ಸಮಸ್ಯೆ ನಿವಾರಣೆಗೆ ಗಂಭೀರ ಪ್ರಯತ್ನ ಅಗತ್ಯವಾಗಿದೆ. ಆದರೆ ಅದೊಂದು ಸವಾಲಾಗಿ ಪರಿಣಮಿಸಿದೆ. ಸಮಸ್ಯೆ ಬಂದಾಗ ಗುಣಪಡಿಸಲು ಹೆಣಗಾಡುವ ಬದಲು ಬಾರದಂತೆ ಎಚ್ಚರ ವಹಿಸುವುದಕ್ಕೆ ನಮ್ಮ ಸಮಾಜ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಜೆಕೆ ಮೈದಾನದಿಂದ ಕೆಆರ್ ಆಸ್ಪತ್ರೆ ಆವರಣದವರೆಗೆ ಜಾಥಾ ನಡೆಸಿ ಶ್ರವಣ ದೋಷದ ಬಗ್ಗೆ ಜಾಗೃತಿ ಮೂಡಿ ಸಲಾಯಿತು. ಎಂಎಂಸಿ ಮತ್ತು ಆರ್‍ಐನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ ಗಳು, ಶುಶ್ರೂಷಕಿಯರು ಸೇರಿದಂತೆ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಐಎಂಎ ರಾಜ್ಯ ಉಪಾಧ್ಯಕ್ಷ ಡಾ.ಸುರೇಶ್ ರುದ್ರಪ್ಪ, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ.ಕೆ. ಉಮೇಶ್, ಎಂಎಂಸಿ ಮತ್ತು ಆರ್‍ಐ ಪ್ರಾಂಶು ಪಾಲರಾದ ಡಾ.ದಾಕ್ಷಾಯಿಣಿ, ಇಎನ್‍ಟಿ ವೈದ್ಯರಾದ ಡಾ.ಬಿ.ವೈ.ಪ್ರವೀಣ್‍ಕುಮಾರ್, ಡಾ.ಸತೀಶ್ ಮತ್ತಿತರರು ಹಾಜರಿದ್ದರು.

 

Translate »