ನಾಳೆ ಮೇಘನಾ ರಂಗ ಪ್ರವೇಶ
ಮೈಸೂರು

ನಾಳೆ ಮೇಘನಾ ರಂಗ ಪ್ರವೇಶ

March 23, 2019

ಮೈಸೂರು: ನಾದವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ, ಹೆಬ್ಬಾಳು ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗ ಳೂರು ಸಹಯೋಗದೊಂದಿಗೆ ವಿದುಷಿ ಮಿತ್ರ ನವೀನ್ ಅವರ ಶಿಷ್ಯೆ ಕು.ಮೇಘನ ಆರ್. ಅವರ ರಂಗಪ್ರವೇಶವನ್ನು ಜೆಎಲ್‍ಬಿ ರಸ್ತೆಯಲ್ಲಿರುವ ನಾದ ಬ್ರಹ್ಮ ಸಂಗೀತ ಸಭಾದಲ್ಲಿ ಮಾ.24 ರಂದು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ನರ್ತನ ಶಾಲಾ ನಿರ್ದೇಶಕಿ ವಿಜಯಾಮೂರ್ತಿ, ಮೈಸೂರು ಯೋಗ ಒಕ್ಕೂಟ ಮತ್ತು ಚೈತನ್ಯ ಯೋಗಕೇಂದ್ರದ ಅಧ್ಯಕ್ಷ ಡಾ.ಬಿ.ಪಿ.ಮೂರ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕುಲಸಚಿವ ಅಶೋಕ್ ಎನ್.ಚಲವಾದಿ ಮತ್ತು ಮಹಾಲಿಂಗು ಭಾಗವಹಿಸುವರು. ಹಾಡುಗಾರಿಕೆಯಲ್ಲಿ ವಿದ್ವಾನ್ ನವೀನ್ ಎಂ.ಎಸ್.ಅಂದಗಾರ್, ಕೊಳಲಿನಲ್ಲಿ ವಿದ್ವಾನ್ ಎಂ.ಆರ್.ರಾಜೇಶ್, ಮೃದಂಗದಲ್ಲಿ ಎಂ.ಜೆ.ಕಿರಣ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ಎಂ.ಆರ್.ಶ್ರೀಕಾಂತ್ ಸಹಕರಿಸಲಿದ್ದಾರೆ.

Translate »