ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಇದೇ ಮಾರ್ಚ್21ರಿಂದ ಏಪ್ರಿಲ್ 4ರವರೆಗೆ ನಡೆ ಯಲಿವೆ. ರಾಜ್ಯಾದ್ಯಂತ ಒಟ್ಟು 2,847 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು 8.41 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆ ಯಲಿದ್ದಾರೆ. ರಾಜ್ಯದ ಒಟ್ಟು 5, 202 ಸರ್ಕಾರಿ, 3,244 ಅನುದಾನಿತ ಹಾಗೂ 6,004 ಅನುದಾನರಹಿತ ಶಾಲೆಗಳು ಸೇರಿ 14,450 ಶಾಲೆಗಳ ವಿದ್ಯಾರ್ಥಿ ಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿ ದ್ದಾರೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ…
ತುಮಕೂರು ಕೈ ತಪ್ಪಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಪರೋಕ್ಷ ಕಿಡಿ
March 19, 2019ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರ ಕೈ ತಪ್ಪಿ ದ್ದಕ್ಕೆ ಆತಂಕ, ಅಸಮಾಧಾನ ಎರಡೂ ಆಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿ ದ್ದಾರೆ. ಈ ಕ್ಷೇತ್ರ ಕೈ ತಪ್ಪಿಸಿ, ಹೆಚ್ಚು ಅಂಕ ಪಡೆದಿದ್ದೇನೆ ಎಂದು ಭ್ರಮೆಯ ಲ್ಲಿದ್ದರೆ, ಅದಕ್ಕೆ ಮುಂದೆ ಉತ್ತರ ದೊರೆ ಯಲಿದೆ ಎಂದು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹೆಸರಿಸದೇ ಪರೋಕ್ಷ ವಾಗಿ ಕಿಡಿಕಾರಿದರು. ಪಕ್ಷದ ಹಾಲಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ರು. ಗೆದ್ದ ಅಭ್ಯರ್ಥಿಗಳ ಬದಲಾ ವಣೆ ಬೇಡ ಅಂತ ಮೈತ್ರಿ ಆಗಿತ್ತು….
ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ 2 ಕೆಜಿ ಚಿನ್ನಾಭರಣ ದರೋಡೆ ಪ್ರಕರಣ ಮೂವರು ಅಂತರರಾಜ್ಯ ಖದೀಮರ ಬಂಧನ, ಚಿನ್ನಾಭರಣ ವಶ
March 19, 2019ಮೈಸೂರು: ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿ ಯೊಬ್ಬರಿಂದ 2 ಕೆಜಿಗೂ ಹೆಚ್ಚು ಚಿನ್ನಾ ಭರಣ ದರೋಡೆ ಮಾಡಿದ್ದ ಪ್ರಕರಣ ವನ್ನು ಭೇದಿಸಿರುವ ಮೈಸೂರು ರೈಲ್ವೆ ಪೊಲೀಸರು, ಮೂವರು ಆರೋಪಿ ಗಳನ್ನು ಬಂಧಿಸಿ, 1.50 ಕೆಜಿ ಚಿನ್ನಾ ಭರಣವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ರಮೇಶ್ ಪಿಟ್ಟೇಕರ್, ಮಾರುತಿ ಪಿಟ್ಟೇಕರ್ ಹಾಗೂ ಅನಂತ ದಾಂಡೆಯನ್ನು ಬಂಧಿಸಿದ್ದು, ಲಕ್ಷ್ಮಣ್ ಪಿಟ್ಟೇಕರ್ ಹಾಗೂ ಬಾನುದಾಸ್ ಪಿಟ್ಟೇ ಕರ್ ತಲೆಮರೆಸಿಕೊಂಡಿದ್ದಾರೆ. ಮಹಾ ರಾಷ್ಟ್ರದ ಅಹಮದನಗರ ಜಿಲ್ಲೆ, ಕರ್ಜತ್ ತಾಲೂಕಿನ ಮಾಲಂಗಿ ಹಾಗೂ ವಲ್ವಾಡ ಗ್ರಾಮ…
ಕೇಂದ್ರದ `ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆ ಸಮರ್ಪಕ ಜಾರಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ
March 19, 2019ಮೈಸೂರು: ಬಡವರು, ಜನ ಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದವರಿಗೆ ಆರೋಗ್ಯ ಸೇವೆ ಕಲ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಆಯುಷ್ಮಾನ್ ಭಾರತ್’ ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕ ವಾಗಿ ಅನುಷ್ಠಾನಕ್ಕೆ ತರದೆ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಟ್ಟ ಹೆಸರು ತರಲು ಸಂಚು ನಡೆಸುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಆರೋಪಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ವೊಂದರ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೇಶದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್…
ಮೈಸೂರಲ್ಲಿ ಸಂಗೀತ ವಿವಿ ಇದ್ದರೂ ಯಾವೊಬ್ಬ ಒಳ್ಳೆಯ ಸಂಗೀತಗಾರ ಇಲ್ಲಿಂದ ಹೊರ ಬರಲಿಲ್ಲ
March 19, 2019ಮೈಸೂರು: ಮೈಸೂ ರಲ್ಲಿ ಸಂಗೀತ ವಿಶ್ವವಿದ್ಯಾಲಯವಿದ್ದರೂ ಯಾವೊಬ್ಬ ಒಳ್ಳೆಯ ಸಂಗೀತಗಾರ ಇಲ್ಲಿಂದ ಹೊರ ಬರಲಿಲ್ಲ ಎಂದು ಅಂತಾರಾಷ್ಟ್ರೀಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಬೇಸರದಿಂದ ನುಡಿದರು. ಮಾಧ್ಯಮ ಅಕಾಡೆಮಿ ಪುರಸ್ಕøತರಾದ `ಸ್ಟಾರ್ ಆಫ್ ಮೈಸೂರ್’ ಕಾರ್ಯ ನಿರ್ವಾ ಹಕ ಸಂಪಾದಕಿ ಮೀರಾ ಅಪ್ಪಯ್ಯ, ಪ್ರಜಾ ವಾಣಿ ಮೈಸೂರು ಸ್ಥಾನಿಕ ಸಂಪಾದಕ ಕೆ.ಜೆ.ಮರಿಯಪ್ಪ, ಆಂದೋಲನ ವರದಿ ಗಾರ ಆಲ್‍ಫ್ರೆಡ್ ಸಾಲೋಮನ್ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾ ರಂಭದಲ್ಲಿ ಅವರು ಮಾತನಾಡಿದರು. ಸಂಗೀತಕ್ಕಾಗಿಯೇ…
ವಿಜ್ಞಾನ, ತಂತ್ರಜ್ಞಾನ ಸದ್ಬಳಕೆಗೆ ತಾಂತ್ರಿಕ ವಿವಿ ಸಿಂಗಾಪುರ್ ಪ್ರಾಧ್ಯಾಪಕ ಸಲಹೆ
March 19, 2019ಮೈಸೂರು: ಪರಿ ಸರಕ್ಕೆ ಮಾರಕವಾಗದ ರೀತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸದ್ಬಳಕೆಗೆ ವಿಜ್ಞಾನ ಕ್ಷೇತ್ರ, ಸಮಾಜ ಹಾಗೂ ನೀತಿ-ನಿಯಮ ರೂಪಿಸುವ ಆಡಳಿತ ವರ್ಗ ಒತ್ತು ನೀಡ ಬೇಕಿದೆ ಎಂದು ಸಿಂಗಾಪುರ್‍ನ ನಂಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲ ಯದ ಉಪಾಧ್ಯಕ್ಷ ಪ್ರೊ.ಬಿ.ವಿ.ಆರ್. ಚೌಧರಿ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿಯ ಸೆಂಟರ್ ಫಾರ್ ಮೆಟಿರೀಯಲ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ವತಿಯಿಂದ `ಶಕ್ತಿ, ಪರಿ ಸರ ಹಾಗೂ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಮುಂದುವರೆದ ಕ್ರಿಯಾತ್ಮಕ ವಸ್ತುಗಳ ಬಳಕೆ (ಅಡ್ವಾನ್ಸ್‍ಡ್…
ದೇಶದ ಪ್ರಧಾನಿಯಾಗುವ ಸಾಮರ್ಥ್ಯ ರಾಹುಲ್ ಗಾಂಧಿಗಿಲ್ಲ
March 19, 2019ಬೆಂಗಳೂರು: ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಸ್ವ ಪಕ್ಷೀಯರೇ ಅಸ ಮಾಧಾನ ಹೊರ ಹಾಕಿದ್ದಾರೆ. ಭಾರತದ ಪ್ರಧಾನಿಯಾಗುವ ಮಟ್ಟಿಗೆ ರಾಹುಲ್ ಗಾಂಧಿ ಸಿದ್ಧವಾಗಿಲ್ಲ ಎಂದು ಮಾಜಿ ಸಚಿವ ಡಾ.ಮಾಲಕರೆಡ್ಡಿ ತಿಳಿಸಿದ್ದಾರೆ. ಪ್ರಧಾನಿಯಾದವರಿಗೆ ದೇಶದ ರಕ್ಷಣೆ ಮುಖ್ಯವಾಗುತ್ತೆ. ಆದ್ರೆ ರಾಹುಲ್ ಗಾಂಧಿ ಯವರಿಗೆ ದೇಶದ ಪ್ರಧಾನಿ ಹುದ್ದೆ ನಿರ್ವ ಹಿಸಲು ಸಾಧ್ಯವಾಗಲ್ಲ. ದೇಶದ ಸದ್ಯದ ಪರಿಸ್ಥಿತಿಗೆ ಮೋದಿಯವರೇ ಸರಿಯಾದ ಅಭ್ಯರ್ಥಿ, ಅವರು ದೇಶದ ರಕ್ಷಣೆ ವಿಚಾರ ದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ನನ್ನ ಬೆಂಬಲ ಮೋದಿಗಿದೆ…
ಸುಶ್ಮಿತಾಗೆ ಐದು ಚಿನ್ನದ ಪದಕ
March 19, 2019ಮೈಸೂರು: ಮೈಸೂರು ವಿವಿಯ ಎಂಬಿಎ (ಕೃಷಿ ಉದ್ಯಮ) ವಿದ್ಯಾರ್ಥಿನಿ ಪಿ.ಸುಶ್ಮಿತಾ ಐದು ಚಿನ್ನದ ಪದಕಗಳೊಂದಿಗೆ ಭಾನುವಾರ ನಡೆದ 99ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದರು. ಮೈಸೂರಿನ ಎನ್‍ಆರ್ ಮೊಹಲ್ಲಾದ ಎಂ.ರಕ್ಷಿತ್ ಅವರ ಪತ್ನಿಯಾದ ಪಿ.ಸುಶ್ಮಿತ, ಪ್ರೊ.ಎಂ.ದೇವ ರಾಜ್ ಚಿನ್ನದ ಪದಕ, ಬಿ.ಹೆಚ್.ಭ್ರಮರಾಂಬ ಮತ್ತು ಹೆಚ್.ಎಸ್.ಗೋಪಾಲ್‍ರಾವ್ ಚಿನ್ನದ ಪದಕ, ಸೇಠ್ ಹಂದ್ರಜ್ ಚಿನ್ನದ ಪದಕ, ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಮತ್ತು ಧಾನ್ಯ ವ್ಯಾಪಾರಿ ಸಂಘಗಳ ಒಕ್ಕೂಟದ ದತ್ತಿ ಚಿನ್ನದ ಪದಕ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಸಮಿತಿ…
ಮಾ. 22ರಂದು ಕಾಂಗ್ರೆಸ್ 20 ಅಭ್ಯರ್ಥಿಗಳ ಪಟ್ಟಿ ಪ್ರಕಟ
March 19, 2019ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಲಿರುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 22 ರಂದು ಅಂತಿಮಗೊಳಿಸಲು ಎಐಸಿಸಿ ಮುಖಂಡರು ನಿರ್ಧರಿಸಿದ್ದಾರೆ. ಬೆಂಗಳೂರು ಉತ್ತರ, ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡದೆ ಜೆಡಿಎಸ್‍ಗೆ ಬಿಟ್ಟುಕೊಡಲು ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಎಂಟು ಕ್ಷೇತ್ರಗಳಲ್ಲಿರುವ ಹಾಲಿ ಸಂಸದರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು ಉಳಿದಂತೆ 12 ಕ್ಷೇತ್ರಗಳ ಕ್ಯಾಂಡಿಡೇಟುಗಳ ಪಟ್ಟಿಯನ್ನು ಅಂದು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ.ಜೆಡಿಎಸ್ ಜತೆಗಿನ ಮೈತ್ರಿಗಿಂತ ಕಾಂಗ್ರೆಸ್ ಪಕ್ಷ ಫ್ರೆಂಡ್ಲಿ ಫೈಟ್‍ಗೆ ಅನುವು ಮಾಡಿಕೊಳ್ಳಬೇಕಿತ್ತು.ಹಾಗೆ ಮಾಡದೆ…
ಪರಿಕ್ಕರ್ ನಿಧನ ಹಿನ್ನೆಲೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಮುಂದೂಡಿಕೆ
March 19, 2019ಬೆಂಗಳೂರು: ಕ್ಯಾನ್ಸರ್ ರೋಗದಿಂದ ನಿನ್ನೆ ಗೋವಾ ರಾಜಧಾನಿ ಪಣಜಿಯಲ್ಲಿ ನಿಧನರಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‍ರವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳ ಬೇಕಾಗಿರುವುದರಿಂದ ಇಂದು ನಡೆಯಬೇಕಿದ್ದ ಬಿಜೆಪಿಯ ಮಹತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಮುಂದೂಡಲಾಗಿದೆ. ಪರಿಕ್ಕರ್ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಕೇಂದ್ರ ಚುನಾವಣಾ ಸಮಿತಿಯ ಬಹುತೇಕ ಸದಸ್ಯರು ಅಂತ್ಯಕ್ರಿಯೆಯಲ್ಲಿ…