ಮೈಸೂರಲ್ಲಿ ಸಂಗೀತ ವಿವಿ ಇದ್ದರೂ ಯಾವೊಬ್ಬ  ಒಳ್ಳೆಯ ಸಂಗೀತಗಾರ ಇಲ್ಲಿಂದ ಹೊರ ಬರಲಿಲ್ಲ
ಮೈಸೂರು

ಮೈಸೂರಲ್ಲಿ ಸಂಗೀತ ವಿವಿ ಇದ್ದರೂ ಯಾವೊಬ್ಬ ಒಳ್ಳೆಯ ಸಂಗೀತಗಾರ ಇಲ್ಲಿಂದ ಹೊರ ಬರಲಿಲ್ಲ

March 19, 2019

ಮೈಸೂರು: ಮೈಸೂ ರಲ್ಲಿ ಸಂಗೀತ ವಿಶ್ವವಿದ್ಯಾಲಯವಿದ್ದರೂ ಯಾವೊಬ್ಬ ಒಳ್ಳೆಯ ಸಂಗೀತಗಾರ ಇಲ್ಲಿಂದ ಹೊರ ಬರಲಿಲ್ಲ ಎಂದು ಅಂತಾರಾಷ್ಟ್ರೀಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಬೇಸರದಿಂದ ನುಡಿದರು.

ಮಾಧ್ಯಮ ಅಕಾಡೆಮಿ ಪುರಸ್ಕøತರಾದ `ಸ್ಟಾರ್ ಆಫ್ ಮೈಸೂರ್’ ಕಾರ್ಯ ನಿರ್ವಾ ಹಕ ಸಂಪಾದಕಿ ಮೀರಾ ಅಪ್ಪಯ್ಯ, ಪ್ರಜಾ ವಾಣಿ ಮೈಸೂರು ಸ್ಥಾನಿಕ ಸಂಪಾದಕ ಕೆ.ಜೆ.ಮರಿಯಪ್ಪ, ಆಂದೋಲನ ವರದಿ ಗಾರ ಆಲ್‍ಫ್ರೆಡ್ ಸಾಲೋಮನ್ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಸಂಗೀತಕ್ಕಾಗಿಯೇ ಮೈಸೂರಲ್ಲಿ ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದ ರ್ಶಕ ಕಲೆಗಳ ವಿಶ್ವವಿದ್ಯಾಲಯ ಇಷ್ಟು ವರ್ಷದಿಂದ ಇದ್ದರೂ ಸಂಗೀತ ಲೋಕಕ್ಕೆ ಒಬ್ಬ ಒಳ್ಳೆಯ ಸಂಗೀತಗಾರನ ಕೊಡುಗೆ ನೀಡಲಿಲ್ಲ. ಅಮೆರಿಕಾದಂತಹ ದೇಶವೇ ಭಾರತದಲ್ಲಿನ ಸಂಗೀತಗಾರರನ್ನು ಕರೆಸಿ ಸಂಗೀತದ ಬಗ್ಗೆ ತಿಳಿದುಕೊಳ್ಳಲು ಹಂಬ ಲಿಸುತ್ತದೆ. ಆದರೆ, ಮೈಸೂರಿನ ಸಂಗೀತ ವಿವಿಯವರಿಗೆ ಸಂಗೀತದ ಪದವೀಧರರು ಸಿಗುತ್ತಿಲ್ಲ, ಸಿಬ್ಬಂದಿ ಇಲ್ಲ ಎಂಬ ಕುಂಟು ನೆಪ ಹೇಳುತ್ತಿದ್ದಾರೆ. ಇದೆಲ್ಲವನ್ನೂ ನೋಡಿ ದರೆ ಕೇವಲ ಕಾಟಾಚಾರ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ ಎಂದು ವಿಷಾದಿಸಿದರು.

ಪತ್ರಕರ್ತರು ಸಂಗೀತಕ್ಕೂ ಪ್ರಾಧಾನ್ಯತೆ ನೀಡಿ: ಮಾಧ್ಯಮಗಳ ಆಯಾಮ ಬದ ಲಾಗಬೇಕು. ಕ್ರಿಕೆಟ್, ರಾಜಕೀಯಕ್ಕೆ ನೀಡುವ ಪ್ರಾಧಾನ್ಯತೆಯನ್ನು ಸಂಗೀತಕ್ಕೂ ನೀಡಬೇ ಕಿದೆ. ಹಣ, ಹೆಣ ಎಣಿಸುವ ಸಂಸ್ಕøತಿ ನಾಡಿನಲ್ಲಿ ಬಿತ್ತರವಾಗುತ್ತಿದೆ. ಪರಂಪರೆಯ ಪ್ರತೀಕವಾಗಿರುವ ದೇಶದಲ್ಲಿ ಸಾಕಷ್ಟು ಪಂಡಿತರು, ಸಂಗೀತಗಾರರಿದ್ದು, ಅವರ ತ್ತಲೂ ಬೆಳಕು ಚೆಲ್ಲುವ ಕಾರ್ಯ ಆಗ ಬೇಕು ಎಂದರು.

ಸಾಹಿತಿ ಮಲೆಯೂರು ಗುರುಸ್ವಾಮಿ ಮಾತನಾಡಿ, ತಮ್ಮದೇ ಆದ ಸಂಸ್ಕøತಿ, ಪರಂಪರೆ ಹೊಂದಿರುವ ಮೈಸೂರಿನ ಪತ್ರಕರ್ತರು ವಿಭಿನ್ನ. ಗ್ರಾಮೀಣ ಭಾಗದಲ್ಲಿ ಇನ್ನೂ ಸಮಸ್ಯೆಗಳಿದ್ದೂ ಅವುಗಳನ್ನು ಸರ್ಕಾ ರದ ಗಮನಕ್ಕೆ ತರುವ ಕಾರ್ಯ ನಿರ್ವಹಿ ಸುವಂತೆ ಪತ್ರಕರ್ತರಿಗೆ ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ `ಸ್ಟಾರ್ ಆಫ್ ಮೈಸೂರ್’ ಪತ್ರಿಕೆ ಕಾರ್ಯ ನಿರ್ವಾಹಕ ಸಂಪಾದಕಿ ಮೀರಾ ಅಪ್ಪಯ್ಯ, ತಮಗೆ ಪ್ರಶಸ್ತಿ ದೊರೆಯಲು ಪತ್ರಿಕೆ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಮತ್ತು ಮಾಜಿ ಸಂಪಾದಕ ಎಂ.ಆರ್.ಶಿವಣ್ಣ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಮಾಧ್ಯಮ ಅಕಾಡೆಮಿ ಸದಸ್ಯ ಕೆ.ಶಿವ ಕುಮಾರ್, ಪತ್ರಕರ್ತರ ಸಂಘದ ಜಿಲ್ಲಾ ಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್‍ಬಾಬು, ಉಪಾಧ್ಯಕ್ಷ ಎಂ. ಸುಬ್ರ ಹ್ಮಣ್ಯ, ಕಾರ್ಯದರ್ಶಿ ಬಿ.ರಾಘವೇಂದ್ರ, ಮಂಜು ಕೋಟೆ ಉಪಸ್ಥಿತರಿದ್ದರು.

 

Translate »