ಸುಶ್ಮಿತಾಗೆ ಐದು ಚಿನ್ನದ ಪದಕ
ಮೈಸೂರು

ಸುಶ್ಮಿತಾಗೆ ಐದು ಚಿನ್ನದ ಪದಕ

March 19, 2019

ಮೈಸೂರು: ಮೈಸೂರು ವಿವಿಯ ಎಂಬಿಎ (ಕೃಷಿ ಉದ್ಯಮ) ವಿದ್ಯಾರ್ಥಿನಿ ಪಿ.ಸುಶ್ಮಿತಾ ಐದು ಚಿನ್ನದ ಪದಕಗಳೊಂದಿಗೆ ಭಾನುವಾರ ನಡೆದ 99ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದರು.

ಮೈಸೂರಿನ ಎನ್‍ಆರ್ ಮೊಹಲ್ಲಾದ ಎಂ.ರಕ್ಷಿತ್ ಅವರ ಪತ್ನಿಯಾದ ಪಿ.ಸುಶ್ಮಿತ, ಪ್ರೊ.ಎಂ.ದೇವ ರಾಜ್ ಚಿನ್ನದ ಪದಕ, ಬಿ.ಹೆಚ್.ಭ್ರಮರಾಂಬ ಮತ್ತು ಹೆಚ್.ಎಸ್.ಗೋಪಾಲ್‍ರಾವ್ ಚಿನ್ನದ ಪದಕ, ಸೇಠ್ ಹಂದ್ರಜ್ ಚಿನ್ನದ ಪದಕ, ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಮತ್ತು ಧಾನ್ಯ ವ್ಯಾಪಾರಿ ಸಂಘಗಳ ಒಕ್ಕೂಟದ ದತ್ತಿ ಚಿನ್ನದ ಪದಕ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಸಮಿತಿ ಚಿನ್ನದ ಪದಕ ಸೇರಿದಂತೆ ಒಟ್ಟು ಐದು ಚಿನ್ನದ ಪದಕಗಳಿಗೆ ಭಾಜನರಾದರು.

Translate »