ಕಾಡು ಪಾಲಾದ `ಕೊಡವ ಹೆರಿಟೇಜ್ ಸೆಂಟರ್’
ಕೊಡಗು

ಕಾಡು ಪಾಲಾದ `ಕೊಡವ ಹೆರಿಟೇಜ್ ಸೆಂಟರ್’

March 19, 2019
  • ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಭೇಟಿ
  • 2.53 ಕೋಟಿ ರೂ. ಯೋಜನೆ ಮೂಲೆಗುಂಪು

ಮಡಿಕೇರಿ: ಕೊಡವ ವಿಶಿಷ್ಠ ಸಂಸ್ಕøತಿಯನ್ನು ಬಿಂಬಿಸುವ ‘ಕೊಡವ ಹೆರಿಟೇಜ್ ಸೆಂಟರ್’ ಯೋಜನೆ ನೆನೆ ಗುದಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ.

ವಿಶಿಷ್ಟ ಸಂಸ್ಕøತಿಯನ್ನು ಹೊಂದಿ ರುವ ಕೊಡಗು ಜಿಲ್ಲೆಯಲ್ಲಿ ಅವಿಭಕ್ತ ಕುಟುಂಬ ಪರಂಪರೆಗೆ ಒಳಪಟ್ಟ ಐನ್ ಮನೆ ಪ್ರಮುಖ ಆಕರ್ಷಣೆಯಾಗಿದೆ. ಈ ಐನ್‍ಮನೆಯ ಸ್ವರೂಪವನ್ನು ದೇಶ ವಿದೇಶಗಳಿಂದ ಜಿಲ್ಲೆಗಾಗಮಿಸುವ ಪ್ರವಾಸಿ ಗರಿಗೆ ಪರಿಚÀಯಿಸಬೇಕೆನ್ನುವ ಉದ್ದೇಶ ದಿಂದ 2009-10 ರಲ್ಲಿ “ಕೊಡವ ಹೆರಿಟೇಜ್ ಸೆಂಟರ್” ಸ್ಥಾಪನೆಗೆ ಯೋಜನೆ ರೂಪಿಸಲಾಯಿತು. ಆರಂಭ ದಲ್ಲಿ 1.45 ಕೋಟಿ ವೆಚ್ಚದ ಯೋಜನೆ ತಯಾರಾಯಿತಾದರು ನಂತರ ಈ ಮೊತ್ತ 2.53 ಕೋಟಿ ರೂ.ಗಳಿಗೆ ಏರಿಕೆ ಯಾಗಿದೆ. ಮಡಿಕೇರಿ ನಗರದ ಹೊರವಲಯದ ಕರವಲೆ ಬಾಡಗ ಗ್ರಾಮದ 4 ಏಕರೆ ಪ್ರದೇಶವನ್ನು ಉದ್ದೇಶಿತ ಯೋಜನೆಗಾಗಿ ಗುರುತಿಸಿ, 2011 ಸೆ.21 ರಂದು ಕೊಡಗಿನ ಐನ್ ಮನೆಯ ಸಂಪೂರ್ಣ ಸ್ವರೂಪವನ್ನು ಹೊಂದಿರುವ “ಕೊಡವ ಹೆರಿಟೇಜ್ ಸೆಂಟರ್”ನ ಕಾಮಗಾರಿಗೆ ಚಾಲನೆ ನೀಡ ಲಾಯಿತು. ಕಟ್ಟಡ ಕಾಮಗಾರಿಯನ್ನು 2012 ಸೆ.21ಕ್ಕೆ ಪೂರ್ಣಗೊಳಿಸಿ ಗುತ್ತಿಗೆದಾರ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸ ಬೇಕಿತ್ತು. ಆದರೆ, ಆರಂಭದಲ್ಲಿ ಕಾಮ ಗಾರಿ ಬಿರುಸಿನಿಂದ ಸಾಗಿತ್ತಾದರೂ ಇಂದಿಗೂ ಶೇ.70 ರಷ್ಟು ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ.

ಪ್ರವಾಸೋದ್ಯಮ ಇಲಾಖೆಯ ಮೂಲಕ ನಬಾರ್ಡ್ ಅನುದಾನದಿಂದ ಲೋಕೋಪ ಯೋಗಿ ಇಲಾಖೆ ಈ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಗುತ್ತಿಗೆದಾರ ಒಂದಷ್ಟು ಕಾಮಗಾರಿಯನ್ನು ಪೂರ್ಣ ಗೊಳಿಸಿ ಕೈಚೆಲ್ಲಿ ಕುಳಿತಿದ್ದು, ಮಹತ್ವಾ ಕಾಂಕ್ಷೆಯ ಯೋಜನೆಯೊಂದು ಕಾಡುಪಾಲದ ಸ್ಥಿತಿಯಲ್ಲಿದೆ.

ಈ ಕಟ್ಟಡದಲ್ಲಿ ಐನ್ ಮನೆ, ಐನ್ ಮನೆ ಸಭಾಂಗಣ, ಒಳಾಂಗಣದ ಪುಟ್ಟ ಕೊಳ, ತೆರೆದ ಸಭಾಂಗಣ, ಗ್ರಂಥಾಲಯ, ಹಳೇ ವಸ್ತುಗಳ ಸಂಗ್ರಹಾಲಯ, ಕುಡಿ ಯುವ ನೀರು ಸೇರಿದಂತೆ ಇನ್ನಿತರ ವ್ಯವಸ್ಥೆ ಗಳೊಂದಿಗೆ ವೈಭವಪೂರಿತವಾಗಿ ಗ್ರಾಮೀಣ ಸೊಗಡಿನ “ಕೊಡವ ಹೆರಿಟೇಜ್ ಸೆಂಟರ್” ನಿರ್ಮಾಣವಾಗಬೇಕಾಗಿತ್ತು. ಆದರೆ ಯೋಜನೆಯ ಪ್ರದೇಶದಲ್ಲಿ ಯಾವುದೇ ಪ್ರಗತಿ ಇಂದಿಗೂ ಕಂಡುಬಂದಿಲ್ಲ.

ಕರವಲೆ ಬಾಡಗ ಗ್ರಾಮದ ಹಸಿರ ಪರಿಸರದ ಎತ್ತರದ ಪ್ರದೇಶದಲ್ಲಿ ಆರು ವರ್ಷಗಳ ಹಿಂದೆ ಗೋಡೆ ಹಾಗೂ ಮೆಟ್ಟಿಲಿನ ಕಾಮಗಾರಿ ನಡೆಸಲಾಗಿದ್ದು, ಈ ಕಾಮಗಾರಿ ಕಳಪೆಯಂತೆ ಕಂಡು ಬರುತ್ತಿದೆ. ಯಾವುದೇ ರೂಪುರೇಷೆಗಳಿ ಲ್ಲದ ರೀತಿಯಲ್ಲಿ ಕಟ್ಟಡ ನಿರ್ಮಾಣ ಗೊಂಡಂತಿದ್ದು, ಈ ಬಗ್ಗೆ ಅಧಿಕಾರಿ ಗಳೊಂದಿಗೆ ಜನ ಪ್ರತಿನಿಧಿಗಳು ಕೂಡ ಗಂಭೀರ ಚಿಂತನೆ ಹರಿಸಬೇಕಾಗಿದೆ.

ಈ ಹಿಂದೆ ನಡೆದ ಕಾಮಗಾರಿಯಲ್ಲಿ ಮೆಟ್ಟಿಲುಗಳಿಗೆ ಅಳವಡಿಸಿರುವ ಗ್ರಾನೈಟ್ ಕಲ್ಲುಗಳು ಅಲ್ಲಲ್ಲಿ ಕಿತ್ತು ಹೋಗಿದ್ದು, ಅಪೂರ್ಣಗೊಂಡಿರುವ ಗೋಡೆಗಳು ಕೂಡ ಮಳೆ ಗಾಳಿಗೆ ಶಿಥಿಲಾವಸ್ಥೆಗೆ ತಲುಪಿವೆ. ಕಳೆದ ಆರು ವರ್ಷಗಳಿಂದ ಕಾಮಗಾರಿ ಅಪೂರ್ಣಗೊಂಡಿದೆ ಎನ್ನುವ ಕಾರಣಕ್ಕಾಗಿ ಯೋಜನೆಯನ್ನು ಕೈಬಿಟ್ಟಂತೆ ಕಾಣುತ್ತಿದ್ದು, ಲಕ್ಷಾಂತರ ಹಣ ನಷ್ಟವಾಗಿದೆ. ಮಾ.2 ರಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಅನಿಲ್ ಕುಮಾರ್ ಮಡಿಕೇರಿಗೆ ಆಗಮಿಸಿ ಕಟ್ಟಡದ ಕಾಮಗಾರಿ ಪರಿಶೀಲಿಸಿ ನಾಲ್ಕು ತಿಂಗಳ ಒಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳು ವಂತೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಪ್ರಯೋಜನ ಶೂನ್ಯ ಎಂಬಂತಾಗಿದೆ. ಮಡಿಕೆÉೀರಿಯಿಂದ ನಾಲ್ಕು ಕಿ.ಮೀ. ದೂರದಲ್ಲಿ ಕೊಡವ ಹೆರಿಟೇಜ್ ಸೆಂಟರ್ ಎನ್ನುವ ಯೋಜನೆ ಆಮೆ ನಡಿಗೆಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಇದು ಪ್ರವಾಸಿ ಗರನ್ನು ಯಾವಾಗ ಆಕರ್ಷಿಸಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಪ್ರಸಾದ್ ಸಂಪಿಗೆಕಟ್ಟೆ

Translate »