ದೇಶದ ಪ್ರಧಾನಿಯಾಗುವ  ಸಾಮರ್ಥ್ಯ ರಾಹುಲ್ ಗಾಂಧಿಗಿಲ್ಲ
ಮೈಸೂರು

ದೇಶದ ಪ್ರಧಾನಿಯಾಗುವ ಸಾಮರ್ಥ್ಯ ರಾಹುಲ್ ಗಾಂಧಿಗಿಲ್ಲ

March 19, 2019

ಬೆಂಗಳೂರು: ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಸ್ವ ಪಕ್ಷೀಯರೇ ಅಸ ಮಾಧಾನ ಹೊರ ಹಾಕಿದ್ದಾರೆ. ಭಾರತದ ಪ್ರಧಾನಿಯಾಗುವ ಮಟ್ಟಿಗೆ ರಾಹುಲ್ ಗಾಂಧಿ ಸಿದ್ಧವಾಗಿಲ್ಲ ಎಂದು ಮಾಜಿ ಸಚಿವ ಡಾ.ಮಾಲಕರೆಡ್ಡಿ ತಿಳಿಸಿದ್ದಾರೆ.

ಪ್ರಧಾನಿಯಾದವರಿಗೆ ದೇಶದ ರಕ್ಷಣೆ ಮುಖ್ಯವಾಗುತ್ತೆ. ಆದ್ರೆ ರಾಹುಲ್ ಗಾಂಧಿ ಯವರಿಗೆ ದೇಶದ ಪ್ರಧಾನಿ ಹುದ್ದೆ ನಿರ್ವ ಹಿಸಲು ಸಾಧ್ಯವಾಗಲ್ಲ. ದೇಶದ ಸದ್ಯದ ಪರಿಸ್ಥಿತಿಗೆ ಮೋದಿಯವರೇ ಸರಿಯಾದ ಅಭ್ಯರ್ಥಿ, ಅವರು ದೇಶದ ರಕ್ಷಣೆ ವಿಚಾರ ದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ನನ್ನ ಬೆಂಬಲ ಮೋದಿಗಿದೆ ಅಂತಾ ಡಾ.ಮಾಲಕರೆಡ್ಡಿ ತಿಳಿಸಿದ್ದಾರೆ.

ಸೋನಿಯಾಗಾಂಧಿಗಿರುವ ರಾಜ ಕೀಯ ಅನುಭವ, ಜಾಣ್ಮೆ ರಾಹುಲ್ ಗಾಂಧಿಗಿಲ್ಲ. ಇನ್ನೂ ಅವರಿಗೆ ರಾಜಕೀಯ ದಲ್ಲಿ ಅನುಭವ ಸಾಲದು ಅಂತಾ ಹೇಳಿದ್ರು. ಇದೇ ವೇಳೆ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಲಕರೆಡ್ಡಿ, ತಾವೆಂದು ಕಾಂಗ್ರೆಸ್ ತೊರೆಯಲ್ಲ ಅಂತಾ ಸ್ಪಷ್ಟ ಪಡಿಸಿದ್ದಾರೆ. ಅನಾರೋಗ್ಯ ಕಾರಣ ದಿಂದಾಗಿ ಚುನಾವಣೆಯಿಂದ ದೂರವಿ ದ್ದೇನೆ ಅಂದ್ರು. ಅಲ್ಲದೆ ಖರ್ಗೆ ನಾಯಕತ್ವ ವನ್ನೂ ಒಪ್ಪುವುದಿಲ್ಲ ಅಂತಾ ಹೇಳಿರುವ ಮಾಲಕರೆಡ್ಡಿ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.್ಲ

Translate »