ಮೈಸೂರು: ರಾಷ್ಟ್ರಕ್ರಾಂತಿ ಫೌಂಡೇಷನ್ ಸಂಸ್ಥೆಗೆ ನಾಡನಹಳ್ಳಿ ಸರ್ವೆ ನಂಬರ್ 131ರಲ್ಲಿ 2 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಆಗ್ರಹಿಸಿ ರಾಷ್ಟ್ರಕ್ರಾಂತಿ ಸೇವಾ ದಳದ ಕಾರ್ಯಕರ್ತರು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈಗಾಗಲೇ ಸದರಿ ಜಮೀನಿನಲ್ಲಿ ಫೌಂಡೇ ಷನ್ ಕಚೇರಿ ಸ್ಥಾಪಿಸಲಾಗಿದೆ. ಈ ವಿಳಾಸದಲ್ಲಿ ಆಧಾರ್ ಸಂಖ್ಯೆ ಹೊಂದಿ ರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆ ಬಗ್ಗೆ 2013-14ರಿಂದ ಈವರೆಗೆ ಸರ್ಕಾರ ದೊಂದಿಗೆ ಪತ್ರ ವ್ಯವಹಾರ ಮಾಡಿರುವ ಬಗ್ಗೆ ದಾಖಲೆಗಳಿರುವುದರಿಂದ ಜಮೀನನ್ನು ರಾಷ್ಟ್ರಕ್ರಾಂತಿ…
ನಾಳೆ ವಿದ್ಯುತ್ ನಿಲುಗಡೆ
February 16, 2019ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮದ ಎನ್.ಆರ್ ಮೊಹಲ್ಲಾ ವಿಭಾಗದ ವತಿ ಯಿಂದ 66/11 ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರ ದಿಂದ ಹೊರಹೊಮ್ಮುವ 11 ಕೆ.ವಿ. ಇಂಡಸ್ಟ್ರಿಯಲ್ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಫೆ.17ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಇಂಡಸ್ಟ್ರಿಯಲ್ ಸಬರ್ಬ್, ವಿಶ್ವೇಶ್ವರ ನಗರ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಎನ್.ಆರ್ ಮೊಹಲ್ಲಾ ವಿಭಾಗದ ವತಿಯಿಂದ 220/66/11 ಏಗಿ ಕಡಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ…
ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ
February 16, 2019ಡಿಸಿ, ಸೇನಾ ಮುಖ್ಯಸ್ಥರಿಂದ ಅಂತಿಮ ಸಿದ್ಧತೆ ಪರಿಶೀಲನೆ ತಿ.ನರಸೀಪುರ: ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ ಆರಂಭ ಗೊಂಡಿದ್ದು, ಅಂತಿಮ ಗಳಿಗೆ ಸಿದ್ಧತೆಗಳು ಮುಕ್ತಾಯ ಹಂತದಲ್ಲಿವೆ. ಈಗಾಗಲೇ ಭಾರತೀಯ ಸೇನಾ ಯೋಧರು ಭಕ್ತಾದಿಗಳ ಅನುಕೂಲಕ್ಕಾಗಿ ಕಪಿಲಾ ನದಿಗೆ ಅಡ್ಡಲಾಗಿ ಆಕರ್ಷಣೀಯವಾದ ತೇಲುವ ಸೇತುವೆ ನಿರ್ಮಿಸಿದ್ದು, ಸೇನೆ ಮೇಜರ್ ಜನರಲ್ ಕೆ.ಜೆ.ಬಾಬು ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇಂದು ಸೇತುವೆ ಪರಿಶೀಲಿಸಿದರು. ಸದ್ಯ ತ್ರಿವೇಣಿ ಸಂಗಮದ ಮಧ್ಯ ಭಾಗ ದಲ್ಲಿ ವೃತ್ತಾಕಾರವಾಗಿ ನಿರ್ಮಾಣವಾಗುತ್ತಿ ರುವ ಧಾರ್ಮಿಕ ವೇದಿಕೆಯ ಕಾಮಗಾರಿಗೆ…
ರಾಸಲೀಲೆಗೆ ಪೀಡಿಸಿದ ವ್ಯಕ್ತಿಯ ಬರ್ಬರ ಹತ್ಯೆ
February 16, 2019ತಂದೆ, ಮಗಳು ಸೇರಿ ಮೂವರ ಬಂಧನ ಶನಿದೇವರೇ ಹತ್ಯೆಗೆ ಸೂಚನೆ ನೀಡಿದ್ದನಂತೆ…! ಸರಗೂರು: ನಾಲ್ಕು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಚಂಗೌಡನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದು, ಕೇವಲ ನಾಲ್ಕು ದಿನಗಳಲ್ಲೇ ಪ್ರಕರಣವನ್ನು ಪತ್ತೆ ಹಚ್ಚಿ ತಂದೆ, ಮಗಳು ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಹೆಚ್.ಡಿ.ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯೋರ್ವಳನ್ನು ರಾಸಲೀಲೆಗಾಗಿ ಪೀಡಿಸಿದ ಕಾರಣ ಆಕೆ ತನ್ನ ತಂದೆ ಮತ್ತು ಶನೇಶ್ವರ ದೇವಸ್ಥಾನದ ಪೂಜಾರಿ ಜೊತೆ ಸೇರಿ ಕಾಮುಕ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ಬಯಲಾಗಿದೆ. ಚಾಮರಾಜ ನಗರ ತಾಲೂಕು ಸಾಗಡೆ…
ಕಾರು ಗ್ಲಾಸ್ ಒಡೆದು ಕಳವು ಮಾಡುತ್ತಿದ್ದ ಮೂವರು ಅಂತರರಾಜ್ಯ ಖದೀಮರ ಬಂಧನ
February 16, 2019ಮೈಸೂರು,: ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಕಾರಿನ ಗ್ಲಾಸ್ ಒಡೆದು ಕಳವು ಮಾಡುತ್ತಿದ್ದ ತಮಿಳುನಾಡಿನ ರಾಮ್‍ಜೀನಗರ ಗ್ಯಾಂಗ್‍ನ ಮೂವರು ಅಂತರ ರಾಜ್ಯ ಕಳ್ಳರನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಇವರಿಂದ 4,180 ರೂ. ನಗದು ಹಾಗೂ 6 ಲ್ಯಾಪ್‍ಟಾಪ್ ಬ್ಯಾಗ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಶ್ರೀರಂಗಂ ತಾಲೂಕಿನ ಗಾಂಧಿನಗರದ ನಿವಾಸಿಗಳಾದ ಭಾರತೀರಾಜನ್(38), ಜ್ಞಾನಪ್ರಕಾಶ(35) ಅವರನ್ನು ಫೆ.7 ರಂದು ಟೌನ್‍ಹಾಲ್ ಬಳಿ ಕಾರ್ಯಾಚರಣೆ ನಡೆಸಿ, ಬಂಧಿಸಲಾಗಿತ್ತು. ಇವರ ಸುಳಿವಿನ ಮೇರೆಗೆ ಮತ್ತೋರ್ವ ಆರೋಪಿ ಟೈಲರ್ ಪ್ರಕಾಶ್ ಎಂಬಾತನ್ನು ಬಂಧಿಸಿ, ತೀವ್ರ…
ಜಮ್ಮುವಿನಲ್ಲಿ ಉಗ್ರರ ದಾಳಿಗೆ ಮೈಸೂರಲ್ಲಿ ತೀವ್ರ ಆಕ್ರೋಶ
February 16, 2019ವಕೀಲರು, ಹೋಟೆಲ್ ಮಾಲೀಕರು, ಸಂಘ-ಸಂಸ್ಥೆಗಳಿಂದ ಪ್ರತಿಭಟನೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮೈಸೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿ 44 ಮಂದಿ ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಉಗ್ರರ ಕೃತ್ಯಕ್ಕೆ ಮೈಸೂರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ವಕೀಲರ ಸಂಘ, ವಿಶ್ವ ಹಿಂದೂ ಪರಿಷತ್, ಮೈಸೂರು ಕನ್ನಡ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿ ಕಾರಿಗಳು ಇಂದು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದರಲ್ಲದೆ, ದಾಳಿಯಲ್ಲಿ ವೀರ ಮರಣ ಹೊಂದಿದ ಭಾರತೀಯ ಯೋಧರಿಗೆ…
ಹುತಾತ್ಮರಾದ ಭಾರತದ 44 ವೀರ ಯೋಧರು
February 15, 2019ಶ್ರೀನಗರ: ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯಲ್ಲಿ 44 ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದಾರೆ. 30ಕ್ಕೂ ಹೆಚ್ಚು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ 18 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಇಂದು ಬೆಳಿಗ್ಗೆ 3.30ರ ಸುಮಾರಿನಲ್ಲಿ ರಜೆ ಮುಗಿಸಿ ಕೊಂಡು ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ ಕೇವಲ 20 ಕಿ.ಮೀ. ಅಂತರವಿದ್ದಾಗ ಹೆದ್ದಾರಿ ಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ 350 ಕೆ.ಜಿ. ಸುಧಾ ರಿತ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರಿನಲ್ಲಿ…
ಆತಿಥೇಯ ಭಾರತಕ್ಕೆ 252 ರನ್‍ಗಳ ಮುನ್ನಡೆ
February 15, 2019ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ(ಗ್ಲೇಡ್ಸ್) ನಡೆಯುತ್ತಿ ರುವ ಭಾರತ `ಎ’ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡದ ನಡುವಿನ ಮೊದಲ ಟೆಸ್ಟ್‍ನಲ್ಲಿ ಆತಿಥೇಯ ಭಾರತ ಎರಡನೇ ದಿನದಾಟದಲ್ಲಿ ಪಾರುಪತ್ಯ ಮೆರೆದು, ಎದುರಾಳಿಯನ್ನು 140 ರನ್‍ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ 252ರನ್ ಮುನ್ನಡೆ ಸಾಧಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದು ಕೊಂಡು 282 ರನ್ ಗಳಿಸಿದ್ದ ಭಾರತ ಗುರುವಾರ ಆಟ ಮುಂದುವರೆಸಿ 110 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು 114.4 ಓವರ್‍ಗಳಲ್ಲಿ…
ಹಳೆ ಟ್ಯೂಬ್‍ಲೈಟ್ ಚೋಕ್(ಹೋಲ್ಡರ್) ಹಿಡಿದು ಬಿಜೆಪಿ ಸದಸ್ಯರಿಂದ ಪ್ರತಿಭಟನೆ
February 15, 2019ಮೈಸೂರು: ಮೈಸೂರು ನಗರದಲ್ಲಿ ಕಳೆದ ಒಂದೂವರೆ ವರ್ಷದಿಂದ ಬೀದಿ ದೀಪ ಅಳವಡಿಸದೆ ಪಾಲಿಕೆ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಪಾಲಿಕೆ ಕಚೇರಿ ಮುಂದೆ ಬಿಜೆಪಿ ಪಾಲಿಕೆ ಸದ ಸ್ಯರು ಹಳೆ ಟ್ಯೂಬ್ ಲೈಟ್‍ನ ಚೋಕ್(ಹೋಲ್ಡರ್) ಹಿಡಿದು ಪ್ರತಿಭಟನೆ ನಡೆಸಿದರು. ಸಾಂಸ್ಕೃತಿಕ ನಗರಿ ಮೈಸೂರಿನ 65 ವಾರ್ಡ್‍ಗಳಲ್ಲಿಯೂ ಬಹುತೇಕ ಕಡೆ ಬೀದಿ ದೀಪವಿಲ್ಲದೆ ಸಾರ್ವಜನಿಕರು ಪರ ದಾಡುವಂತಾಗಿದೆ. ವಿದ್ಯುತ್ ಮಿತ ಬಳಕೆ ಹಿನ್ನೆಲೆಯಲ್ಲಿ ಎಲ್ಲೆಡೆ ಎಇಡಿ ಬಲ್ಬ್ ಅಳ ವಡಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಇದು ಒಳ್ಳೆ ಬೆಳವಣಿಗೆ. ಆದರೆ…
ಮೈಸೂರು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಆಗ್ರಹಿಸಿ ಪ್ರಗತಿಪರರ ಧರಣಿ
February 15, 2019ಮೈಸೂರು: ಪಾರಂ ಪರಿಕ ತಜ್ಞರ ಅಭಿಪ್ರಾಯ ಪಡೆದು ಮೈಸೂ ರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂ ರಿನಲ್ಲಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಕಾರ್ಯಕರ್ತರು ಧರಣಿ ನಡೆಸಿದರು. ಮೈಸೂರಿನ ನ್ಯಾಯಾಲಯದ ಮುಂಭಾಗವಿರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಧರಣಿ ಆರಂಭಿಸಿದ ಪ್ರಗತಿ ಪರ ಚಿಂತಕರ ವೇದಿಕೆ ಕಾರ್ಯಕರ್ತರು, ಮೈಸೂರಿನ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‍ಡೌನ್, ದೇವರಾಜ ಮಾರುಕಟ್ಟೆ ಕಟ್ಟಡಗಳ ಸಂರಕ್ಷಣೆಯಲ್ಲಿ ಸರ್ಕಾರವೇ ನೇಮಿಸಿರುವ `ಪಾರಂಪರಿಕ ತಜ್ಞರ ಸಮಿತಿ’ ಅಭಿಪ್ರಾಯವನ್ನು ನಗರ ಪಾಲಿಕೆ ಪಡೆ…