Tag: Nanjangud

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿ
ಮೈಸೂರು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿ

September 11, 2018

ನಂಜನಗೂಡು:  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ನಡೆದ ಬಂದ್ ಯಶಸ್ವಿ ಯಾಯಿತು. ಕಾಂಗ್ರೇಸ್ ಪಕ್ಷದ ಮುಖಂಡರು ಊಟಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ನಗರದ ಪ್ರಮುಖ ಬೀದಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ದರು. ಕಾರ್ಯಕರ್ತರುಗಳು ಪೆಟ್ರೋಲ್ ಬೆಲೆ ಇಳಿಸುವ ಬಿತ್ತಿ ಪತ್ರವನ್ನು ಪ್ರದರ್ಶಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ…

ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಉದ್ಯೋಗ ಮೇಳ
ಮೈಸೂರು

ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಉದ್ಯೋಗ ಮೇಳ

September 9, 2018

ನಂಜನಗೂಡು: ಅಕ್ಟೋಬರ್ 6ರಂದು ಗಾಂಧಿ ಜಯಂತಿ ಅಂಗವಾಗಿ ನಗರದ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳ ಲಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಿಳಿಸಿದರು. ಅವರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅಂದು ಬೆಳಿಗ್ಗೆ 11 ಗಂಟೆಯಿಂದ ಉದ್ಯೋಗ ಮೇಳ ಪ್ರಾರಂಭವಾಗಲಿದ್ದು ಉದ್ಘಾಟನೆ ಯನ್ನು ಸಂಸದ ಆರ್.ಧ್ರುವನಾರಾಯಣ್ ನೆರವೇರಿಸುವರು ಮುಖ್ಯ ಅಥಿತಿಗಳಾಗಿ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ವಿವಿಧ ಜನಪ್ರತಿ ನಿಧಿಗಳು ಭಾಗವಹಿಸುವರು ಎಂದರು….

ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ
ಮೈಸೂರು

ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ

September 7, 2018

ನಂಜನಗೂಡು: ನಗರದ ಎಂಜಿಎಸ್ ರಸ್ತೆಯ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಅಂದಾಜು 31.43 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಾಸಕ ಬಿ.ಹರ್ಷವರ್ಧನ್ ಗುರುವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ತಾಲೂಕಿನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಸೇರಿದಂತೆ ಹಲವಾರು ಸೌಕರ್ಯಗಳನ್ನು ಒಳಗೊಂಡ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ ಎಂದರು. ತಾಲೂಕಿನಾದ್ಯಂತ ನಾಟಿ ಕಾರ್ಯ ಪ್ರಗತಿಯಲ್ಲಿದ್ದು ರೈತರ ಜಾನುವಾರುಗಳು ಅನಾರೋಗ್ಯಕ್ಕೀಡಾದಲ್ಲಿ ಪಶು ವೈದ್ಯರು, ಆಸ್ಪತ್ರೆಗಳಲ್ಲಿ ಕಾಲ ಕಳೆಯದೆ ಗ್ರಾಮ ಪ್ರವಾಸ ಮಾಡಿ ಜಾನುವಾರುಗಳಿಗೆ…

ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಅಸಮಾಧಾನ
ಮೈಸೂರು

ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಅಸಮಾಧಾನ

September 5, 2018

ನಂಜನಗೂಡು ತಾ.ಪಂ ಸಾಮಾನ್ಯ ಸಭೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಿವಣ್ಣ ಪುನರಾಯ್ಕೆ ನಂಜನಗೂಡು: ತಾಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಅವರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಹೆಚ್.ಎಸ್.ಮೂಗಶೆಟ್ಟಿ ಮತ್ತು ಬಸವರಾಜು ಮಾತನಾಡಿ ತಾಲೂಕಿನಲ್ಲಿ ಅಕ್ರಮವಾಗಿ ಮಧ್ಯೆ ಮಾರಾಟವಾಗುತ್ತಿದ್ದರೂ ಅಬಕಾರಿ ಅಧಿಕಾರಿಗಳು ಪರೋಕ್ಷವಾಗಿ ಮಾರುವವರಿಗೆ ಬೆಂಬಲ ನೀಡುತ್ತಿದ್ದಾರೆ. ಗ್ರಾಮಸ್ಥರು…

ನೀಲಕಂಠನಗರ ಬಡಾವಣೆಗೆ ಮೂಲಭೂತ ಸೌಕರ್ಯಕ್ಕೆ ಕ್ರಮ
ಮೈಸೂರು

ನೀಲಕಂಠನಗರ ಬಡಾವಣೆಗೆ ಮೂಲಭೂತ ಸೌಕರ್ಯಕ್ಕೆ ಕ್ರಮ

August 28, 2018

ನಂಜನಗೂಡು:  ನಗರದ 19ನೇ ವಾರ್ಡ್ ನೀಲಕಂಠನಗರ ಬಡಾವಣೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ದಿ ಪಡಿಸಲು ಕ್ರಮ ವಹಿಸುವುದಾಗಿ ಶಾಸಕ ಬಿ. ಹರ್ಷವರ್ಧನ್ ತಿಳಿಸಿದ್ದಾರೆ. ಸೋಮವಾರ ನೀಲಕಂಠನಗರ ಬಡಾವಣೆಗೆ ಭೇಟಿ ನೀಡಿದಾಗ ನಾಗರಿಕರು ಬಡಾವಣೆಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲಾ, ಈ ಭಾಗದ ಸದಸ್ಯರು ಸರಿಯಾಗಿ ಕೆಲಸ ಮಾಡಿಲ್ಲ ಕಳೆದ ಹಲವು ವರ್ಷಗಳಿಂದ ಈ ಬಡಾವಣೆ ನಿರೀಕ್ಷೆಯಷ್ಟು ಅಭಿವೃದ್ಧಿ ಯಾಗಿಲ್ಲ ಎಂದು ದೂರಿದರು. ಶಾಸಕರು ಸಂಬಂಧಪಟ್ಟ ಅಧಿಕಾರಿ ಜೊತೆ ದೊರವಾಣಿ ಯಲ್ಲಿ ಚರ್ಚಿಸಿ ಬಡಾವಣೆಯ…

ವಿಶ್ವಭ್ರಾತೃತ್ವ, ಸಮಾನತೆಯ ಬಿಂಬ ವಚನ ಸಾಹಿತ್ಯ
ಮೈಸೂರು

ವಿಶ್ವಭ್ರಾತೃತ್ವ, ಸಮಾನತೆಯ ಬಿಂಬ ವಚನ ಸಾಹಿತ್ಯ

August 25, 2018

ನಂಜನಗೂಡು:  ವಚನ ಸಾಹಿತ್ಯ ವಿಶ್ವಭ್ರಾತೃತ್ವ ಮತ್ತು ಸಮಾನತೆ ಯನ್ನು ಬಿಂಬಿಸುತ್ತದೆ ಎಂದು ಜೆಎಸ್‍ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಸೋಮ ಸುಂದರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ನಂಜನಗೂಡಿನ ಜೆಎಸ್‍ಎಸ್ ಪ್ರೌಢಶಾಲೆ ಯಲ್ಲಿ ಆಯೋಜಿಸಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶರ ಣರು ಎಲ್ಲಾ ಜನರನ್ನು ಒಂದೆಡೆ ಸೇರಿಸಿ ಅವರಲ್ಲಿದ್ದ ಪ್ರತಿಭೆಯನ್ನು ಅನುಭವ ಮಂಟಪದ ಮುಖಾಂತರ ಹೊರ ತಂದರು. ಸಮ ಹಾಗೂ ಶರಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶರಣರ ವಚನಗಳ ಆಶಯ ಎಲ್ಲರಿಗೂ ಅರ್ಥ…

ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಕೊಡುಗು ಜಿಲ್ಲಾ ಸಂತ್ರಸ್ತರಿಗೆ  ಪಾದಯಾತ್ರೆ ಮೂಲಕ ನಿಧಿ ಸಂಗ್ರಹಣೆ
ಮೈಸೂರು

ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಕೊಡುಗು ಜಿಲ್ಲಾ ಸಂತ್ರಸ್ತರಿಗೆ  ಪಾದಯಾತ್ರೆ ಮೂಲಕ ನಿಧಿ ಸಂಗ್ರಹಣೆ

August 23, 2018

ನಂಜನಗೂಡು: ತಾಲೂಕು ಬಿ.ಜೆ.ಪಿ ವತಿಯಿಂದ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ಕೊಡಗಿನ ನೆರೆಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ನಗರದ ಪ್ರಮುಖ ಬಡಾ ವಣೆಗಳಲ್ಲಿ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಿದರು. ಅಂಗಡಿಗಳು, ಹೊಟೆಲ್, ಚಿತ್ರಮಂದಿರಗಳಲ್ಲಿ ನೆರವು ಸಂಗ್ರಹಿಸ ಲಾಯಿತು. ನಂತರ ಶಾಸಕರು ಮಾತನಾಡಿ, ಕೊಡುಗು ಜಿಲ್ಲೆಯಲ್ಲಿ ಮಳೆಯಿಂದ ಆಸ್ತಿ-ಪಾಸ್ತಿ, ಪ್ರಾಣಹಾನಿಯಾಗಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯಾದ್ಯಂತ ನೆರವು ಬರುತ್ತಿದ್ದು, ನಂಜನಗೂಡು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಾಳೆಯೂ ಪಾದಯಾತ್ರೆಯೊಂದಿಗೆ ನಿಧಿ ಸಂಗ್ರಹಿಸ ಲಾಗುವುದು. ನಮ್ಮ…

ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
ಮೈಸೂರು

ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

August 19, 2018

ನಂಜನಗೂಡು: ಕಪಿಲಾ ನದಿಯಿಂದ ಜಲಾವೃತಗೊಂಡಿರುವ ಪ್ರವಾಹ ಪೀಡಿತ ಪ್ರದೇಶ ಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಮತ್ತು ಸಂಸದ ಆರ್.ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆಯಿಂದ ಜಲಾವೃತವಾಗಿರುವ ತೋಪಿನ ಬೀದಿ, ಹೆಜ್ಜಿಗೆ ಸೇತುವೆ, ಮಲ್ಲನಮೂಲೆ ಮಠ, ತಾಲೂಕಿನ ಬೊಕ್ಕಹಳ್ಳಿ, ಇಮ್ಮಾವು, ದೇವಾಲಯದಲ್ಲಿ ತೆರೆದಿರುವ ಗಿರಿಜಾ ಕಲ್ಯಾಣದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟವನ್ನು ಆಲಿಸಿ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದ ರಾಮಯ್ಯ ಅವರು ನಾನು…

ಮತ್ತೆ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ: ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಸಾಧ್ಯತೆ
ಮೈಸೂರು

ಮತ್ತೆ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ: ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಸಾಧ್ಯತೆ

August 17, 2018

ನಂಜನಗೂಡು: ವೈನಾಡು ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಕಬಿನಿ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಂದು ಕಬಿನಿ ಜಲಾಶಯದಿಂದ 55.000 ಕ್ಯುಸೆಕ್ಸ್ ನೀರನ್ನು ಹೊರಬಿಟ್ಟಿರುವ ಪರಿಣಾಮ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇತ್ತೀಚೆಗೆ ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿ ಮೈಸೂರು -ನಂಜನ ಗೂಡು ರಸ್ತೆಗೆ ನೀರು ಹರಿದ ಪರಿಣಾಮ ಮೂರು ದಿನಗಳ…

ಮಕ್ಕಳ ಮನೆಯಲ್ಲಿ ವಾರ್ಷಿಕೋತ್ಸವ, ವಿಶ್ವ ಪರಿಸರ ದಿನ
ಮೈಸೂರು

ಮಕ್ಕಳ ಮನೆಯಲ್ಲಿ ವಾರ್ಷಿಕೋತ್ಸವ, ವಿಶ್ವ ಪರಿಸರ ದಿನ

August 14, 2018

ನಂಜನಗೂಡು: ಅಗಲಿದ ಪುತ್ರ ಶೋಕ ಮರೆಯಲು ರೇಣುಕಾ ಸೋಮ ಶೇಖರ್‍ರವರು ಮಗನ ನೆನಪಿನಲ್ಲಿ ಆರಂಭಿಸಿದ ಅನುರಾಗ್ ಮಕ್ಕಳ ಮನೆ ಪ್ರಥಮ ವಾರ್ಷಿ ಕೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಯನ್ನು ನಂಜುಂಡೇಶ್ವರ ಟೌನ್ ಶಿಪ್ ದೇವಿರ ಮ್ಮನಹಳ್ಳಿ ಬಡಾವಣೆಯಲ್ಲಿ ಆಚರಿಸಲಾಯಿತು. ಸಮಾರಂಭವನ್ನು ಉದ್ಘಾಟಿಸಿದ ಚಿಕ್ಕ ಮಂಗಳೂರು ಜಿಲ್ಲೆಯ ಎನ್.ಆರ್.ಪುರದ ಮಠದ ಬಸವಯೋಗಿ ಪ್ರಭುಗಳು ಮಾತ ನಾಡಿ ಸಾಹಿತ್ಯ, ಪರಿಸರ, ಆರೋಗ್ಯ, ಕ್ರೀಡೆ ಮತ್ತು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಬೇಕಾ ಗುವಂತಹ ಉತ್ಸವಗಳು ಇಲ್ಲಿ ನೆರವೇರಿದ್ದು, ಕಾಯಕ ದಾಸೋಹದ ವ್ಯವಸ್ಥಿತವಾದ…

1 4 5 6 7 8 10
Translate »