Tag: Nanjangud

ಶೀಘ್ರದಲ್ಲೇ ತಗಡೂರು, ಹುಲ್ಲಹಳ್ಳಿಯಲ್ಲೂ ಕೋವಿಡ್ ಆಸ್ಪತ್ರೆ
ಮೈಸೂರು

ಶೀಘ್ರದಲ್ಲೇ ತಗಡೂರು, ಹುಲ್ಲಹಳ್ಳಿಯಲ್ಲೂ ಕೋವಿಡ್ ಆಸ್ಪತ್ರೆ

May 1, 2021

ನಂಜನಗೂಡು, ಏ. 30 (ರವಿ)- ತಾಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಆಕ್ಸಿಜನ್ ವ್ಯವಸ್ಥೆಯುಳ್ಳ ಹಾಸಿಗೆಗಳಿವೆ. ಮುಂದಿನ 2 ದಿನಗಳಲ್ಲಿ ತಗಡೂರು ಮತ್ತು ಹುಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ 100 ಹಾಸಿಗೆಗಳನ್ನು ಕಲ್ಪಿಸಲಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಕೊರೊನಾ ವೈರಾಣುವನ್ನು ಸಮರ್ಪಕವಾಗಿ ಕಟ್ಟಿ ಹಾಕಲು ತಾಲೂಕು ಆಡಳಿತ ಸನ್ನದ್ಧ ವಾಗಿದೆ ಎಂದು ತಹಸೀಲ್ದಾರ್ ಮೋಹನ್ ಕುಮಾರಿ ತಿಳಿಸಿದರು. ತಾಲೂಕು ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಯಲ್ಲಿ 35 ಹಾಸಿಗೆ ಸೌಲಭ್ಯವಿದ್ದು, 5 ವೆಂಟಿಲೇಟರ್ ಸೌಲಭ್ಯ ವಿದೆ….

ದೊಡ್ಡ ಜಾತ್ರೆ ಅನುಮತಿಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು

ದೊಡ್ಡ ಜಾತ್ರೆ ಅನುಮತಿಗೆ ಒತ್ತಾಯಿಸಿ ಪ್ರತಿಭಟನೆ

March 18, 2021

ನಂಜನಗೂಡು, ಮಾ.17-ನಗರದ ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವ ಪೂರ್ವನಿಗದಿಯಂತೆ ಮಾ.26ರಂದು ನಡೆಸಲು ಜಿಲ್ಲಾಡಳಿತ ಅನುಮತಿಸುವಂತೆ ಒತ್ತಾಯಿಸಿ ಬುಧವಾರ ನಗರದ ಶ್ರೀಕಂಠೇಶ್ವರ ಭಕ್ತ ಮಂಡಳಿ ಸದಸ್ಯರು ದೇವಾಲಯ ಆವರಣದಲ್ಲಿ ಪ್ರತಿಭಟಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಪುರಸಭೆ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಮಲೆಮಹದೇಶ್ವರಬೆಟ್ಟ, ಶಿರಸಿ ಮಾರಿಕಾಂಬೆ ದೇವಾಲಯಗಳಲ್ಲಿ ಸಂಪ್ರದಾಯದಂತೆ ಜಾತ್ರೆ ನಡೆಸಲು ಅನುಮತಿ ನೀಡಲಾಗಿದೆ. ನಂಜನಗೂಡಿನಲ್ಲಿ ಮಾತ್ರ ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡ ಜಾತ್ರೆ ಸತತ ಎರಡು ವರ್ಷದಿಂದ ರದ್ದಾಗುತ್ತಿದೆ. ಸರ್ಕಾರದ ಕೋವಿಡ್ ಮಾರ್ಗ ಸೂಚಿಯಂತೆಯೇ ನಿಯಮ ಪಾಲಿಸಿ ಜಾತ್ರೆ ನಡೆಸುತ್ತೇವೆ. ಹಾಗಾಗಿ…

ಸಿಂಧುವಳ್ಳಿಪುರದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಶಾಸಕ ಬಿ.ಹರ್ಷವರ್ಧನ್ ಮನವಿ
ಮೈಸೂರು ಗ್ರಾಮಾಂತರ

ಸಿಂಧುವಳ್ಳಿಪುರದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಶಾಸಕ ಬಿ.ಹರ್ಷವರ್ಧನ್ ಮನವಿ

June 3, 2020

ನಂಜನಗೂಡು, ಮೇ8- ತಾಲೂಕಿನ ಸಿಂಧುವಳ್ಳಿಪುರ ಸಮೀಪ 465 ಎಕರೆ ಭೂಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಸರ್ಕಾರದಿಂದ ಈ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಉದ್ದೇಶಿತ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣ ಮಾಡುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‍ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಬಿ.ಹರ್ಷ ವರ್ಧನ್ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಸಿಂಧುವಳ್ಳಿಪುರದಲ್ಲಿ ಖಾಸಗೀ ಸಂಸ್ಥೆಯೊಂದಕ್ಕೆ ಕೈಗಾರಿಕೆ ಆರಂಭಿಸುವ ಸಲುವಾಗಿ ಕೆಲ ವರ್ಷಗಳ…

ಶ್ರೀಕಂಠೇಶ್ವರಸ್ವಾಮಿ ದೇಗುಲ ಸಿಬ್ಬಂದಿಗೆ ಸುತ್ತೂರು ಸಂಸ್ಥಾನದಿಂದ ದಿನಸಿ ಕಿಟ್ ವಿತರಣೆ
ಮೈಸೂರು, ಮೈಸೂರು ಗ್ರಾಮಾಂತರ

ಶ್ರೀಕಂಠೇಶ್ವರಸ್ವಾಮಿ ದೇಗುಲ ಸಿಬ್ಬಂದಿಗೆ ಸುತ್ತೂರು ಸಂಸ್ಥಾನದಿಂದ ದಿನಸಿ ಕಿಟ್ ವಿತರಣೆ

May 27, 2020

ನಂಜನಗೂಡು, ಮೇ 26(ರವಿ)-ಶ್ರೀಕ್ಷೇತ್ರ ಸುತ್ತೂರು ಮಹಾಸಂಸ್ಥಾನದಿಂದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಪುರೋಹಿತರು, ನೌಕರರು ಹಾಗೂ ದೇವಾಲಯದ ದಾಸೋಹ ಭವನದ ಹೊರಗುತ್ತಿಗೆ ನೌಕರರು ಸೇರಿ 245 ಕುಟುಂಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ಜೆಎಸ್‍ಎಸ್ ವಿದ್ಯಾಪೀಠ ಕಾರ್ಯದರ್ಶಿ ಮಂಜುನಾಥ್ ಕಿಟ್ ವಿತರಿಸಿ ಮಾತನಾಡಿ, ನಂಜನಗೂಡಿಗೆ ಆರಂಭಿಕ ದಿನಗಳಲ್ಲಿ ಆವರಿಸಿದ ಸಂಕಷ್ಟ ಸದ್ಯಕ್ಕೆ ದೂರವಾಗಿದೆ. ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯಿಂದ ಸಾಕಷ್ಟು ಜನ ಸೋಂಕಿಗೆ ತುತ್ತಾದರು. ಸದ್ಯ ಯಾವುದೇ ಸಾವು ಸಂಭವಿಸಲ್ಲಿಲ್ಲ. ಅದು ಕ್ಷೇತ್ರಾಧಿಪತಿ ಶ್ರೀಕಂಠೇಶ್ವರನ ಕೃಪೆ ಎಂದು ಹರ್ಷ ವ್ಯಕ್ತಪಡಿಸಿದರು. ಕೊರೊನಾದಿಂದ…

ಬಿರುಗಾಳಿ-ಮಳೆಗೆ ನೆಲಕಚ್ಚಿದ ನೂರಾರು ಎಕರೆ ಬಾಳೆ
ಮೈಸೂರು, ಮೈಸೂರು ಗ್ರಾಮಾಂತರ

ಬಿರುಗಾಳಿ-ಮಳೆಗೆ ನೆಲಕಚ್ಚಿದ ನೂರಾರು ಎಕರೆ ಬಾಳೆ

May 27, 2020

ನಂಜನಗೂಡು, ಮೇ 26(ರವಿ)-ತಾಲೂಕಿನ ಕಾರ್ಯ ಹಾಗೂ ಹುಸ್ಕೂರು ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರು ಬೆಳೆದಿದ್ದ ನೂರಾರು ಎಕರೆ ಬಾಳೆ ಬೆಳೆ ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ. ಸೋಮವಾರ ರಾತ್ರಿ ಸುರಿದ ಮಳೆಯು ಭಾರೀ ಬಿರುಗಾಳಿಯನ್ನೇ ಹೊತ್ತು ತಂದ ಪರಿಣಾಮ, ಲಕ್ಷಾಂತರ ರೂ. ಖರ್ಚು ಮಾಡಿ ಕಟಾವಿಗೆ ಬಂದಿದ್ದ ನೇಂದ್ರ ಮತ್ತು ಏಲಕ್ಕಿ ಬಾಳೆ ನೆಲಕಚ್ಚಿದೆ. ಹುಸ್ಕೂರು ಗ್ರಾಮದ ತಮ್ಮಯ್ಯಶೆಟ್ಟಿ ಅವರ 10 ಎಕರೆ, ಕುಮಾರ್-5, ನಂದೀಶ-4, ಚಿನ್ನಸ್ವಾಮಿ, ಮಲ್ಲಿಗಮ್ಮ, ಮಹದೇವಸ್ವಾಮಿ, ರಾಜಪ್ಪ ತಲಾ…

ಜುಬಿಲಂಟ್ ಪ್ರಕರಣ; ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ದಸಂಸ ಆಗ್ರಹ
ಮೈಸೂರು

ಜುಬಿಲಂಟ್ ಪ್ರಕರಣ; ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ದಸಂಸ ಆಗ್ರಹ

May 24, 2020

ಮೈಸೂರು, ಮೇ 23(ಪಿಎಂ)- ಕೊರೊನಾ ಸೋಂಕು ಮೈಸೂರು ಜಿಲ್ಲೆ ಯಲ್ಲಿ ಹೆಚ್ಚು ಕಾಣಿಸಿಕೊಳ್ಳಲು ಕಾರಣ ವಾದ ನಂಜನಗೂಡು ಕೈಗಾರಿಕಾ ಪ್ರದೇಶದ ಜುಬಿಲಂಟ್ ಕಾರ್ಖಾನೆ ವಿರುದ್ಧ ಕ್ರಿಮಿ ನಲ್ ಪ್ರಕರಣ ದಾಖಲಿಸಿ, ತನಿಖೆಯನ್ನು ಅಂತಾರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆಗೆ ವಹಿಸಬೇಕು. ಕಾರ್ಖಾನೆಯಿಂದಾಗಿ ಕೊರೊನಾ ಸೋಂಕಿನ ಕಷ್ಟಕ್ಕೆ ಸಿಲುಕಿದವ ರಿಗೆ ಕಂಪನಿಯೇ ಪರಿಹಾರ ಭರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಮೈಸೂರಿನ ನಜರ್‍ಬಾದ್ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಪ್ರಕರಣದಲ್ಲಿ…

ಪಂಚ ಮಹಾರಥಗಳ ಸದ್ದಿಲ್ಲದೆ ಜರುಗಿದ `ದೊಡ್ಡ ಜಾತ್ರೆ’
ಮೈಸೂರು ಗ್ರಾಮಾಂತರ

ಪಂಚ ಮಹಾರಥಗಳ ಸದ್ದಿಲ್ಲದೆ ಜರುಗಿದ `ದೊಡ್ಡ ಜಾತ್ರೆ’

April 5, 2020

ನಂಜನಗೂಡು, ಏ.4(ರವಿ/ಪವನ್)-ದಕ್ಷಿಣಕಾಶಿ ಪ್ರಸಿದ್ಧ ಗರಳಪುರಿ ಕ್ಷೇತ್ರ, ಪಂಚ ಮಹಾರಥಗಳನ್ನು ಎಳೆಯುವ ಕ್ಷೇತ್ರವೆನಿಸಿರುವ ನಂಜನಗೂಡಿನಲ್ಲಿಂದು ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಗೌತಮ ಪಂಚ ಮಹಾರಥೋತ್ಸವವು ಲಾಕ್‍ಡೌನ್ ಹಿನ್ನೆಲೆ ರದ್ದಾದರೂ ದೇವಾಲಯದ ಒಳಾವರಣದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಇಲ್ಲದಂತೆ ನೆರವೇರಿತು. ಶನಿವಾರ ಬೆಳಿಗ್ಗೆ 5.25ರಿಂದ 6.30ರೊಳಗೆ ಸಲ್ಲುವ ಶುಭ ಮೀನ ಲಗ್ನ, ಮಘಾ ನಕ್ಷತ್ರದಲ್ಲಿ ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತರು ಹಾಗೂ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಸಕಲ ಪೂಜಾ ಕೈಂಕರ್ಯ ನೇರವೇರಿಸಲಾಗಿತು. ನಂತರ ದೇವಾಲಯದಲ್ಲೇ ಇರುವ ಚಿಕ್ಕ…

ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಲಾಗಿದೆ: ಡಿಸಿ
ಮೈಸೂರು

ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಲಾಗಿದೆ: ಡಿಸಿ

March 30, 2020

ವದಂತಿ, ಭಯ ಹುಟ್ಟಿಸುವವರ ವಿರುದ್ದ ಕ್ರಮ ಜಿಲ್ಲೆಯಲ್ಲಿ 1702 ಮಂದಿ ಕ್ವಾರಂಟೇನ್ ನಲ್ಲಿದ್ದು, 766 ಮಂದಿ ಪೂರ್ಣಗೊಳಿಸಿದ್ದಾರೆ ಮೈಸೂರು,ಮಾ.29( MTY) – ಒಂದೇ ಸ್ಥಳದಲ್ಲಿ ಆರು ಮಂದಿಗೆ ನೊವೆಲ್ ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಕಂಟೇನ್ಮೆಂಟ್ ಪ್ಲಾನ್ ನಿಯಮಾನುಸಾರ ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಿ, ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯಲ್ಲಿ ಕೊರೊನಾ…

ನಂಜನಗೂಡಿಗೆ ಬರುವ ವಾಹನಗಳ ಜಪ್ತಿಗೆ ಸೂಚನೆ: ಎಸ್ ಪಿ ಎಚ್ಚರಿಕೆ
ಮೈಸೂರು

ನಂಜನಗೂಡಿಗೆ ಬರುವ ವಾಹನಗಳ ಜಪ್ತಿಗೆ ಸೂಚನೆ: ಎಸ್ ಪಿ ಎಚ್ಚರಿಕೆ

March 30, 2020

220 ವಾಹನ ವಶ ಪಟ್ಟಣದ ಜನತೆ ಆತಂಕ ಬೇಡ* ಮೈಸೂರು,ಮಾ.29( MTY )- ನಂಜನಗೂಡು ಪಟ್ಟಣದಲ್ಲಿ ಐದು ಮಂದಿಗೆ ನೊವೆಲ್ ಕೊರೊನಾ ಸೋಂಕು ಇರುವುದು ದೃಡಪಟ್ಟಿರುವ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ 220 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಸೋಮವಾರದಿಂದ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಸಿ.ಬಿ. ರಿಷ್ಯಂತ್ ಎಚ್ಚರಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮ ಕುರಿತಂತೆ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ 1372 ನೌಕರರು ಕೆಲಸ ಮಾಡುತ್ತಿದ್ದು,…

ನಂಜನಗೂಡಿಗೆ ಪ್ರಪ್ರಥಮವಾಗಿ ಕೊರೋನ ಎಂಬ ಮಹಾಮಾರಿ ವೈರಸ್ ತಂದು  ಹಂಚಿದ ಕೀರ್ತಿ ಜುಬೀಲಂಟ್ ಕಾರ್ಖಾನೆಗೆ  ಸಲ್ಲುತ್ತದೆ
ಮೈಸೂರು

ನಂಜನಗೂಡಿಗೆ ಪ್ರಪ್ರಥಮವಾಗಿ ಕೊರೋನ ಎಂಬ ಮಹಾಮಾರಿ ವೈರಸ್ ತಂದು ಹಂಚಿದ ಕೀರ್ತಿ ಜುಬೀಲಂಟ್ ಕಾರ್ಖಾನೆಗೆ ಸಲ್ಲುತ್ತದೆ

March 29, 2020

ಮೈಸೂರು,ಮಾ.29: ನಂಜನಗೂಡು ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಜುಬೀಲಂಟ್ ಔಷಧಿ ತಯಾರಿಕಾ ಕಾರ್ಖಾನೆ. ಈ ಕಾರ್ಖಾನೆಯಲ್ಲಿ ನೌಕರನಾಗಿದ್ದ ವ್ಯಕ್ತಿಯೊಬ್ಬನಿಗೆ ಕರೋನವೈರಸ್ ದೃಢಪಟ್ಟಿದ್ದು ಜಿಲ್ಲೆಯ ಮೂರನೇ ಸೋಂಕಿತ ವ್ಯಕ್ತಿ ಯಾಗಿದ್ದ. ಇದರಿಂದ ಬೆಚ್ಚಿಬಿದ್ದ ಜಿಲ್ಲಾ ಮತ್ತು ತಾಲೂಕು ಆಡಳಿತ ಕಾರ್ಖಾನೆಗೆ ತೆರಳಿ ಆತನ ಜೊತೆ ಸಂಪರ್ಕದಲ್ಲಿದ್ದ ವರನ್ನು ಸೇರಿದಂತೆ ಅಲ್ಲಿನ ಸಾವಿರಾರು ಕಾರ್ಮಿಕರಿಗೆ ಕ್ವಾರಂಟೈನ್ ಸೀಲ್ ಹಾಕಿ ಎಲ್ಲರನ್ನೂ ಹೋಂ ಕ್ವಾರಂಟೈನ್ನಲ್ಲಿರುವಂತೆ ಕಟ್ಟುನಿಟ್ಟಿನ ಆದೇಶ ಮಾಡಿ ಕಾರ್ಖಾನೆಗೂ ಸಹ ಬೀಗ ಜಡಿಯಲಾಗಿತ್ತು ವಿಪರ್ಯಾಸವೆಂದರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊದಲಿನ ಸೋಂಕಿತ ವ್ಯಕ್ತಿಯ…

1 2 3 10
Translate »