Tag: Nanjangud

ಶ್ರೀಕಂಠೇಶ್ವರನ ಸನ್ನಿಧಿ ತಲುಪಿದ ಕಪಿಲೆ
ಮೈಸೂರು

ಶ್ರೀಕಂಠೇಶ್ವರನ ಸನ್ನಿಧಿ ತಲುಪಿದ ಕಪಿಲೆ

August 12, 2018

ನಂಜನಗೂಡು: ಕಬಿನಿ ಜಲಾಶಯದಿಂದ ಕಳೆದ ಎರಡು ದಿನದಿಂದ ಸತತವಾಗಿ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟ ಪರಿಣಾಮ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಪಿಲೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಸ್ಪರ್ಶಿಸಿದೆ. ಇಂದು ಬೆಳಿಗ್ಗೆ ನೀರಿನ ಮಟ್ಟ ಹೆಚ್ಚಾಗಿದ್ದು, ಚಾಮರಾಜನಗರ ಬೈಪಾಸ್ ರಸ್ತೆಯನ್ನು ದಾಟಿ ಕಪಿಲಾ ನದಿಯ ನೀರು ಶ್ರೀಕಂಠೇಶ್ವರ ದೇವಾಲಯವನ್ನು ಭಾಗಶಃ ಆವರಿಸಿದೆ. ದೇವಾಲ ಯದ ಬಲ ಭಾಗದಲ್ಲಿರುವ ರಾಷ್ಟ್ರಪತಿ ರಸ್ತೆಗೂ ನೀರು ನುಗ್ಗಿದ್ದಲ್ಲಿ ದೇವಾಲಯ ಸಂಪೂರ್ಣವಾಗಿ ಜಲಾವೃತವಾಗುವ ಸಾಧ್ಯತೆ ಇದೆ. ದೇವಾಲಯದ ಪ್ರವೇಶ ದ್ವಾರದಲ್ಲಿ…

ನಂಜನಗೂಡಿಗೆ ನುಗ್ಗಿದ ಕಪಿಲೆ!ಮೈಸೂರು-ಊಟಿ, ಸುತ್ತೂರು ರಸ್ತೆ ಸಂಪರ್ಕ ಕಡಿತ
ಮೈಸೂರು

ನಂಜನಗೂಡಿಗೆ ನುಗ್ಗಿದ ಕಪಿಲೆ!ಮೈಸೂರು-ಊಟಿ, ಸುತ್ತೂರು ರಸ್ತೆ ಸಂಪರ್ಕ ಕಡಿತ

August 11, 2018

ನಂಜನಗೂಡು: ಕೇರಳದ ವೈನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗಿ ಅಲ್ಲಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ ಪರಿಣಾಮ ಉಂಟಾದ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ನಲುಗಿ ಹೋಗಿದೆ. ಅಪಾಯದ ಮಟ್ಟ ಮೀರಿ ಕಪಿಲೆ ಹರಿಯುತ್ತಿರುವುದರಿಂದ ಮೈಸೂರು-ನಂಜನಗೂಡು ಹಾಗೂ ಮೈಸೂರು-ಸುತ್ತೂರು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ಹೆದ್ದಾರಿ, ಪ್ರವಾಹದ ನೀರಿನಲ್ಲಿ ಮುಳುಗಿದೆ. ರಸ್ತೆ ಮೇಲೆ 2ರಿಂದ 3 ಅಡಿ ನೀರು ಹರಿಯು ತ್ತಿರುವ…

ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಸಂಸದ ಭೇಟಿ, ಪರಿಶೀಲನೆ
ಮೈಸೂರು

ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಸಂಸದ ಭೇಟಿ, ಪರಿಶೀಲನೆ

August 5, 2018

ನಂಜನಗೂಡು:  ಇತ್ತೀಚೆಗೆ ಯಾರೋ ಕಿಡಿಗೇಡಿಗಳು ಚಾಮರಾಜನಗರ-ನಂಜನ ಗೂಡು ಬೈಪಾಸ್ ರಸ್ತೆಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಇಂದು ಸಂಸದ ಆರ್.ಧ್ರುವನಾರಾ ಯಣ್ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಘಟನೆ ಬಗ್ಗೆ ತಹಸೀಲ್ದಾರ್ ದಯಾ ನಂದ ಅವರಿಂದ ಮಾಹಿತಿ ಪಡೆದು, ಮಾತನಾಡಿದ ಅವರು ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಕಂದಾಯ ಇಲಾಖೆ, ನಗರಸಭೆ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಮೆಯ…

ನಂಜನಗೂಡಿನಲ್ಲಿ ಪೊಲೀಸ್, ವಕೀಲ, ಶಿಕ್ಷಕ, ಉದ್ಯಮಿ ಮನೆಯಲ್ಲಿ ಸರಣಿ ಕಳವು
ಮೈಸೂರು

ನಂಜನಗೂಡಿನಲ್ಲಿ ಪೊಲೀಸ್, ವಕೀಲ, ಶಿಕ್ಷಕ, ಉದ್ಯಮಿ ಮನೆಯಲ್ಲಿ ಸರಣಿ ಕಳವು

August 5, 2018

ನಂಜನಗೂಡು:  ನಂಜನಗೂಡು ನಗರದ ಮಹದೇಶ್ವರ ಬಡಾವಣೆಯಲ್ಲಿ ಒಂದೇ ದಿನ ಪೊಲೀಸ್, ಶಿಕ್ಷಕ, ವಕೀಲರ ಮನೆಯೂ ಸೇರಿದಂತೆ ಹಲವಾರು ಮನೆ ಗಳಿಗೆ ದುಷ್ರ್ಕರ್ಮಿಗಳು ಕಳ್ಳತನಕ್ಕೆ ಪ್ರಯ ತ್ನಿಸಿ ಅಂತಿಮವಾಗಿ ಉದ್ಯಮಿಯೊಬ್ಬರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ 30 ಸಾವಿರ ನಗದನ್ನು ಅಪಹರಿಸಿ ರುವ ಘಟನೆ ನೆನ್ನೆ ರಾತ್ರಿ ನಡೆದಿದ್ದು, ನಗರ ಮತ್ತು ತಾಲೂಕಿನ ಜನತೆ ಬೆಚ್ಚಿದ್ದಾರೆ. ನಗರದ ಮಹದೇಶ್ವರ ಬಡಾವಣೆಯಲ್ಲಿ ರುವ ಬಿಳಿಗೆರೆ ದಫೇದಾರ್ ಬಸವಲಿಂಗಪ್ಪ, ವಕೀಲ ರವಿ, ಉದ್ಯಮಿ ಕಲ್ಕುಂದ ಬಸವಣ್ಣ, ಶಿಕ್ಷಕ ಮಹೇಶ್, ಉದ್ಯಮಿ…

ಮೈಸೂರು ಜಿಲ್ಲೆ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ
ಮೈಸೂರು

ಮೈಸೂರು ಜಿಲ್ಲೆ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ

August 3, 2018

ಮೈಸೂರು:  ನಗರ ಸ್ಥಳೀಯ ಸಂಸ್ಥೆಗಳ 2018ರ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಅಂತಿಮ ಮೀಸಲಾತಿ ಪ್ರಕಟಿಸಿದೆ. ಮೈಸೂರು ನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ನಂಜನಗೂಡು ಹಾಗೂ ಹುಣಸೂರು ನಗರಸಭೆ, ತಿ.ನರಸೀಪುರ, ಬನ್ನೂರು, ಕೆಆರ್ ನಗರ, ಪಿರಿಯಾಪಟ್ಟಣ ಮತ್ತು ಹೆಚ್‍ಡಿ ಕೋಟೆ ಪುರಸಭೆಗಳಿಗೆ ವಾರ್ಡ್‍ವಾರು ಅಂತಿಮ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿ, ಅಧಿಸೂಚನೆ ಹೊರಡಿಸಿದೆ. ಈ ನಡುವೆ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿದ್ದರೂ…

ನಂಜನಗೂಡಿನಲ್ಲಿ ಬಸವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ
ಮೈಸೂರು

ನಂಜನಗೂಡಿನಲ್ಲಿ ಬಸವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ

August 3, 2018

ನಂಜನಗೂಡು: ತಾಲೂಕಿನ ಬಸವ ಸೇವಾ ಸಮಿತಿ ಮತ್ತು ವೀರಶೈವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚೆಗೆ  ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ಸಮಾರಂಭದಲ್ಲಿ ಮೈಸೂರಿನ ಹಿರಿಯ ಆಡಳಿತ ಸೇವಾ ಅಧಿಕಾರಿ ಡಿ.ಭಾರತಿ ಮಾತನಾಡಿ. ಮೇಲ್ಕಂಡ ಸಮಿತಿಯವರು ಪ್ರತಿಭೆಗಳಿಗೆ ಪುರಸ್ಕಾರ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಈ ಸೇವಾ ಸಮಿತಿಯು ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು. ಛಲ ಇರುವಂತಹ ಗ್ರಾಮಾಂತರ ಮಕ್ಕಳಲ್ಲಿ…

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮಾಜಿ ಅಂಗರಕ್ಷಕ ನಂಜನಗೂಡಿನ ಮೇಜರ್ ಸುಧೀರ್ ನಿಧನ
ಮೈಸೂರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮಾಜಿ ಅಂಗರಕ್ಷಕ ನಂಜನಗೂಡಿನ ಮೇಜರ್ ಸುಧೀರ್ ನಿಧನ

July 31, 2018

ನಂಜನಗೂಡು:  ದೇಶದ ಪ್ರದಾನ ಮಂತ್ರಿ ನರೇಂದ್ರಮೋದಿಯವರ ಅಂಗರಕ್ಷಕರಾಗಿ 2015ರಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಮೇಜರ್ ಸುಧೀರ್ ಅನಾರೋಗ್ಯದ ಕಾರಣ ಇಂದು ಮುಂಜಾನೆ 8-30 ಗಂಟೆಗೆ ಸೇಲಂನ ವಿನಾಯಕ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂಲತಃ ನಂಜನಗೂಡಿನವರಾದ ಇವರು ನೀಲಕಂಠನಗರದ ನಿವಾಸಿ ವಿಶ್ವನಾಥ ನಾಯರ್ ಅವರ ಪುತ್ರರಾಗಿ ದ್ದಾರೆ. 1980ರಿಂದ 87ರವರೆಗೂ ನಂಜನಗೂಡಿನ ಕಾರ್ಮೆಲ್ ಶಾಲೆ ಹಾಗೂ 88 ರಿಂದ 92ರವರೆಗೂ ನಂಜನ ಗೂಡಿನ ಸರ್ಕಾರಿ ಜೂನಿಯರ್ ಕಾಲೇಜಿ ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಉತ್ತಮ ಕ್ರೀಡಾಪಟುವಾಗಿದ್ದ ಇವರು ಕ್ರೀಡಾ ಕೋಟಾದಡಿಯಲ್ಲಿ…

ನಂ.ಗೂಡಲ್ಲಿ 23 ವರ್ಷಗಳ ನಂತರ ಮತ್ತೆ ಎಸಿ ಕೋರ್ಟ್ ಪ್ರಾರಂಭ
ಮೈಸೂರು

ನಂ.ಗೂಡಲ್ಲಿ 23 ವರ್ಷಗಳ ನಂತರ ಮತ್ತೆ ಎಸಿ ಕೋರ್ಟ್ ಪ್ರಾರಂಭ

July 31, 2018

ನಂಜನಗೂಡು:  23 ವರ್ಷ ಗಳಿಂದ ಎ.ಸಿ.ಕೋರ್ಟ್ ಇಲ್ಲದೇ ಇಲ್ಲಿನ ವಕೀಲರು ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡಲು ಮೈಸೂರಿನ ಎ.ಸಿ.ಕೋರ್ಟ್‍ಗೆ ಅಲೆಯ ಬೇಕಾಗಿತ್ತು. ಮೈಸೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂದು ನಂಜನಗೂಡು ತಾಲೂಕು ವ್ಯಾಪ್ತಿಯ ಪ್ರಕರಣಗಳನ್ನು ಇಲ್ಲಿನ ತಾಲೂಕು ಕಛೇರಿಯ ನ್ಯಾಯಾಲಯ ಸಭಾಂಗಣ ದಲ್ಲಿ ಕಲಾಪಗಳನ್ನು ನಡೆಸಲು ಇಂದು ಉಪವಿಭಾಗಾಧಿಕಾರಿ ಶಿವೇಗೌಡ ಅಧಿಕೃತ ವಾಗಿ ಚಾಲನೆ ನೀಡುವುದರ ಮೂಲಕ ಎ.ಸಿ.ಕೋರ್ಟ್ ಉದ್ಘಾಟಿಸಿದರು. ಸಮಾರಂಭದಲ್ಲಿ ಉಪವಿಭಾಗಾದಿಕಾರಿ ಶಿವೇಗೌಡ ಮಾತನಾಡಿ, ನಂಜನಗೂಡು ವಕೀಲರ…

ಸಭೆಯಲ್ಲಿ ಶಾಸಕರಿಂದ ಅಧಿಕಾರಿಗೆ ತರಾಟೆ
ಮೈಸೂರು

ಸಭೆಯಲ್ಲಿ ಶಾಸಕರಿಂದ ಅಧಿಕಾರಿಗೆ ತರಾಟೆ

July 28, 2018

ನಂಜನಗೂಡು: ನಗರದ ಗೋದಾಮಿನಿಂದ ನಾಪತ್ತೆಯಾಗಿರುವ ಸುಮಾರು 40 ಲಕ್ಷ ರೂ. ಮೌಲ್ಯದ ಪಡಿತರ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಒದಗಿಸದ ಆಹಾರ ಇಲಾಖೆ ಅಧಿಕಾರಿಯನ್ನು ಶಾಸಕ ಬಿ.ಹರ್ಷ ವರ್ಧನ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ತ್ರೈಮಾಸಿಕ ಕೆ.ಡಿ.ಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 1165 ಕ್ವಿಂಟಾಲ್ ಅಕ್ಕಿ, 198 ಕ್ವಿಂಟಾಲ್ ಗೋಧಿ, 38…

ಜನತೆ, ಕಾರ್ಯಕರ್ತರಿಗೆ ಚಿರಋಣಿ: ಶಾಸಕ ಹರ್ಷವರ್ಧನ್
ಮೈಸೂರು

ಜನತೆ, ಕಾರ್ಯಕರ್ತರಿಗೆ ಚಿರಋಣಿ: ಶಾಸಕ ಹರ್ಷವರ್ಧನ್

July 27, 2018

ಮಲ್ಕುಂಡಿ:  ಬಿಜೆಪಿ ಗೆಲುವಿಗೆ ಸಹಕರಿಸಿದ ಪಕ್ಷದ ಕಾರ್ಯ ಕರ್ತರು ಹಾಗೂ ಕ್ಷೇತ್ರದ ಜನತೆಗೆ ಸದ ಚಿರಋಣಿಯಾಗಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಹರ್ಷವರ್ಧನ್ ತಿಳಿಸಿದರು. ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಗ್ರಾಮದ ನಾಯಕರ ಬೀದಿಯಲ್ಲಿ 20 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್ ಅವರ ಹಾದಿಯಲ್ಲಿ ನಡೆದು ಅದೇ ರೀತಿಯಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ….

1 5 6 7 8 9 10
Translate »