ನಂಜನಗೂಡಿನಲ್ಲಿ ಬಸವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ
ಮೈಸೂರು

ನಂಜನಗೂಡಿನಲ್ಲಿ ಬಸವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ

August 3, 2018

ನಂಜನಗೂಡು: ತಾಲೂಕಿನ ಬಸವ ಸೇವಾ ಸಮಿತಿ ಮತ್ತು ವೀರಶೈವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚೆಗೆ  ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.

ಸಮಾರಂಭದಲ್ಲಿ ಮೈಸೂರಿನ ಹಿರಿಯ ಆಡಳಿತ ಸೇವಾ ಅಧಿಕಾರಿ ಡಿ.ಭಾರತಿ ಮಾತನಾಡಿ. ಮೇಲ್ಕಂಡ ಸಮಿತಿಯವರು ಪ್ರತಿಭೆಗಳಿಗೆ ಪುರಸ್ಕಾರ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು 25 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಈ ಸೇವಾ ಸಮಿತಿಯು ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.

ಛಲ ಇರುವಂತಹ ಗ್ರಾಮಾಂತರ ಮಕ್ಕಳಲ್ಲಿ ಗುರಿ ಇರುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಸ್ಪಷ್ಟ ಗುರಿಯನ್ನು ಹೊಂದಿದಾಗ ಅವರ ಅಭಿವೃದ್ಧಿ ಸಾಧ್ಯ ಎಂದರು. ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಮಾತ್ರಕ್ಕೆ ಅವರುಗಳು ಪ್ರತಿಭಾವಂತ ರಾಗುವುದಿಲ್ಲ. ಇಡೀ ದೇಶವನ್ನು ಪ್ರತಿನಿಧಿ ಸುವ ಸ್ಪರ್ಧಾ ಭಾವನೆ ಬೆಳೆಸಿಕೊಳ್ಳ ಬೇಕೆಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಚಾಮರಾಜನಗರದ ಹಿರಿಯ ಉಪನ್ಯಾಸಕ ಕೆಂಪಲಿಂಗಪ್ಪ ಮಾತನಾಡಿ. ಸಮಾಜದಲ್ಲಿ ದಾಸೋಹ ಪ್ರೇಮಿಗಳು ಸಂಘಟನೆ ಕೊರತೆ ಎದುರಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿ ಸಿದರು. ಕಲಿಯುಗದಲ್ಲಿ ಸಂಘ ಸಂಸ್ಥೆಗಳಿಗೆ ಶಕ್ತಿಯಿದೆ. ಇಂತಹ ಶಕ್ತಿಯನ್ನು ಇಲ್ಲಿನ ಬಸವ ಸೇವಾ ಸಮಿತಿ ಮತ್ತು ವೀರಶೈವ ಶಿಕ್ಷಕರ ಸಂಘ ಹೊಂದಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಎಸ್.ಎಂ.ಪ್ರಭು ಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಹದಿನಾರು ನಟರಾಜು,  ಹೆಚ್.ಕೆ.ಚೆನ್ನಪ್ಪ, ಉಪಸ್ಥಿತರಿದ್ದರು. ಮಲ್ಲನಮೂಲೆ ಮಠಾ ಧ್ಯಕ್ಷರಾದ ಶ್ರೀ ಚೆನ್ನಬಸವ ಸ್ವಾಮಿಗಳು ಮತ್ತು ಶರಣ ಸಂಗಮ ಮಠಾಧ್ಯಕ್ಷರಾದ ಶ್ರೀ ನಾಗರಾಜೇಂದ್ರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯದರ್ಶಿ ಗಂಗಾಧರ್ ಸ್ವಾಗತಿಸಿ ಮಹೇಶ್ ನಿರೂಪಿಸಿದರೆ, ತಗಡೂರು ರಾಜಶೇಖರ್ ವಂದಿಸಿದರು.

 

Translate »