ಹಸು ತೊಳೆಯಲು ಹೋದ ರೈತ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಮುಳುಗಿ ಸಾವು
ಮೈಸೂರು

ಹಸು ತೊಳೆಯಲು ಹೋದ ರೈತ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಮುಳುಗಿ ಸಾವು

August 3, 2018

ಕೆ.ಆರ್.ನಗರ: ರೈತನೋರ್ವ ತನ್ನ ಹಸುವನ್ನು ತೊಳೆಯಲೆಂದು ನಾಲೆಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾದ ದುರ್ಘಟನೆ ತಾಲೂಕಿನ ಕರ್ತಾಳು ಗ್ರಾಮದ ಬಳಿ ಜರುಗಿದೆ.

ಕರ್ತಾಳು ಗ್ರಾಮದ ನಿವಾಸಿ ಸಿದ್ದಶೆಟ್ಟಿ ಎಂಬುವವರ ಮಗ ಮಂಜ(35) ಕಾಲುವೆ ಯಲ್ಲಿ ಮುಳುಗಿ ಮೃತಪಟ್ಟಿರುವ ವ್ಯಕ್ತಿ ಯಾಗಿದ್ದಾರೆ. ಇವರು ಬುಧವಾರ ಸಂಜೆ 5 ಗಂಟೆಯ ಸಮಯದಲ್ಲಿ ತನ್ನ ಜಮೀನಿನಲ್ಲಿ ಎಂದಿನಂತೆ ಕೆಲಸ ಮುಗಿಸಿ ಕೊಂಡು ವಾಪಸ್ಸು ಮನೆಗೆ ತೆರಳುವಾಗ ಸಮೀಪದಲ್ಲಿ ತುಂಬಿ ಹರಿಯುತ್ತಿರುವ ಕಟ್ಟೇಪುರ ಬಲಭಾಗದ ನಾಲೆಯಲ್ಲಿ ಹಸು ಗಳನ್ನು ತೊಳೆಯಲೆಂದು ತೆರಳಿದ ಸಂದರ್ಭ ದಲ್ಲಿ ಆಯತಪ್ಪಿ ಕಾಲುವೆಗೆ ಬಿದ್ದಿದ್ದಾರೆ.

ಹಸುಗಳು ಅಪಾಯದಿಂದ ಪಾರಾಗಿದ್ದು, ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ದ್ದರಿಂದ ಹಾಗೂ ಈತನಿಗೆ ಈಜು ಬರ ದಿರುವ ಕಾರಣ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ನಂತರ ಇದನ್ನು ಗಮನಿಸಿದ ಸಾರ್ವಜನಿಕರು ಈಜುಗಾರರ ಸಹ ಕಾರದಿಂದ ಮೃತ ದೇಹವನ್ನು ಮೇಲೆತ್ತಿ ದ್ದಾರೆ.

ಈ ಸಂಬಂಧ ಮೃತನ ಪತ್ನಿ ಡಿ.ಆರ್. ಸುನೀತಾ ಅವರು ಕೆ.ಆರ್.ನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತನಿಗೆ ಇತ್ತೀಚೆಗಷ್ಟೆ ಮದುವೆಯಾಗಿದ್ದು, 9 ತಿಂಗಳ ಒಂದು ಹೆಣ್ಣು ಮಗುವಿದ್ದು, ಈಗ ತಾಯಿ-ಮಗು ಕುಟುಂಬಕ್ಕೆ ಆಧಾರ ವಾಗಿದ್ದ ಮಂಜನನ್ನು ಕಳೆದುಕೊಂಡಿದ್ದಾರೆ.

ಮೃತನ ಪತ್ನಿ ನೀಡಿರುವ ದೂರಿನನ್ವಯ ಕೆ.ಆರ್.ನಗರ ಪೊಲೀಸರು ಸ್ಥಳಕ್ಕೆ ಭೆÉೀಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ದೇಹ ವನ್ನು ಹನಸೋಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ಮರಣೋತ್ತರ ಪರೀಕ್ಷೆಗೊಳಪಡಿಸಿ, ನಂತರ ಕುಟುಂಬ ಸ್ಥರಿಗೆ ಒಪ್ಪಿಸಿದ್ದಾರೆ.

Translate »