ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಸಂಸದ ಭೇಟಿ, ಪರಿಶೀಲನೆ
ಮೈಸೂರು

ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಸಂಸದ ಭೇಟಿ, ಪರಿಶೀಲನೆ

August 5, 2018

ನಂಜನಗೂಡು:  ಇತ್ತೀಚೆಗೆ ಯಾರೋ ಕಿಡಿಗೇಡಿಗಳು ಚಾಮರಾಜನಗರ-ನಂಜನ ಗೂಡು ಬೈಪಾಸ್ ರಸ್ತೆಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಇಂದು ಸಂಸದ ಆರ್.ಧ್ರುವನಾರಾ ಯಣ್ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಘಟನೆ ಬಗ್ಗೆ ತಹಸೀಲ್ದಾರ್ ದಯಾ ನಂದ ಅವರಿಂದ ಮಾಹಿತಿ ಪಡೆದು, ಮಾತನಾಡಿದ ಅವರು ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಕಂದಾಯ ಇಲಾಖೆ, ನಗರಸಭೆ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಮೆಯ ಸುತ್ತ ಎಲ್ಲಾ ರೀತಿಯ ಭದ್ರತೆಯನ್ನು ಮಾಡಿ, ಕೆಟ್ಟು ಹೋಗಿರುವ ಸಿ.ಸಿ. ಕ್ಯಾಮರಾವನ್ನು ತಕ್ಷಣ ಅಳವಡಿಸಿ. ನಗದಲ್ಲಿ ಎಲ್ಲೆಲ್ಲಿ ಸಿ.ಸಿ ಕ್ಯಾಮರಾ ಕೆಟ್ಟು ಹೋಗಿದೆಯೋ ಅದನ್ನೆಲ್ಲಾ ಬದಲಾಯಿಸಬೇಕು, ಇಂತಹ ಪ್ರಕರಣ ಗಳು ತಾಲೂಕಿನಲ್ಲಿ ಎಲ್ಲೇ ಮರುಕಳಿಸಿ ದರೂ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ದಸಂಸ ಮುಖಂಡ ರಾದ ಶಂಕರಪುರ ಸುರೇಶ, ಯಶವಂತ, ಸ್ವಾಮಿ, ಕೃಷ್ಣಮೂರ್ತಿ, ಶ್ರೀ ರಾಮಪುರ ಮಹದೇವು, ಬೊಕ್ಕಹಳ್ಳಿ ನಂಜುಂಡಸ್ವಾಮಿ ಮತ್ತಿತರರು ಮಾತನಾಡಿ ತಾಲೂಕಿನಲ್ಲಿ ಭಾವಚಿತ್ರಕ್ಕೆ 3 ಬಾರಿ ಅವಮಾನವಾದರೂ ಯಾವುದೇ ಕ್ರಮ ಜರುಗಿಸುವಲ್ಲಿ ಅಧಿ ಕಾರಿಗಳು ವಿಫಲವಾಗಿದ್ದಾರೆಂದು ತಿಳಿಸಿದಾಗ ಸಂಸದ ಆರ್. ಧ್ರುವನಾರಾಯಣ್ ಅಧಿಕಾರಿ ಗಳಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೇಶವಮೂರ್ತಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ನಗರಸಭಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಬಿ.ಚಲುವರಾಜು, ದೊಡ್ಡಮಾದಪ್ಪ, ಸುಂದರರಾಜು, ಎನ್.ಇಂದ್ರ, ಸೌಭಾಗ್ಯ, ಎಂ.ಶ್ರೀಧರ್, ನಿಸಾರ್, ಸ್ವಾಮಿ, ಸಿದ್ದರಾಜು, ಕಮಲೇಶ, ಪೌರಯುಕ್ತ ವಿಜಯ್, ಸಮಾಜ ಕಲ್ಯಾಣಾಧಿಕಾರಿ ಜನಾರ್ಧನ್, ಪಿಎಸ್‍ಐ ಸವಿ ಹಾಗೂ ಇತರರಿದ್ದರು.

Translate »