ನಂಜನಗೂಡಿನಲ್ಲಿ ಪೊಲೀಸ್, ವಕೀಲ, ಶಿಕ್ಷಕ, ಉದ್ಯಮಿ ಮನೆಯಲ್ಲಿ ಸರಣಿ ಕಳವು
ಮೈಸೂರು

ನಂಜನಗೂಡಿನಲ್ಲಿ ಪೊಲೀಸ್, ವಕೀಲ, ಶಿಕ್ಷಕ, ಉದ್ಯಮಿ ಮನೆಯಲ್ಲಿ ಸರಣಿ ಕಳವು

August 5, 2018

ನಂಜನಗೂಡು:  ನಂಜನಗೂಡು ನಗರದ ಮಹದೇಶ್ವರ ಬಡಾವಣೆಯಲ್ಲಿ ಒಂದೇ ದಿನ ಪೊಲೀಸ್, ಶಿಕ್ಷಕ, ವಕೀಲರ ಮನೆಯೂ ಸೇರಿದಂತೆ ಹಲವಾರು ಮನೆ ಗಳಿಗೆ ದುಷ್ರ್ಕರ್ಮಿಗಳು ಕಳ್ಳತನಕ್ಕೆ ಪ್ರಯ ತ್ನಿಸಿ ಅಂತಿಮವಾಗಿ ಉದ್ಯಮಿಯೊಬ್ಬರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ 30 ಸಾವಿರ ನಗದನ್ನು ಅಪಹರಿಸಿ ರುವ ಘಟನೆ ನೆನ್ನೆ ರಾತ್ರಿ ನಡೆದಿದ್ದು, ನಗರ ಮತ್ತು ತಾಲೂಕಿನ ಜನತೆ ಬೆಚ್ಚಿದ್ದಾರೆ.

ನಗರದ ಮಹದೇಶ್ವರ ಬಡಾವಣೆಯಲ್ಲಿ ರುವ ಬಿಳಿಗೆರೆ ದಫೇದಾರ್ ಬಸವಲಿಂಗಪ್ಪ, ವಕೀಲ ರವಿ, ಉದ್ಯಮಿ ಕಲ್ಕುಂದ ಬಸವಣ್ಣ, ಶಿಕ್ಷಕ ಮಹೇಶ್, ಉದ್ಯಮಿ ಪ್ರಶಾಂತ್‍ಕುಮಾರ್ ಎಂಬುವವರ ಮನೆಗಳ ಮುಂಭಾಗದ ಬಾಗಿಲುಗಳನ್ನು ಮುರಿದು ಹಣ ಮತ್ತು ಚಿನ್ನವನ್ನು ದೋಚಿದ್ದಾರೆ.

ಇಲ್ಲಿನ ಮಹದೇಶ್ವರ ಬಡಾವಣೆಯ ಮುಂಭಾಗದಲ್ಲಿ ವಾಸವಾಗಿರುವ ಬಿಳಿಗೆರೆ ಪೊಲೀಸ್ ಠಾಣೆಯ ದಫೇದಾರ್ ಬಸವ ಲಿಂಗಪ್ಪ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಬಸವಲಿಂಗಪ್ಪನವರ ಪೊಲೀಸ್ ಸಮವಸ್ತ್ರವನ್ನು ಕಂಡು ಓ ಇದು ಪೊಲೀಸಿ ನವರ ಮನೆ ಎಂದು ಬಸವಲಿಂಗಪ್ಪನವರ ಶೂ ನಲ್ಲಿದ್ದ 2 ಕಾಲು ಚೀಲಗಳನ್ನು ತೆಗೆದುಕೊಂಡು ಪಕ್ಕದ ವಕೀಲ ರವಿ ಮನೆಗೆ ಪ್ರವೇಶಿಸಿದ್ದಾರೆ.

ವಕೀಲ ರವಿ ಮನೆಯ ಶಬ್ದವಾದದ್ದನ್ನು ಕಂಡು ಹೊರಗೆ ಬಂದು ನೋಡುವಷ್ಟರಲ್ಲಿ ಕಳ್ಳರು ನಾಪತ್ತೆಯಾಗಿದ್ದಾರೆ. ಪಕ್ಕದ ಮಹೇಶ್ ಎಂಬ ಶಿಕ್ಷಕರ ಮನೆಗೆ ನುಗ್ಗಿದ ಕಳ್ಳರು ಅಲ್ಲಿಯೂ ಬಾಗಿಲನ್ನು ಮೀಟಿ ಒಳ ಹೋಗಲು ಸಾಧ್ಯವಾಗದೇ ಮತ್ತೊಂದು ರಸ್ತೆಯಲ್ಲಿರುವ ಉದ್ಯಮಿ ಪ್ರಶಾಂತ್‍ಕುಮಾರ್ ಎಂಬುವವರ ಮನೆಯ ಮುಂಬಾಗಿಲನ್ನು ಮೀಟಿ ಒಳ ಪ್ರವೇಶಿಸಿದ ಕಳ್ಳರು ದೇವರ ಮನೆಯಲ್ಲಿ ಇರಿಸಿದ್ದ 30 ಸಾವಿರ ನಗದು, ಚೈನ್ ಮತ್ತು ಉಂಗುರಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದರ ಮೌಲ್ಯ ಸುಮಾರು 70 ಸಾವಿರ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅಪರಾಧ ವಿಭಾಗದ ಎಸ್.ಐ. ವೀರಭದ್ರಪ್ಪ ಹಾಗೂ ಬಸವರಾಜು ರವರು ಕಳ್ಳತನ ನಡೆದ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲಿಸಿ, ಪ್ರಶಾಂತ್‍ಕುಮಾರ್ ಕೊಟ್ಟ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೂಂಡಿದ್ದಾರೆ.

ಮಾಂಗಲ್ಯ ಸರ ಅಪಹರಣ: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಖದೀಮ ಗೃಹಿಣಿಯ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಕೋಡಿನರಸೀಪುರ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಅಲ್ಲಿನ ಬಸಂತಕುಮಾರ್ ಎಂಬುವರು ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದಾಗ ರಾತ್ರಿ 12 ಗಂಟೆ ಸುಮಾರಿನಲ್ಲಿ ಅವರ ಮನೆ ಬಾಗಿಲು ಮುರಿದು ಒಳ ನುಗ್ಗಿದ ಖದೀಮ ನಿದ್ರಿಸುತ್ತಿದ್ದ ಬಸವಂತಕುಮಾರ್ ಅವರ ಪತ್ನಿ ನಂದಿನಿ ಎಂಬುವರ ಬಾಯಿ ಅದುಮಿ ಹಿಡಿದು ಅವರ ಕತ್ತಿನಲ್ಲಿದ್ದ 40 ಗ್ರಾಂ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »