Tag: Periyapatna

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೂಮಿಪೂಜೆ
ಮೈಸೂರು

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೂಮಿಪೂಜೆ

October 15, 2018

ಪಿರಿಯಾಪಟ್ಟಣ: ತಾಲೂಕಿನ ಕಾವೇರಿ ನದಿ ದಂಡೆಯ ಹನುಮಂತಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ವತಿಯಿಂದ ಗ್ರಾಮಕ್ಕೆ ಮಂಜೂರಾದ 60 ಲಕ್ಷ ರೂ.ಗಳ ಅನುದಾನದಡಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಮಹದೇವ್ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ದೊಡ್ಡ ಕಮರವಳ್ಳಿ ಗ್ರಾಮ ಪಂಚಾಯಿತಿಗೆ ವಿಶೇಷವಾಗಿ ಒತ್ತು ನೀಡಿ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಲಾಗುವುದು. ಆಂಜನೇಯ ದೇವಾಲಯದ ಎದರು ಹೈಟೆಕ್ ದೀಪದ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಹೊನ್ನಾಪುರ ಗ್ರಾಮದಲ್ಲಿ ಜನರ ಕುಂದು-ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು,…

ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ
ಮೈಸೂರು

ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ

September 12, 2018

ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಪಿರಿಯಾಪಟ್ಟಣ:  ರೈತರು ವ್ಯವಸಾಯದೊಂದಿಗೆ ಹೈನುಗಾರಿಕೆ ಅಳವಡಿಸಿಕೊಳ್ಳುವುದರ ಮುಖಾಂತರ ಆರ್ಥಿಕವಾಗಿ ಸದೃಢರಾಗುವಂತೆ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಹೇಳಿದರು. ತಾಲೂಕಿನ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಷೇರುದಾರರಿಗಾಗಿ ಒಕ್ಕೂಟದ ವತಿಯಿಂದ ಹಲವಾರು ಸವಲತ್ತು ಗಳನ್ನು ಜಾರಿಗೆ ತಂದಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು, ಸಂಘದ ವತಿಯಿಂದ ವಿಮಾ ಯೋಜನೆ ಹಾಗೂ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿದ್ದು ರೈತರು ಉಪಯೋಗಿಸಿ ಕೊಳ್ಳುವಂತೆ ತಿಳಿಸಿದರು. ನಮ್ಮ ರಾಜ್ಯದ ಗುಣಮಟ್ಟದ ಹಾಲು…

ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ಒಂದೇ ಕುಟುಂಬದ ನಾಲ್ವರ ಜಲಸಮಾದಿ ಪಿರಿಯಾಪಟ್ಟಣದ ಬಳಿ ದುರಂತ
ಮೈಸೂರು

ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ಒಂದೇ ಕುಟುಂಬದ ನಾಲ್ವರ ಜಲಸಮಾದಿ ಪಿರಿಯಾಪಟ್ಟಣದ ಬಳಿ ದುರಂತ

August 7, 2018

ಪಿರಿಯಾಪಟ್ಟಣ: ತುಂಬಿ ಹರಿಯುತ್ತಿದ್ದ ನಾಲೆಗೆ ಮಾರುತಿ ವ್ಯಾನ್ ಉರುಳಿ ಬಿದ್ದು, ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾದ ದುರ್ಘಟನೆ ಇಂದು ಬೆಳಿಗ್ಗೆ ಪಿರಿಯಾಪಟ್ಟಣ ತಾಲೂಕು ದೊಡ್ಡಕಮರಹಳ್ಳಿ ಬಳಿ ಹಾರಂಗಿ ನಾಲೆಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ಕೊಡಗು ಜಿಲ್ಲೆ ನಾಪೋಕ್ಲು ಗ್ರಾಮದ ಪಳನಿಸ್ವಾಮಿ(50), ಪತ್ನಿ ಸಂಜು(40) ಪುತ್ರ ನಿಖಿತ್(12) ಹಾಗೂ ಪುತ್ರಿ ಪೂರ್ಣಿಮಾ(14) ಅಸುನೀಗಿದ್ದಾರೆ. ಈ ಕುಟುಂಬ ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಬಳಿ ಕೃಷಿ ಭೂಮಿ ಖರೀದಿಸಿ, ಬೇಸಾಯದಲ್ಲಿ ತೊಡಗಿತ್ತು ಎಂದು ಹೇಳಲಾಗಿದೆ. ಇಂದು ಬೆಳಿಗ್ಗೆ 10.45ರ ಸಂದರ್ಭ ಅಂಗವಿಕಲ…

ಶಿಮ್ಲಾದಿಂದ ಮಾನಸಿಕ ಸಂತ್ರಸ್ತೆ  ಸುರಕ್ಷಿತವಾಗಿ ಮೈಸೂರಿಗೆ ವಾಪಸ್
ಮೈಸೂರು

ಶಿಮ್ಲಾದಿಂದ ಮಾನಸಿಕ ಸಂತ್ರಸ್ತೆ  ಸುರಕ್ಷಿತವಾಗಿ ಮೈಸೂರಿಗೆ ವಾಪಸ್

August 3, 2018

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭ ಕೋರಿಕೆ ಮೈಸೂರು ವಿಜಯನಗರ ಮಹಿಳಾ ನಿಲಯದಲ್ಲಿ ಆಶ್ರಯ ಮೈಸೂರು: ಮಾನಸಿಕ ಅಸ್ವಸ್ಥತೆ ಯಿಂದ ಕಳೆದ 2 ವರ್ಷಗಳ ಹಿಂದೆ ಶಿಮ್ಲಾ ಸೇರಿದ್ದ ಪಿರಿಯಾಪಟ್ಟಣ ತಾಲೂಕು ಕಂಪಲಾಪುರ ಸಮೀಪದ ಮೂಕನ ಹಳ್ಳಿ ಪಾಳ್ಯದ ಸರಸ್ವತಿ ಅಲಿಯಾಸ್ ಪದ್ಮ ಅವರನ್ನು ಜಿಲ್ಲಾಡಳಿತವು ಇಂದು ರಾತ್ರಿ ಮೈಸೂರಿಗೆ ಕರೆ ತಂದಿದೆ. ಈಕೆಯನ್ನು ತವರಿಗೆ ಕರೆತರುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಪಾಟೀಲ್, ಜಿಲ್ಲಾ ಮಾನಸಿಕ ಆರೋಗ್ಯ…

ತಂಬಾಕು ಬ್ಯಾರನ್‍ಗೆ ಬೆಂಕಿ ಲಕ್ಷಾಂತರ ರೂ. ಹಾನಿ : ಓರ್ವನಿಗೆ ಗಾಯ
ಮೈಸೂರು

ತಂಬಾಕು ಬ್ಯಾರನ್‍ಗೆ ಬೆಂಕಿ ಲಕ್ಷಾಂತರ ರೂ. ಹಾನಿ : ಓರ್ವನಿಗೆ ಗಾಯ

July 31, 2018

ಪಿರಿಯಾಪಟ್ಟಣ:  ತಂಬಾಕು ಸಂಸ್ಕರಣೆ ಮಾಡುವಾಗ ಬ್ಯಾರನ್‍ಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ತಂಬಾಕು ಭಸ್ಮವಾಗಿದ್ದು, ರೈತನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ತಾಲೂಕಿನ ನಾಗನಹಳ್ಳಿ ಪಾಳ್ಯದ ರೈತ ವೆಂಕಟೇಶ ಬೋವಿ ಎಂಬುವರ ಬ್ಯಾರನ್ ನಲ್ಲಿ ತಂಬಾಕು ಹದ ಮಾಡುವ ಸಮಯದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ಹದ ಮಾಡುತ್ತಿದ್ದ ತಂಬಾಕು ಮಾತ್ರ ವಲ್ಲದೆ ಈ ಹಿಂದೆ ಹದ ಮಾಡಿ ಸಂಗ್ರಹಿ ಸಿದ್ದ ಒಂದೂವರೆ ಲಕ್ಷ ರೂ.ಮೌಲ್ಯದ ತಂಬಾಕು, ಬ್ಯಾರನ್, ಇನ್ನಿತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ….

ಆನೆ ಚೌಕೂರು ಅರಣ್ಯದಲ್ಲಿ ಶ್ರೀಗಂಧ ಕಳವಿಗೆತ್ನಿಸಿದ ಮೂವರ ಬಂಧನ
ಮೈಸೂರು

ಆನೆ ಚೌಕೂರು ಅರಣ್ಯದಲ್ಲಿ ಶ್ರೀಗಂಧ ಕಳವಿಗೆತ್ನಿಸಿದ ಮೂವರ ಬಂಧನ

July 31, 2018

ಪಿರಿಯಾಪಟ್ಟಣ:  ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖಾ ಸಿಬ್ಬಂದಿ ಮಾಲು ಸಮೇತ ಬಂಧಿಸಿರುವ ಘಟನೆ ಭಾನುವಾರ ನಡೆದಿದೆ. ಹುಣಸೂರು ತಾಲೂಕಿನ ಬೀರತಮ್ಮನಹಳ್ಳಿ ಗಿರಿಜನ ಹಾಡಿಯ ಸ್ವಾಮಿ, ನಾಗ, ಮತ್ತು ಮನುಗನಹಳ್ಳಿ ಗ್ರಾಮದ ಮಂಜು ಬಂಧಿತ ರಾಗಿದ್ದು, ತಾಲೂಕಿನ ಆನೆಚೌಕೂರು ಅರಣ್ಯ ವಲಯದಲ್ಲಿ ಭಾನುವಾರ ಆನೆಚೌಕೂರು ಅರಣ್ಯ ವಲಯ ಅಂಕಣ 5 ರ ಕುದುರೆ ಬಿದ್ದಹಳ್ಳಿ ಬಳಿಯ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಾಣೆ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ…

ಪಿರಿಯಾಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ
ಮೈಸೂರು

ಪಿರಿಯಾಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ

July 29, 2018

ಪಿರಿಯಾಪಟ್ಟಣ:  ಯೋಧರ ಬಲಿದಾನದ ಸಂಕೇತವಾಗಿ ಕಾರ್ಗಿಲ್ ಸಂಭ್ರಮಾಚರಣೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನು ಆಚರಿಸಬೇಕಾದುದು ಎಲ್ಲರ ಕರ್ತವ್ಯ ಎಂದು ಪಟ್ಟಣದ N.A.ಟಿ.ವಿ.ಎಸ್. ಶೋರೂಂ ಮಾಲೀಕರಾದ ಅನ್ಸರ್ ಷರೀಫ್ ಹೇಳಿದರು. ಅವರು ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದರು 1998_1999ರಲ್ಲಿ ಗಡಿ ದಾಟಿ ಶತ್ರು ರಾಷ್ಟ್ರದ ಸೈನಿಕರು ಭಾರತವನ್ನು ಆಕ್ರಮಿಸಿದಾಗ ಭಾರತದ ಸೈನಿಕರು ಆಪರೇಷನ್ ವಿಜಯ್ ಹೆಸರಿನಲ್ಲಿ ಅರವತ್ತಕ್ಕೂ ಹೆಚ್ಚು ದಿನಗಳ ಕಾಲ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಟ ನಡೆಸಿದರು. ಐದು ನೂರಕ್ಕೂ ಹೆಚ್ಚು…

ಮಳೆಯಿಂದ ಶಾಲಾ ಮಕ್ಕಳ ಬವಣೆ: ಪೋಷಕರ ಆಕ್ರೋಶ
ಮೈಸೂರು

ಮಳೆಯಿಂದ ಶಾಲಾ ಮಕ್ಕಳ ಬವಣೆ: ಪೋಷಕರ ಆಕ್ರೋಶ

July 25, 2018

ಪಿರಿಯಾಪಟ್ಟಣ: ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಪಟ್ಟಣದ ಆದಿಚುಂಚನಗಿರಿ ಶಾಲೆಯ ಆವರಣ ಕೆಸರು ಗದ್ದೆಯಂತಾಗಿದ್ದು, ಮಕ್ಕಳ ಸ್ಥಿತಿ ಹೇಳತೀರದಾಗಿದೆ. ಇದರಿಂದ ಕುಪಿತಗೊಂಡ ಪೋಷಕರು ಶಾಲೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ ಪ್ರಸಂಗ ಇಂದು ನಡೆಯಿತು. ಪಟ್ಟಣದ ಅಬ್ಬೂರು ವ್ಯಾಪ್ತಿಗೆ ಸೇರಿರುವ ಅದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣ ಮಳೆಯಿಂದಾಗಿ ಶಾಲೆಗೆ ಹೋಗುವ ಮತ್ತು ಬರುವ ಸಂದರ್ಭದಲ್ಲಿ ಮಕ್ಕಳು ಪಡುತ್ತಿರುವ ಸಂಕಷ್ಟದಿಂದ ಪೋಷಷಕರು ಆತಂಕಗೊಂಡು ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ಪೋಷಷಕರಾದ ಟಿ.ಜ.ಪುಟ್ಟರಾಜು ಮೆಲ್ಲಹಳ್ಳಿ ಪರಮೇಶ್, ಪಟ್ಟಣದ ನಟರಾಜ್,…

ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ
ಮೈಸೂರು

ನಾಳೆ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಗಣಾರಾಧನ ಮಹೋತ್ಸವ

June 28, 2018

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠದಲ್ಲಿ ಜೂ.29ರಂದು ಗಣಾರಾಧನಾ ಮಹೋತ್ಸವ ಹಾಗೂ ಶಾಖಾ ಮಠವಾದ ಕನ್ನಡ ಮಠದ 209ನೇ ವರ್ಷಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಠದ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ ಅವರ 90ನೇ ಹಾಗೂ ಶ್ರೀ ಚೆನ್ನವೀರದೇಶಿಕೇಂದ್ರ ಸ್ವಾಮೀಜಿ ಅವರ 37ನೇ ವರ್ಷದ ಗಣಾರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಜೊತೆಗೆ…

ಮಂಗಳವಾರ ಪಿರಿಯಾಪಟ್ಟಣದಲ್ಲಿ 63 ಮಿಮೀ ಮಳೆ
ಮೈಸೂರು

ಮಂಗಳವಾರ ಪಿರಿಯಾಪಟ್ಟಣದಲ್ಲಿ 63 ಮಿಮೀ ಮಳೆ

June 14, 2018

ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಮಂಗಳವಾರ 63 ಮಿಮೀ ಮಳೆಯಾಗಿದೆ. ಹೆಚ್.ಡಿ.ಕೋಟೆ 12.8, ಮೈಸೂರು 0.25 ಮಿಮೀ ಮಳೆಯಾಗಿದ್ದು, ಕೆ.ಆರ್.ನಗರದಲ್ಲಿ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ಅಂತೆಯೇ ನಂಜನಗೂಡು, ಹುಣಸೂರು, ತಿ.ನರಸೀಪುರ ತಾಲೂಕಿನಲ್ಲಿ ಮಳೆಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಂಟ್ರೋಲ್ ಸಿಬ್ಬಂದಿ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೆಆರ್‍ಎಸ್ ಅಣೆಕಟ್ಟಿನಲ್ಲಿ 88.6 ಅಡಿ ನೀರಿದ್ದು, 22,871 ಕ್ಯೂಸೆಕ್ ಒಳ ಹರಿವಿದೆ. 380 ಕ್ಯೂಸೆಕ್ ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 2273.05 ಅಡಿ ನೀರಿದ್ದು, 23,971 ಕ್ಯೂಸೆಕ್ ಒಳ ಹರಿವಿದೆ….

1 2 3
Translate »