Tag: Somwarpet

ಮಳೆಯ ಅಬ್ಬರಕ್ಕೆ ಅಪಾರ ಹಾನಿ
ಕೊಡಗು

ಮಳೆಯ ಅಬ್ಬರಕ್ಕೆ ಅಪಾರ ಹಾನಿ

June 12, 2018

ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ 24ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಹಾನಿ ಮುಂದುವರಿದಿದೆ. ಮರಗಳು ವಿದ್ಯುತ್ ಕಂಬಗಳು ಮುರಿದು ಬೀಳುತ್ತಿರು ವುದರಿಂದ ಸೆಸ್ಕ್ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಅತಿಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯಲ್ಲಿ, ದುರಸ್ತಿ ಕೆಲಸ ಭರದಿಂದ ಸಾಗುತ್ತಿದ್ದರೂ, ಮಳೆ ಅರ್ಭಟ ದಿಂದ ಕೆಲಸಕ್ಕೆ ಹಿನ್ನಡೆಯಾಗಿದೆ. ಪುಷ್ಪಗಿರಿ ತಪ್ಪಲು ಗ್ರಾಮ ಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಅಲ್ಲಿ ದುರಸ್ತಿ ಕೆಲಸಕ್ಕೆ ತೆರಳಲು ಸೆಸ್ಕ್ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಗೌಡಳ್ಳಿ ಗ್ರಾಮ…

ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ
ಕೊಡಗು

ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ

June 12, 2018

ಸೋಮವಾರಪೇಟೆ: ಇಲ್ಲಿನ ಮಾರುಕಟ್ಟೆ ಪ್ರಾಂಗಣದಲ್ಲಿ ಮಳೆ ನೀರು ಸಂಗ್ರಹವಾದ ಕಾರಣ ಸಂತೆ ದಿನವಾದ ಸೋಮವಾರ ವ್ಯಾಪಾರಸ್ಥರು, ಗ್ರಾಹಕರು ಸಮಸ್ಯೆ ಎದುರಿಸಿದರು. ಮೇಲ್ಚಾವಣಿ ಯಿಂದ ನೀರು ಸೋರುತ್ತಿರು ವುದರಿಂದ ಕೆಲ ವ್ಯಾಪಾರಸ್ಥರು ಪ್ಲಾಸ್ಟಿಕ್ ಹೊದಿಕೆಗಳನ್ನು ಕಟ್ಟಿಕೊಂಡು ದಿನಸಿ ಸಾಮಾಗ್ರಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದರು. ತರಕಾರಿ ಮಾರುವವರು ನೀರಿನಲ್ಲಿ ಗುಡ್ಡೆ ಹಾಕಿ ಮಾರಾಟ ಮಾಡಿದರು. ಪ್ರಾಂಗಣ ಪೂರ್ತಿ ಮಳೆ ನೀರಿನಿಂದ ಆವೃತವಾದಂತೆ, ಮಹಿಳೆಯರು, ಮಕ್ಕಳು ಮಾರುಕಟ್ಟೆ ಪ್ರವೇಶಿಸಲು ಭಯ ಪಟ್ಟರು. ಗ್ರಾಮೀಣ ಭಾಗದಿಂದ ಬಂದ ರೈತರು ನೀರಿ ನೊಳಗೆ ನಡೆದಾಡಿ,…

ಕೊಡಗಿನಾದ್ಯಂತ ವರುಣನ ಆರ್ಭಟ
ಕೊಡಗು

ಕೊಡಗಿನಾದ್ಯಂತ ವರುಣನ ಆರ್ಭಟ

June 10, 2018

ಜಿಲ್ಲೆಯಲ್ಲಿ ತೀವ್ರಗೊಂಡ ಮುಂಗಾರು ಧರೆಗುರುಳಿದ ಮರ, ವಿದ್ಯುತ್ ಕಂಬ ಮನೆ ಗೋಡೆ ಕುಸಿತ ಮಡಿಕೇರಿ:  ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರ ಸ್ವರೂಪ ಪಡೆ ದಿದ್ದು, ಉತ್ತಮ ವರ್ಷಧಾರೆಯಾಗುತ್ತಿದೆ. ಮಡಿಕೇರಿ ನಗರದ ವಿವಿಧ ಬಡಾವಣೆ ಗಳಲ್ಲಿ ಬರೆ ಕುಸಿತದ ಘಟನೆಗಳು ನಡೆದಿವೆ. ಜಿಲ್ಲಾ ಕೇಂದ್ರ ಮಡಿಕೇರಿಯ ರಸ್ತೆಗಳು ಗುಂಡಿಮಯವಾಗಿ ಕೆಸರು ತುಂಬಿದ ಹಾದಿ ಯಲ್ಲಿ ಜನ ಮತ್ತು ವಾಹನ ಸಂಚಾರ ದುಸ್ತರವಾಗಿದೆ. ಗುಡ್ಡಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ಮಳೆ ಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಉಳಿ ದಂತೆ ಗ್ರಾಮೀಣ ಪ್ರದೇಶಗಳಲ್ಲಿ…

ದುರಸ್ತಿ ನೆಪದಲ್ಲಿ ಹಣ ದುರುಪಯೋಗ ಆರೋಪ
ಕೊಡಗು

ದುರಸ್ತಿ ನೆಪದಲ್ಲಿ ಹಣ ದುರುಪಯೋಗ ಆರೋಪ

June 5, 2018

ಸೋಮವಾರಪೇಟೆ: ಇಲ್ಲಿನ ಹೈ ಟೆಕ್ ಮಾರುಕಟ್ಟೆ ದುರಸ್ಥಿ ಪಡಿಸುವ ನೆಪದಲ್ಲಿ ಪಪಂ ಆಡಳಿತ ಮಂಡಳಿಯವರು ಲಕ್ಷಾಂತರ ರೂ.ಗಳನ್ನು ದುರುಪಯೋಗ ಮಾಡಿದ್ದಾರೆ ಎಂದು ಸ್ಥಳೀಯ ಇಂದಿರಾ ಗಾಂಧಿ ಅಭಿಮಾನಿಗಳ ಸಂಘ ಆರೋಪಿಸಿದೆ. ಕಳೆದ ಮೂರು ವರ್ಷಗಳಿಂದ ಹೈ ಟೆಕ್ ಮಾರುಕಟ್ಟೆಯನ್ನು ದುರಸ್ಥಿಪಡಿಸಲಾ ಗಿದೆ ಎಂದು ಅಭಿಯಂತರ ವೀರೇಂದ್ರ ಸಮ ಜಾಯಿಷಿ ನೀಡುತ್ತಿದ್ದಾರೆ. ಆದರೆ, ದುರಸ್ಥಿ ಯಾದ ನಂತರವೂ ಮಾರುಕಟ್ಟೆ ಸೋರುತ್ತಿದೆ. ಒಳ ಭಾಗದಲ್ಲಿ ನೀರು ಸಂಗ್ರಹವಾಗಿ ಕೆರೆ ಯಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರ…

ಹಿಂದೂ ದೇವತೆಗಳ ಅಪಮಾನ ತಡೆಗೆ ಮನವಿ
ಕೊಡಗು

ಹಿಂದೂ ದೇವತೆಗಳ ಅಪಮಾನ ತಡೆಗೆ ಮನವಿ

June 3, 2018

ಸೋಮವಾರಪೇಟೆ:  ಹಿಂದೂ ದೇವತೆಗಳ ಹಾಗೂ ಹಿಂದೂ ನೇತಾರರನ್ನು ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಪಮಾನ ಮಾಡುತ್ತಿರುವ ಸನ್ನಿ ವೇಶಗಳನ್ನು ತಡೆಗಟ್ಟಲು ಮಸೂದೆ ಜಾರಿಗೆ ತರ ಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ತಹ ಶೀಲ್ದಾರ್‍ಗೆ ಶನಿವಾರ ಮನವಿ ಸಲ್ಲಿಸಿತು. ತಕ್ಷಣವೇ ಇದರ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳ ಬೇಕೆಂದು ಭಾರತದ ಪ್ರಧಾನಮಂತ್ರಿ ಹಾಗೂ ರಾಜ್ಯದ ಗೃಹ ಮಂತ್ರಿಗಳಿಗೆ ಮನವಿ ಮಾಡಲಾಯಿತು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ. ಮಧು, ಕಿಬ್ಬೆಟ್ಟ ಆನಂದ್, ದೀಪಕ್, ಎಸ್.ಎಲ್ ಸೀತಾರಾಮ್, ಮಸಗೋಡು ಲೋಕೇಶ್,…

ಲಾರಿ ಮಗುಚಿ ಇಬ್ಬರಿಗೆ ಗಾಯ
ಕೊಡಗು

ಲಾರಿ ಮಗುಚಿ ಇಬ್ಬರಿಗೆ ಗಾಯ

May 29, 2018

ಸೋಮವಾರಪೇಟೆ:  ಟಿಂಬರ್ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಮಗುಚಿಬಿದ್ದ ಘಟನೆ ಪಟ್ಟಣ ಸಮೀಪದ ಬಿಳಿಕಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಲಾರಿಯೊಳಗಿದ್ದ ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಧನು ಅವರ ತಲೆ ಹಾಗೂ ಉಮೇಶ್ ಅವರ ಕೈ,ಕಾಲುಗಳಿಗೆ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಟಿಂಬರ್ ಮರದ ನಾಟಾಗಳನ್ನು ತುಂಬಿಸಿಕೊಂಡು ಶನಿವಾರಸಂತೆ ಕಡೆಗೆ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.

ಸೋ.ಪೇಟೆಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಕೊಡಗು

ಸೋ.ಪೇಟೆಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

May 29, 2018

ಸೋಮವಾರಪೇಟೆ: ರೈತರ ಸಾಲ ಮನ್ನಾ ಮಾಡದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಧೋರಣೆಯನ್ನು ಖಂಡಿಸಿ ರಾಜ್ಯವ್ಯಾಪಿ ಬಂದ್‍ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯ ಸರ್ಕಾರಿ ಬಸ್, ಖಾಸಗಿ ವಾಹನಗಳು, ಆಟೋರಿಕ್ಷಾ ಗಳು ಎಂದಿನಂತೆ ಸಂಚರಿಸಿದವು. ಪಟ್ಟಣ ವ್ಯಾಪ್ತಿಯ ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ತಾಲೂಕು ಕಚೇರಿಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ತೆರೆದಿದ್ದವು. ಎಲ್ಲಾ ಶಾಲಾ ಕಾಲೇಜು ಗಳು ಬಂದ್ ಕುರಿತು ನಿಖರ ಮಾಹಿತಿ ದೊರೆಯದ ಗ್ರಾಮೀಣ ಪ್ರದೇಶದ ರೈತರು ಸೋಮವಾರ ಸಂತೆ ದಿನವಾಗಿದ್ದರಿಂದ ಮಾರ್ಕೆಟ್ ಹಾಗೂ ಆರ್‍ಎಂಸಿ…

ಬೋವಿ ಜನಾಂಗ ಶಾಸಕರಿಗೆ ಸಚಿವ ಸ್ಥಾನಕ್ಕೆ ಆಗ್ರಹ
ಕೊಡಗು

ಬೋವಿ ಜನಾಂಗ ಶಾಸಕರಿಗೆ ಸಚಿವ ಸ್ಥಾನಕ್ಕೆ ಆಗ್ರಹ

May 28, 2018

ಸೋಮವಾರಪೇಟೆ: ರಾಜ್ಯ ಸಚಿವ ಸಂಪುಟದಲ್ಲಿ ಭೋವಿ ಸಮುದಾಯದ ಶಾಸಕರಿಗೆ ಸ್ಥಾನ ನೀಡಬೇಕೆಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಜಿತ್, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಭೋವಿ ಜನಾಂಗಕ್ಕೆ ಸೇರಿದ ವೆಂಕಟರಮಣಪ್ಪ ಹುಲಿಗೇರಿ ಮತ್ತು ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳು ಆಯ್ಕೆಯಾಗಿದ್ದು, ಇವರಲ್ಲಿ ವೆಂಕಟರ ಮಣಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಭೋವಿ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದು, ಶಾಸಕರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ…

ದ್ವೇಷದಿಂದ ಕಾಳುಮೆಣಸು ಬಳ್ಳಿ ಧ್ವಂಸ
ಕೊಡಗು

ದ್ವೇಷದಿಂದ ಕಾಳುಮೆಣಸು ಬಳ್ಳಿ ಧ್ವಂಸ

May 26, 2018

ಸೋಮವಾರಪೇಟೆ:  ಕಾಫಿ ತೋಟದಲ್ಲಿದ್ದ ಕಾಳುಮೆಣಸು ಬಳ್ಳಿಗಳನ್ನು ಕತ್ತಿಯಿಂದ ಕಡಿದು ನಷ್ಟಗೊಳಿಸಿರುವ ಘಟನೆ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ. ಚೌಡ್ಲು ಗ್ರಾಮದ ಸಿ.ಕೆ. ದೇವಯ್ಯ ಅವರಿಗೆ ಸೇರಿದ 2 ಎಕರೆ ಕಾಫಿ ತೋಟದಲ್ಲಿದ್ದ ಸುಮಾರು 10 ರಿಂದ 12 ವರ್ಷದ ಕಾಳುಮೆಣಸಿನ 200ಕ್ಕೂ ಅಧಿಕ ಬಳ್ಳಿಗಳನ್ನು ಕತ್ತಿಯಿಂದ ಕಡಿದು ತುಂಡರಿಸಲಾಗಿದ್ದು, ಸಹೋದರನ ಪತ್ನಿ ಹಾಗೂ ಪುತ್ರನಿಂದ ಕೃತ್ಯ ನಡೆದಿದೆ ಎಂದು ದೇವಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಠಾಣಾಧಿಕಾರಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕರಿಗೆ…

ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ
ಕೊಡಗು

ಸೋಮವಾರಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ

May 25, 2018

ಸೋಮವಾರಪೇಟೆ:  ಡಾ.ಬಿ.ಆರ್. ಅಂಬೇಡ್ಕರ್ ತನ್ನ ವಿದ್ಯಾರ್ಥಿ ದಿಸೆ ಯಿಂದಲೇ ಸಾಕಷ್ಟು ಕಷ್ಟ ಕಾರ್ಪಣ್ಯ ಗಳನ್ನು ಎದುರಿಸಿದ್ದರೂ ಅವರು ಗಳಿಸಿದ ಉನ್ನತ ಶಿಕ್ಷಣವನ್ನು ಇಡೀ ವಿಶ್ವವೇ ಗೌರವ ನೀಡುವಂತೆ ಮಾಡಿದೆ ಎಂದು ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ.ಮುರಳೀಧರ್ ಅಭಿಪ್ರಾಯಿಸಿದರು. ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸ ಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ, ಆದಿದ್ರಾವಿಡ ಸಮಾ ಜದ ಮೊದಲನೇ ವರ್ಷದ ವಾರ್ಷಿಕೋ ತ್ಸವ ಹಾಗೂ ಜನಾಂದೋಲನ ಸಮಾವೇಶ ದಲ್ಲಿ ಮುಖ್ಯಭಾಷಣಕಾರರಾಗಿ…

1 5 6 7 8
Translate »