ಕೊಡಗಿನಾದ್ಯಂತ ವರುಣನ ಆರ್ಭಟ
ಕೊಡಗು

ಕೊಡಗಿನಾದ್ಯಂತ ವರುಣನ ಆರ್ಭಟ

June 10, 2018
  • ಜಿಲ್ಲೆಯಲ್ಲಿ ತೀವ್ರಗೊಂಡ ಮುಂಗಾರು
  • ಧರೆಗುರುಳಿದ ಮರ, ವಿದ್ಯುತ್ ಕಂಬ
  • ಮನೆ ಗೋಡೆ ಕುಸಿತ

ಮಡಿಕೇರಿ:  ಜಿಲ್ಲೆಯಾದ್ಯಂತ ಮುಂಗಾರು ಮಳೆ ತೀವ್ರ ಸ್ವರೂಪ ಪಡೆ ದಿದ್ದು, ಉತ್ತಮ ವರ್ಷಧಾರೆಯಾಗುತ್ತಿದೆ. ಮಡಿಕೇರಿ ನಗರದ ವಿವಿಧ ಬಡಾವಣೆ ಗಳಲ್ಲಿ ಬರೆ ಕುಸಿತದ ಘಟನೆಗಳು ನಡೆದಿವೆ.

ಜಿಲ್ಲಾ ಕೇಂದ್ರ ಮಡಿಕೇರಿಯ ರಸ್ತೆಗಳು ಗುಂಡಿಮಯವಾಗಿ ಕೆಸರು ತುಂಬಿದ ಹಾದಿ ಯಲ್ಲಿ ಜನ ಮತ್ತು ವಾಹನ ಸಂಚಾರ ದುಸ್ತರವಾಗಿದೆ. ಗುಡ್ಡಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ಮಳೆ ಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಉಳಿ ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆಹಾನಿ ಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಮರಗಳು ಉರುಳಿ ಬಿದ್ದ ಘಟ ನೆಯೂ ನಡೆದಿದ್ದು, ಮಡಿಕೇರಿ ಗ್ರಾಮಾಂ ತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಶಾಸಕ ಅಪ್ಪಚ್ಚು ರಂಜನ್ ಅವರ ನಿವಾಸವಿರುವ ಕುಂಬೂರು ಬಳಿ ಭಾರಿ ಗಾತ್ರದ ಮರ ಉರುಳಿ ಬಿದ್ದು, ಪಯಾಣ ಕರ ಬಸ್ ನಿಲ್ದಾಣ ಧ್ವಂಸ ಗೊಂಡಿದೆ. ಅದರೊಂದಿಗೆ 3 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲೇ ಮರ ತೆರವು ಮತ್ತು ವಿದ್ಯುತ್ ತಂತಿಗಳ ತೆರವು ಕಾರ್ಯ ಮಾಡಲಾಯಿತು.

ಮಡಿಕೇರಿ ನಗರದ ಹೊರವಲಯ ಬೋಯಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಾರಿ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ 1 ಗಂಟೆಗೆ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾ ಯಿತು. ಲೋಕೋಪಯೋಗಿ ಮತ್ತು ಅರಣ್ಯ ಇಲಾಖಾ ಸಿಬ್ಬಂದಿಗಳು ಮರ ಕತ್ತ ರಿಸಿ ವಾಹನ ಸಂಚಾರ ಸುಗಮಗೊಳಿಸಿದರು. ಮರ ಬಿದ್ದ ಪರಿಣಾಮ ಹೆದ್ದಾರಿ ಉದ್ದಕ್ಕೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು.

ಸೋಮವಾರಪೇಟೆ ವರದಿ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕಳೆದ 24 ಗಂಟೆಗಳಿಂದ ಬಿರು ಗಾಳಿ ಸಹಿತ ಧಾರಾಕಾರ ಮಳೆ ಸುರಿ ಯುತ್ತಿದ್ದು, ಬಹತೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.ಅಲ್ಲಲ್ಲಿ ಮರಗಳು ಧರೆಗುರಿಳಿದ್ದು, ವಿದ್ಯುತ್ ಕಂಬಗಳು ಮುರಿದು, ತಂತಿಗಳು ತುಂಡಾಗಿವೆ. ಕುಂಬೂರು ಅಂಗನವಾಡಿ ಆವರಣಗೋಡೆ ಹಾಗು ಗೌಡಳ್ಳಿ ಗ್ರಾಮದ ವೇದಾವತಿ ಎಂಬವರ ಮನೆಯ ಮುಂಭಾ ಗದ ಕಾಂಪೌಂಡ್ ಮೇಲೆ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಗೋಡೆ ಕುಸಿದು ಹಾನಿಯಾಗಿದೆ.
ಹಾನಗಲ್ಲು ಗ್ರಾಮದ ಹೆಚ್.ಎಂ.ರವಿ, ಯಡೂರು ಗ್ರಾಮದ ಬಿ.ನಂಜಪ್ಪ, ವಡಯನಪುರ ಗ್ರಾಮದ ಸಂಶಿನಾ ಎಂಬವರ ವಾಸದ ಮನೆ ಮೇಲೆ, ಮರ ಬಿದ್ದು ಹಾನಿಯಾಗಿದೆ.

ಮಾದಾಪುರ ಸಮೀಪದ ಹಮ್ಮಿಯಾಲ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರು ಮಲ ಗಿದ್ದ ಸಂದರ್ಭ ಗಾಳಿ ಮಳೆಗೆ ಶೆಡ್ ಮುರಿದು ಬಿದ್ದು, ಕೇರಳ ಮೂಲದ ನಾಲ್ವರು ಗಾಯಗೊಂಡಿದ್ದಾರೆ. ಸೋಮ ವಾರಪೇಟೆ ಪಟ್ಟಣದ ಶನಿವಾರಸಂತೆ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಆ ಸಮಯದಲ್ಲಿ ವಿದ್ಯುತ್ ಇಲ್ಲದಿರು ವುದರಿಂದ ಅನಾಹುತ ತಪ್ಪಿದೆ.

ಸೋಮವಾರಪೇಟೆ ಉಪವಿಭಾಗದ 11ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಹಾನಿ ಯಾಗಿದ್ದು, ಕಂಬಗಳನ್ನು ಸರಿಪಡಿಸ ಲಾಗುತ್ತಿದೆ. ಸೋಮವಾರ ಹೆಚ್ಚುವರಿ ಕಂಬಗಳನ್ನು ತರಲಾಗುವುದು. ತುರ್ತು ಕಾರ್ಯನಿರ್ವಹಣೆಗೆ ಸಿಬ್ಬಂದಿಗಳು ಹಾಗು ಒಂದು ಜೀಪನ್ನು ನೀಡಲು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.

ನಾಪೋಕ್ಲು ವರದಿ: ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಸಮೀಪದ ನೆಲಜಿ ಗ್ರಾಮದ ಮಾಜಿ ಸೈನಿಕ ಮಾಣಿಚಂಡ ಎಸ್.ಪಳಂಗಪ್ಪ ಅವರ ಮನೆಯ ಮೇಲೆ ಶನಿವಾರ ಮಧ್ಯಾಹ್ನ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದು ಹಾನಿ ಸಂಭವಿಸಿದೆ. ಮನೆಯ ಸಮೀಪದ ಗೋಡೌನ್ ಮೇಲೆ ಮರ ಬಿದ್ದು ಶೀಟುಗಳು ಧ್ವಂಸಗೊಂಡಿವೆ. ಮರಬಿದ್ದಿದ್ದು ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರಾಮಯ್ಯ ಗ್ರಾಮಲೆಕ್ಕಿಗರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೋಣಿಕೊಪ್ಪಲು ವರದಿ: ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ವಾಣಿಜ್ಯ ನಗರ ಗೋಣ ಕೊಪ್ಪಲಿನ ಕೀರೆ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಹಳ್ಳ,ಕೊಳ್ಳಗಳು ತುಂಬಿ ಹರಿಯುತ್ತಿವೆ.
ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಣ ಹಡ್ಲು ಗ್ರಾಮದ ಕಾರ್ಮಿಕ ಮಹಿಳೆ ಮುತ್ತಮ್ಮ ಎಂಬುವರ ಮನೆಯ ಮೇಲೆ ಮರ ಉರುಳಿ ಬಿದ್ದಿದು ಮನೆ ಭಾಗಶಃ ಕುಸಿತಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ. ಸುದ್ದಿ ತಿಳಿದ ಪೊನ್ನಂ ಪೇಟೆಯ ರೆವಿನ್ಯೂ ಅಧಿಕಾರಿಗಳಾದ ಮಂಜುನಾಥ್, ಮುಕುಂದ, ಇನ್ನಿತರರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ.

ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ.ನಗರದ ನಿವಾಸಿ ಗಳಾದ ಸಂಶುನ್ನಿಶಾ ಹಾಗೂ ಅಬ್ದುಲ್ ಮನ್ನಸಾ ಎಂಬುವರ ಮನೆಗೆ ಸಮೀಪದಲ್ಲಿದ್ದ ಮರ ಉರುಳಿ ಬಿದ್ದಿದೆ. ಒಂದೇ ಮರ ಎರಡು ಮನೆಗಳಿಗೂ ಹಾನಿ ಮಾಡಿದೆ. ಬೆಳ್ಳಿಗೆಯಿಂದಲೇ ಮಳೆ ಸುರಿ ಯುತ್ತಿದ್ದು ಸಂಜೆಯ ವೇಳೆಗೆ ಮಳೆ ಸ್ವಲ್ಪ ಪ್ರಮಾಣದ ಬಿಡುವು ನೀಡಿತ್ತು.

ಗೋಣ ಕೊಪ್ಪ ನಗರ ಹೊರತು ಪಡಿಸಿ ಗ್ರಾಮೀಣ ಪ್ರದೇಶವಾದ ತಿತಿಮತಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೆ ಜನತೆ ತಮ್ಮ ಮೊಬೈಲ್‍ಗಳನ್ನು ಚಾರ್ಜ್ ಮಾಡಿ ಸಿಕೊಳ್ಳಲು ನಗರದತ್ತ ಆಗಮಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಿಬ್ಬಂದಿಗಳು ಮಳೆಯ ನಡುವೆ ಕೆಲಸ ದಲ್ಲಿ ನಿರತರಾಗಿದ್ದರು. ಕೆಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸಿಗಲು ಕೆಲವು ದಿನಗಳು ಬೇಕಾಗಲಿದೆ. ಶೀಮಂಗಲ, 22,ಬಾಳೆಲೆ 18, ಗೋಣ ಕೊಪ್ಪ 23, ವಿದ್ಯುತ್ ಕಂಬಗಳು ಹಾಗೂ 8 ಟ್ರಾನ್ಸ್ ಫಾರಂ ಹಾಳಾಗಿವೆ. ನಿಟ್ಟೂರು ಬಳಿ ಇರುವ ಲಕ್ಷ್ಮಣ ತೀರ್ಥ ನದಿ ನೀರು ಅಪಾಯ ಮಟ್ಟ ಮೀರಿರುವುದಿಲ್ಲ. ವಾಹನ ಸಂಚಾರ ಎಂದಿನಂತೆ ಸಾಗಿದೆ.

Translate »