ವಿರಾಜಪೇಟೆ: ವಿರಾಜ ಪೇಟೆಯ ಮುಸ್ಲಿಂ ಒಕ್ಕೂಟ ಏರ್ಪಡಿಸಿದ್ದ ಸೌಹಾರ್ದ ಇಫ್ತಾರ್ ಕೂಟ ನಿಜಕ್ಕೂ ಪ್ರೀತಿ ಮತ್ತು ಸಹಬಾಳ್ವೆಗೆ ಉತ್ತಮ ನಿದ ರ್ಶನವಾಗಿತ್ತು.
ಸಮಾಜದ ವಿಭಿನ್ನ ಕ್ಷೇತ್ರಗಳ ಪ್ರಮು ಖರು ಪಾಲ್ಗೊಂಡಿದ್ದ ಇಫ್ತಾರ್ ಕೂಟ ಮಾನವೀಯ ಐಕ್ಯತೆಯನ್ನು ಸಾರುವಂತ ದಾಗಿತ್ತು. ಖಾಸಗಿ ಬಸ್ ನಿಲ್ದಾಣದ ಸಮೀ ಪದ ಡಿ.ಹೆಚ್.ಎಸ್. ಎನ್‍ಕ್ಲೇವ್‍ನಲ್ಲಿ ನಡೆದ ಸೌಹಾರ್ದ ಕೂಟದಲ್ಲಿ ಜಮಾ ಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಕರಾವಳಿ ವಲಯ ಸಂಚಾಲಕರಾದ ಅಕ್ಬರಲಿ ಉಡುಪಿಯ ವರು ರಮದಾನ್ ಸಂದೇಶ ನೀಡಿದರು. ಅವರು ಮಾತನಾಡುತ್ತಾ, ಮನುಷ್ಯರ ಮಧ್ಯೆ ಭಿನ್ನತೆ ಹಾಗೂ ಸಂಶಯದ ಬೀಜ ಬಿತ್ತುವ ಶಕ್ತಿಗಳಿಗೆ ಸಮಾಜವು ಉತ್ತಮ ಉತ್ತರ ನೀಡುವಂತಾಗಬೇಕು.
ಯಾವುದೇ ಧರ್ಮ ಮನುಷ್ಯರನ್ನು ಕಡೆಗಣ ಸಲು ಕಲಿಸುವುದಿಲ್ಲ. ದೇವನಿಗೆ ಅತಿಹೆಚ್ಚು ಭಯಪಟ್ಟು ಅವನ ಸಾಮೀಪ್ಯವನ್ನು ಯಾರು ಬಯಸು ತ್ತಾರೋ ಅವರೇ ದೇವ ನಿಷ್ಠಯುಳ್ಳವರು ಎನಿಸಲಾಗುತ್ತದೆ. ರಮದಾನಿನ ಉಪವಾಸ ವ್ರತವು ಮನು ಷ್ಯನ ಬದುಕನ್ನು ಸಂಸ್ಕರಿಸುತ್ತದೆ ಮತ್ತು ಮಾತು ಹಾಗೂ ಮನಸ್ಸಿಗೆ ಹತೋಟಿ ಯನ್ನು ನೀಡುತ್ತದೆ. ಉಪವಾಸದ ಆಚ ರಣೆಯಿಂದ ಮನುಷ್ಯನ ಮುಂದಿನ ಬದುಕು ಯಶಸ್ವಿಯಾಗುತ್ತದೆ. ಎಲ್ಲಾ ಧರ್ಮಗಳ ಉದ್ದೇಶವು ಮನುಷ್ಯ ಹೃದಯಗಳನ್ನು ಒಂದುಗೂಡಿಸುವು ದಾಗಿದೆ. ಆದರೆ ದುರದೃಷ್ಟವಶಾತ್ ಸೋಗಲಾಡಿ ಧರ್ಮಾನುಯಾಯಿಗಳು ಸಮಾಜಕ್ಕೆ ಕಂಟÀಕವಾಗುತ್ತಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿದ್ದ ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಈ ಸಂದರ್ಭದಲ್ಲಿ ಮಾತ ನಾಡುತ್ತಾ, ಮನುಷ್ಯ ಧರ್ಮ ಎಂಬು ವುದು ಅತಿಶ್ರೇಷ್ಠ. ಉಪವಾಸದ ಅರ್ಥ ಭಗವಂತನ ಸಾಮೀಪ್ಯ. ಬದುಕನ್ನು ಪ್ರೀತಿ ಯಿಂದ ಆರಂಭಿಸಿ ಪ್ರೀತಿಯಿಂದಲೇ ಮುಗಿಸಬೇಕು. ಮನುಷ್ಯ ಎಲ್ಲವನ್ನು ಮರೆತು ಸಮಾಜದ ಒಳಿತಿಗಾಗಿ ಬದುಕಲು ಉಪ ವಾಸವು ಕಲಿಸುತ್ತದೆ. ಧರ್ಮಗಳೆಲ್ಲವೂ ಬಾಂದವ್ಯದ ಸಂದೇಶವನ್ನು ಬಿತ್ತರಿಸಿವೆ. ಧರ್ಮದ ಅನುಯಾಯಿಗಳು ನೈಜ ಧರ್ಮವನ್ನು ತಮ್ಮ ಬದುಕಿನಲ್ಲಿ ಅಳವಡಿಸಿದಲ್ಲಿ sಸಮಸ್ಯೆಗಳು ಉದ್ಭವಿ ಸುವುದಿಲ್ಲ ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ಗೋಣ ಕೊಪ್ಪ ಕಾವೇರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎ. ಪೂವಣ್ಣ ಈ ಸಂದರ್ಭದಲ್ಲಿ ಹಿತನುಡಿಗಳನ್ನು ಆಡಿ ದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಕೆ.ಪಿ.ಕೆ.ಮುಹಮ್ಮದ್ ಹಾಗೂ ಮುಸ್ಲಿಮ್ ಒಕ್ಕೂಟದ ಉಪಾ ಧ್ಯಕ್ಷ ನಿಸಾರ್ ಅಹಮದ್ ವೇದಿಕೆಯಲ್ಲಿ ದ್ದರು. ಆರ್.ಕೆ.ಅಹಮದ್ ತಾಹಾ ಖಿರಾ ಅತ್ ಪಠಿಸಿದರು. ಪಿ.ಕೆ.ಅಬ್ದುಲ್ ರೆಹೆ ಮಾನ್ ಸ್ವಾಗತಿಸಿದರು.