ಲಾರಿ ಮಗುಚಿ ಇಬ್ಬರಿಗೆ ಗಾಯ
ಕೊಡಗು

ಲಾರಿ ಮಗುಚಿ ಇಬ್ಬರಿಗೆ ಗಾಯ

May 29, 2018

ಸೋಮವಾರಪೇಟೆ:  ಟಿಂಬರ್ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಮಗುಚಿಬಿದ್ದ ಘಟನೆ ಪಟ್ಟಣ ಸಮೀಪದ ಬಿಳಿಕಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಲಾರಿಯೊಳಗಿದ್ದ ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಧನು ಅವರ ತಲೆ ಹಾಗೂ ಉಮೇಶ್ ಅವರ ಕೈ,ಕಾಲುಗಳಿಗೆ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಟಿಂಬರ್ ಮರದ ನಾಟಾಗಳನ್ನು ತುಂಬಿಸಿಕೊಂಡು ಶನಿವಾರಸಂತೆ ಕಡೆಗೆ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.

Translate »