ಸೋಮವಾರಪೇಟೆ: ಇಲ್ಲಿನ ಹೈ ಟೆಕ್ ಮಾರುಕಟ್ಟೆ ದುರಸ್ಥಿ ಪಡಿಸುವ ನೆಪದಲ್ಲಿ ಪಪಂ ಆಡಳಿತ ಮಂಡಳಿಯವರು ಲಕ್ಷಾಂತರ ರೂ.ಗಳನ್ನು ದುರುಪಯೋಗ ಮಾಡಿದ್ದಾರೆ ಎಂದು ಸ್ಥಳೀಯ ಇಂದಿರಾ ಗಾಂಧಿ ಅಭಿಮಾನಿಗಳ ಸಂಘ ಆರೋಪಿಸಿದೆ.
ಕಳೆದ ಮೂರು ವರ್ಷಗಳಿಂದ ಹೈ ಟೆಕ್ ಮಾರುಕಟ್ಟೆಯನ್ನು ದುರಸ್ಥಿಪಡಿಸಲಾ ಗಿದೆ ಎಂದು ಅಭಿಯಂತರ ವೀರೇಂದ್ರ ಸಮ ಜಾಯಿಷಿ ನೀಡುತ್ತಿದ್ದಾರೆ. ಆದರೆ, ದುರಸ್ಥಿ ಯಾದ ನಂತರವೂ ಮಾರುಕಟ್ಟೆ ಸೋರುತ್ತಿದೆ. ಒಳ ಭಾಗದಲ್ಲಿ ನೀರು ಸಂಗ್ರಹವಾಗಿ ಕೆರೆ ಯಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.