ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ
ಮಂಡ್ಯ

ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ

June 5, 2018
  • ಅರಮನೆ ಬಂಗಾರ ಮಾರಿ ಕೆಆರ್‍ಎಸ್ ನಿರ್ಮಿಸಿದ ಮಹಾತ್ಮ ನಾಲ್ವಡಿ: ಆಲಕೆರೆ ಸಿದ್ದರಾಜು
  • ಆದರ್ಶ ರಾಜ್ಯದ ನೇತಾರ ನಾಲ್ವಡಿ: ಜಿ.ಟಿ.ವೀರಪ್ಪ

ಮಂಡ್ಯ:ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾ ಚರಣೆಯನ್ನು ವಿವಿಧ ಸಂಘ ಸಂಸ್ಥೆ ಗಳಿಂದ ಸೋಮವಾರ ಆಚರಿಸಲಾಯಿತು.

ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ವಿವಿಧೆಡೆ ನಾಲ್ವಡಿ ಜಯಂತ್ಯುತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ: ನಗರದಲ್ಲಿ ಜಿಲ್ಲಾ ಜಾಗೃತ ಅಂಕಣಗಾರರ ವೇದಿಕೆ ಹಾಗೂ ಜಿಲ್ಲಾ ಡಳಿತದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ನಮಿಸಲಾಯಿತು.

ಕನ್ನಂಬಾಡಿ ನಿರ್ಮಿಸಿದ ಮಹಾತ್ಮ: ಅರಮನೆಯ ಬಂಗಾರ ಮಾರಿ ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿದ ಮಹಾತ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಜಾಗೃತ ಅಂಕಣಕಾರರ ವೇದಿಕೆ ಅಧ್ಯಕ್ಷ ಪ್ರೊ.ಸಿದ್ದ ರಾಜು ಆಲಕೆರೆ ಬಣ ್ಣಸಿದರು.ನಗರದ ಪಿಇಟಿ ಕ್ರೀಡಾಂಗಣದ ಮುಂಭಾಗ ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ ವತಿಯಿಂದ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆಯಲ್ಲಿ ನಾಲ್ವಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ಮಹಾತ್ಮ ಗಾಂಧಿಯವರಿಂದ `ರಾಜರ್ಷಿ’ ಎಂದು ಬಿರುದಾಂಕಿತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶ ದೇಶದ ಆಡಳಿತಗಾರರಿಗೆ ಮಾದರಿ ಎಂದು ಅವರು ತಿಳಿಸಿದರು.

ನಾಲ್ವಡಿ ಅವರು ಮೈಸೂರು ಸಂಸ್ಥಾನದ ರಾಜರಾಗಿ ಆಳ್ವಿಕೆ ನಡೆಸದಿದ್ದರೆ ಮಂಡ್ಯ ಜನ ಇಂದು ಈ ಮಟ್ಟದ ಜೀವನ ನಡೆ ಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ 567 ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನ ಪ್ರವರ್ಧಮಾನಕ್ಕೆ ಬಂದಿದ್ದು ನಾಲ್ವಡಿ ಅವರ ಆಡಳಿತದಿಂದಲೇ. ಇಂದು ಜನಪ್ರತಿ ನಿಧಿಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಆದರೆ ನಾಲ್ವಡಿ ಅವರು ಅರಮನೆಯ ಬಂಗಾರವನ್ನು ಮಾರಿ ಕನ್ನಂಬಾಡಿ ಅಣೆ ಕಟ್ಟೆ ನಿರ್ಮಿಸಿ ಮಂಡ್ಯದ ಜನರ ಬದುಕು ಹಸನುಗೊಳಿಸಿದರು. ಮಾತ್ರವಲ್ಲ ಭದ್ರಾ ವತಿ ಕಬ್ಬಿಣ, ವಿಮಾನ ಕಾರ್ಖಾನೆ, ಪಿಂಗಾಣ , ಗಾಜು, ಮೈಸೂರು ಸೋಪ್, ಸಿಮೆಂಟ್, ಸಕ್ಕರೆ ಕಾರ್ಖಾನೆ ಸ್ಥಾಪನೆ ಸೇರಿ ದಂತೆ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ಮಂಡ್ಯದ ಜನರಿಗೆ ಪ್ರಾತಃಸ್ಮರಣೀಯರಾಗಿದ್ದಾರೆ. ಇಂತಹ ಮಹಾನುಭಾವರ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಈ ಸಂದರ್ಭ ವಾಯುವಿಹಾರಿಗಳು, ನಗೆಕೂಟದ ಸದಸ್ಯರು, ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ನಿವೃತ್ತ ಇಂಜಿನಿ ಯರ್ ನಾಗರಾಜು ಮತ್ತಿತರರು ಪಾಲ್ಗೊಂ ಡಿದ್ದರು.

ಆದರ್ಶ ರಾಜ್ಯದ ನೇತಾರ ನಾಲ್ವಡಿ: ಆದರ್ಶ ರಾಜ್ಯದ ಪರಿಕಲ್ಪನೆಯನ್ನು ದೇಶ ದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಜಿ.ಟಿ.ವೀರಪ್ಪ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರಜಾ ಪ್ರೇಮಿಯಾಗಿದ್ದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಶೈಕ್ಷಣ ಕ, ಕೈಗಾರಿಕಾ ವಲಯ, ನೀರಾವರಿ, ಸಾರಿಗೆ, ಸಾಹಿತ್ಯ ಹಾಗೂ ಕೃಷಿ ಮೊದಲಾದ ಕ್ಷೇತ್ರ ಗಳಿಗೆ ನೀಡಿದ ಕೊಡುಗೆ ಅಪಾರ ವಾದದ್ದು ಎಂದು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನರಿಗೆ ಅವಶ್ಯವಾದದ್ದನ್ನು ಮನಗೊಂಡು ಜನರ ಹಿತಾಸಕ್ತಿ ಹಾಗೂ ಜನರ ಶ್ರೇಯೋ ಭಿವೃದ್ಧಿಗಾಗಿ ಆಡಳಿತ ನಡೆಸಿದರು. ಅಲ್ಲದೇ ಸ್ತ್ರೀಯರ ಬದುಕನ್ನು ಹಸನು ಮಾಡುವ ದೃಷ್ಟಿಯಿಂದ ದೇವದಾಸಿ ಪದ್ಧತಿ, ಗೆಜ್ಜೆ ಪೂಜೆ ತಡೆಗಟ್ಟಲು ಕಾನೂನು ರೂಪಿಸಿ ಅನುಷ್ಠಾನಗೊಳಿಸಿದರು. ಪ್ರತಿಯೊಬ್ಬರು ಶಿಕ್ಷಣ ಪಡೆದು ಜ್ಞಾನಗಳಿಸಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ನೂರಾರು ಶಾಲಾ ಕಾಲೇಜುಗಳನ್ನು ತೆರೆದರು ಎಂದು ತಿಳಿಸಿದರು.
ರೈತರ ಜೀವನ ಮಟ್ಟ ಸುಧಾರಣೆಗಾಗಿ ಕೃಷಿ ಇಲಾಖೆ, ಕೃಷಿ ಬ್ಯಾಂಕ್ ಹಾಗೂ ರೈತ ಸಹಕಾರಿ ಬ್ಯಾಂಕ್‍ಗಳನ್ನು ಪ್ರಾರಂಭಿಸಿ ರೈತರಿಗೆ ಸಾಲ ದೊರಕಿಸಿಕೊಡಲು ಶ್ರಮಿ ಸಿದರು. ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿ ವಿದ್ಯುತ್ ಒದಗಿಸಿದ `ಕನ್ನಡದ ಕಣ್ಮಣ ’ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೊಸ ಆಡಳಿತ ನೀತಿ, ದುರ್ಬಲ ವರ್ಗಗಳಿಗೆ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಜಗತ್ತಿಗೆ ಮಾದರಿ ಯಾಗಿದೆ ಎಂದು ತಿಳಿಸಿದ ಅವರು ಉತ್ತಮ ಆಡಳಿತ ನಿರ್ವಹಣೆ ದೃಷ್ಟಿಯಿಂದ ರೈತರು, ವರ್ತಕರು, ಗ್ರಾಮೀಣರು, ಅಲ್ಪ ಸಂಖ್ಯಾಂತರು, ಹಿಂದುಳಿದ ವರ್ಗದವರು ಸೇರಿದಂತೆ ಜನಪ್ರತಿನಿಧಿಗಳಿಂದ ಕೂಡಿದ ಪ್ರಜಾಪ್ರತಿನಿಧಿ ಸಭೆಯನ್ನು ರಚಿಸಿದರು. ಇದು ಭಾರತದಲ್ಲೇ ಮೊದಲ ಪ್ರಜಾಪ್ರತಿ ನಿಧಿ ಸಭೆಯಾಗಿತ್ತು ಎಂದು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶಗಳು ಹಾಗೂ ಅಭಿವೃದ್ಧಿಗಾಗಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಇಂದಿನ ಯುವಕರು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಮಂಡ್ಯ ಎಸಿ ಚಿದಾನಂದ್, ನೆಹರು ಯುವ ಕೇಂದ್ರದ ಬಸವರಾಜು ಹಾಗೂ ಇತರೆ ಅಧಿಕಾರಿ ಗಳು ಉಪಸ್ಥಿತರಿದ್ದರು.

ಶಿಕ್ಷಣ ಹಕ್ಕನ್ನು ಕಲ್ಪಿಸಿಕೊಟ್ಟ ಮಹಾನ್ ನಾಯಕ ಒಡೆಯರ್

ಮದ್ದೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಮತದಾನ ಮತ್ತು ಶಿಕ್ಷಣ ಹಕ್ಕನ್ನು ಕಲ್ಪಿಸಿಕೊಟ್ಟ ಮಹಾನ್ ನಾಯಕ ಎಂದು ತಹಶೀಲ್ದಾರ್ ನಾಗ ರಾಜು ಬಣ ್ಣಸಿದರು.ತಾಲೂಕಿನ ಚಿಕ್ಕಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇ ಕಾನಂದ ಯುವ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘ, ಮನುಜಮತ ಸೇವಾ ಟ್ರಸ್ಟ್ ವತಿ ಯಿಂದ ನಡೆದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.

ನಾಲ್ವಡಿ ಅವರು ಜಿಲ್ಲೆಯಲ್ಲಿ ಕೃಷ್ಣ ರಾಜಸಾಗರ ಅಣೆಕಟ್ಟೆ ಕಟ್ಟಿಸುವ ಮೂಲಕ ಜಿಲ್ಲೆಯನ್ನು ಹಚ್ಚ ಹಸಿರಾ ಗುವಂತೆ ಮಾಡಿದರು. ಜೊತೆಗೆ ಕೈಗಾರಿಕೆ, ತಂತ್ರಜ್ಞಾನಕ್ಕೆ ಮಹತ್ವ ನೀಡಿದರು. ಎಲ್ಲ ವರ್ಗದವರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನರ ಮನಸಿನಲ್ಲಿ ಅಚ್ಚಳಿಯದೇ ಉಳಿದ ಮೇರು ವ್ಯಕ್ತಿತ್ವ ಎಂದು ತಿಳಿಸಿದರು.
ಈ ವೇಳೆ ಸ್ವಾಮಿ ವಿವೇಕಾನಂದ ಯುವ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಲಾರಾಪ್ರಸನ್ನ, ಪ್ರಭಾರ ಮುಖ್ಯಶಿಕ್ಷಕ ಮೂಡ್ಲಿಗೌಡ, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆನಂದ್, ಕಂದಾಯ ಇಲಾಖೆಯ ರೆವಿನ್ಯೂ ಇನ್‍ಸ್ಪೆಕ್ಟರ್ ಚಂದ್ರಪ್ಪ ಇನ್ನಿತರರಿದ್ದರು

Translate »