Tag: T. Narasipura

ತ್ರಿವೇಣಿ ನಗರದಲ್ಲಿ ಚುನಾವಣಾ ಬೂತ್ ಸ್ಥಾಪನೆಗೆ ಮನವಿ
ಮೈಸೂರು

ತ್ರಿವೇಣಿ ನಗರದಲ್ಲಿ ಚುನಾವಣಾ ಬೂತ್ ಸ್ಥಾಪನೆಗೆ ಮನವಿ

February 8, 2019

ಟಿ.ನರಸೀಪುರ: ತ್ರಿವೇಣಿನಗರದಲ್ಲಿ ಚುನಾವಣೆ ಬೂತ್ ಅನ್ನು ಸ್ಥಾಪಿಸಬೇಕೆಂದು ತಹಸೀಲ್ದಾರ್‍ರವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪಟ್ಟಣದ ತ್ರಿವೇಣಿನಗರದ 5-6-7ನೇ ವಾರ್ಡಿನಿಂದ 2 ಸಾವಿರಕ್ಕೂ ಹೆಚ್ಚು ಮತದಾರರು ವಾಸವಾಗಿದ್ದಾರೆ. ಇವರಲ್ಲಿ ಹಿರಿಯ ನಾಗರಿಕರು ಹಾಗೂ ಮಹಿಳೆಯರ ಸಂಖ್ಯೆ ಹೆಚ್ಚಿರುತ್ತದೆ. ಎಂ.ಪಿ ಮತ್ತು ಎಂ.ಎಲ್.ಎ ಚುನಾವಣೆಯಲ್ಲಿ ಮತವನ್ನು ಹಾಕಲು ಇಲ್ಲಿಂದ ಸರಿ ಸುಮಾರು 1.5 ಕಿ.ಮೀ ದೂರ ನಡೆದುಕೊಂಡು ಹೋಗಬೇಕಾಗಿರುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ಹಾಕಲು ಹೋಗವುದಿಲ್ಲ. ಈಗಾಗಲೇ ಪುರಸಭೆ ಚುನಾವಣೆ ನಡೆದ ವೇಳೆಯಲ್ಲಿ ತ್ರಿವೇಣಿನಗರದ…

ಫೆ.17ರಿಂದ ಟಿ.ನರಸೀಪುರದ ತಿರುಮಕೂಡಲು  ತ್ರಿವೇಣಿ ಸಂಗಮದಲ್ಲಿ ಕುಂಭಮೇಳ
ಮೈಸೂರು

ಫೆ.17ರಿಂದ ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಕುಂಭಮೇಳ

January 24, 2019

ಮೈಸೂರು: ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 17 ರಿಂದ ಮೂರು ದಿನ ನಡೆಯುವ ಕುಂಭಮೇಳ ಕಾರ್ಯಕ್ರಮವನ್ನು ಉತ್ತರಪ್ರದೇಶ ಪ್ರಯಾಗ್ ರಾಜ್‍ನಲ್ಲಿ ನಡೆಯುವ ಕುಂಭಮೇಳ ಮಾದರಿ ಅದ್ಧೂರಿಯಾಗಿ ಆಚರಿಸಿ, ಕರ್ನಾಟಕದ ಘನತೆ ಹೆಚ್ಚಿಸುವಂತೆ ನಡೆಯಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ಕುಂಭಮೇಳ ಕುರಿತು ಬುಧವಾರ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಕಾವೇರಿ, ಕಪಿಲಾ, ಸ್ಫಟಿಕ ಸರೋ ವರಗಳ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ…

ಯುವ ಸೌರಭಕ್ಕೆ ಶಾಸಕ ಅಶ್ವಿನ್‍ಕುಮಾರ್ ಚಾಲನೆ
ಮೈಸೂರು

ಯುವ ಸೌರಭಕ್ಕೆ ಶಾಸಕ ಅಶ್ವಿನ್‍ಕುಮಾರ್ ಚಾಲನೆ

January 12, 2019

ತಿ.ನರಸೀಪುರ: ಗ್ರಾಮೀಣ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸೌರಭ ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಎಂ.ಅಶ್ವಿನ್‍ಕುಮಾರ್ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯುವ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮ ಯುವ ಸೌರಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭೆಗಳಿದ್ದರೂ ಬೆಳಕಿಗೆ ಬಾರದೇ ಉಳಿಯುತ್ತಿದ್ದಾರೆ. ಅವರಿಗೊಂದು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಮುಂಬರುವ ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಂತರ…

ತಿರುಮಕೂಡಲದಲ್ಲಿ ಫೆ.17ರಿಂದ ಮೂರು ದಿನ ಕುಂಭಮೇಳ
ಮೈಸೂರು

ತಿರುಮಕೂಡಲದಲ್ಲಿ ಫೆ.17ರಿಂದ ಮೂರು ದಿನ ಕುಂಭಮೇಳ

January 1, 2019

ಮೈಸೂರು: ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಪಡೆದಿರುವ ತಿ.ನರಸೀಪುರದ ಕಾವೇರಿ, ಕಪಿಲಾ ಹಾಗೂ ಸ್ಪಟಿಕ ನದಿಗಳ ಸಂಗಮ ಕ್ಷೇತ್ರದಲ್ಲಿ 2019ರ ಫೆ.17ರಿಂದ ಮೂರು ದಿನಗಳ ಕಾಲ ಕುಂಭ ಮೇಳ ನಡೆಯಲಿದೆ. 1989ರಲ್ಲಿ ಆರಂಭಗೊಂಡ ಕುಂಭಮೇಳ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆದು ಕೊಂಡು ಬರುತ್ತಿದ್ದು, ಈ ಬಾರಿ 11ನೇ ಕುಂಭಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉತ್ತರ ಭಾರತದ ಪುಣ್ಯ ನದಿಗಳ ಸಂಗಮ ಕ್ಷೇತ್ರಗಳಾದ ಅಲಹಾಬಾದ್, ಹರಿದ್ವಾರ್ ಹಾಗೂ ಪ್ರಯಾಗ್ ಮೊದಲಾದ ಕಡೆಗಳಲ್ಲಿ ಕುಂಭಮೇಳ ನಡೆದುಕೊಂಡು ಬರುತ್ತಿದೆ. ಮೇಳದಲ್ಲಿ ಮಾಘಸ್ನಾನ ವಿಶೇಷವಾಗಿದೆ….

ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ 70ನೇ ಜನ್ಮದಿನೋತ್ಸವ
ಮೈಸೂರು

ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ 70ನೇ ಜನ್ಮದಿನೋತ್ಸವ

December 26, 2018

ತಿ.ನರಸೀಪುರ:  ಜಾತ್ಯಾತೀತ ಮನೋಭಾವನೆಯಿಂದ ಎಲ್ಲಾ ವರ್ಗದವರ ನಡುವೆ ವಾಟಾಳು ಶ್ರೀಗಳು ಸಮಾನ ಬಾಂಧವ್ಯ ಹೊಂದಿದ್ದು, ಅವರ ಜನ್ಮದಿನವನ್ನು ಎಲ್ಲರೂ ಆಚರಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ, ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ ಶಾರದ ನೃತ್ಯ ಶಾಲೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಾಟಾಳು ಶ್ರೀಗಳ 70ನೇ ಜನ್ಮ ದಿನೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾತ್ರವಲ್ಲದೇ ಹೊರ ಗಿನ ತಾಲೂಕು, ಜಿಲ್ಲೆಗಳಲ್ಲೂ ಕೂಡ ತಮ್ಮ ಜನಪ್ರಿಯತೆ ಪಡೆದಿರುವ ಸ್ವಾಮೀಜಿ ತಮ್ಮ ಚಿಂತನೆಗಳ…

ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಮುನ್ಸೂಚನೆ
ಮೈಸೂರು

ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಮುನ್ಸೂಚನೆ

December 15, 2018

ತಿ.ನರಸೀಪುರ:  ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಮುನ್ಸೂಚನೆಯಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಯಾಗುವುದು ಬಹುತೇಕ ಖಚಿತ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಯುವ ಘಟಕದ ಅಧ್ಯಕ್ಷ ಟಿ.ಎಸ್.ಲೋಕೇಶ್ ಭವಿಷ್ಯ ನುಡಿದರು. ತಾಲೂಕಿನ ಬನ್ನೂರು ಪಟ್ಟಣದಲ್ಲಿ ರುವ ಸರ್ಕಾರಿ ಅತಿಥಿ ಗೃಹದಲ್ಲಿ ಕರೆಯ ಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪೂರ್ವದಲ್ಲೇ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್…

ಭತ್ತ ಮಾರಾಟಕ್ಕೆ ರೈತರ ನೋದಣಿಗೆ ಮತ್ತಷ್ಟು ಕಾಲಾವಕಾಶ ಕಲ್ಪಿಸಲು ಆಗ್ರಹ
ಮೈಸೂರು

ಭತ್ತ ಮಾರಾಟಕ್ಕೆ ರೈತರ ನೋದಣಿಗೆ ಮತ್ತಷ್ಟು ಕಾಲಾವಕಾಶ ಕಲ್ಪಿಸಲು ಆಗ್ರಹ

December 14, 2018

ತಿ.ನರಸೀಪುರ:  ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡುವ ಮುನ್ನಾ ರೈತರು ನೋಂದಣಿ ಮಾಡಿಸಲು ದಿನಾಂಕ ವಿಸ್ತರಣೆ ಮಾಡಿ ರೈತರಿಗೆ ಅಗತ್ಯ ಸವಲತ್ತು ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮದಿಂದ 2018-19ನೇ ಸಾಲಿನಲ್ಲಿ ರೈತರು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಮೈಸೂರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅದರಂತೆ ಭತ್ತ ಮಾರಾಟ ಮಾಡಲು ರೈತರು ನಿಗಮದಲ್ಲಿ ನೊಂದಣಿ ಮಾಡಿಸಬೇಕಿತ್ತು, ಡಿ.5ರಿಂದ 15ರವರೆಗೆ ನೊಂದಣಿಗೆ ಅವಕಾಶವಿತ್ತು. ಆದರೆ ರೈತರು ನೊಂದಣಿಗೆ ಹೋದ ಸಂದರ್ಭದಲ್ಲಿ ಕಂಪ್ಯೂಟರ್…

ಕಾರುಗಳ ಡಿಕ್ಕಿ: ಓರ್ವ ವ್ಯಕ್ತಿ ಸಾವು
ಮೈಸೂರು

ಕಾರುಗಳ ಡಿಕ್ಕಿ: ಓರ್ವ ವ್ಯಕ್ತಿ ಸಾವು

December 12, 2018

ಮೈಸೂರು:  ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರು-ತಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ನಡೆದಿದೆ. ತಿ.ನರಸೀಪುರ ತಾಲೂಕು, ಸೋಸಲೆ ವ್ಯಾಸರಾಜಪುರದ ನಿವಾಸಿ ಸಿದ್ದಪ್ಪಾಜಿಚಾರಿ(52) ಅಪಘಾತದಲ್ಲಿ ಮೃತಪಟ್ಟವರು. ಮತ್ತೊಂದು ಕಾರಿನಲ್ಲಿದ್ದ ಯಳಂದೂರು ನಿವಾಸಿ ಶ್ರೀನಿವಾಸ್ ಹಾಗೂ ಅವರ ತಂದೆ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಪ್ಪಾಜಿಚಾರಿ ಅವರು ಸೋಮವಾರ ಮಧ್ಯಾಹ್ನ ತಮ್ಮ ಮಹೀಂದ್ರ ಎಕ್ಸ್‍ಯೂವಿ 500 ಕಾರಿನಲ್ಲಿ ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುತ್ತಿದ್ದಾಗ, ಗುರುಕಾರಪುರದ ಬಳಿ ಎದುರಿನಿಂದ ಬಂದ ಶ್ರೀನಿವಾಸ್ ಅವರ ಟಾಟಾ ಟಿಯಾಗೋ…

ದಾನಗಳಲ್ಲೇ ಶ್ರೇಷ್ಠ ರಕ್ತದಾನ
ಮೈಸೂರು

ದಾನಗಳಲ್ಲೇ ಶ್ರೇಷ್ಠ ರಕ್ತದಾನ

December 5, 2018

ತಿ.ನರಸೀಪುರ: ಅಪಘಾತ ಮತ್ತು ಅನಾರೋಗ್ಯದ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಜೀವ ರಕ್ಷಣೆಗೆ ರಕ್ತದ ಅಗತ್ಯವಾಗಿದ್ದು, ದಾನದಲ್ಲೇ ರಕ್ತದಾನ ಶ್ರೇಷ್ಠ ಎಂದು ಸಮಾಜ ಸೇವಕ ಹಾಗೂ ವರುಣಾ ಹಿರಿಯ ಕಾಂಗ್ರೆಸ್ ಮುಖಂಡ ಟಿ.ಮಹದೇವಸ್ವಾಮಿ ಹೇಳಿದರು. ತಾಲೂಕಿನ ಬನ್ನೂರು ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ರಾಜಕಾರಣಿ, ನಟ ಡಾ.ಅಂಬರೀಶ್ ಸ್ಮರಣಾರ್ಥವಾಗಿ ರಕ್ತ ದಾನಿಗಳ ಸಂಘ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಅನ್ನದಾನವನ್ನೇ…

ವಿಕಲಚೇತನರ ಪ್ರೀತಿ, ವಿಶ್ವಾಸದಿಂದ ಕಾಣಿ
ಮೈಸೂರು

ವಿಕಲಚೇತನರ ಪ್ರೀತಿ, ವಿಶ್ವಾಸದಿಂದ ಕಾಣಿ

December 4, 2018

ತಿ.ನರಸೀಪುರ: ಬಹುಮುಖ ಪ್ರತಿಭೆಯುಳ್ಳ ವಿಕಲಚೇತನ ಮಕ್ಕಳಿಗೆ ಅನುಕಂಪ ತೋರಿಸುವ ಬದಲು ಪ್ರೀತಿ, ವಿಶ್ವಾಸದಿಂದ ಕಾಣುವಂತೆ ಜಿಪಂ ಸದಸ್ಯ ಜಯಪಾಲ್ ಭರಣಿ ಹೇಳಿದರು. ವಿಶ್ವ ವಿಕಲಚೇತನ ದಿನಾಚರಣೆಯ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ, ಸಮಗ್ರ ಶಿಕ್ಷಣ ಅಭಿ ಯಾನ, ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಆಶ್ರಯ ದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಪರಿಸರ ನಿರ್ಮಾಣ ಹಾಗೂ ಸೌಲಭ್ಯದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ತಾವು ಮಾಡದ ತಪ್ಪಿಗೆ ಅಂಗವೈಕಲ್ಯಕ್ಕೊಳಗಾಗುತ್ತವೆ. ಹಾಗೆಂದ ಮಾತ್ರಕ್ಕೆ ಅವು…

1 2 3 4 9
Translate »