ತ್ರಿವೇಣಿ ನಗರದಲ್ಲಿ ಚುನಾವಣಾ ಬೂತ್ ಸ್ಥಾಪನೆಗೆ ಮನವಿ
ಮೈಸೂರು

ತ್ರಿವೇಣಿ ನಗರದಲ್ಲಿ ಚುನಾವಣಾ ಬೂತ್ ಸ್ಥಾಪನೆಗೆ ಮನವಿ

February 8, 2019

ಟಿ.ನರಸೀಪುರ: ತ್ರಿವೇಣಿನಗರದಲ್ಲಿ ಚುನಾವಣೆ ಬೂತ್ ಅನ್ನು ಸ್ಥಾಪಿಸಬೇಕೆಂದು ತಹಸೀಲ್ದಾರ್‍ರವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪಟ್ಟಣದ ತ್ರಿವೇಣಿನಗರದ 5-6-7ನೇ ವಾರ್ಡಿನಿಂದ 2 ಸಾವಿರಕ್ಕೂ ಹೆಚ್ಚು ಮತದಾರರು ವಾಸವಾಗಿದ್ದಾರೆ. ಇವರಲ್ಲಿ ಹಿರಿಯ ನಾಗರಿಕರು ಹಾಗೂ ಮಹಿಳೆಯರ ಸಂಖ್ಯೆ ಹೆಚ್ಚಿರುತ್ತದೆ.

ಎಂ.ಪಿ ಮತ್ತು ಎಂ.ಎಲ್.ಎ ಚುನಾವಣೆಯಲ್ಲಿ ಮತವನ್ನು ಹಾಕಲು ಇಲ್ಲಿಂದ ಸರಿ ಸುಮಾರು 1.5 ಕಿ.ಮೀ ದೂರ ನಡೆದುಕೊಂಡು ಹೋಗಬೇಕಾಗಿರುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ಹಾಕಲು ಹೋಗವುದಿಲ್ಲ. ಈಗಾಗಲೇ ಪುರಸಭೆ ಚುನಾವಣೆ ನಡೆದ ವೇಳೆಯಲ್ಲಿ ತ್ರಿವೇಣಿನಗರದ ಮಧ್ಯಭಾಗದಲ್ಲಿರುವ ಎಸ್‍ಡಿಎ ಶಾಲೆಯು ಎಲ್ಲಾ ವಿಧದಲ್ಲಿಯೂ ಸುರಕ್ಷಿತವಾಗಿರುತ್ತದೆ. ಇಲ್ಲಿ ಚುನಾವಣೆ ಮತಗಟ್ಟೆಯನ್ನು ಸ್ಥಾಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸುತ್ತಾರೆ. ಆದ್ದರಿಂದ ತಾವುಗಳು ಸ್ಥಳವನ್ನು ಪರಿಶೀಲಿಸಿ ನಮ್ಮಗಳ ಬೇಡಿಕೆಯನ್ನು ಈಡೇರಿಸಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆಂಚಪ್ಪ, ರಂಗಯ್ಯ, ಶಿವರುದ್ರ ಇತರರು ಇದ್ದರು.

Translate »