ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ 70ನೇ ಜನ್ಮದಿನೋತ್ಸವ
ಮೈಸೂರು

ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ 70ನೇ ಜನ್ಮದಿನೋತ್ಸವ

December 26, 2018

ತಿ.ನರಸೀಪುರ:  ಜಾತ್ಯಾತೀತ ಮನೋಭಾವನೆಯಿಂದ ಎಲ್ಲಾ ವರ್ಗದವರ ನಡುವೆ ವಾಟಾಳು ಶ್ರೀಗಳು ಸಮಾನ ಬಾಂಧವ್ಯ ಹೊಂದಿದ್ದು, ಅವರ ಜನ್ಮದಿನವನ್ನು ಎಲ್ಲರೂ ಆಚರಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ, ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು
ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ ಶಾರದ ನೃತ್ಯ ಶಾಲೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಾಟಾಳು ಶ್ರೀಗಳ 70ನೇ ಜನ್ಮ ದಿನೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾತ್ರವಲ್ಲದೇ ಹೊರ ಗಿನ ತಾಲೂಕು, ಜಿಲ್ಲೆಗಳಲ್ಲೂ ಕೂಡ ತಮ್ಮ ಜನಪ್ರಿಯತೆ ಪಡೆದಿರುವ ಸ್ವಾಮೀಜಿ ತಮ್ಮ ಚಿಂತನೆಗಳ ಮೂಲಕ ಮಠಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕø ತಿಕ ಬಲ ತುಂಬಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದಲ್ಲದೆ, ಶ್ರೀಗಳ ಹಾರೈಕೆ, ಆಶೀರ್ವಾದ ಸಮಾಜದ ಮೇಲಿರಲಿ. ಅವರ ಚಿಂತನೆ, ಮಾರ್ಗದರ್ಶನ ಸಮಾಜಕ್ಕೆ ನಮ್ಮಂತವರಿಗೆ ನಿರಂತರವಾಗಿ ಸಿಗಲಿ ಎಂದರು.

ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾತನಾಡಿ, ತಾಲೂಕಿನಾದ್ಯಂತ ನಡೆ ಯುವ ಎಲ್ಲಾ ಸಭೆ ಸಮಾರಂಭಗಳಿಗೂ ಸ್ವಾಮೀಜಿಯವರಿಗೆ ಆಹ್ವಾನವಿರುತ್ತದೆ. ಅವರಿಲ್ಲದ ಕಾರ್ಯಕ್ರಮಗಳು ಅಪೂರ್ಣವೇ ಸರಿ. ಅವರಿಗೆ ಯಾವುದೇ ಕಾರ್ಯ ಕ್ರಮಕ್ಕೂ ಮಾರ್ಗದರ್ಶನ ಮಾಡಲು ತಿಳಿಸಿದರೆ ಅದನ್ನು ಯಶಸ್ವಿಯಾಗಿ ನಡೆಯುವಂತೆ ಮಾಡುತ್ತಾರೆ. ಜಾತ್ಯಾತೀತ ಮನೋಭಾವನೆಯಿಂದ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆ ಗಳಲ್ಲಿ ಅವರು ಖ್ಯಾತಿಯನ್ನು ಪಡೆದಿದ್ದಾರೆ ಎಂದರು.

ಶಾಸಕ ಎಂ.ಅಶ್ವಿನ್‍ಕುಮಾರ್, ಕಾರ್ಯ ಕ್ರಮ ಆಯೋಜಕ ಕನ್ನಡ ಪುಟ್ಟಸ್ವಾಮಿ, ಪುರಸಭಾ ಸದಸ್ಯರಾದ ಟಿ.ಎಂ.ನಂಜುಂಡ ಸ್ವಾಮಿ, ಹೆಳವರಹುಂಡಿ ಸೋಮು, ಮದನ್‍ರಾಜು, ಬಾದಾಮಿ ಮಂಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವ ಶಂಕರಮೂರ್ತಿ, ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಆರ್.ಮಂಜುನಾಥ್, ಗುತ್ತಿಗೆದಾರ ಕೆ.ಮಲ್ಲು, ಮೂಗೂರು ಕುಮಾರಸ್ವಾಮಿ, ಪಿ.ಪುಟ್ಟರಾಜು, ಎನ್.ಕೆ.ಫರೀದ್, ಮಹಮದ್ ನಸ್ರುಲ್ಲಾ, ಜ್ಞಾನೇಂದ್ರ ಮೂರ್ತಿ, ಬಸವ ರಾಜು, ಕೆ.ಎನ್.ಪ್ರಭುಸ್ವಾಮಿ, ಗೋಪಿ ಬೋರೇಗೌಡ, ತೋಳಪ್ಪ ಮಾದಯ್ಯ, ವಿ.ಪಿ.ಹುಂಡಿ ಬಸವರಾಜು, ಹಾಲಿನ ನಾಗರಾಜು, ಕಿರಗಸೂರು ಶಂಕರ್, ಸಂತೃಪ್ತಿಕುಮಾರ್ ಮತ್ತಿತರರಿದ್ದರು.

Translate »