ಜಾತಿ ಭೇದ ಬದಿಗಿಟ್ಟು ವ್ಯಕ್ತಿತ್ವ ಗೌರವಿಸುವುದೇ ಬ್ರಾಹ್ಮಣ್ಯ
ಮೈಸೂರು

ಜಾತಿ ಭೇದ ಬದಿಗಿಟ್ಟು ವ್ಯಕ್ತಿತ್ವ ಗೌರವಿಸುವುದೇ ಬ್ರಾಹ್ಮಣ್ಯ

December 26, 2018

ರಾಜ್ಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅಭಿಮತ
ನಂಜನಗೂಡು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಚಿಸಿದ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಆರ್ಥಿಕವಾಗಿ ಹಿಂದುಳಿದಿರುವ ವಿಪ್ರರ ಆಸೆ ಚಿಗುರಲಾ ರಂಭಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾ ಯಣ ಅಭಿಪ್ರಾಯಪಟ್ಟರು.ನಗರದ ಯಾತ್ರಿ ನಿವಾಸದಲ್ಲಿ ಸೃಜನ ಸೇವಾಭಿವೃದ್ಧಿ ನ್ಯಾಸ್ ಏರ್ಪಡಿಸಿದ್ದ ಸಾಧಕರ ಸನ್ಮಾನ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ವ ಸಮಾಜದ ಶ್ರೇಯಸ್ಸನ್ನು ಬಯ ಸುವ ನಾವಿಂದು ಯಾರಿಗೂ ಬೇಡವಾಗಿ ದ್ದೇವೆ. ಎಲ್ಲರೂ ನಮ್ಮನ್ನು ಅಸೂಯೆ, ಅನುಮಾನದಿಂದಲೇ ನೋಡುತ್ತಿದ್ದಾರೆ. ಬೌದ್ಧಿಕವಾಗಿ ಮುಂದಿರುವ ನಾವಿಂದು ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದೇವೆ. ಇದು ಯಾರಗಮನಕ್ಕೂ ಬರುತ್ತಿಲ್ಲ ಎಂದು ವಿಷಾದಿಸಿದರು.

ಬ್ರಾಹ್ಮಣ ಸಮಾಜ ಮೊದಲು ಸಂಘಟಿತ ವಾಗಬೇಕಿದೆ. ನಾವೆಲ್ಲ ಒಂದಾಗದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಅದ ಕ್ಕಾಗಿ ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿ ಪ್ರಾಯ ಬದಿಗಿಟ್ಟು ಒಂದಾಗಿ ನಿಲ್ಲೋಣ ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು.ಬಾರ್ಕೂರಿನ ಹರಿಹರಾತ್ಮಜ ಪೀಠಾ ಧಿಪತಿ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದರು ಆಶೀರ್ವಚನ ನೀಡಿ, ನಮ್ಮ ಎಡವಟ್ಟುಗಳಿಂದಾಗಿ ಇಂದು ಬ್ರಾಹ್ಮಣ್ಯ ಕ್ಷೀಣಿಸಲಾರಂಭಿಸಿದೆ. ಅದನ್ನು ಸರಿಪಡಿಸಿ ಕೊಳ್ಳಿ. ನಮ್ಮ ಸಮಾಜಮುಖಿ ಸೇವಾ ಮನೋಭಾವವೇ ನಮ್ಮನ್ನು ಸಮಾಜದ ಮುಂಚೂಣಿಗೆ ತಂದಿದೆ ಎಂಬುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ಸಮಾಜ ಸೇವಕ ಯು.ಎನ್.ಪದ್ಮ ನಾಭರಾವ್ ಸಮಾರಂಭ ಉದ್ಘಾಟಿ ಸಿದರು. ಟಿ.ವಿ.ಶ್ರೀಕಂಠೇಶ್ವರ ಕಂಪನಿಯ ಮಾಲೀಕ ಉಮೇಶ ಶರ್ಮಾ ಸಮಾ ರಂಭ ಉದ್ದೇಶಿಸಿ ಮಾತನಾಡಿದರು. ಸೃಜನ ಸೇವಾಭಿವೃದ್ಧಿ ನ್ಯಾಸ್‍ನ ಅಧ್ಯಕ್ಷ ಟಿ.ಎನ್.ಗೋಪಿನಾಥ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಶತಾಯುಷಿಗಳಾದ ಪುಟ್ಟರಾಮಣ್ಣ(107), ನಾಗರಾಜ ಭಾಗವತ್(102) ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಹೆಚ್.ಎಲ್. ಚಂದ್ರಶೇಖರ್(ಶಿಕ್ಷಣ), ಡಾ.ಎಸ್. ಶ್ಯಾಮಸುಂದರ್(ವಿಜ್ಞಾನ-ತಂತ್ರಜ್ಞಾನ), ಡಾ.ರಾಘವೇಂದ್ರ ಪೈ(ಯೋಗ), ಡಾ. ಜ್ಯೋತಿಶಂಕರ್(ಗಮಕ), ಜಗದೀಶ ಮಲ್ನಾಡ್(ಕಿರುತೆರೆ), ಬಿಳಗೆರೆ ಶ್ರೀಕಂಠ ಶಾಸ್ತ್ರಿ(ಮಾಧ್ಯಮ), ಡಿ.ಎನ್.ಕೃಷ್ಣಮೂರ್ತಿ (ಸಾಸ್ಕøತಿಕ), ವಿ.ಕೆ.ರಾಮಣ್ಣ(ಸಮುದಾಯ ಸೇವೆ), ಹರದನಹಳ್ಳಿ ಅಶ್ವಥ್‍ನಾರಾಯಣ (ಸಮಾಜ ಸೇವೆ), ನಾಗಭೂಷಣ(ಅರಕ್ಷಕ ಸೇವೆ)ರನ್ನು ನ್ಯಾಸ್ ಪರವಾಗಿ ಗೌರವಿಸ ಲಾಯಿತು. ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಮುಕ್ತ ವಿವಿ ನಿರ್ದೇಶಕ ಡಾ.ಶಲ್ವಪಿಳ್ಳೆ ಅಯ್ಯಂಗಾರ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎನ್.ಎ.ಸದಾಶಿವು, ಶಂಕರ ಮಠದ ಧರ್ಮಾಧಿಕಾರಿ ಶ್ರೀಕಂಠ ಜೋಯ್ಸ್, ನ್ಯಾಸ್‍ನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಸದಸ್ಯರು ಇದ್ದರು.

Translate »