Tag: University of Mysore

ಆನ್‍ಲೈನ್ ಮೂಲಕ ಮೈಸೂರು  ವಿವಿ ಹಾಸ್ಟೆಲ್‍ಗಳಿಗೆ ಪ್ರವೇಶ
ಮೈಸೂರು

ಆನ್‍ಲೈನ್ ಮೂಲಕ ಮೈಸೂರು  ವಿವಿ ಹಾಸ್ಟೆಲ್‍ಗಳಿಗೆ ಪ್ರವೇಶ

July 20, 2018

ಮೈಸೂರು: ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಆನ್‍ಲೈನ್ ಪ್ರಕ್ರಿಯೆ ಮೂಲಕ ನಿರ್ವಹಿಸಲು ಮೈಸೂರು ವಿಶ್ವವಿದ್ಯಾನಿಲಯ ಮುಂದಾಗಿದೆ. ಮೈಸೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಬಿ.ಪ್ರವೀಣ್ ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿವಿ ವ್ಯಾಪ್ತಿಯಲ್ಲಿ ಮಂಡ್ಯ, ಹಾಸನ ಸೇರಿದಂತೆ ಒಟ್ಟು 20 ವಿದ್ಯಾರ್ಥಿನಿಲಯಗಳಿದ್ದು, 1.20 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರು ಈ ಸಾಲಿನಿಂದ ಆನ್‍ಲೈನ್‍ನಲ್ಲಿ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬೇಕು. ದ್ವಿತೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಜು.20ರಿಂದ…

ಇಂದು ಮೈಸೂರು ವಿವಿ ಕೆ-ಸೆಟ್ ಫಲಿತಾಂಶ: ಪರೀಕ್ಷೆಗೆ ಹಾಜರಾಗಿದ್ದವರು 63,068 ಮಂದಿ, ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು 4,295 ಜನ
ಮೈಸೂರು

ಇಂದು ಮೈಸೂರು ವಿವಿ ಕೆ-ಸೆಟ್ ಫಲಿತಾಂಶ: ಪರೀಕ್ಷೆಗೆ ಹಾಜರಾಗಿದ್ದವರು 63,068 ಮಂದಿ, ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರು 4,295 ಜನ

July 20, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ 2017ರ ಡಿ.31ರಂದು ನಡೆಸಿದ್ದ ಕೆ-ಸೆಟ್ (ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ) ಪರೀಕ್ಷೆ ಫಲಿತಾಂಶ ಮೈಸೂರು ವಿವಿಯ ಕೆ-ಸೆಟ್ ಕೇಂದ್ರದ ವೆಬ್‍ಸೈಟ್‍ನಲ್ಲಿ ನಾಳೆ (ಶುಕ್ರವಾರ) ಪ್ರಕಟಗೊಳ್ಳಲಿದೆ. ಪರೀಕ್ಷೆ ಬರೆಯಲು ನೋಂದಾಯಿಸಿದ್ದ 73,608 ಅಭ್ಯರ್ಥಿಗಳ ಪೈಕಿ 63,068 ಮಂದಿ ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 4,295 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಗಳಿಸಿದ್ದಾರೆ. ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ವಿವಿ ಹಂಗಾಮಿ ಕುಲಪತಿಗಳೂ ಆದ ವಿವಿಯ ಕೆ-ಸೆಟ್…

ಮೈಸೂರು ವಿವಿ ಕುಲಪತಿಯಾಗಿ ಪ್ರೊ. ರಾಜಣ್ಣ ನೇಮಕಕ್ಕೆ ಆಗ್ರಹ
ಮೈಸೂರು

ಮೈಸೂರು ವಿವಿ ಕುಲಪತಿಯಾಗಿ ಪ್ರೊ. ರಾಜಣ್ಣ ನೇಮಕಕ್ಕೆ ಆಗ್ರಹ

July 10, 2018

ಮೈಸೂರು:  ಪ್ರೊ. ರಾಜಣ್ಣನವರನ್ನು ಸಾಮಾಜಿಕ ನ್ಯಾಯದಡಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕ ಮಾಡಬೇಕೆಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಮಾನವ ನೌಕರರ ವೇದಿಕೆ ಅಧ್ಯಕ್ಷ ಆರ್. ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್ ಮತ್ತು ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಹದಿನೆಂಟು ವಿಶ್ವವಿದ್ಯಾನಿಲಯಗಳಿದ್ದು, ಇಲ್ಲಿಯವರೆಗೆ ಗುಲ್ಬರ್ಗಾ ವಿವಿಯಲ್ಲಿ ಮಾತ್ರ ಕುಲಪತಿ ನೇಮಕವಾಗಿರುತ್ತದೆ. ಆದರೆ ಇದುವರೆವಿಗೂ ಮೈಸೂರು ವಿವಿಗೆ ನಾಯಕ ಸಮುದಾಯದ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಕ ಮಾಡಿಲ್ಲ. ಕೇವಲ ಇಬ್ಬರನ್ನು ಮಾತ್ರ ಕುಲಸಚಿವರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಇದರಿಂದ…

ಮೈಸೂರು ವಿವಿ 113 ಬೋಧಕ ವರ್ಗದ ನೇಮಕ ಊರ್ಜಿತ
ಮೈಸೂರು

ಮೈಸೂರು ವಿವಿ 113 ಬೋಧಕ ವರ್ಗದ ನೇಮಕ ಊರ್ಜಿತ

July 7, 2018

 ಅನರ್ಹಗೊಳಿಸಿದ್ದ ಸರ್ಕಾರಕ್ಕೆ ಮುಖಭಂಗ ವಿವಿ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್ ಮೈಸೂರು: 2007ರಲ್ಲಿ ನೇಮಕವಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಹಂಗಾಮಿ ಕುಲಪತಿ ಪ್ರೊ. ಸಿ.ಬಸವರಾಜು ಸೇರಿದಂತೆ 9 ಪ್ರಾಧ್ಯಾ ಪಕರು, 30 ರೀಡರ್ ಗಳನ್ನು ಒಳಗೊಂಡಂತೆ ಎಲ್ಲಾ 113 ಬೋಧಕ ವರ್ಗದ ನೇಮಕ ಪ್ರಕ್ರಿಯೆಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಮೂರ್ತಿ ಬೋಪಣ್ಣ ಅವರು ಇಂದು ತೀರ್ಪು ನೀಡಿದ್ದು, ಮೈಸೂರು ವಿಶ್ವವಿದ್ಯಾನಿಲಯದ 113 ಮಂದಿ ಬೋಧಕ ವರ್ಗದ ನೇಮಕ ಕ್ರಮಬದ್ಧ ಎಂದು ತೀರ್ಪು…

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ
ಮೈಸೂರು

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ

July 5, 2018

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜು.10 ಗಡುವು ತಪ್ಪಿದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮೈಸೂರು ವಿವಿ ಸಂಶೋಧಕರ ಸಂಘ ನಿರ್ಧಾರ ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಬಾಹಿರವಾಗಿ 124 ಬೋಧಕೇತರ ಸಿಬ್ಬಂದಿ ನೇಮಕ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕೆಂದು ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಆಗ್ರಹಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಡಿ.ಮಹದೇವಸ್ವಾಮಿ, ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಹಣಕಾಸು ಇಲಾಖೆ ಹಾಗೂ ರಾಜ್ಯಪಾಲರ ಅನುಮತಿ ಪಡೆಯದೇ…

ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಮೈಸೂರಲ್ಲಿ ಸಾಹಿತಿಗಳು, ಅಧ್ಯಾಪಕರು,ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
ಮೈಸೂರು

ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಮೈಸೂರಲ್ಲಿ ಸಾಹಿತಿಗಳು, ಅಧ್ಯಾಪಕರು,ಕನ್ನಡ ಪರ ಸಂಘಟನೆಗಳ ಪ್ರತಿಭಟನೆ

July 3, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಿಂದ ಜಾರಿಗೆ ತರಲು ಉದ್ದೇಶಿಸಿರುವ `ಆಯ್ಕೆ ಆಧಾರಿತ ಗುಣಾಂಕ ಪದ್ಧತಿಯಲ್ಲಿ (ಚಾಯ್ಸ್‍ಬೇಸ್ಡ್ ಕ್ರೆಡಿಟ್ ಸಿಸ್ಟಂ-ಸಿಬಿಸಿಎಸ್)’ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕನ್ನಡ ಸಾಹಿತಿಗಳು, ಅಧ್ಯಾಪಕರು, ಕನ್ನಡ ಪರ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳು ಸೋಮವಾರ ಭಾರೀ ಪ್ರತಿಭಟನೆ ನಡೆಸಿದರು. ಮೈಸೂರು ವಿವಿಯ ಕ್ರಾಫರ್ಡ್ ಭವನದ ಎದುರು ಮೈಸೂರು ವಿವಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸಿಬಿಸಿಎಸ್ ಪದ್ಧತಿಯಲ್ಲಿ ಕನ್ನಡಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ…

ಯಾವುದೇ ಅಕ್ರಮ ನೇಮಕಾತಿ ಆಗಿಲ್ಲ: ಸರ್ಕಾರಕ್ಕೆ ಮೈಸೂರು ವಿವಿ ಕುಲಸಚಿವರ ವರದಿ
ಮೈಸೂರು

ಯಾವುದೇ ಅಕ್ರಮ ನೇಮಕಾತಿ ಆಗಿಲ್ಲ: ಸರ್ಕಾರಕ್ಕೆ ಮೈಸೂರು ವಿವಿ ಕುಲಸಚಿವರ ವರದಿ

June 28, 2018

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ 124 ಬೋಧಕೇತರ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿರುವುದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಿವಿ ರಿಜಿಸ್ಟ್ರಾರ್ ರಾಜಣ್ಣ ಅವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದಾರೆ. 124 ಬೋಧಕೇತರ ಸಿಬ್ಬಂದಿಯನ್ನು ತಕ್ಷಣ ವಜಾ ಮಾಡಿ ಅನುಪಾಲನಾ ವರದಿ ಸಲ್ಲಿಸುವಂತೆ ಮೈಸೂರು ವಿವಿಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ರಾಜಣ್ಣ ಅವರು ವರದಿ ಸಲ್ಲಿಸಿದ್ದಾರೆ. ಮೈಸೂರು ವಿವಿಯಲ್ಲಿ 2007ರಿಂದ ಈಚೆಗೆ ಯಾವುದೇ ಸಿಬ್ಬಂದಿ ನೇಮಕ ಮಾಡಿಲ್ಲ….

ಮಾರ್ಗಸೂಚಿ, ಮೀಸಲಾತಿ ನೀತಿ ಉಲ್ಲಂಘಿಸಿ ನೇಮಕ: ಮೈಸೂರು ವಿಶ್ವವಿದ್ಯಾಲಯದ 124 ಬೋಧಕೇತರ ಸಿಬ್ಬಂದಿಗೆ ಕುತ್ತು
ಮೈಸೂರು

ಮಾರ್ಗಸೂಚಿ, ಮೀಸಲಾತಿ ನೀತಿ ಉಲ್ಲಂಘಿಸಿ ನೇಮಕ: ಮೈಸೂರು ವಿಶ್ವವಿದ್ಯಾಲಯದ 124 ಬೋಧಕೇತರ ಸಿಬ್ಬಂದಿಗೆ ಕುತ್ತು

June 27, 2018

ತಕ್ಷಣ ಕರ್ತವ್ಯದಿಂದ ತೆಗೆದುಹಾಕುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೇಮಕಾತಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ದೇಶನ ಮುಂದೆ ಮಾರ್ಗಸೂಚಿ, ಆದೇಶ, ಮೀಸಲಾತಿ ನೀತಿಯನ್ವಯ ನೇಮಕಾತಿಗೆ ಕಟ್ಟಾಜ್ಞೆ ತನಿಖಾ ಸಮಿತಿ ವರದಿ ಶಿಫಾರಸ್ಸಿನಂತೆ ಕ್ರಮಕ್ಕೆ ಸರ್ಕಾರದ ಆದೇಶ ಮೈಸೂರು: 2016ರ ಡಿಸೆಂಬರ್ ಮತ್ತು 2017ರ ಜನ ವರಿ ಮಾಹೆಯ ಅವಧಿಯಲ್ಲಿ ನೇಮಕ ಗೊಂಡು ಕಾರ್ಯನಿರ್ವಹಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ 124 ಮಂದಿ ಬೋಧಕೇತರ ಸಿಬ್ಬಂದಿಯ ಭವಿಷ್ಯ ಡೋಲಾಯಮಾನವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಚಾಲ್ತಿಯಲ್ಲಿರುವ ನಿಯಮ, ಮಾರ್ಗಸೂಚಿ, ಆದೇಶ ಮತ್ತು…

ಮೈಸೂರು ವಿವಿ ಕುಲಸಚಿವರಾಗಿ ಪ್ರೊ.ಆರ್.ರಾಜಣ್ಣ
ಮೈಸೂರು

ಮೈಸೂರು ವಿವಿ ಕುಲಸಚಿವರಾಗಿ ಪ್ರೊ.ಆರ್.ರಾಜಣ್ಣ

June 14, 2018

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ(ಆಡಳಿತ) ಡಿ.ಭಾರತಿ ಅವರನ್ನು ವರ್ಗಾಯಿಸಿ, ಇವರ ಜಾಗಕ್ಕೆ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಆರ್.ರಾಜಣ್ಣ ಅವರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಹಿರಿಯ ಕೆಎಎಸ್ ಅಧಿಕಾರಿ ಡಿ.ಭಾರತಿ ಅವರ ಸೇವೆಯನ್ನು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಗೆ ವಹಿಸಲಾಗಿದೆ.

ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಉನ್ನತ ಸಂಶೋಧನೆಗೆ ನೆರವು: ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಟಿ.ಕೆ.ಉಮೇಶ್ ಭರವಸೆ
ಮೈಸೂರು

ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಉನ್ನತ ಸಂಶೋಧನೆಗೆ ನೆರವು: ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಟಿ.ಕೆ.ಉಮೇಶ್ ಭರವಸೆ

June 8, 2018

ಮೈಸೂರು: ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯವನ್ನು ಮೇಲ್ದರ್ಜೆಗೇರಿಸಲು ಹಾಗೂ ಉನ್ನತ ಸಂಶೋಧನೆ ಕೈಗೊಳ್ಳಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಅನುದಾನ ಒದಗಿಸಲು ಪ್ರಾಮಾಣ ಕ ಪ್ರಯತ್ನ ಮಾಡುತ್ತೇನೆ ಎಂದು ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ವತಿಯಿಂದ ಮಹಾರಾಜ ಕಾಲೇಜು ಸ್ನಾತಕ ಗ್ರಂಥಾಲಯದಲ್ಲಿ ಹಸ್ತಪ್ರತಿಗಳ ಮಹತ್ವ ಮತ್ತು ಗ್ರಂಥಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ತಾಳೆಗರಿಗಳನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು….

1 2 3
Translate »