ಮಾರ್ಗಸೂಚಿ, ಮೀಸಲಾತಿ ನೀತಿ ಉಲ್ಲಂಘಿಸಿ ನೇಮಕ: ಮೈಸೂರು ವಿಶ್ವವಿದ್ಯಾಲಯದ 124 ಬೋಧಕೇತರ ಸಿಬ್ಬಂದಿಗೆ ಕುತ್ತು
ಮೈಸೂರು

ಮಾರ್ಗಸೂಚಿ, ಮೀಸಲಾತಿ ನೀತಿ ಉಲ್ಲಂಘಿಸಿ ನೇಮಕ: ಮೈಸೂರು ವಿಶ್ವವಿದ್ಯಾಲಯದ 124 ಬೋಧಕೇತರ ಸಿಬ್ಬಂದಿಗೆ ಕುತ್ತು

June 27, 2018
  • ತಕ್ಷಣ ಕರ್ತವ್ಯದಿಂದ ತೆಗೆದುಹಾಕುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ
  • ನೇಮಕಾತಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ದೇಶನ
  • ಮುಂದೆ ಮಾರ್ಗಸೂಚಿ, ಆದೇಶ, ಮೀಸಲಾತಿ ನೀತಿಯನ್ವಯ ನೇಮಕಾತಿಗೆ ಕಟ್ಟಾಜ್ಞೆ
  • ತನಿಖಾ ಸಮಿತಿ ವರದಿ ಶಿಫಾರಸ್ಸಿನಂತೆ ಕ್ರಮಕ್ಕೆ ಸರ್ಕಾರದ ಆದೇಶ

ಮೈಸೂರು: 2016ರ ಡಿಸೆಂಬರ್ ಮತ್ತು 2017ರ ಜನ ವರಿ ಮಾಹೆಯ ಅವಧಿಯಲ್ಲಿ ನೇಮಕ ಗೊಂಡು ಕಾರ್ಯನಿರ್ವಹಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ 124 ಮಂದಿ ಬೋಧಕೇತರ ಸಿಬ್ಬಂದಿಯ ಭವಿಷ್ಯ ಡೋಲಾಯಮಾನವಾಗಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಚಾಲ್ತಿಯಲ್ಲಿರುವ ನಿಯಮ, ಮಾರ್ಗಸೂಚಿ, ಆದೇಶ ಮತ್ತು ಮೀಸ ಲಾತಿ ಕಾರ್ಯನೀತಿಯನ್ನು ಉಲ್ಲಂಘಿಸಿ ನೇಮಿಸಲ್ಪಟ್ಟ ಮೈಸೂರು ವಿಶ್ವವಿದ್ಯಾ ನಿಲಯದ ಬೋಧಕೇತರ ಸಿಬ್ಬಂದಿಯನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡು ವಂತೆ (Terminate) ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎನ್. ವೀರಬ್ರಹ್ಮಚಾರಿ ಅವರು ಜೂನ್ 20 ರಂದು ಮೈಸೂರು ವಿಶ್ವವಿದ್ಯಾನಿಲಯದ ಕುಲ ಪತಿಗಳಿಗೆ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾ ನಿಲಯದ ಬೋಧಕೇತರ ಸಿಬ್ಬಂದಿ ನೇಮ ಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತಂತೆ ಡಾ. ಎಂ.ಆರ್. ನಿಂಬಾಳ್ಕರ್ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಕನುಭಾಯಿ ಜಿ. ಮವಾನಿ ಸದಸ್ಯರಾಗಿದ್ದ ತನಿಖಾ ಸಮಿತಿ ನೀಡಿದ ಶಿಫಾರಸ್ಸು ವರದಿಯಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಜೂನ್ 20 ರಂದು ಸರ್ಕಾರಕ್ಕೆ ಪತ್ರ (D.O. No. GS04 MUM 2017) ಬರೆದಿದ್ದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ಕ್ರಮ ಕೈಗೊಂಡಿದ್ದಾರೆ. ಸದರಿ ನೇಮಕಾತಿಗೆ ಕಾರಣಕರ್ತರಾದ ಹಾಗೂ ಆಡಳಿತಾ ತ್ಮಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ಮೈಸೂರು ವಿಶ್ವ ವಿದ್ಯಾನಿಲಯದ ಅಧಿಕಾರಿ, ಸಿಬ್ಬಂದಿ ಗಳನ್ನು ಗುರುತಿಸಿ ಅವರುಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ ದಡಿ ಹಾಗೂ ಇನ್ನಿತರ ಅನ್ವಯಿಕ ಕಾಯ್ದೆ ಗಳಡಿ ಒಂದು ತಿಂಗಳೊಳಗಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆಯೂ ಅವರು ತಾಕೀತು ಮಾಡಿದ್ದಾರೆ. ಇನ್ನು ಮುಂದೆ ವಿಶ್ವವಿದ್ಯಾನಿಲಯದಿಂದ ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳು, ಮಾರ್ಗಸೂಚಿ ಹಾಗೂ ಮೀಸಲಾತಿ ಕಾರ್ಯನೀತಿಯನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ತಿಳಿಸಿರುವ ಪ್ರಧಾನ ಕಾರ್ಯದರ್ಶಿಗಳು, ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಅನುಪಾಲನಾ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆಯೂ ಸೂಚನೆ ನೀಡಿದ್ದಾರೆ.

2016ರ ಡಿಸೆಂಬರ್ 16 ಹಾಗೂ 2017ರ ಜನವರಿ ಮಾಹೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಟ್ಟು 124 ಮಂದಿ ಟೈಪಿಸ್ಟ್‍ಗಳು, ಸ್ಟೆನೋಗ್ರಾಫರ್‍ಗಳು, ಪ್ರಥಮ-ದ್ವಿತೀಯ ದರ್ಜೆ ಅಸಿಸ್ಟೆಂಟ್‍ಗಳು, ಡೇಟಾ ಎಂಟ್ರಿ ಆಪರೇಟರ್‍ಗಳನ್ನು ತರಾತುರಿಯಲ್ಲಿ ನೇಮಕ ಮಾಡಲಾಗಿತ್ತು. ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು ಡಾ. ಎಂ.ಆರ್. ನಿಂಬಾಳ್ಕರ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸಿದ್ದರು. ತನಿಖೆ ನಡೆಸಿದ ಸಮಿತಿಯು ನಿಯಮ ಉಲ್ಲಂಘಿಸಿ ನೇಮಕಗೊಂಡಿರುವ ಬೋಧಕೇತರ ಸಿಬ್ಬಂದಿಗಳನ್ನು ತೆಗೆದುಹಾಕಿ, ಸರ್ಕಾರದಿಂದ ಅನುಮೋದನೆ ಪಡೆದು, ಜಾಹಿರಾತು ಪ್ರಕಟಣೆ ನೀಡಿದ ನಂತರ ಸಿಂಡಿಕೇಟ್ ಸಭೆಯ ಒಪ್ಪಿಗೆ ಪಡೆದ ನಂತರವಷ್ಟೇ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬೇಕೇಂದು ಶಿಫಾರಸ್ಸು ನೀಡಿತ್ತು.

1976ರ ಸ್ಟ್ಯಾಚ್ಯೂಟ್‍ಗಳು, ನಿಯಮಗಳನ್ನು ತಿದ್ದುಪಡಿ ಮಾಡಿ, ನಿಗದಿತ ವಿದ್ಯಾರ್ಹತೆ, ವಯಸ್ಸು, ಅನುಭವಗಳನ್ನು ಪರಿಗಣಿಸಿ ಯುಜಿಸಿ ಮತ್ತು ರಾಜ್ಯ ಸಿವಿಲ್ ಸರ್ವಿಸ್ ನಿಯಮಗಳನ್ವಯ ಹಾಗೂ 2000ರ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ನಿಯಮಗಳಡಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡ ಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿದೆ. ಬೋಧಕೇತರ ನೇಮಕಾತಿಯಲ್ಲಿ ಪ್ರೊ. ಕೆ.ಎಸ್. ರಂಗಪ್ಪ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅದೇ ರೀತಿ ಪ್ರೊ. ಆರ್. ರಾಜಣ್ಣ ಸಹ ಸಿಂಡಿಕೇಟ್ ಸಭೆ ಗಮನಕ್ಕೆ ತಾರದೇ ನಿಯಮಗಳನ್ನು ಗಾಳಿಗೆ ತೂರಿರುವುದರಿಂದ ರಾಜ್ಯಪಾಲರು ಈ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದು, ಇವರನ್ನು ಶಿಕ್ಷಿಸಬಹುದಾಗಿದೆ ಎಂದು ಸಮಿತಿ ಸದಸ್ಯರು ವರದಿಯಲ್ಲಿ ತಿಳಿಸಿದ್ದಾರೆ. ಇನ್ನು ಮುಂದೆ ಕೆಎಎಸ್ (ಹಿರಿಯ ಶ್ರೇಣಿ) ಅಥವಾ ಐಎಎಸ್ ಅಧಿಕಾರಿಗಳನ್ನು ಮಾತ್ರ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರನ್ನಾಗಿ ನೇಮಕ ಮಾಡಬೇಕೆಂದು ರಾಜ್ಯಪಾಲರು ಕೈಗೊಂಡಿರುವ ನಿರ್ಧಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ತಿಳಿಸಿದ್ದರು.

ನಾನು ಕಾರಣ ಅಲ್ಲ

ನನ್ನ ಅವಧಿಯಲ್ಲಿ ಅಧಿಕಾರ ದುರುಪ ಯೋಗಪಡಿಸಿ ಕೊಂಡು, ನಿಯಮ ಉಲ್ಲಂಘಿಸಿ ನೇಮ ಕಾತಿ ಮಾಡಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲ ಪತಿ ಪ್ರೊ. ಕೆ.ಎಸ್. ರಂಗಪ್ಪ ತಿಳಿಸಿದ್ದಾರೆ.

ನಿಯಮ 56ರಡಿ ಒಂದು ವರ್ಷದ ಅವಧಿಗೆ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಲು ಕುಲಪತಿಗಳಿಗೆ ಅಧಿಕಾರವಿದೆ. ಅದ ರಂತೆ ನಾನು 2017ರ ಜನವರಿಯಲ್ಲಿ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿದ್ದು ನಿಜ. ಅದರಂತೆ 11 ತಿಂಗಳಿಗೇ ಅವರೆಲ್ಲರನ್ನೂ ರಿಲೀವ್ ಮಾಡಲಾಗಿತ್ತು. ಮತ್ತೆ ನೇಮಕಾತಿ ರಿನೀವಲ್ ಮಾಡಿದ್ದರೆ ಅದಕ್ಕೆ ನಾನು ಕಾರಣನಲ್ಲ ಎಂದರು. ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಅಕ್ರಮ ನೇಮಕಾತಿ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Translate »